ETV Bharat / sports

ಜೈಪುರದಲ್ಲಿ 2012 ರಿಂದ ಗೆಲ್ಲದ ಮುಂಬೈ ಇಂಡಿಯನ್ಸ್​ಗೆ ಅಗ್ರಸ್ಥಾನಿ ರಾಜಸ್ಥಾನ ರಾಯಲ್ಸ್​ ಸವಾಲು - RR vs MI match - RR VS MI MATCH

ಜೈಪುರದ ಸವಾಯಿ ಮಾನ್​ಸಿಂಗ್​ ಕ್ರೀಡಾಂಗಣದಲ್ಲಿ ಇಂದು ಸಂಜೆ ಮುಂಬೈ ಇಂಡಿಯನ್ಸ್​ ಮತ್ತು ರಾಜಸ್ಥಾನ ರಾಯಲ್ಸ್​ ಎದುರಾಗಲಿವೆ.

ಮುಂಬೈ ಇಂಡಿಯನ್ಸ್​ ರಾಜಸ್ಥಾನ ರಾಯಲ್ಸ್ ಪಂದ್ಯ
ಮುಂಬೈ ಇಂಡಿಯನ್ಸ್​ ರಾಜಸ್ಥಾನ ರಾಯಲ್ಸ್ ಪಂದ್ಯ
author img

By ETV Bharat Karnataka Team

Published : Apr 22, 2024, 5:28 PM IST

ಜೈಪುರ: ಐಪಿಎಲ್​ನಲ್ಲಿ ಛಲ ಮತ್ತು ಗುರಿಯನ್ನು ಬೆನ್ನಟ್ಟಿ ಗೆಲ್ಲುತ್ತಿರುವ ತಂಡಗಳಲ್ಲಿ ರಾಜಸ್ಥಾನ ರಾಯಲ್ಸ್​ ಮೊದಲಿದೆ. ಯುವ ಪಡೆಯನ್ನು ಹೊಂದಿರುವ ತಂಡ ನೀಡುತ್ತಿರುವ ಸಾಂಘಿಕ ಪ್ರದರ್ಶನದಿಂದ ಪಾಯಿಂಟ್​ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. 5 ಬಾರಿಯ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ತನ್ನ ನಿಜವಾದ ಖದರ್ ತೋರಿಸದೇ ಇರುವುದು, ತಂಡಕ್ಕೆ ಹಿನ್ನಡೆ ಉಂಟಾಗಿದೆ.

ಉಭಯ ತಂಡಗಳ ಕಾದಾಟವು ಇಂದು ಸಂಜೆ 7.30ಕ್ಕೆ ನಡೆಯಲಿದ್ದು, ಜೈಪುರದ ಸವಾಯಿ ಮಾನ್​ಸಿಂಗ್​ ಕ್ರೀಡಾಂಗಣ ಹಣಾಹಣಿಗೆ ವೇದಿಕೆಯಾಗಲಿದೆ. ಗುಜರಾತ್​ ಹೊರತುಪಡಿಸಿ ಎಲ್ಲ ತಂಡಗಳ ವಿರುದ್ಧ ವಿಕ್ರಮ ಸಾಧಿಸಿರುವ ಸಂಜು ಸ್ಯಾಮ್ಸನ್​ ನೇತೃತ್ವದ ತಂಡ, ಹಾರ್ದಿಕ್​ ಪಾಂಡ್ಯ ಮುಂದಾಳತ್ವದ ತಂಡವನ್ನು 2ನೇ ಬಾರಿಗೆ ಎದುರಿಸಲಿದೆ. ಪಾಯಿಂಟ್​ ಪಟ್ಟಿಯಲ್ಲಿ ನಂಬರ್​ 1 ಸ್ಥಾನದಲ್ಲಿರುವ ರಾಯಲ್ಸ್​ ಈ ಪಂದ್ಯವನ್ನು ಗೆದ್ದು ಅಗ್ರಸ್ಥಾನವನ್ನು ಭದ್ರಪಡಿಸಿಕೊಳ್ಳುವ ಮೂಲಕ ಪ್ಲೇ ಆಫ್​ಗೆ ಇನ್ನಷ್ಟು ಸನಿಹವಾಗುವ ತವಕದಲ್ಲಿದೆ.

