ETV Bharat / sports

ಜಡೇಜಾಗೆ ಮಂಡಿರಜ್ಜು ಗಾಯ; ಇಂಗ್ಲೆಂಡ್​ ವಿರುದ್ಧದ 2ನೇ ಟೆಸ್ಟ್​ಗೆ ಅಲಭ್ಯ? - ಭಾರತ ಮತ್ತು ಇಂಗ್ಲೆಂಡ್​ ಟೆಸ್ಟ್​

ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ರನ್‌ಗಾಗಿ ಓಡುತ್ತಿದ್ದಾಗ ಆಲ್​ರೌಂಡರ್​ ರವೀಂದ್ರ ಜಡೇಜಾ ಮಂಡಿರಜ್ಜು ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ.

ರವೀಂದ್ರ ಜಡೇಜಾ
ರವೀಂದ್ರ ಜಡೇಜಾ
author img

By PTI

Published : Jan 29, 2024, 10:48 AM IST

ಹೈದರಾಬಾದ್: ಇಂಗ್ಲೆಂಡ್​ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದ ಸೋಲಿನ ನಂತರ ಇದೀಗ ಭಾರತ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಹೈದರಾಬಾದ್‌ನ ರಾಜೀವ್​ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದ 4ನೇ ದಿನ ಆಲ್‌ರೌಂಡರ್​ ರವೀಂದ್ರ ಜಡೇಜಾ ಮಂಡಿರಜ್ಜು ಗಾಯಕ್ಕೆ ಒಳಗಾಗಿದ್ದಾರೆ. ಮೊದಲ ಇನ್ನಿಂಗ್ಸ್​ನಲ್ಲಿ ಉತ್ತಮ ಆಟವಾಡಿ ಶತಕ ವಂಚಿತರಾದ ಜಡೇಜಾ, ಎರಡನೇ ಇನ್ನಿಂಗ್ಸ್​ನಲ್ಲಿ ತಂಡವನ್ನು ಗೆಲುವಿನ ದಡ ಸೇರಿಸುತ್ತಾರೆ ಎಂದೇ ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ 2 ರನ್​ ಗಳಿಸಿದ್ದ ಜಡೇಜಾ, ಬೇಡದ ರನ್‌ಗಾಗಿ ಓಡಿ ಇಂಗ್ಲೆಂಡ್​ ನಾಯಕ ಬೆನ್​ ಸ್ಟೋಕ್ಸ್​ ಅವರಿಂದ ರನೌಟ್​ ಆದರು. ಈ ವೇಳೆ ವೇಗವಾಗಿ ಓಡುವಾಗ ಮಂಡಿರಜ್ಜು ಗಾಯ ಅವರನ್ನು ಬಾಧಿಸಿತು.

ಮೊದಲ ಇನ್ನಿಂಗ್ಸ್‌ನಲ್ಲಿ ಬೊಂಬಾಟ್​ ಬ್ಯಾಟಿಂಗ್ ಪ್ರದರ್ಶನ ನೀಡಿದ ಜಡೇಜಾ, 87 ರನ್ ಗಳಿಸಿ ತಂಡದ ಅಗ್ರ ಸ್ಕೋರರ್ ಎನಿಸಿದರು. ಆದರೆ 2ನೇ ಇನ್ನಿಂಗ್ಸ್​​ನಲ್ಲಿ ನಿರಾಸೆ ಮೂಡಿಸಿದರು. ಆದರೆ ಬೌಲಿಂಗ್​ನಲ್ಲಿ ಮಿಂಚಿದ್ದಾರೆ.

ಜಡೇಜಾ ಗಾಯಗೊಂಡಿರುವುದು ಭಾರತ ತಂಡದ ಚಿಂತೆ ಹೆಚ್ಚಿಸಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇನ್ನೂ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿಲ್ಲ. ನಾಯಕ ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗಿದು ತಲೆನೋವು ತಂದಿರಿಸಿದೆ.

ವಿಶಾಖಪಟ್ಟಣಂನಲ್ಲಿ ಫೆಬ್ರವರಿ 2ರಂದು ಎರಡನೇ ಟೆಸ್ಟ್ ಆರಂಭವಾಗಲಿದ್ದು, ಅಷ್ಟರೊಳಗೆ ಜಡೇಜಾ ಸಿದ್ಧವಾಗಿ ತಂಡದೊಂದಿಗೆ ವೈಜಾಗ್‌ಗೆ ಪ್ರಯಾಣಿಸುತ್ತಾರೆಯೇ ಅಥವಾ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ (ಎನ್​ಸಿಎ) ಹೋಗುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಈ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ಪ್ರತಿಕ್ರಿಯಿಸಿರುವ ದ್ರಾವಿಡ್, "ಜಡೇಜಾ ಗಾಯದ ಸ್ವರೂಪದ ಹೇಗಿದೆ ಎಂಬುದನ್ನು ನೋಡಬೇಕಿದೆ. ಈ ಕುರಿತು ಫಿಸಿಯೋ ಜೊತೆ ಮಾತನಾಡಲು ನನಗಿನ್ನೂ ಅವಕಾಶ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡುತ್ತೇನೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮೊದಲ ಟೆಸ್ಟ್: ಪಂದ್ಯ ಕೈಚೆಲ್ಲಿದ ಭಾರತೀಯ ಬ್ಯಾಟರ್​ಗಳು, ಇಂಗ್ಲೆಂಡ್​ಗೆ 28 ರನ್​ ಗೆಲುವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.