ETV Bharat / sports

ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವೇಗಿ ಪ್ಯಾಟ್​ ಕಮಿನ್ಸ್​ 'ಹ್ಯಾಟ್ರಿಕ್​' ವಿಶ್ವದಾಖಲೆ - pat Cummins hat tricks - PAT CUMMINS HAT TRICKS

ಟಿ20 ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾದ ವೇಗಿ ಪ್ಯಾಟ್​ ಕಮಿನ್ಸ್​ ಹ್ಯಾಟ್ರಿಕ್​ ವಿಶ್ವದಾಖಲೆ ಮಾಡಿದ್ದಾರೆ. ಸತತ ಎರಡು ಪಂದ್ಯಗಳಲ್ಲಿ ಹ್ಯಾಟ್ರಿಕ್​ ವಿಕೆಟ್​ ಪಡೆದ ವಿಶ್ವದ ಮೊದಲ ಕ್ರಿಕೆಟರ್​ ಆದರು.

ಪ್ಯಾಟ್​ ಕಮಿನ್ಸ್​ ಹ್ಯಾಟ್ರಿಕ್​ ವಿಶ್ವದಾಖಲೆ
ಪ್ಯಾಟ್​ ಕಮಿನ್ಸ್​ ಹ್ಯಾಟ್ರಿಕ್​ ವಿಶ್ವದಾಖಲೆ (ETV Bharat)
author img

By PTI

Published : Jun 23, 2024, 8:21 PM IST

ಕಿಂಗ್‌ಸ್ಟೌನ್ (ವೆಸ್ಟ್​ಇಂಡೀಸ್​): ಆಸ್ಟ್ರೇಲಿಯಾಕ್ಕೆ ಏಕದಿನ ವಿಶ್ವಕಪ್​ ಗೆಲ್ಲಿಸಿಕೊಟ್ಟ ಯಶಸ್ವಿ ವೇಗಿ ಪ್ಯಾಟ್ ಕಮಿನ್ಸ್​ ಟಿ20 ವಿಶ್ವಕಪ್​ನಲ್ಲಿ ಮಹತ್ವದ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಸತತ ಎರಡು ಪಂದ್ಯಗಳಲ್ಲಿ ಮತ್ತು ಒಂದೇ ವಿಶ್ವಕಪ್​ನಲ್ಲಿ ಎರಡು ಬಾರಿ ಹ್ಯಾಟ್ರಿಕ್​ ಸಾಧನೆ ಮಾಡಿದ ವಿಶ್ವದ ಏಕೈಕ ಕ್ರಿಕೆಟಿಗ ಎಂಬ ಅಭಿದಾನಕ್ಕೆ ಪಾತ್ರರಾದರು.

ಅಫ್ಘಾನಿಸ್ತಾನ ವಿರುದ್ಧ ಜೂನ್​ 23 ರಂದು ನಡೆದ ಸೂಪರ್​-8 ಹಂತದ ಪಂದ್ಯದಲ್ಲಿ ಕಮಿನ್ಸ್​ ಹ್ಯಾಟ್ರಿಕ್​ ವಿಕೆಟ್​ ಪಡೆದರು. ಇನಿಂಗ್ಸ್​ನ 18ನೇ ಓವರ್‌ನ ಕೊನೆಯ ಎಸೆತದಲ್ಲಿ ರಶೀದ್ ಖಾನ್​ ವಿಕೆಟ್​ ಪಡೆದರೆ, ನಂತರದ 20ನೇ ಓವರ್‌ನ ಮೊದಲ ಎರಡು ಎಸೆತಗಳಲ್ಲಿ ಕರೀಂ ಜನತ್ ಮತ್ತು ಗುಲ್ಬದಿನ್ ನೈಬ್​ರನ್ನು ಔಟ್​ ಮಾಡುವ ಮೂಲಕ ಈ ವಿಶ್ವದಾಖಲೆ ಸೃಷ್ಟಿಸಿದರು.

ಇದೇ ವಿಶ್ವಕಪ್​ನ ಕಳೆದ ಪಂದ್ಯದಲ್ಲಿ ಕಮಿನ್ಸ್​ ಹ್ಯಾಟ್ರಿಕ್​ ಸಾಧನೆ ಮಾಡಿದ್ದರು. 31 ವರ್ಷದ ಹಿರಿಯ ವೇಗಿ, ಬಾಂಗ್ಲಾದೇಶದ ವಿರುದ್ಧ ನಡೆದ ಸೂಪರ್​ 8 ಹಂತದ ಪಂದ್ಯದಲ್ಲಿ ಸತತ ಮೂರು ಎಸೆತಗಳಲ್ಲಿ ವಿಕೆಟ್ ಕಿತ್ತಿದ್ದರು. ಅದರಲ್ಲೂ ಅವರು 18 ಮತ್ತು 20 ನೇ ಓವರ್​ನಲ್ಲಿಯೇ ವಿಕೆಟ್​ ಪಡೆದಿದ್ದು ವಿಶೇಷ. 18ನೇ ಓವರ್​ನ 5 ಮತ್ತು 6ನೇ ಎಸೆತಗಳಲ್ಲಿ ಕ್ರಮವಾಗಿ ಮೊಹಮದುಲ್ಲಾ, ಮೆಹದಿ ಹಸನ್​ರನ್ನು ಪೆವಿಲಿಯನ್​ ಸೇರಿಸಿದ್ದರೆ, 20ನೇ ಓವರ್​ನ ಮೊದಲ ಎಸೆತದಲ್ಲಿ ತೌಹಿದ್​ ಹೃದೋಯ್​ ವಿಕೆಟ್​ ಉರುಳಿಸಿದ್ದರು.

