ETV Bharat / sports

ವಿರಾಟ್​ ಕೊಹ್ಲಿಯನ್ನು ಭಾರತ ತಂಡದಿಂದ ಹೊರಗಿಡುವ ಪ್ರಯತ್ನ ನಡೆಯುತ್ತಿದೆ: ರಿಕಿ ಪಾಂಟಿಂಗ್ - Ricky Ponting - RICKY PONTING

ವಿರಾಟ್​ ಕೊಹ್ಲಿ ಬ್ಯಾಟಿಂಗ್​ ಸ್ಟ್ರೈಕ್​ರೇಟ್​ ಬಗ್ಗೆ ಆಕ್ಷೇಪ ವ್ಯಕ್ತವಾಗುತ್ತಿರುವ ನಡುವೆ ಆಸ್ಟ್ರೇಲಿಯಾ ಕ್ರಿಕೆಟ್​ ದಿಗ್ಗಜ ರಿಕಿ ಪಾಂಟಿಂಗ್​ ಅವರು, ಭಾರತಕ್ಕೆ ವಿರಾಟ್​ ಎಷ್ಟು ಮಹತ್ವ ಎಂಬುದನ್ನು ವಿವರಿಸಿದ್ದಾರೆ.

ರಿಕ್ಕಿ ಪಾಂಟಿಂಗ್​
ರಿಕ್ಕಿ ಪಾಂಟಿಂಗ್​ (ANI Pictures)
author img

By ETV Bharat Karnataka Team

Published : May 22, 2024, 6:05 PM IST

ಹೈದರಾಬಾದ್​: ಭಾರತ ಕ್ರಿಕೆಟ್​ ತಂಡದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ ಈಗ ಟೀಕಾಕಾರರ ವಸ್ತುವಾಗಿದ್ದಾರೆ. ಏನೇ ಮಾಡಿದರೂ ಅವರನ್ನು ಜರಿಯಲಾಗುತ್ತಿದೆ. ಸ್ಟ್ರೈಕ್​ರೇಟ್​, ಅಗ್ರೆಸ್ಸಿವ್​ನೆಸ್​, ಬ್ಯಾಟಿಂಗ್​ ವಿಚಾರವಾಗಿ ಅವರ ಮೇಲೆ ಆಕ್ಷೇಪ ಎತ್ತಲಾಗುತ್ತಿದೆ. ಆದಾಗ್ಯೂ ಐಪಿಎಲ್​ನಲ್ಲಿ ಟಾಪ್​ ಸ್ಕೋರರ್​ ಆಗಿದ್ದಾರೆ.

ಟಿ20 ಕ್ರಿಕೆಟ್​ಗೆ ವಿರಾಟ್​ ಕೊಹ್ಲಿ ಬ್ಯಾಟಿಂಗ್​ ಹೊಂದುವುದಿಲ್ಲ ಎಂಬುದು ಹಲವರ ವಾದ. ಆದರೆ, ಇದೆಲ್ಲದಕ್ಕೂ ಅವರು ಬ್ಯಾಟ್​ನಿಂದಲೇ ಉತ್ತರ ನೀಡುತ್ತಿದ್ದಾರೆ. ಟಿ20 ವಿಶ್ವಕಪ್​ಗೆ ವಿರಾಟ್​ ಆಯ್ಕೆ ಮಾಡಬಾರದಿತ್ತು ಎಂದು ಅವರ ವಿರೋಧಿಗಳು ಹೇಳುತ್ತಿದ್ದರೆ, ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ರಿಕ್ಕಿ ಪಾಂಟಿಂಗ್​ ವಿರಾಟ್​ ಪರವಾಗಿ ಬ್ಯಾಟಿಂಗ್​ ಮಾಡಿದ್ದಾರೆ.

ಮೊದಲ ಆಯ್ಕೆಯೇ ವಿರಾಟ್​: ಭಾರತದ ಜನರು ವಿರಾಟ್ ಕೊಹ್ಲಿಯನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡದಿರಲು ಕಾರಣಗಳನ್ನು ಹುಡುಕಲು ಏಕೆ ಪ್ರಯತ್ನಿಸುತ್ತಾರೆ ಎಂದು ಆಸ್ಟ್ರೇಲಿಯಾದ ಲೆಜೆಂಡರಿ ಕ್ರಿಕೆಟಿಗ ರಿಕಿ ಪಾಂಟಿಂಗ್ ಪ್ರಶ್ನಿಸಿದ್ದಾರೆ. ಟಿ20 ವಿಶ್ವಕಪ್​ಗೆ ನನ್ನ ಮೊದಲ ಆಯ್ಕೆಯೇ ವಿರಾಟ್​ ಕೊಹ್ಲಿ. ಅವರ ಬ್ಯಾಟಿಂಗ್​ ಇನ್ನು ಕುಂದಿಲ್ಲ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ಟಿ20 ತಂಡದಿಂದ ಅವರನ್ನು (ಕೊಹ್ಲಿ) ದೂರ ಇಡಲು ಸತತ ಪ್ರಯತ್ನ ಮಾಡಲಾಗುತ್ತಿದೆ. ಇದು ನನಗೆ ತಮಾಷೆಯಾಗಿ ಕಾಣುತ್ತಿದೆ. ಹೇಗಾದರೂ ಮಾಡಿ ಅವರಲ್ಲಿನ ಹುಳುಕನ್ನು ಹುಡುಕಿ ತೆಗೆಯುವ ಪ್ರಯತ್ನ ನಡೆಯುತ್ತಿದೆ. ಕಾರಣ ವಿರಾಟ್​ ಉಳಿದ ಆಟಗಾರರಂತೆ ಕಾಣುತ್ತಿಲ್ಲ ಎಂಬುದು. ಆದರೆ, ಈವರೆಗೂ ಬ್ಯಾಟಿಂಗ್​ ಕಿಂಗ್​ ಕಲೆ ಹಾಕಿದಷ್ಟು ರನ್​ ಯಾವೊಬ್ಬ ಬ್ಯಾಟ್ಸ್​​ಮನ್​ ಕೂಡ ದಾಖಲಿಸಿಲ್ಲ ಎಂಬುದು ಸತ್ಯ ಎಂದು ಹೇಳಿದ್ದಾರೆ.

