ನವದೆಹಲಿ: ಕ್ಯೂಬಾದ ಯುಸ್ನಿಲಿಸ್ ಗುಜ್ಮನ್ ಅವರನ್ನು 5-0 ಅಂತರದಿಂದ ಸೋಲಿಸಿ ಒಲಿಂಪಿಕ್ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿ ಇತಿಹಾಸ ಸೃಷ್ಟಿಸಿದ ಹರಿಯಾಣದ 29ರ ಹರೆಯದ ವಿನೇಶ್ ಫೋಗಟ್ ಅವರನ್ನು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶ್ಲಾಘಿಸಿದರು. ಫೈನಲ್‌ನಲ್ಲಿ ವಿನೇಶ್ ಫೋಗಟ್ ಅವರು ಅಮೆರಿಕ ದೇಶದ ಸಾರಾ ಹಿಲ್ಡೆಬ್ರಾಂಡ್ ಅವರನ್ನು ಎದುರಿಸಲಿದ್ದಾರೆ.
एक ही दिन में दुनिया की तीन धुरंधर पहलवानों को हराने के बाद आज विनेश के साथ-साथ पूरा देश भावुक है।
— Rahul Gandhi (@RahulGandhi) August 6, 2024
जिन्होंने भी विनेश और उसके साथियों के संघर्ष को झुठलाया, उनकी नीयत और काबिलियत तक पर प्रश्नचिन्ह खड़े किए, उन सभी को जवाब मिल चुका है।
आज भारत की बहादुर बेटी के सामने सत्ता का… pic.twitter.com/MzfIrYfRog
ಸಾಮಾಜಿಕ ಜಾಲತಾಣವಾದ ಎಕ್ಸ್‌ಯಲ್ಲಿ ರಾಹುಲ್ ಗಾಂಧಿ ಅವರು ವಿಶಿಷ್ಟ ಸಾಧನೆ ಮಾಡಿದ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಪ್ಯಾರಿಸ್‌ನಲ್ಲಿ ವಿನೇಶ್ ಫೋಗಟ್ ಅವರ ಯಶಸ್ಸಿನ ಪ್ರತಿಧ್ವನಿಯನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೇಳಬಹುದು. ಫೋಗಟ್ ಅವರ ಸಾಮರ್ಥ್ಯಗಳು ಮತ್ತು ಉದ್ದೇಶಗಳನ್ನು ಅನುಮಾನಿಸುವವರಿಗೆ ಉತ್ತರ ದೊರೆತಿದೆ ಎಂದು ತಿಳಿಸಿದ್ದಾರೆ.
A torn ligament. A lower weight category. An unbeaten world champion. Nothing stands in her way. Can’t wait to cheer @Phogat_Vinesh as she goes for gold. Your resilience and strength inspire us all. What an inspiring day, here’s hoping for one more! 🌟🇮🇳 #Paris2024 #Wrestling… pic.twitter.com/3AZ56wKEEZ
— Abhinav A. Bindra OLY (@Abhinav_Bindra) August 6, 2024
ರಾಹುಲ್ ಗಾಂಧಿ ಪೋಸ್ಟ್ ಹೀಗಿದೆ: ''ಒಂದೇ ದಿನದಲ್ಲಿ ವಿಶ್ವದ ಮೂವರು ಅಗ್ರ ಕುಸ್ತಿಪಟುಗಳನ್ನು ಸೋಲಿಸಿದ ವಿನೇಶ್ ಫೋಗಟ್ ಅವರ ಬಗ್ಗೆ ಇಡೀ ದೇಶವೇ ಭಾವುಕವಾಗಿದೆ. ವಿನೇಶ್ ಮತ್ತು ಅವರ ಸಹ ಆಟಗಾರರ ಹೋರಾಟವನ್ನು ನಿರಾಕರಿಸಿದ ಮತ್ತು ಅವರ ಉದ್ದೇಶ ಮತ್ತು ಸಾಮರ್ಥ್ಯಗಳನ್ನು ಪ್ರಶ್ನಿಸಿದ ಎಲ್ಲರಿಗೂ ಅವರ ಉತ್ತರ ಸಿಕ್ಕಿದೆ. ಭಾರತದಲ್ಲಿ ರಕ್ತದ ಕಣ್ಣೀರು ಸುರಿಸುವಂತೆ ಮಾಡಿದ್ದ ಇಡೀ ಅಧಿಕಾರ ವ್ಯವಸ್ಥೆಯೇ ಇಂದು ವೀರ ಮಗಳ ಮುಂದೆ ಕುಸಿದು ಬಿದ್ದಿದೆ. ಇದು ಚಾಂಪಿಯನ್‌ಗಳ ಗುರುತು, ಅವರು ಮೈದಾನದಿಂದ ತಮ್ಮ ಉತ್ತರವನ್ನು ನೀಡುತ್ತಾರೆ. ಶುಭಾಶಯಗಳು ವಿನೇಶ್. ಪ್ಯಾರಿಸ್‌ನಲ್ಲಿ ನಿಮ್ಮ ಯಶಸ್ಸಿನ ಪ್ರತಿಧ್ವನಿ ದೆಹಲಿಯವರೆಗೂ ಸ್ಪಷ್ಟವಾಗಿ ಕೇಳಬಹುದು'' ಎಂದು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಈ ಗೆಲುವು ರಾಜಕೀಯವಾಗಿ ಏಕೆ ಮಹತ್ವದ್ದಾಗಿದೆ? ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಾಜಿ ವ್ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯೂಎಫ್‌ಐ) ಮುಖ್ಯಸ್ಥ ಮತ್ತು ಆಗಿನ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮೂವರು ಅಗ್ರ ಕುಸ್ತಿಪಟುಗಳಲ್ಲಿ ಫೋಗಟ್ ಒಬ್ಬರು. ಆಕೆಯ ಜೊತೆಯಲ್ಲಿ ಇತರ ಕುಸ್ತಿಪಟುಗಳಾದ ಬಜರಂಗ್ ಪುನಿಯಾ ಮತ್ತು ಸಾಕ್ಷಿ ಮಲಿಕ್ ನಿಂತಿದ್ದರು.
