ನವದೆಹಲಿ: ಜುಲೈ 27 ರಿಂದ ಪ್ರಾರಂಭವಾಗುವ ಪ್ಯಾರಿಸ್ 2024 ರ ಒಲಿಂಪಿಕ್ ಟೇಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಶ್ರೀಜಾ ಅಕುಲಾ (16 ನೇ) ಮತ್ತು ಮನಿಕಾ ಬಾತ್ರಾ (18 ನೇ) ಅತ್ಯುನ್ನತ ಶ್ರೇಯಾಂಕದ ಭಾರತೀಯ ಆಟಗಾರರಾಗಿದ್ದಾರೆ. ಅಂತಾರಾಷ್ಟ್ರೀಯ ಟೇಬಲ್ ಟೆನ್ನಿಸ್ ಫೆಡರೇಶನ್ (ಐಟಿಟಿಎಫ್) ಮಂಗಳವಾರ ಶ್ರೇಯಾಂಕವನ್ನು ಪ್ರಕಟಿಸಿದೆ.
ಪಟ್ಟಿಯ ಪ್ರಕಾರ, ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ಸ್ಪರ್ಧೆಗಳಲ್ಲಿ ಒಟ್ಟು 67 ಆಟಗಾರರು ರ‍್ಯಾಂಕ್ ಪಡೆದಿದ್ದರೆ, ಎರಡೂ ತಂಡಗಳ ಈವೆಂಟ್‌ಗಳಿಗೆ ತಲಾ 16 ತಂಡಗಳು ಶ್ರೇಯಾಂಕ ಪಡೆದಿವೆ. ಕಳೆದ ತಿಂಗಳು, ಶ್ರೀಜಾ ಅಕುಲಾ ವಿಶ್ವ ಟೇಬಲ್ ಟೆನ್ನಿಸ್ ಶ್ರೇಯಾಂಕದಲ್ಲಿ 24 ನೇ ವೃತ್ತಿಜೀವನದ ಅತ್ಯುತ್ತಮ ಸ್ಥಾನ ತಲುಪಿದರು. ಮಣಿಕಾ ಬಾತ್ರಾ ಅವರನ್ನು ಭಾರತದ ಅಗ್ರ ಮಹಿಳಾ ಸಿಂಗಲ್ಸ್ ಆಟಗಾರ್ತಿಯಾಗಿ ಹೊರಹೊಮ್ಮಿದ್ದರು.
ಎರಡು ಬಾರಿ ರಾಷ್ಟ್ರೀಯ ಚಾಂಪಿಯನ್ ಶ್ರೀಜಾ ಅವರು ಜೂನ್‌ನಲ್ಲಿ ಲಾಗೋಸ್‌ನಲ್ಲಿ WTT ಸ್ಪರ್ಧಿ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಟೇಬಲ್ ಟೆನ್ನಿಸ್ ಆಟಗಾರ್ತಿ ಎನಿಸಿಕೊಂಡರು. ಅವರು ಅರ್ಚನಾ ಕಾಮತ್ ಜೊತೆಗೂಡಿ ಡಬಲ್ಸ್ ಪ್ರಶಸ್ತಿಯನ್ನು ಗೆದ್ದಿದ್ದರು.
ಪ್ಯಾರಿಸ್ 2024 ರ ಒಲಿಂಪಿಕ್ಸ್‌ಗಾಗಿ ವಿಶ್ವದ 28 ನೇ ಶ್ರೇಯಾಂಕಿತ ಮನಿಕಾ ಬಾತ್ರಾ ತನ್ನ ದೇಶಬಾಂಧವರಿಗಿಂತ ಕೇವಲ ಎರಡು ಸ್ಥಾನಗಳಿಗಿಂತ ಕೆಳಗಿದ್ದಾರೆ. ಮಾಜಿ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಮನಿಕಾ ಅವರು ಮೇ ತಿಂಗಳಲ್ಲಿ ಸೌದಿ ಸ್ಮ್ಯಾಶ್ ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್ ತಲುಪಿದ್ದರು. WTT ಗ್ರ್ಯಾಂಡ್ ಸ್ಮ್ಯಾಶ್ ಈವೆಂಟ್‌ನ ಕೊನೆಯ ಎಂಟರವರೆಗೆ ತಲುಪಿದ ಮೊದಲ ಭಾರತೀಯ ಸಿಂಗಲ್ಸ್ ಟೇಬಲ್ ಟೆನ್ನಿಸ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮನಿಕಾ ಸತತ ಮೂರನೇ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಿದ್ದಾರೆ.
