ಹೈದರಾಬಾದ್: ಮುಂಬರು ಐಪಿಎಲ್ ಸೀಸನ್ಗಾಗಿ ಮುಂದಿನ ತಿಂಗಳು ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಇದಕ್ಕಾಗಿ ಈಗಾಗಲೇ ಆಟಗಾರರು ಫಿಟ್ನೆಸ್ ಸೇರಿದಂತೆ ಸಕಲ ಸಿದ್ಧತೆ ನಡೆಸುತ್ತಿದ್ದಾರೆ. ಇದರ ನಡುವೆಯೇ ಟೀಂ ಇಂಡಿಯಾ ಆರಂಭಿಕ ಬ್ಯಾಟರ್ ಪೃಥ್ವಿ ಶಾಗೆ ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ದೊಡ್ಡ ಶಾಕ್ ನೀಡಿದೆ.
ಸದ್ಯ ನಡೆಯುತ್ತಿರುವ ರಣಜಿ ಟ್ರೋಫಿ 2024 -25ರ ಋತುವಿನಲ್ಲಿ ಮುಂಬೈ ತಂಡದಿಂದ ಶಾ ಅವರನ್ನು ಕೈಬಿಡಲಾಗಿದೆ. ರಣಜಿ ಟ್ರೋಫಿಯ ಎಲೈಟ್ ಗುಂಪಿನಲ್ಲಿರುವ ಮುಂಬೈ ತಂಡ ತನ್ನ ಮುಂದಿನ ಪಂದ್ಯದಲ್ಲಿ ತ್ರಿಪುರಾವನ್ನು ಎದುರಿಸಲಿದೆ. ಈ ಪಂದ್ಯಕ್ಕೆ ಆಯ್ಕೆಯಾದ ತಂಡದಲ್ಲಿ ಶಾ ಅವರನ್ನು ಕೈಬಿಡಲಾಗಿದೆ. ಫಿಟ್ನೆಸ್ ಸಮಸ್ಯೆಯಿಂದಾಗಿ ಅವರನ್ನು ಕೈಬಿಡಲಾಗಿದೆ MCA ಹೇಳಿಕೆಯಲ್ಲಿ ತಿಳಿಸಿದೆ.
Prithvi Shaw " given a break" from mumbai's squad. suryakumar yadav (personal commitments) and tanush kotian (india a duty) to miss mumbai's next #RanjiTrophy match against Tripura. Akhil Herwadkar and Karsh Kothari recalled to the squad pic.twitter.com/62detBMneS
— Amol Karhadkar (@karhacter) October 21, 2024
"ಅತಿಯಾದ ತೂಕದ ಕಾರಣ ಪೃಥ್ವಿ ಶಾ ಅವರು ತ್ರಿಪುರಾ ವಿರುದ್ಧದ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಕೋಚ್ ಮತ್ತು ಆಯ್ಕೆದಾರರು ಶಾ ಅವರೊಂದಿಗೂ ಇದರ ಕುರಿತು ತಿಳಿಸಿ ನಂತರ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಅಲ್ಲದೇ ಶಾ ಅವರ ಫಿಟ್ನೆಸ್ ಬಗ್ಗೆ ಹೆಚ್ಚು ಗಮನಹರಿಸಬೇಕು" ಎಂದು ಎಂಸಿಎ ತಿಳಿಸಿದೆ. ಕ್ರೀಡಾಪತ್ರಿಕೆಯೊಂದರ ವರದಿ ಪ್ರಕಾರ, ಸಂಜಯ್ ಪಾಟೀಲ್ ನೇತೃತ್ವದ ಮುಂಬೈ ಆಯ್ಕೆ ಸಮಿತಿಯು ಪೃಥ್ವಿ ಶಾ ಅವರ ಫಿಟ್ನೆಸ್ ಬಗ್ಗೆ ಅಸಮಾಧಾನ ಹೊರಹಾಕಿದೆ ಎಂದು ಹೇಳಲಾಗಿದೆ.
ಇದಲ್ಲದೇ, ಪೃಥ್ವಿ ಅಧಿಕ ತೂಕ ಹೊಂದಿದ್ದಾರೆ ಎಂದು ಆಯ್ಕೆಗಾರರು ಕಂಡುಕೊಂಡಿದ್ದಾರೆ. ನೆಟ್ ಅಭ್ಯಾಸ ಅವಧಿಯಲ್ಲೂ ಪೃಥ್ವಿ ಶಾ ಬೇಜವಾಬ್ದಾರಿ ವರ್ತನೆ ತೋಡಿದ್ದಾರೆ ಎಂದು ತಂಡದ ಆಡಳಿತ ಮಂಡಳಿ ಆಯ್ಕೆಗಾರರಿಗೆ ದೂರು ನೀಡಿದೆ ಎಂದೂ ವರದಿಯಾಗಿದೆ.
ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಪ್ರಕಾರ, ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ನ (ಎಂಸಿಎ) ಎರಡು ವಾರಗಳ ಫಿಟ್‌ನೆಸ್ ವೇಳಾಪಟ್ಟಿ ಅನುಸರಿಸಲು ಆಯ್ಕೆದಾರರು ಪೃಥ್ವಿ ಶಾ ಅವರಿಗೆ ತಿಳಿಸಿದ್ದರೆ. ಪೃಥ್ವಿ ಶಾ ದೇಹದಲ್ಲಿ ಶೇಕಡಾ 35 ರಷ್ಟು ಕೊಬ್ಬು ಹೊಂದಿದ್ದು, ತಂಡಕ್ಕೆ ಮರಳುವ ಮೊದಲು ತರಬೇತಿಯ ಅಗತ್ಯವಿದೆ ಎಂದು ತಂಡದ ಮ್ಯಾನೇಜ್‌ಮೆಂಟ್ ಎಂಸಿಎಗೆ ತಿಳಿಸಿದೆ.
ಈ ಹಿನ್ನೆಲೆ ಅವರನ್ನು ತಂಡದಿಂದ ಕೈ ಬಿಡಲಾಗಿದೆ ಎಂದು ವರದಿಯಾಗಿದೆ. ಏತನ್ಮಧ್ಯೆ, ಪೃಥ್ವಿ ಶಾ ಕಳೆದ ಕೆಲವು ವರ್ಷಗಳಿಂದ ಹೇಳಿಕೊಳ್ಳುವ ಪ್ರದರ್ಶನ ತೋರುತ್ತಿಲ್ಲ. ಪ್ರಸಕ್ತ ರಣಜಿ ಟ್ರೋಫಿ ಋತುವಿನ ಮೊದಲ ಎರಡು ಪಂದ್ಯಗಳಲ್ಲಿ ಕೇವಲ 59 ರನ್ ಗಳಿಸಿದ್ದಾರೆ.
ಇದನ್ನೂ ಓದಿ: IND vs NZ: ಭಾರತದ ವಿರುದ್ಧ ಮೊದಲ ಟೆಸ್ಟ್ ಗೆದ್ದ ಖುಷಿಯಲ್ಲಿದ್ದ ನ್ಯೂಜಿಲೆಂಡ್ಗೆ ದೊಡ್ಡ ಆಘಾತ!