ETV Bharat / sports

ಸೂಪರ್‌ ಸಿಂಧು! ಪ್ಯಾರಿಸ್‌ ಒಲಿಂಪಿಕ್ಸ್‌ ಬ್ಯಾಡ್ಮಿಂಟನ್‌ನಲ್ಲಿ ಪಿ.ವಿ.ಸಿಂಧು ಶುಭಾರಂಭ - P V Sindhu - P V SINDHU

ಭಾರತದ ಪಿ.ವಿ.ಸಿಂಧು ಮಹಿಳೆಯರ ಸಿಂಗಲ್ಸ್ ಬ್ಯಾಡ್ಮಿಂಟನ್​ ಪಂದ್ಯದಲ್ಲಿ ಮಾಲ್ಡೀವ್ಸ್ ಆಟಗಾರ್ತಿ ಫಾತಿಮತ್‌ ನಬಾಹ್‌ ಅಬ್ದುಲ್ ರಜಾಕ್ ಅವರನ್ನು ಸೋಲಿಸಿದ್ದಾರೆ.

ಪಿ.ವಿ ಸಿಂಧು
ಪಿ.ವಿ.ಸಿಂಧು (IANS)
author img

By ETV Bharat Sports Team

Published : Jul 28, 2024, 1:47 PM IST

ಪ್ಯಾರಿಸ್​: ಭಾರತದ ಸ್ಟಾರ್​ ಷಟ್ಲರ್​ ಪಿ.ವಿ.ಸಿಂಧು ಗೆಲುವಿನೊಂದಿಗೆ ಪ್ಯಾರಿಸ್​ ಒಲಿಂಪಿಕ್ಸ್​ ಅಭಿಯಾನ ಆರಂಭಿಸಿದ್ದಾರೆ. ಇಂದು ನಡೆದ ಮಹಿಳೆಯರ ಸಿಂಗಲ್ಸ್ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಸಿಂಧು, ಮಾಲ್ಡೀವ್ಸ್ ಆಟಗಾರ್ತಿ ಫಾತಿಮತ್‌ ನಬಾಹ್‌ ಅಬ್ದುಲ್ ರಜಾಕ್ ಅವರನ್ನು 21-9, 21-6 ನೇರ ಸೆಟ್‌ಗಳಿಂದ ಮಣಿಸಿದರು.

ಮೊದಲ ಸೆಟ್‌ನಲ್ಲಿ 13ನೇ ಶ್ರೇಯಾಂಕಿತ ಆಟಗಾರ್ತಿ ಪಿ.ವಿ.ಸಿಂಧು ಎದುರಾಳಿ ಆಟಗಾರ್ತಿಗೆ ಹಲವು ಅವಕಾಶಗಳನ್ನು ನೀಡಿದರು. ಸೆಟ್‌ನ ಆರಂಭದಲ್ಲಿ 3-3ರಲ್ಲಿ ಸಮಬಲಗೊಂಡಿತ್ತು. ಇದಾದ ಬಳಿಕ ಮಾಲ್ಡೀವ್ಸ್ ಆಟಗಾರ್ತಿಗೆ ಯಾವುದೇ ಅವಕಾಶ ನೀಡದ ಸಿಂಧು, ಮಧ್ಯ ವಿರಾಮದವರೆಗೂ 11-4 ಅಂಕಗಳೊಂದಿಗೆ 7 ಅಂಕಗಳ ಮುನ್ನಡೆ ಸಾಧಿಸಿದರು. ವಿರಾಮದ ನಂತರವೂ ಅದ್ಭುತ ಪ್ರದರ್ಶನ ಮುಂದುವರಿಸಿ ಮೊದಲ ಸೆಟ್ ಅನ್ನು 21-9 ಅಂತರದಿಂದ ಗೆದ್ದುಕೊಂಡರು.

ಎರಡನೇ ಸೆಟ್​ನಲ್ಲೂ ಅಕ್ರಮಣಕಾರಿ ಸ್ಮ್ಯಾಷ್​ಗಳೊಂದಿಗೆ ಸಿಂಧು, ವಿಶ್ವ ರ‍್ಯಾಂಕಿಂಗ್‌ನಲ್ಲಿ 99ನೇ ಸ್ಥಾನದ ಮಾಲ್ಡೀವ್ಸ್‌ನ ಅಬ್ದುಲ್ ರಜಾಕ್​ ಮೇಲೆ ಒತ್ತಡ ಹೇರಲು ಆರಂಭಿಸಿದರು. ಪಂದ್ಯದ ಕೊನೆಯವರೆಗೂ ಎದುರಾಳಿ ಮೇಲೆ ಸವಾರಿ ಮಾಡಿ 21-6 ಅಂತರದಿಂದ ಗೆದ್ದು ಬೀಗಿದರು.

ಈ ಹಿಂದೆ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಬೆಳ್ಳಿ ಮತ್ತು ಕಂಚಿನ ಪದಕ ತಂದುಕೊಟ್ಟಿರುವ ಸಿಂಧು, ಈ ಬಾರಿ ಚಿನ್ನದ ಪದಕ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಓದಿ: ಒಲಿಂಪಿಕ್ಸ್‌ ಬಾಕ್ಸಿಂಗ್​: ವಿಯೆಟ್ನಾಂ ವಿರುದ್ದ ಪ್ರೀತಿ 'ಪವಾರ್'ಫುಲ್! ಪ್ರೀ ಕ್ವಾರ್ಟರ್​ ಫೈನಲ್​ ಪ್ರವೇಶ - Preeti Pawar

ETV Bharat Logo

Copyright © 2025 Ushodaya Enterprises Pvt. Ltd., All Rights Reserved.