ಶರತ್ ಕಮಲ್ ಐದನೇ ಒಲಿಂಪಿಕ್ಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎರಡು ಬಾರಿ ಕಾಮನ್‌ವೆಲ್ತ್ ಗೇಮ್ಸ್ ಪುರುಷರ ಸಿಂಗಲ್ಸ್ ಚಾಂಪಿಯನ್ ಪ್ಯಾರಿಸ್ 2024ರ ಒಲಿಂಪಿಕ್ಸ್‌ಗೆ 24ನೇ ಶ್ರೇಯಾಂಕ ಪಡೆದಿದ್ದಾರೆ. ಟೋಕಿಯೊ 2020 ರಲ್ಲಿ, 41 ವರ್ಷದ ಅನುಭವಿ ಮೂರನೇ ಸುತ್ತಿನಲ್ಲಿ ಹೊರಬಿದ್ದಿದ್ದರು. ಇದು ಒಲಿಂಪಿಕ್ ಕ್ರೀಡಾಕೂಟದಲ್ಲಿ ಅವರ ಅತ್ಯುತ್ತಮ ಪ್ರದರ್ಶನವಾಗಿತ್ತು. ಪುರುಷರ ಸಿಂಗಲ್ಸ್‌ನಲ್ಲಿ ರಾಷ್ಟ್ರೀಯ ಚಾಂಪಿಯನ್ ಹರ್ಮೀತ್ ದೇಸಾಯಿ, ವಿಶ್ವದ 86ನೇ ಶ್ರೇಯಾಂಕದಿಂದ 49ನೇ ಶ್ರೇಯಾಂಕ ಪಡೆದಿದ್ದಾರೆ. ಅವರು ಈ ಬಾರಿ ಒಲಿಂಪಿಕ್ಸ್‌ಗೆ ಪಾದಾರ್ಪಣೆ ಮಾಡಲಿದ್ದಾರೆ.
ಮುಂಬರುವ ಒಲಿಂಪಿಕ್ಸ್‌ನಲ್ಲಿ ಭಾರತ ತಂಡ ಟೇಬಲ್ ಟೆನ್ನಿಸ್ ಈವೆಂಟ್‌ಗಳಲ್ಲಿ ಮಾನವ್ ಠಕ್ಕರ್ (ಪುರುಷರ ತಂಡ) ಮತ್ತು ಅರ್ಚನಾ ಕಾಮತ್ (ಮಹಿಳೆಯರ ತಂಡ) ಒಳಗೊಂಡ ನಾಲ್ಕು ಸಿಂಗಲ್ಸ್ ಆಟಗಾರರೊಂದಿಗೆ ಚೊಚ್ಚಲ ಪ್ರವೇಶ ಮಾಡಲಿದೆ. 2008 ರಲ್ಲಿ ಬೀಜಿಂಗ್‌ನಲ್ಲಿ ನಡೆದಿದ್ದ ಒಲಿಂಪಿಕ್ ಕಾರ್ಯಕ್ರಮಕ್ಕೆ ಪುರುಷರ ಮತ್ತು ಮಹಿಳೆಯರ ತಂಡದ ಈವೆಂಟ್‌ಗಳನ್ನು ಸೇರಿಸಲಾಯಿತು.
14 ನೇ ಶ್ರೇಯಾಂಕದ ಭಾರತೀಯ ಪುರುಷರ ಟೇಬಲ್ ಟೆನ್ನಿಸ್ ತಂಡವು ಪ್ಯಾರಿಸ್ 2024 ರಲ್ಲಿ ಅಗ್ರ ಐದು ಏಷ್ಯನ್ ತಂಡಗಳಲ್ಲಿ ಒಂದಾಗಿದೆ. ಮನಿಕಾ ಬಾತ್ರಾ ಮತ್ತು ಅವರ ತಂಡವು ಮಹಿಳೆಯರ ಟೀಮ್ ಈವೆಂಟ್‌ನಲ್ಲಿ 11 ನೇ ಶ್ರೇಯಾಂಕವನ್ನು ಪಡೆದಿದೆ. ಎಲ್ಲಾ ಆರು ಭಾರತೀಯ ಟೇಬಲ್ ಟೆನ್ನಿಸ್ ಆಟಗಾರರು ತಮ್ಮ ವಿಶ್ವ ಶ್ರೇಯಾಂಕದ ಮೂಲಕ ಪ್ಯಾರಿಸ್ 2024 ಕ್ಕೆ ಆಯ್ಕೆಯಾಗಿದ್ದಾರೆ. ಮಿಶ್ರ ಡಬಲ್ಸ್ ಟೂರ್ನಿಯಲ್ಲಿ ಭಾರತದ ಯಾವುದೇ ಪ್ರಾತಿನಿಧ್ಯವಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಪ್ಯಾರಿಸ್ 2024 ರ ಒಲಿಂಪಿಕ್ಸ್‌ನಲ್ಲಿ ಟೇಬಲ್ ಟೆನ್ನಿಸ್ ಜುಲೈ 27 ಮತ್ತು ಆಗಸ್ಟ್ 10 ರ ನಡುವೆ ನಡೆಯಲಿದೆ. ಎಲ್ಲಾ ಐದು ಸ್ಪರ್ಧೆಗಳು - ಪುರುಷರ ಸಿಂಗಲ್ಸ್, ಮಹಿಳೆಯರ ಸಿಂಗಲ್ಸ್, ಮಿಶ್ರ ಡಬಲ್ಸ್, ಪುರುಷರ ತಂಡ ಮತ್ತು ಮಹಿಳಾ ತಂಡ - ದಕ್ಷಿಣ ಪ್ಯಾರಿಸ್ ಅರೆನಾದಲ್ಲಿ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ಓದಿ: ಪ್ಯಾರಿಸ್ ಒಲಿಂಪಿಕ್ಸ್: ಭಾರತದ 117 ಕ್ರೀಡಾಪಟುಗಳು, 140 ಸಿಬ್ಬಂದಿಯ ಪಟ್ಟಿ ಬಿಡುಗಡೆ - Paris Olympics