ಪ್ಯಾರಿಸ್ (ಫ್ರಾನ್ಸ್): ಪ್ಯಾರಿಸ್ ಒಲಿಂಪಿಕ್ಸ್ 2024ರ ಮಹಿಳೆಯರ ವೈಯಕ್ತಿಕ 10 ಮೀಟರ್ ಏರ್ ರೈಫಲ್ ಫೈನಲ್ನ ಪಂದ್ಯದ ಅರ್ಹತಾ ಸುತ್ತಿನಲ್ಲಿ ಭಾರತದ ಶೂಟರ್ ರಮಿತಾ ಜಿಂದಾಲ್ ಅವರು ಹೊರಬಿದ್ದಿದ್ದಾರೆ. ಸೋಮವಾರ ನಡೆದ ಈ ಕ್ರೀಡಾ ಪಂದ್ಯದಲ್ಲಿ ಶೂಟ್-ಆಫ್‌ನಲ್ಲಿ ಫ್ರಾನ್ಸ್‌ನ ಆಟಗಾರ್ತಿ ಓಸಿಯಾನ್ನೆ ವಿರುದ್ಧ ಸೆಣಸಾಡಿ ಕೇವಲ 0.3 ಅಂಕ ಹಿನ್ನಡೆ ಅನುಭವಿಸಿ 7ನೇ ಸ್ಥಾನಕ್ಕೆ ತಲುಪಿ ಪಂದ್ಯದಿಂದ ಹೊರಬಿದ್ದರು.
ಮೊದಲ ಸುತ್ತಿನಿಂದಲೇ ಹಿನ್ನಡೆ: ರಮಿತಾ ಅವರು ಮೊದಲ ಸುತ್ತಿನಲ್ಲೇ ಕೆಟ್ಟ ಆರಂಭವನ್ನು ಮಾಡಿದರು. ಮೊದಲ ಸುತ್ತು ಮುಕ್ತಾಯದ ವೇಳೆಗೆ, ರಮಿತಾ ಕ್ರಮವಾಗಿ 10.3, 10.2, 10.6, 10.9, 10.5 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದರು. ಬಳಿಕ 2ನೇ ಸುತ್ತಿನಲ್ಲಿ ಕೊನೆಯ ಹಂತದಲ್ಲಿ ರಮಿತಾ ಅವರ ಪ್ರದರ್ಶನವು ನಿರಾಶದಾಯಕವಾಗಿತ್ತು. ಈ ಕಾರಣದಿಂದಾಗಿ ಅವರು ಕೇವಲ 9.7 ಅಂಕಗಳನ್ನು ಪಡೆದರು. ಈ ಫಲಿತಾಂಶವು ರಮಿತಾರನ್ನು ಸ್ಪರ್ಧೆಯಿಂದ ಎಲಿಮಿನೇಟ್ಗೆ ದೂಡಿತು. ಇದಕ್ಕೂ ಮೊದಲು, ರಮಿತಾ ಮೂರನೇ ಸ್ಥಾನದಲ್ಲಿದ್ದರು, ಆದರೆ ಕೆಟ್ಟ್ ಶೂಟಿಂಗ್ನಿಂದಾಗಿ ಹೆಚ್ಚಿನ ಅಂಕ ಕಲೆಹಾಕಲಾಗದೇ ಏಳನೇ ಸ್ಥಾನಕ್ಕೆ ಕುಸಿದರು. 10ನೇ ಸುತ್ತಿನಲ್ಲಿ 9.7 ಅಂಕ ಗಳಿಸಿದ್ದರಿಂದ ಏಳನೇ ಸ್ಥಾನಕ್ಕೆ ಕುಸಿದರು.
News Flash: Ramita Jindal finishes at 7th spot in FINAL of 10m Air Rifle event. #Paris2024 #Paris2024withIAS pic.twitter.com/3Foh0Yatap
— India_AllSports (@India_AllSports) July 29, 2024
ಅಂತಿಮವಾಗಿ, ಅವರು ಫ್ರಾನ್ಸ್‌ನ ಓಸಾನೆ ಮುಲ್ಲರ್ ವಿರುದ್ಧ ಶೂಟ್-ಆಫ್ ನಲ್ಲೂ ಹಿನ್ನಡೆ ಅನುಭವಿಸಿದರು. ಈ ಸುತ್ತಿನಲ್ಲಿ ರಮಿತಾ 10.5 ಅಂಕ ಪಡೆದರೆ ಮುಲ್ಲರ್ 10.8 ಅಂಕ ಗಳಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆದರು.
ಹರಿಯಾಣದ ಶೂಟರ್, ಏಷ್ಯನ್ ಗೇಮ್ಸ್ನ ಟೀಮ್ ಈವೆಂಟ್ ಸ್ಪರ್ಧೆಯಲ್ಲಿ ಬೆಳ್ಳಿ ಮತ್ತು ವೈಯಕ್ತಿಕ ಸ್ಪರ್ಧೆಯಲ್ಲಿ 1 ಕಂಚು ಪಡೆದಿದ್ದರು. ಜತೆಗೆ ಜೂನಿಯರ್ ವರ್ಲ್ಡ್ ಚಾಂಪಿಯನ್‌ಶಿಪ್ ಕೈರೋನಲ್ಲೂ ವೈಯಕ್ತಿಕ ಮತ್ತು ತಂಡದ ಈವೆಂಟ್ಗಳಲ್ಲಿ ಚಿನ್ನದ ಪದಕ ಗೆದ್ದಿದ್ದರು. ಚಾಂಪಿಯನ್‌ಶಿಪ್, ಲಿಮಾ (2021) - 10 ಮೀಟರ್ ಏರ್ ರೈಫಲ್ ವೈಯಕ್ತಿಕ ಸ್ಪರ್ಧೆಯಲ್ಲಿ 1 ಕಂಚಿನ ಪದಕ, ವಿಶ್ವಕಪ್, ಬಾಕು (2022) - 10 ಮೀಟರ್ ಏರ್ ರೈಫಲ್ ಮಹಿಳಾ ತಂಡ ಸ್ಪರ್ಧೆಯಲ್ಲಿ ಚಿನ್ನದ ಪದಕ. ವಿಶ್ವಕಪ್, ಚಾಂಗ್ವಾನ್ (2022) - 10 ಮೀಟರ್ ಏರ್ ರೈಫಲ್ ಮಹಿಳಾ ತಂಡ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.
ಇದನ್ನೂ ಓದಿ: ಭಾರತದ ಟೆನ್ನಿಸ್ ಅಭಿಯಾನ ಅಂತ್ಯ; ಆರಂಭಿಕ ಪಂದ್ಯದಲ್ಲೇ ಬೋಪಣ್ಣ - ಬಾಲಾಜಿ ಔಟ್ - paris olympics 2024