विनेश ने इतिहास रच दिया है. विनेश महिला कुश्ती में ओलंपिक के फाइनल में पहुंचने वाली पहली भारतीय महिला पहलवान बन गई हैं.
— Bajrang Punia 🇮🇳 (@BajrangPunia) August 6, 2024
आज सब भारतीयों की आंखों में आसूं हैं.
ये देश की बेटियां हैं, जिन्होंने हमेशा ही देश की शान बढ़ाई है. जिन लोगों ने हमेशा इन बेटियों की राह में कांटे बिछाए… pic.twitter.com/NJ8t4p4h0Y
ಮೇ 2023ರಲ್ಲಿ ಹೊಸ ಸಂಸತ್ತಿನ ಉದ್ಘಾಟನೆ ದಿನದಂದು, ಫೋಗಟ್, ಪುನಿಯಾ, ಮಲಿಕ್ ಮತ್ತು ಸಂಗೀತಾ ಫೋಗಟ್ ಮತ್ತು ಇತರ ಹಲವಾರು ಪ್ರತಿಭಟನಾ ಕುಸ್ತಿಪಟುಗಳನ್ನು ದೆಹಲಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಶಾಂತಿ ಕದಡಿದ್ದಕ್ಕಾಗಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಮೇ 30 ರಂದು, ಕುಸ್ತಿಪಟುಗಳು ಹರಿದ್ವಾರಕ್ಕೆ ಪ್ರಯಾಣಿಸಿ ತಮ್ಮ ಪದಕಗಳನ್ನು ಗಂಗಾ ನದಿಯಲ್ಲಿ ಬಿಡುವ ಮೂಲಕ ಪ್ರತಿಭಟಿಸಿದ್ದರು.
ಬ್ರಿಜ್ ಭೂಷಣ್ ಅವರು 2023ರಲ್ಲಿ ರಾಜೀನಾಮೆ ನೀಡುವ ಮೊದಲು 12 ವರ್ಷಗಳ ಕಾಲ WFI ನೇತೃತ್ವ ವಹಿಸಿದ್ದರು. ಜೊತೆಗೆ, ಆರು ಬಾರಿ ಸಂಸದರಾಗಿದ್ದ ಅವರನ್ನು 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಬಿಜೆಪಿ ಕೈಬಿಟ್ಟಿತು. ಕೇಂದ್ರ ಸರ್ಕಾರವು ಕ್ರೀಡಾಪಟುಗಳ ಬಗ್ಗೆ ಅಸಹಿಷ್ಣುತೆ ಹೊಂದಿದೆ ಎಂದು ಆರೋಪಿಸಿ ನಡೆದ ಪ್ರತಿಭಟನೆಗಳು ರಾಷ್ಟ್ರವನ್ನು ಬೆಚ್ಚಿಬೀಳಿಸಿತ್ತು.
'ಅವಳು ಈ ದೇಶದ ವ್ಯವಸ್ಥೆಗೆ ಸೋತಿದ್ದಾಳೆ'-ಬಜರಂಗ್ ಪುನಿಯಾ: ಫೋಗಟ್ ಐತಿಹಾಸಿಕ ಗೆಲುವಿನ ನಂತರ, ಒಲಿಂಪಿಕ್ ಪದಕ ವಿಜೇತ ಬಜರಂಗ್ ಪುನಿಯಾ ಅವರು ಪ್ರತಿಭಟನೆಯ ಸಮಯದಲ್ಲಿ ಫೋಗಟ್ ಅವರು ಅನುಭವಿಸಿದ ಚಿತ್ರಹಿಂಸೆ ಮತ್ತು ನಿಂದನೆಯನ್ನು ಜನರಿಗೆ ನೆನಪಿಸಿದರು. "ಈ ಹುಡುಗಿಯನ್ನು ಆಕೆಯ ದೇಶದಲ್ಲಿಯೇ ಒದ್ದು ಪುಡಿಮಾಡಲಾಗಿತ್ತು. ಈ ಹುಡುಗಿಯನ್ನು ತನ್ನ ದೇಶದಲ್ಲಿ ಬೀದಿಗೆ ಎಳೆದರೂ, ಈ ಹುಡುಗಿ ಮಾತ್ರ ಜಗತ್ತನ್ನು ಗೆಲ್ಲಲು ಹೊರಟಿದ್ದಾಳೆ. ಆದರೆ, ಅವಳು ಈ ದೇಶದ ವ್ಯವಸ್ಥೆಗೆ ಸೋತಿದ್ದಾಳೆ" ಎಂದು ಅವರು ಬರೆದಿದ್ದಾರೆ.
