ಮೆಲ್ಬರ್ನ್: ಕನ್ನಡದ ಹೆಮ್ಮೆಯ ಕುವರ, ಖ್ಯಾತ ಟೆನಿಸ್ಸಿಗ ರೋಹನ್ ಬೋಪಣ್ಣ ಆಸ್ಟ್ರೇಲಿಯನ್ ಓಪನ್‌ನಲ್ಲಿ ಚರಿತ್ರಾರ್ಹ ಸಾಧನೆ ಮಾಡಿದರು. ಮೆಲ್ಬೋರ್ನ್ ಪಾರ್ಕ್ನಲ್ಲಿ ಜನವರಿ 27 ರಂದು ನಡೆದ ಪುರುಷರ ಡಬಲ್ಸ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೊತೆಗೂಡಿ ಪ್ರಶಸ್ತಿ ಜಯಿಸಿದರು. ಗ್ರಾಂಡ್ಸ್ಲಾಮ್ ಗೆದ್ದ ಅತಿ ಹಿರಿಯ ಟೆನಿಸ್ ಆಟಗಾರ ಎಂಬ ದಾಖಲೆಯನ್ನೂ ಬೋಪಣ್ಣ ಬರೆದರು.
ಇಟಲಿಯ ಸಿಮೋನೆ ಬೊಲೆಲ್ಲಿ ಮತ್ತು ಆಂಡ್ರಿಯಾ ವವಸೋರಿ ವಿರುದ್ಧ ನಡೆದ ಅಂತಿಮ ಹಣಾಹಣಿಯಲ್ಲಿ 7-6 (7-0), 7-5 ಅಂತರದಿಂದ ಇಂಡೋ- ಆಸ್ಟ್ರೇಲಿಯನ್ ಜೋಡಿ ಗೆಲುವು ಸಾಧಿಸಿತು. ಈ ಮೂಲಕ 43 ವರ್ಷದ ಬೋಪಣ್ಣ ವೃತ್ತಿಜೀವನದ ಮೊದಲ ಗ್ರಾನ್ಸ್ಲಾಮ್ ಟೂರ್ನಿಯ ಪ್ರಶಸ್ತಿಯನ್ನು ಎತ್ತಿಹಿಡಿದರು.
-
Heartiest congratulations @rohanbopanna and Matt Ebden for winning the Australian Open Doubles title! #AusOpen pic.twitter.com/BqGW2upNQ8
— Anil Kumble (@anilkumble1074) January 27, 2024 " class="align-text-top noRightClick twitterSection" data="
">Heartiest congratulations @rohanbopanna and Matt Ebden for winning the Australian Open Doubles title! #AusOpen pic.twitter.com/BqGW2upNQ8
— Anil Kumble (@anilkumble1074) January 27, 2024Heartiest congratulations @rohanbopanna and Matt Ebden for winning the Australian Open Doubles title! #AusOpen pic.twitter.com/BqGW2upNQ8
— Anil Kumble (@anilkumble1074) January 27, 2024
ರೋಹನ್ ಬೋಪಣ್ಣ ಮತ್ತು ಮ್ಯಾಥ್ಯೂಗೆ ಇಟಲಿಯ ಟೆನಿಸ್ ಜೋಡಿ ಕಠಿಣ ಪೈಪೋಟಿ ನೀಡಿತು. ಪಂದ್ಯದ ಮೊದಲ ಸೆಟ್ 7-6 ರಲ್ಲಿ ಸಾಗಿದಾಗ ಟೈಬ್ರೇಕರ್‌ಗೆ ನಡೆಸಬೇಕಾಯಿತು. ಇಂಡೋ- ಆಸೀಸ್ ಜೋಡಿ ಸೆಟ್ ಅನ್ನು 7-0 ರಲ್ಲಿ ಅಧಿಕಾರಯುತವಾಗಿ ಗೆದ್ದುಕೊಂಡರು. ಎರಡನೇ ಸೆಟ್ನಲ್ಲೂ ಪ್ರಬಲ ಸ್ಪರ್ಧೆ ಕಂಡು ಬಂದಿತು. 11ನೇ ಗೇಮ್ನಲ್ಲಿ ಇಟಲಿ ಜೋಡಿ ಸರ್ವೀಸ್ ಬ್ರೇಕ್ ಮಾಡಿದ ಬೋಪಣ್ಣ ಮತ್ತು ಎಬ್ಡೆನ್ ಜೋಡಿ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಬಳಿಕ 7-5 ರಲ್ಲಿ ಸೆಟ್ ಗೆದ್ದು ಪ್ರಶಸ್ತಿಯನ್ನು ಜಯಿಸಿದರು.
