ಪ್ಯಾರಿಸ್(ಫ್ರಾನ್ಸ್): ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಒಂದೇ ಒಂದು ಸೋಲನ್ನೂ ಕಂಡಿರದ ಮತ್ತು ಕಳೆದ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತೆ ಜಪಾನಿನ ಯುಯಿ ಸುಸಾಕಿ ಅವರನ್ನು ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಮಣಿಸಿದ್ದಾರೆ.
ಇಂದು ನಡೆದ ಪಂದ್ಯದಲ್ಲಿ ಫೋಗಟ್ 3-2ರಿಂದ ಹಾಲಿ ಒಲಿಂಪಿಕ್ ಚಾಂಪಿಯನ್ ಮತ್ತು 3 ಬಾರಿಯ ವಿಶ್ವ ಚಾಂಪಿಯನ್ ಜಪಾನ್‌ನ ಯುಯಿ ಸುಸಾಕಿ ಅವರನ್ನು ಸೋಲಿಸಿದರು. ಇದರೊಂದಿಗೆ ಮಹಿಳೆಯರ ಫ್ರೀಸ್ಟೈಲ್ ಈವೆಂಟ್‌ನ ಕ್ವಾರ್ಟರ್ ಫೈನಲ್‌ಗೆ ಪ್ರವೇಶ ಪಡೆದರು. ಅಲ್ಲದೇ ಮಹಿಳೆಯರ 50 ಕೆ.ಜಿ. ಫ್ರೀಸ್ಟೈಲ್ ಕುಸ್ತಿಯ 16ನೇ ಸುತ್ತಿನಲ್ಲಿ ಟೋಕಿಯೊ 2020 ಚಿನ್ನದ ಪದಕ ವಿಜೇತೆ ಜಪಾನ್‌ನ ಯುಯಿ ಸುಸಾಕಿ ಅವರನ್ನು ಮಣಿಸುವ ಮೂಲಕ ವಿನೇಶ್ ಫೋಗಟ್ ಒಲಿಂಪಿಕ್ಸ್ನಲ್ಲಿ ಹೊಸ ದಾಖಲೆ ಬರೆದರು.
ಪಂದ್ಯದ ಮೊದಲ ಅವಧಿಯ ನಂತರ ಸುಸಾಕಿ 1-0 ಅಂತರದಿಂದ ಫೋಗಟ್ ವಿರುದ್ಧ ಮುನ್ನಡೆ ಸಾಧಿಸಿದರು. ಆದಾಗ್ಯೂ, ಎರಡನೇ ಅವಧಿಯಲ್ಲಿ ಅದ್ಭುತ ಪುನರಾಗಮನ ಮಾಡಿದ ವಿನೇಶ್ ಎದುರಾಳಿಯನ್ನು 3-2ರಿಂದ ಸೋಲಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
ಇದನ್ನೂ ಓದಿ: ಒಲಿಂಪಿಕ್ಸ್ನಲ್ಲಿ ಮತ್ತೊಂದು ವಿಶ್ವದಾಖಲೆ ಬರೆದ ಸ್ವೀಡನ್ನ ಪೋಲ್ ವಾಲ್ಟರ್ ಮೊಂಡೋ ಡುಪ್ಲಾಂಟಿಸ್ - paris olympics 2024