ಗಣ್ಯರಿಂದ ಅಭಿನಂದನೆಗಳ ಮಹಾಪೂರ: ವಿನೇಶ್ ಫೋಗಟ್ ಐತಿಹಾಸಿಕ ಸಾಧನೆಯಿಂದ ಅಭಿನಂದನೆಗಳು ಮಹಾಪೂರವೇ ಹರಿದುಬಂದಿವೆ. ಇದೀಗ ಆಡಳಿತಾರೂಢ ಸರ್ಕಾರದ ಪ್ರತಿಕ್ರಿಯೆಯ ಬಗ್ಗೆ ಭಾರತೀಯ ಕ್ರೀಡಾಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.
ಫೋಗಟ್ ಎದುರಿಸಿದ ಸವಾಲುಗಳು: ಪ್ರತಿಭಟನೆಯ ನಂತರ, ಫೋಗಟ್ ಮೊಣಕಾಲಿನ ಗಾಯವನ್ನು ನಿವಾರಿಸಿಕೊಂಡರು. ಅದರಿಂದ ಅವರು 2023ರಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ ಸ್ಪರ್ಧಿಸಲಿಲ್ಲ. ಹಿಂದೂ ರಾಷ್ಟ್ರೀಯವಾದಿ ಪಕ್ಷದ ಅನುಯಾಯಿಗಳಿಂದ ಪೋಲಿಸ್ ಹೊಡೆತಗಳು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ದ್ವೇಷದ ಪ್ರಚಾರ ಸೇರಿದಂತೆ ಹಲವಾರು ಇತರ ಅಡೆತಡೆಗಳನ್ನು ಎದುರಿಸಬೇಕಾಯಿತು. ಫೋಗಟ್ 53 ಕೆಜಿಯಿಂದ 50 ಕೆಜಿ ತೂಕದ ವರ್ಗಕ್ಕೆ ಬದಲಾಗುವ ಮೂಲಕ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಕಠಿಣ ಆಯ್ಕೆಯನ್ನು ತೆಗೆದುಕೊಂಡರು.
ಕೇಂದ್ರ ಸರ್ಕಾರದ ವಿರುದ್ಧ ಬಜರಂಗ್ ಪುನಿಯಾ ಕಿಡಿ: ಕೇಂದ್ರ ಮತ್ತು ಬಿಜೆಪಿ ಐಟಿ ಸೆಲ್‌ನ ಆತ್ಮಸಾಕ್ಷಿಯನ್ನು ಪ್ರಶ್ನಿಸಿದ ಪುನಿಯಾ ತಮ್ಮ ಸಹೋದ್ಯೋಗಿಯ ಗೆಲುವಿನ ನಂತರ ಕೆಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿ, "ಇದು ಬಿಜೆಪಿ ಐಟಿ ಸೆಲ್ ಮತ್ತು ಬ್ರಿಜ್ ಭೂಷಣ್ ಸಿಂಗ್ ಅವರ ಮುಖಕ್ಕೆ ಕಪಾಳಮೋಕ್ಷವಾಗಿದೆ. ಅವರು ಭಾರತದ ಹೆಣ್ಣುಮಕ್ಕಳು, ಸಹೋದರಿಯರನ್ನು ಹೇಗೆ ನೋಡುತ್ತಾರೆ?" ಎಂದು ಕಿಡಿಕಾರಿದ್ದಾರೆ.
ಅಭಿನವ್ ಬಿಂದ್ರಾ ಪ್ರತಿಕ್ರಿಯೆ: ಒಲಿಂಪಿಕ್ ಚಿನ್ನದ ಪದಕ ವಿಜೇತ ಅಭಿನವ್ ಬಿಂದ್ರಾ ಪ್ರತಿಕ್ರಿಯಿಸಿ, ''ಅಸ್ಥಿರಜ್ಜು ಛಿದ್ರಗೊಂಡಿದ್ದರೂ ಮತ್ತು ಕಡಿಮೆ ತೂಕದ ವರ್ಗದಲ್ಲಿ ಸ್ಪರ್ಧಿಸಿದ್ದರು. ವಿನೇಶ್ ಫೋಗಟ್ ಅಂತಿಮ ಪಂದ್ಯವನ್ನು ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ನಿಮ್ಮ ಸ್ಥಿತಿಸ್ಥಾಪಕತ್ವ ಮತ್ತು ಶಕ್ತಿ ನಮಗೆಲ್ಲರಿಗೂ ಸ್ಫೂರ್ತಿ ನೀಡುತ್ತದೆ. ಇದು ಸ್ಪೂರ್ತಿದಾಯಕ ದಿನ'' ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.