2010 ಮತ್ತು 2023ರಲ್ಲಿ ಫೈನಲ್ ಪ್ರವೇಶಿಸಿದ್ದರೂ, ಪ್ರಶಸ್ತಿ ಮರೀಚಿಕೆಯಾಗಿತ್ತು. 2017 ರಲ್ಲಿ ಮಿಶ್ರ ಡಬಲ್ಸ್‌ನಲ್ಲಿ ಕೆನಡಾದ ಗ್ಯಾಬ್ರಿಯೆಲಾ ದಬ್ರೊವ್ಸ್ಕಿ ಅವರೊಂದಿಗೆ ಫ್ರೆಂಚ್ ಓಪನ್ ಪ್ರಶಸ್ತಿ ಜಯಿಸಿದ್ದಾರೆ. ಆಸೀಸ್ ಓಪನ್ ಗೆಲ್ಲುವ ಮೂಲಕ ಬೋಪಣ್ಣ ಪುರುಷರ ಡಬಲ್ಸ್ ವಿಭಾಗದಲ್ಲಿ ನಂಬರ್ 1 ಆಟಗಾರನ ಸ್ಥಾನವನ್ನು ಭದ್ರಪಡಿಸಿಕೊಂಡರು.
-
Doubles delight 🏆🏆@rohanbopanna 🇮🇳 and @mattebden 🇦🇺 defeat Italian duo Bolelli/Vavassori 🇮🇹 7-6(0) 7-5. @wwos • @espn • @eurosport • @wowowtennis pic.twitter.com/WaR2KXF9kp
— #AusOpen (@AustralianOpen) January 27, 2024 " class="align-text-top noRightClick twitterSection" data="
">Doubles delight 🏆🏆@rohanbopanna 🇮🇳 and @mattebden 🇦🇺 defeat Italian duo Bolelli/Vavassori 🇮🇹 7-6(0) 7-5. @wwos • @espn • @eurosport • @wowowtennis pic.twitter.com/WaR2KXF9kp
— #AusOpen (@AustralianOpen) January 27, 2024Doubles delight 🏆🏆@rohanbopanna 🇮🇳 and @mattebden 🇦🇺 defeat Italian duo Bolelli/Vavassori 🇮🇹 7-6(0) 7-5. @wwos • @espn • @eurosport • @wowowtennis pic.twitter.com/WaR2KXF9kp
— #AusOpen (@AustralianOpen) January 27, 2024
ಟೆನಿಸ್ ಇತಿಹಾಸದಲ್ಲೇ ಹಿರಿಯ ವಿಜೇತ: ರೋಹನ್ ಬೋಪಣ್ಣ ಅವರಿಗೆ ಈಗ 43 ವರ್ಷ 329 ದಿನ. ಗ್ರಾನ್ಸ್ಲಾಮ್ ಇತಿಹಾಸದಲ್ಲಿಯೇ ಪ್ರಶಸ್ತಿ ಗೆದ್ದ ಅತಿ ಹಿರಿಯ ಆಟಗಾರ ಎನಿಸಿಕೊಂಡರು. ಇದಕ್ಕೂ ಮೊದಲು ನೆದರ್ಲೆಂಡ್ಸ್‌ನ ಜೀನ್- ಜೂಲಿಯನ್ ರೋಜರ್ ಅವರು 40 ವರ್ಷ ಮತ್ತು 9 ತಿಂಗಳ ವಯಸ್ಸಿನಲ್ಲಿ ಫ್ರೆಂಚ್ ಓಪನ್‌ನಲ್ಲಿ ಪುರುಷರ ಡಬಲ್ಸ್ ಪ್ರಶಸ್ತಿ ಗೆದ್ದಿದ್ದರು.
ಸಿಎಂ ಸಿದ್ದರಾಮಯ್ಯ ಶುಭಾಶಯ: ಟೆನಿಸ್ ಜಗತ್ತಿನಲ್ಲಿ ಪ್ರಶಸ್ತಿ ಜಯಿಸಿದ ಹಿರಿಯ ಆಟಗಾರನಿಗೆ ಮಾಜಿ ಕ್ರಿಕೆಟಿಗರು, ಟೆನಿಸಿಗರು ಸೇರಿ ಕ್ರೀಡಾಪಟುಗಳು, ರಾಜ್ಯದ ಸಿಎಂ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿದ್ದಾರೆ.
