ETV Bharat / sports

ಚೆನ್ನೈ ಟೆಸ್ಟ್​; ತವರಿನಲ್ಲಿ ಅಶ್ವಿನ್ ಶತಕದಾಟ​; ಬಾಂಗ್ಲಾ ಬೌಲರ್​ಗಳ ಪರದಾಟ! - IND VS BAN Test - IND VS BAN TEST

ಭಾರತ ಮತ್ತು ಬಾಂಗ್ಲಾದೇಶ ನಡುವೆ ನಡೆಯುತ್ತಿರುವ ಮೊಲದ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಆಲ್​ರೌಂಡರ್ ಆರ್​​ ಅಶ್ವಿನ್ ಶತಕ ಸಿಡಿಸಿ ತಂಡಕ್ಕೆ ನೆರವಾದರು.

ಆರ್​ ಅಶ್ವಿನ್​
ಆರ್​ ಅಶ್ವಿನ್​ (AP)
author img

By ETV Bharat Sports Team

Published : Sep 19, 2024, 6:14 PM IST

ಚೆನ್ನೈ: ಭಾರತ ಮತ್ತು ಬಾಂಗ್ಲಾದೇಶ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಆಲ್ ರೌಂಡರ್ ಆರ್​​ ಅಶ್ವಿನ್ (102*)​ ಆಕರ್ಷಕ ಶತಕ ಸಿಡಿಸಿದ್ದಾರೆ. 108 ಎಸೆತಗಳನ್ನು ಎದುರಿಸಿದ ಅವರು 10 ಬೌಂಡರಿ ಹಾಗೂ 2 ಸಿಕ್ಸರ್‌ ನೆರವಿನಿಂದ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 6ನೇ ಶತಕ ಪೂರೈಸಿದರು. ಮತ್ತೊಂದೆಡೆ, ಜಡೇಜಾ (86*) ಕೂಡ ಜವಾಬ್ದಾರಿಯುತ ಇನ್ನಿಂಗ್ಸ್‌ ಮೂಲಕ ಅರ್ಧಶತಕ ಪೂರೈಸಿದ್ದಾರೆ. ಇದರೊಂದಿಗೆ ಮೊದಲ ದಿನದಾಟದ ಅಂತ್ಯಕ್ಕೆ ಭಾರತ 6 ವಿಕೆಟ್​ ನಷ್ಟಕ್ಕೆ 339 ರನ್​ ಕಲೆಹಾಕಿದೆ. ಅಶ್ವಿನ್ ಮತ್ತುಜಡೇಜಾ ಎರಡನೇ ದಿನದಾಟಕ್ಕೆ ಕ್ರೀಸ್​ ಕಾಯ್ದುಕೊಂಡಿದ್ದಾರೆ.

ಇದಕ್ಕೂ ಮುನ್ನ ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ್ದ ಭಾರತ ಕಳಪೆ ಆರಂಭ ಪಡೆದುಕೊಂಡಿತು. ಕೇವಲ 144ರನ್​ಗಳಿಗೆ 6 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಜೈಸ್ವಾಲ್​ ಹೊರತುಪಡಿಸಿ ನಾಲ್ವರು ಬ್ಯಾಟರ್​ಗಳು ಅರ್ಧಶತಕ ಪೂರೈಸಲು ಸಾಧ್ಯವಾಗದೇ ಪೆವಿಲಿಯನ್​ ಸೇರಿದರು. ಈ ವೇಳೆ ತಂಡಕ್ಕೆ ಜಡೇಜಾ ಮತ್ತು ಅಶ್ವಿನ್​ ನೆರವಾದರು. ಈ ಇಬ್ಬರು ತಮ್ಮ ಆಕರ್ಷಕ ಬ್ಯಾಟಿಂಗ್​ ನೆರವಿನಿಂದ ತಂಡದ ಸ್ಕೋರ್​ ಅನ್ನು 300ರ ಗಡಿಗೆ ಕೊಂಡೊಯ್ದರು.

195 ರನ್​ಗಳ ಜೊತೆಯಾಟ: ಈ ಇಬ್ಬರು ಆಟಗಾರರು 7ನೇ ವಿಕೆಟ್‌ಗೆ 195 ರನ್‌ಗಳ ಅಜೇಯ ಜೊತೆಯಾಟ ಆಡಿ ಭಾರತವನ್ನು ಬೃಹತ್ ಮೊತ್ತದತ್ತ ಕೊಂಡೊಯ್ದರು. ರೋಹಿತ್, ಗಿಲ್ ಮತ್ತು ವಿರಾಟ್ ಅವರಂತಹ ಸ್ಟಾರ್‌ಗಳು ಈ ಪಿಚ್‌ನಲ್ಲಿ ರನ್ ಮಾಡಲು ಹೆಣಗಾಡುತ್ತಿದ್ದರೆ, ಈ ಆಲ್‌ರೌಂಡರ್‌ಗಳು ಬೃಹತ್ ಸ್ಕೋರ್‌ಗಳೊಂದಿಗೆ ಬಾಂಗ್ಲಾ ಬೌಲರ್‌ಗಳಿಗೆ ಬೆವರಿಳಿಸಿದರು. ಈ ಕ್ರಮದಲ್ಲಿ ಅಶ್ವಿನ್ ಶತಕ ಪೂರೈಸಿದರು. ಏತನ್ಮಧ್ಯೆ, ಇದು ಅಶ್ವಿನ್ ಅವರ ತವರು ನೆಲವಾದ ಚೆಪಾಕ್‌ನಲ್ಲಿ ಎರಡನೇ ಟೆಸ್ಟ್ ಶತಕವಾಗಿದೆ.

ಇದನ್ನೂ ಓದಿ: ಈ ದಿನ ಕ್ರಿಕೆಟ್​ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದ್ದ 'ಸಿಕ್ಸರ್​ ಕಿಂಗ್​' ಯುವರಾಜ್​ ಸಿಂಗ್​: ಅದೇನೆಂದು ಗೊತ್ತಾ? - YUVRAJ SINGH ON THIS DAY 2007

ETV Bharat Logo

Copyright © 2024 Ushodaya Enterprises Pvt. Ltd., All Rights Reserved.