ETV Bharat / sports

ಟೇಬಲ್​ ಟೆನ್ನಿಸ್‌ಗೆ​ ಗುಡ್‌ಬೈ ಹೇಳಿ ಉನ್ನತ ಶಿಕ್ಷಣದತ್ತ ಚಿತ್ತ ಹರಿಸಿದ ಭಾರತದ ಸ್ಟಾರ್​​ ಒಲಿಂಪಿಕ್ಸ್​​ ಅಥ್ಲೀಟ್ - Archana Kamath - ARCHANA KAMATH

ಪ್ಯಾರಿಸ್​ ಒಲಿಂಪಿಕ್ಸ್​ ಟೇಬಲ್​ ಟೆನ್ನಿಸ್​ ಕ್ರೀಡೆಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ ಕ್ವಾರ್ಟರ್​ ಫೈನಲ್​ ತಲುಪಿದ್ದ ಭಾರತದ ಸ್ಟಾರ್​ ಅಥ್ಲೀಟ್​ ಇದೀಗ ಕ್ರೀಡೆಗೆ ಫುಲ್​ಸ್ಟಾಪ್​ ಇಟ್ಟು ಉನ್ನತ ವಿದ್ಯಾಭ್ಯಾಸಕ್ಕಾಗಿ ಅಮೆರಿಕಕ್ಕೆ ತೆರಳಲು ಅಣಿಯಾಗುತ್ತಿದ್ದಾರೆ.

ಅರ್ಚನಾ ಕಾಮತ್​
ಅರ್ಚನಾ ಕಾಮತ್​ (AFP)
author img

By ETV Bharat Sports Team

Published : Aug 22, 2024, 5:44 PM IST

ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತದ ಟೇಬಲ್ ಟೆನಿಸ್ ತಂಡದ ಭಾಗವಾಗಿದ್ದ ಸ್ಟಾರ್​ ಪ್ಯಾಡ್ಲರ್​, ಕ್ರೀಡೆಗೆ ವಿದಾಯ ಹೇಳಿ ಉನ್ನತ ಶಿಕ್ಷಣದತ್ತ ಗಮನ ಹರಿಸಲು ಮುಂದಾಗಿದ್ದಾರೆ. ಇದಕ್ಕಾಗಿ ಅವರು ಭಾರತ ತೊರೆಯಲಿದ್ದಾರೆ ಎಂದು ವರದಿಯಾಗಿದೆ.

24ರ ಹರೆಯದ ಅರ್ಚನಾ ಕಾಮತ್​ ಅಮೆರಿಕಕ್ಕೆ ತೆರಳಲು ಯೋಜಿಸಿದ್ದಾರೆ. ಇವರು ತಮ್ಮ ಈ ನಿರ್ಧಾರದ ಬಗ್ಗೆ ಕೋಚ್ ಅನ್ಶುಲ್ ಗರ್ಗ್ ಅವರೊಂದಿಗೂ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಅರ್ಚನಾ ಅತ್ಯುತ್ತಮ ಫಾರ್ಮ್‌ನಲ್ಲಿದ್ದರು. ತಮ್ಮ ಅಮೋಘ ಆಟದಿಂದಾಗಿ ಕ್ವಾರ್ಟರ್ ಫೈನಲ್ ತಲುಪಿದ್ದರು. ಇದರೊಂದಿಗೆ ಈ ಸಾಧನೆ ತೋರಿದ ದೇಶದ ಮೊದಲ ಮಹಿಳಾ ಪ್ಯಾಡ್ಲರ್​ ಎಂಬ ದಾಖಲೆಯನ್ನೂ ಬರೆದಿದ್ದರು.