ಇನಿಂಗ್ಸ್​ ಆರಂಭಿಸಲಿ: ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ಮುಂದಿನ ತಿಂಗಳಿನಿಂದ ನಡೆಯುವ ಟಿ20 ವಿಶ್ವಕಪ್‌ನಲ್ಲಿ ಕೊಹ್ಲಿ, ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಲಿ ಎಂದು ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ. ಎಡಗೈ ಬ್ಯಾಟರ್​ಗಳು ಯಾರು ಇಲ್ಲ ಎಂಬ ಕಾರಣಕ್ಕಾಗಿ ಯಶಸ್ವಿ ಜೈಸ್ವಾಲ್​ಗೆ ಅವಕಾಶ ನೀಡಲಾಗಿದೆ. ಆದರೆ, ಅವರಿಗಿಂತ ವಿರಾಟ್​ ಕೊಹ್ಲಿಯೇ ಅತ್ಯುತ್ತಮ ಆಯ್ಕೆಯಾಗಿದ್ದಾರೆ ಎಂದಿದ್ದಾರೆ.

ವಿರಾಟ್​ ಮತ್ತು ರೋಹಿತ್​ ಆರಂಭಿಕರಾಗಿ ಕಣಕ್ಕಿಳಿದರೆ, ತಂಡಕ್ಕೆ ಲಾಭವಾಗುತ್ತದೆ. ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ರಭಸವಾಗಿ ಬ್ಯಾಟ್​ ಮಾಡಬಹುದು. ವಿರಾಟ್​ ಅತ್ಯುತ್ತುಮವಾಗಿ ಇನಿಂಗ್ಸ್​ ಆರಂಭಿಸಬಲ್ಲರು ಎಂಬುದು ಪಾಂಟಿಂಗ್​ ಅಭಿಪ್ರಾಯವಾಗಿದೆ.

ಐಪಿಎಲ್​ನಲ್ಲಿ ಈಗಾಗಲೇ ಅವರು ಒಂದು ಶತಕ, ಐದು ಅರ್ಧಶತಕ ಬಾರಿಸಿ ಅತ್ಯಧಿಕ ರನ್​ ದಾಖಲಿಸಿದವರ ಪೈಕಿ ಮೊದಲಿಗರಾಗಿದ್ದಾರೆ. ಇದರಿಂದ ಆರ್​ಸಿಬಿ ತಂಡ ಪ್ಲೇಆಫ್​ಗೆ ಬರಲು ಕಾರಣವಾಗಿದೆ. ಬ್ಯಾಟಿಂಗ್​ ಸ್ಟ್ರೈಕ್ ರೇಟ್ 155.60 ರಲ್ಲಿದೆ. ಇದು ಈಗಿನ ಕ್ರಿಕೆಟ್​ಗೆ ಕಡಿಮೆಯಾದರೂ, ಕಳೆದ 17 ವರ್ಷಗಳಲ್ಲಿ ಉತ್ಕೃಷ್ಟವಾಗಿದೆ. ಇತ್ತೀಚಿನ ದಿನಗಳಲ್ಲಿ ಬ್ಯಾಟಿಂಗ್​ ಸ್ಟ್ರೈಕ್​ರೇಟ್​ ಪ್ರಾಧಾನ್ಯತೆ ಪಡೆದಿದ್ದರೂ, ಭಾರತ ತಂಡಕ್ಕೆ ಕೊಹ್ಲಿಯ ಅಗತ್ಯತೆ ತುಂಬಾ ಇದೆ ಎಂದು ಅವರು ಹೇಳಿದ್ದಾರೆ.

2022 ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಭಾರತದ ಪರವಾಗಿ ಕೊಹ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಪಾಕಿಸ್ತಾನದ ವಿರುದ್ಧ ಅಜೇಯ 82 ಮತ್ತು ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಅರ್ಧಶತಕ ಗಳಿಸಿದರು. ಇಕ್ಕಟ್ಟಿನ ಸಂದರ್ಭಗಳಲ್ಲಿ ದಿಗ್ಗಜ ಆಟಗಾರ ತಂಡದ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಪಾಂಟಿಂಗ್ ಹೇಳಿದರು.

ಇದನ್ನೂ ಓದಿ: ಕೊಹ್ಲಿಯೇ ಬೆಸ್ಟ್​, ನನಗೆ ಉತ್ತಮ ಆಯ್ಕೆ ಮಾಡಲು ಸಾಧ್ಯವಾಗಲಿಲ್ಲ, ಈ ಸಲ ಕಪ್​ ನಮ್ದೆ: ಮಾಜಿ ಮಾಲೀಕ ಮಲ್ಯ - Mallya on Kohli

ETV Bharat Logo

Copyright © 2025 Ushodaya Enterprises Pvt. Ltd., All Rights Reserved.