ತವರಿನ ಮೈದಾನದಲ್ಲಿ ಆಡಿದ 4 ಪಂದ್ಯಗಳಲ್ಲಿ 3-1 ರಲ್ಲಿ ಗೆಲುವು ಸಾಧಿಸಿ ಮುನ್ನುಗ್ಗುತ್ತಿದೆ. ಜಾಸ್​ ಬಟ್ಲರ್​,ರಿಯಾನ್​ ಪರಾಗ್​, ಸಿಮ್ರಾನ್​ ಹೆಟ್ಮಾಯರ್​, ನಾಯಕ ಸಂಜು ಸ್ಯಾಮ್ಸನ್​ ಬ್ಯಾಟಿಂಗ್​ನಲ್ಲಿ ಮಿಂಚುತ್ತಿದ್ದಾರೆ. ಅದರಲ್ಲೂ ಬಟ್ಲರ್​ ಕಳೆದ ಪಂದ್ಯದಲ್ಲಿ ಏಕಾಂಗಿಯಾಗಿ ಹೋರಾಡಿ ಪಂದ್ಯ ಗೆಲ್ಲಿಸಿದ್ದು ಅವಿಸ್ಮರಣೀಯ ಮತ್ತು ಯುವ ಆಟಗಾರರಿಗೆ ಪಾಠದಂತಿತ್ತು. ಬೌಲಿಂಗ್​ನಲ್ಲಿ ಟ್ರೆಂಟ್​ ಬೌಲ್ಟ್​, 3ನೇ ಅತ್ಯಧಿಕ ವಿಕೆಟ್​ ಟೇಕರ್​ ಆಗಿರುವ ಯಜುವೇಂದ್ರ ಚಹಲ್​ ಮತ್ತು ನಂಡ್ರೆ ಬರ್ಗರ್​ ಎದುರಾಳಿಯನ್ನು ಕಟ್ಟಿಹಾಕುತ್ತಿರುವುದು ಪ್ಲಸ್​ ಪಾಯಿಂಟ್​.

ಗೆಲ್ಲುವ ಒತ್ತಡದಲ್ಲಿ ಮುಂಬೈ: ಇತ್ತ, ಮಾಜಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ಖ್ಯಾತ ಆಟಗಾರರನ್ನು ಹೊಂದಿದ್ದರೂ, ನಿರೀಕ್ಷಿತ ಫಲಿತಾಂಶ ಪಡೆಯುತ್ತಿಲ್ಲ. ಇಶಾನ್​ ಕಿಶನ್​, ರೋಹಿತ್​ ಶರ್ಮಾ, ಟಿ20 ನಂಬರ್ 1 ಬ್ಯಾಟರ್​ ಸೂರ್ಯಕುಮಾರ್​ ಯಾದವ್​, ಹಾರ್ದಿಕ್​ ಪಾಂಡ್ಯ, ಟಿಮ್​ ಡೇವಿಡ್​, ಜಸ್ಪ್ರೀತ್​ ಬೂಮ್ರಾ, ಗೆರಾಲ್ಡ್​ ಕಾಟ್ಜೆಯಂತಹ ಘಟಾನುಘಟಿಗಳು ಗೆಲುವು ತಂದುಕೊಡುವಲ್ಲಿ ಎಡವುತ್ತಿದ್ದಾರೆ. ಆಡಿರುವ 7 ಪಂದ್ಯಗಳಲ್ಲಿ 3 ರಲ್ಲಿ ಗೆದ್ದು 4 ಸೋತಿದೆ. 6 ಪಾಯಿಂಟ್​ನೊಂದಿಗೆ ಸದ್ಯ 7 ನೇ ಸ್ಥಾನದಲ್ಲಿದೆ. ಪ್ಲೇಆಫ್​ನಲ್ಲಿ ಸ್ಥಾನ ಪಡೆಯಲು ತಂಡ ಇನ್ನಷ್ಟು ಸುಧಾರಿತ ಪ್ರದರ್ಶನ ನೀಡಲೇಬೇಕಿದೆ.

ಮುಖಾಮುಖಿ: ಇತ್ತಂಡಗಳು ಈವರೆಗೆ 28 ಪಂದ್ಯಗಳಲ್ಲಿ ಎದುರಾಗಿದ್ದು, ರಾಯಲ್ಸ್​ 13 - 15ರಲ್ಲಿ ಮುಂಬೈ ಇಂಡಿಯನ್ಸ್​ ಗೆದ್ದಿದೆ. ವಿಶೇಷವೆಂದರೆ ಜೈಪುರದಲ್ಲಿ ಆಡಿದ ಕಳೆದ 7 ಪಂದ್ಯಗಳಲ್ಲಿ ರಾಯಲ್ಸ್​ 5 ರಲ್ಲಿ ಗೆಲುವು ಸಾಧಿಸಿದೆ. ಈ ಮೈದಾನದಲ್ಲಿ ಮುಂಬೈ ತಂಡ ಕೊನೆಯ ಗೆಲುವು ಕಂಡಿದ್ದು 2012 ರಲ್ಲಿ.

ಸಮಯ-ಸಂಜೆ 7.30ಕ್ಕೆ

ಮೈದಾನ- ಸವಾಯಿ ಮಾನ್​ಸಿಂಗ್​ ಕ್ರೀಡಾಂಗಣ, ಜೈಪುರ

ಇದನ್ನೂ ಓದಿ: ಐಪಿಎಲ್​ನಲ್ಲಿ ಅತಿ ಹೆಚ್ಚು 220+ ಸ್ಕೋರ್​ ಮಾಡಿ ಸಿಎಸ್​ಕೆ, ಎಸ್​ಆರ್​ಹೆಚ್​ ದಾಖಲೆ ಸರಿಗಟ್ಟಿದ ಕೆಕೆಆರ್​ - KKR creat new record

ETV Bharat Logo

Copyright © 2024 Ushodaya Enterprises Pvt. Ltd., All Rights Reserved.