ಕಾಮತ್​ ಅವರ ನಿರ್ಧಾರದ ಬಗ್ಗೆ ಮಾಧ್ಯಮವೊಂದರಲ್ಲಿ ಕೋಚ್​ ಮಾತನಾಡಿದ್ದಾರೆ.​ ಮುಂಬರುವ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಅರ್ಚನಾ ಕಾಮತ್​ ಪದಕ ಗೆಲ್ಲುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು​, "ಕಾಮತ್​ ಟೇಬಲ್ ಟೆನಿಸ್ ತೊರೆಯಲು ನಿರ್ಧರಿಸಿ ಶಿಕ್ಷಣದತ್ತ ಗಮನ ಹರಿಸಲು ವಿದೇಶಕ್ಕೆ ತೆರಳಲಿದ್ದಾರೆ. ಅವರು ವಿಶ್ವದ ಅಗ್ರ 100 ಮಹಿಳಾ ಪ್ಯಾಡ್ಲರ್​ ಪಟ್ಟಿಯಲ್ಲಿ ಇಲ್ಲದಿದ್ದರೂ ಕಳೆದ ಕೆಲವು ತಿಂಗಳುಗಳಲ್ಲಿ ಸಾಕಷ್ಟು ಸುಧಾರಿಸಿದ್ದರು. ಆದರೆ ಕ್ರೀಡೆಯನ್ನು ಬಿಟ್ಟು ಅಮೆರಿಕಕ್ಕೆ ತೆರಳಲು ಮನಸ್ಸು ಮಾಡಿದ್ದಾರೆ. ಅವರು ಒಮ್ಮೆ ಮನಸ್ಸು ಮಾಡಿದರೆ ಅದು ಬದಲಾಗುವುದು ಕಷ್ಟ" ಎಂದರು.

ನಾಸಾದಲ್ಲಿ ಕೆಲಸ ಮಾಡುತ್ತಿರುವ ಸಹೋದರ: ಕಾಮತ್ ವರ್ಷದ ಆರಂಭದಲ್ಲಿ ಅಂದರೆ ಒಲಿಂಪಿಕ್ಸ್​ಗೂ ಮುನ್ನ ಈ ಕುರಿತು ಮಾತನಾಡಿದ್ದರು, "ನನ್ನ ಸಹೋದರ ನಾಸಾದಲ್ಲಿ ಕೆಲಸ ಮಾಡುತ್ತಿದ್ದು, ಆತ ನನಗೆ ಉನ್ನತ ಶಿಕ್ಷಣಕ್ಕಾಗಿ ಒತ್ತಾಯಿಸುತ್ತಿದ್ದಾನೆ. ಹಾಗಾಗಿ, ಶಿಕ್ಷಣವನ್ನು ಪೂರ್ಣಗೊಳಿಸಲು ಕೆಲ ಸಮಯವನ್ನು ತೆಗೆದುಕೊಳ್ಳಲು ನಿರ್ಧರಿಸಿದ್ದೇನೆ" ಎಂದಿದ್ದರು. ಕಾಮತ್​ ವಿದ್ಯಾಭ್ಯಾಸದಲ್ಲೂ ಮುಂದಿದ್ದು, ಟಾಪರ್​ ಕೂಡ ಎಂಬುದು ಗಮನಾರ್ಹ.

ಕಾಮತ್​ಗೆ ತಂದೆಯಿಂದ ಬೆಂಬಲ: ತಂದೆ ಗಿರೀಶ್ ಮಾಧ್ಯಮವೊಂದಕ್ಕೆ ಮಗಳ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ್ದು, "ಅರ್ಚನಾ ವಿದ್ಯಾಭ್ಯಾಸದಲ್ಲಿ ಮುಂದಿದ್ದಾಳೆ. ಪದವಿಪೂರ್ವದಲ್ಲಿ ಅರ್ಥಶಾಸ್ತ್ರ ಅಧ್ಯಯನ ಮಾಡಿದ್ದು, ಇತ್ತೀಚೆಗೆ ಇಂಟರ್ನ್ಯಾಷನಲ್ ರಿಲೇಶನ್ಸ್, ಸ್ಟ್ರಾಟಜಿ ಮತ್ತು ಸೆಕ್ಯುರಿಟೀಸ್‌ನಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದಾಳೆ. ಮುಂದಿನ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಆಕೆ ನಿರ್ಧರಿಸಿದ್ದು ಅದಕ್ಕೆ ನನ್ನ ಬೆಂಬಲವಿದೆ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಯೂಟ್ಯೂಬ್‌ನಲ್ಲಿ ಖಾತೆ​ ತೆರೆದ ಪ್ರಸಿದ್ಧ ಫುಟ್ಬಾಲಿಗ ರೊನಾಲ್ಡೊ: 90 ನಿಮಿಷಗಳಲ್ಲೇ ಸಿಕ್ತು ಗೋಲ್ಡ್​ ಪ್ಲೇ ಬಟನ್ - Cristiano Ronaldo

ETV Bharat Logo

Copyright © 2025 Ushodaya Enterprises Pvt. Ltd., All Rights Reserved.