"ಕನ್ನಡಿಗ ರೋಹನ್ ಬೋಪಣ್ಣ ಅವರು ಆಸ್ಟ್ರೇಲಿಯನ್ ಓಪನ್ ಡಬಲ್ಸ್‌ನಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ನಾಡಿಗೆ ಹೆಮ್ಮೆ ತಂದಿದ್ದಾರೆ. ವಯಸ್ಸು ಬರೀ ಅಂಕಿಗಳಿಗಷ್ಟೇ ಸೀಮಿತ, ಸಾಧನೆಯ ಹಂಬಲ ದೊಡ್ಡದೆಂಬ ಮಾತನ್ನ ಸಾಬೀತು ಮಾಡಿದ್ದಾರೆ. ಇಂತಹ ಇನ್ನಷ್ಟು ದಾಖಲೆಗಳು ರೋಹನ್ ಬೋಪಣ್ಣನವರಿಂದ ಮೂಡಿಬರಲೆಂದು ಆಶಿಸುತ್ತೇನೆ" ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
-
ವಿಶ್ವ ಟೆನ್ನಿಸ್‌ನ ನಂ.1 ಡಬಲ್ಸ್ ಆಟಗಾರ, ಕನ್ನಡಿಗ ರೋಹನ್ ಬೋಪಣ್ಣ ಅವರು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡನ್ ಜೊತೆಗೂಡಿ ಆಸ್ಟ್ರೇಲಿಯನ್ ಓಪನ್ ಡಬಲ್ಸ್‌ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಮೂಲಕ ನಾಡಿಗೆ ಹೆಮ್ಮೆ ಮೂಡಿಸಿದ್ದಾರೆ.
— Siddaramaiah (@siddaramaiah) January 27, 2024 " class="align-text-top noRightClick twitterSection" data="
ಈ ಪ್ರಶಸ್ತಿ ಗೆಲುವಿನೊಂದಿಗೆ ಅವರು ಗ್ರ್ಯಾಂಡ್ ಸ್ಲಾಂ ಪ್ರಶಸ್ತಿ ಗೆದ್ದ ಅತ್ಯಂತ ಹಿರಿಯ ಆಟಗಾರ ಎಂಬ… pic.twitter.com/Vs7H8mlV0N
">ವಿಶ್ವ ಟೆನ್ನಿಸ್‌ನ ನಂ.1 ಡಬಲ್ಸ್ ಆಟಗಾರ, ಕನ್ನಡಿಗ ರೋಹನ್ ಬೋಪಣ್ಣ ಅವರು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡನ್ ಜೊತೆಗೂಡಿ ಆಸ್ಟ್ರೇಲಿಯನ್ ಓಪನ್ ಡಬಲ್ಸ್‌ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಮೂಲಕ ನಾಡಿಗೆ ಹೆಮ್ಮೆ ಮೂಡಿಸಿದ್ದಾರೆ.
— Siddaramaiah (@siddaramaiah) January 27, 2024
ಈ ಪ್ರಶಸ್ತಿ ಗೆಲುವಿನೊಂದಿಗೆ ಅವರು ಗ್ರ್ಯಾಂಡ್ ಸ್ಲಾಂ ಪ್ರಶಸ್ತಿ ಗೆದ್ದ ಅತ್ಯಂತ ಹಿರಿಯ ಆಟಗಾರ ಎಂಬ… pic.twitter.com/Vs7H8mlV0Nವಿಶ್ವ ಟೆನ್ನಿಸ್‌ನ ನಂ.1 ಡಬಲ್ಸ್ ಆಟಗಾರ, ಕನ್ನಡಿಗ ರೋಹನ್ ಬೋಪಣ್ಣ ಅವರು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡನ್ ಜೊತೆಗೂಡಿ ಆಸ್ಟ್ರೇಲಿಯನ್ ಓಪನ್ ಡಬಲ್ಸ್‌ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಮೂಲಕ ನಾಡಿಗೆ ಹೆಮ್ಮೆ ಮೂಡಿಸಿದ್ದಾರೆ.
— Siddaramaiah (@siddaramaiah) January 27, 2024
ಈ ಪ್ರಶಸ್ತಿ ಗೆಲುವಿನೊಂದಿಗೆ ಅವರು ಗ್ರ್ಯಾಂಡ್ ಸ್ಲಾಂ ಪ್ರಶಸ್ತಿ ಗೆದ್ದ ಅತ್ಯಂತ ಹಿರಿಯ ಆಟಗಾರ ಎಂಬ… pic.twitter.com/Vs7H8mlV0N
ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರು ಬೋಪಣ್ಣ ಅವರ ಗೆಲುವನ್ನು ಹೊಗಳಿದ್ದಾರೆ. 'ಎಂತಹ ಕಥೆ, ಎಂತಹ ಸ್ಫೂರ್ತಿ, ಆಸ್ಟ್ರೇಲಿಯನ್ ಓಪನ್ ಡಬಲ್ ಚಾಂಪಿಯನ್ ಆಗಿದ್ದಕ್ಕಾಗಿ ಅಭಿನಂದನೆಗಳು ಎಂದು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಆಸ್ಟ್ರೇಲಿಯನ್ ಓಪನ್ಗೆ ಅರಿನಾ ಸಬಲೆಂಕಾ 'ಕ್ವೀನ್': ಚೀನಾ ಆಟಗಾರ್ತಿಗೆ ಸೋಲು