ರೋಮಾಂಚಕ ಸಮಯ: ಇನ್ನು, ಪಂದ್ಯದ ಬಳಿಕ ಮಾತನಾಡಿದ ಕಮಿನ್ಸ್​, ಆಸ್ಟ್ರೇಲಿಯಾ ಪರ 100ಕ್ಕೂ ಅಧಿಕ ಪಂದ್ಯಗಳನ್ನು ಆಡಿದ ನಂತರ ಸತತ ಎರಡು ಪಂದ್ಯಗಳಲ್ಲಿ ಹ್ಯಾಟ್ರಿಕ್​ ವಿಕೆಟ್​ ಪಡೆದಿರುವುದು ರೋಮಾಂಚಕ ಅನುಭವವಾಗಿದೆ ಎಂದು ಹೇಳಿದರು.

ಆಸ್ಟ್ರೇಲಿಯಾ ಪರ ನೂರಕ್ಕೂ ಅಧಿಕ ಪಂದ್ಯ ಆಡಿರುವ ಪ್ಯಾಟ್​ ಕಮಿನ್ಸ್​ ಈವರೆಗೆ ಒಂದು ಬಾರಿಯೂ ಹ್ಯಾಟ್ರಿಕ್​ ಸಾಧನೆ ಮಾಡಿರಲಿಲ್ಲ. ಈ ಟಿ20 ವಿಶ್ವಕಪ್​ನಲ್ಲಿ ಸತತ ಎರಡು ಪಂದ್ಯಗಳಲ್ಲಿ ಹ್ಯಾಟ್ರಿಕ್​ ವಿಕೆಟ್​ ಕಿತ್ತು ವಿಶ್ವದಾಖಲೆ ಬರೆದಿದ್ದಾರೆ.

ಆಸೀಸ್​ಗೆ ಅಫ್ಘಾನ್​ ಶಾಕ್​: ಭಾನುವಾರ ಬೆಳಗ್ಗೆ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾಕ್ಕೆ ಅಫ್ಘಾನಿಸ್ತಾನ ಶಾಕ್​ ನೀಡಿತು. ಸೆಮೀಸ್​ಗೇರಲು ಮಹತ್ವದ ಪಂದ್ಯದಲ್ಲಿ ಅಫ್ಗಾನ್​ ನೀಡಿದ 148 ರನ್​ಗಳ ಗುರಿ ಮುಟ್ಟುವಲ್ಲಿ ವಿಫಲವಾಗಿ 127 ರನ್​ಗೆ ಆಲೌಟ್​ ಆಯಿತು. ಇದರಿಂದ 21 ರನ್​ಗಳ ಸೋಲು ಕಂಡಿತು. ಗ್ಲೆನ್​ ಮ್ಯಾಕ್ಸ್​ವೆಲ್​ (59) ಅರ್ಧಶತಕ ಹೊರತಾಗಿ ಉಳಿದ ಯಾವ ಬ್ಯಾಟರ್​ಗಳೂ ರನ್​ ಗಳಿಸಲಿಲ್ಲ. ಇದರಿಂದ ವೈಫಲ್ಯ ಅನುಭವಿಸಿ ಸೋಲು ಕಂಡಿತು. ಗುಲ್ಬದಿನ್​ ನೈಬ್​ 4, ನವೀನ್​ ಉಲ್​ ಹಕ್​ 3 ವಿಕೆಟ್​ ಪಡೆದು ಕಾಂಗರೂಗಳ ಹೆಡೆಮುರಿ ಕಟ್ಟಿದರು.

ಇದಕ್ಕೂ ಮೊದಲು ಬ್ಯಾಟ್​ ಮಾಡಿದ ಅಫ್ಘನ್​ಗೆ ಗುರ್ಬಾಜ್​(60), ಇಬ್ರಾಹಿಂ ಝದ್ರನ್​​ (51) ಅರ್ಧಶತಕ ಗಳಿಸಿದರು. ಇದರ ನಂತರ ಬ್ಯಾಟಿಂಗ್​ ನಷ್ಟಕ್ಕೀಡಾಗಿ 148 ರನ್​ ಗಳಿಸಿತು. ಪ್ಯಾಟ್​ ಕಮಿನ್ಸ್​ 3, ಆ್ಯಡಂ ಝಂಪಾ 2 ವಿಕೆಟ್​ ಪಡೆದರು.

ಇದನ್ನೂ ಓದಿ: ಆರ್ಚರಿ ವಿಶ್ವಕಪ್‌: ರಿಕರ್ವ್ ಮಿಶ್ರ ತಂಡಕ್ಕೆ ಕಂಚು, ಬಿಲ್ವಿದ್ಯೆಯಲ್ಲಿ ಭಾರತಕ್ಕೆ ಮೂರನೇ ಪದಕ - Archery team wins bronze

ETV Bharat Logo

Copyright © 2025 Ushodaya Enterprises Pvt. Ltd., All Rights Reserved.