ನವದೆಹಲಿ: ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಲೀಗ್ 2 ಪಂದ್ಯಗಳಿಗೆ ಸಿದ್ಧತೆಯ ಭಾಗವಾಗಿ ನೇಪಾಳ ಪುರುಷರ ಕ್ರಿಕೆಟ್ ತಂಡ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್ಸಿಎ) ಎರಡು ವಾರಗಳ ಕಾಲ ತರಬೇತಿ ಪಡೆಯಲಿದೆ. ಈಗಾಗಲೇ ತಂಡ ಬೆಂಗಳೂರಿಗೆ ಆಗಮಿಸಿದೆ.
"ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಲೀಗ್ 2 ಸಿದ್ಧತಾ ಸರಣಿಗೆ ಸಜ್ಜಾಗಲು ಭಾರತಕ್ಕೆ ತೆರಳುತ್ತಿದ್ದೇವೆ! ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್ಸಿಎ) ಎರಡು ವಾರಗಳ ತರಬೇತಿ ನಮ್ಮ ಆಟಗಾರರ ಕೌಶಲ್ಯ ಮತ್ತು ಕಾರ್ಯತಂತ್ರಗಳನ್ನು ತೀಕ್ಷ್ಣಗೊಳಿಸಲಿದೆ. ಅವರಿಗೆ ಶುಭ ಹಾರೈಸೋಣ" ಎಂದು ಕ್ರಿಕೆಟ್ ಅಸೋಸಿಯೇಷನ್ ಆಫ್ ನೇಪಾಳ (ಸಿಎಎನ್) ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ.
🏏 #Rhinos are off to India @BCCI to gear up for the ICC Men's Cricket World Cup League 2 Preparation Series! 🇳🇵✈️
— CAN (@CricketNep) August 12, 2024
Training at the National Cricket Academy (NCA) in Bangalore for two weeks will sharpen our players' skills and strategies. 💪🏽🏟️
Let's wish them all the best! 🌟… pic.twitter.com/BW2e08rKPT
ಈ ವರ್ಷದ ಆರಂಭದಲ್ಲಿ ನೇಪಾಳ ತಂಡವು ತ್ರಿಕೋನ ಸರಣಿಯಲ್ಲಿ ಭಾಗವಹಿಸಲು ಭಾರತಕ್ಕೆ ಬಂದಿತ್ತು. ಯುಎಸ್ಎ ಮತ್ತು ವೆಸ್ಟ್ ಇಂಡೀಸ್ನಲ್ಲಿ ನಡೆಯಲಿರುವ 2024ರ ಪುರುಷರ ಟಿ20 ವಿಶ್ವಕಪ್‌ಗೆ ಸಿದ್ಧತೆಯ ಭಾಗವಾಗಿ ನೇಪಾಳ ತಂಡವು ವಾಪಿಯಲ್ಲಿ ಗುಜರಾತ್ ಮತ್ತು ಬರೋಡಾದ ವಿರುದ್ಧ ಆಟವಾಡಿತ್ತು.
ಎನ್ಸಿಎಯಲ್ಲಿ ತರಬೇತಿಯ ನಂತರ, ನೇಪಾಳ ಸೆಪ್ಟೆಂಬರ್ನಲ್ಲಿ ಎರಡನೇ ಸಿಡಬ್ಲ್ಯೂಸಿ ಲೀಗ್ 2 ಸರಣಿಗಾಗಿ ನೇರವಾಗಿ ಕೆನಡಾಕ್ಕೆ ತೆರಳಲಿದೆ. ಫೆಬ್ರವರಿ 2024ರಲ್ಲಿ ನಮೀಬಿಯಾ ಮತ್ತು ನೆದರ್ಲ್ಯಾಂಡ್ಸ್ ವಿರುದ್ಧ ತವರಿನಲ್ಲಿ ನಡೆದ ತ್ರಿಕೋನ ಸರಣಿಯ ನಾಲ್ಕು ಪಂದ್ಯಗಳಲ್ಲಿ ಒಂದು ಗೆಲುವಿನ ನಂತರ ನೇಪಾಳ ಪ್ರಸ್ತುತ ಲೀಗ್-2 ಅಂಕಗಳಲ್ಲಿ ಆರನೇ ಸ್ಥಾನದಲ್ಲಿದೆ.
ನಾಯಕ ರೋಹಿತ್ ಶರ್ಮಾ, ಆಲ್‌ರೌಂಡರ್ ದೀಪೇಂದ್ರ ಸಿಂಗ್ ಐರಿ ಮತ್ತು ಲೆಗ್ ಸ್ಪಿನ್ನರ್ ಸಂದೀಪ್ ಲಾಮಿಚಾನೆ ಪ್ರಸ್ತುತ ಕೆನಡಾದಲ್ಲಿ ಜಿಟಿ 20 ಲೀಗ್ನಲ್ಲಿ ಆಡುತ್ತಿದ್ದಾರೆ. ಆಗಸ್ಟ್ 18ರಿಂದ 25ರ ವರೆಗೆ ಕೇಮನ್ ದ್ವೀಪಗಳಲ್ಲಿ ನಡೆಯಲಿರುವ ಮ್ಯಾಕ್ಸ್ 60 ಕೆರಿಬಿಯನ್ ಕ್ರಿಕೆಟ್ ಲೀಗ್ನಲ್ಲಿ ಐರಿ ಮತ್ತು ಪೌಡೆಲ್ ಕಾಣಿಸಿಕೊಳ್ಳಲಿದ್ದಾರೆ.
ನೇಪಾಳ ಕ್ರಿಕೆಟ್ ತಂಡ: ರೋಹಿತ್ ಪೌಡೆಲ್ (ನಾಯಕ), ಆಸಿಫ್ ಶೇಖ್, ಕುಶಾಲ್ ಭುರ್ಟೆಲ್, ಸೋಮಪಾಲ್ ಕಾಮಿ, ಲಲಿತ್ ರಾಜ್ ಬನ್ಶಿ, ಸೂರ್ಯ ತಮಾಂಗ್, ದೇವ್ ಖನಾಲ್, ಆರಿಫ್ ಶೇಖ್, ಕರಣ್ ಕೆ, ಗುಲ್ಶನ್ ಝಾ, ದೀಪೇಂದ್ರ ಸಿಂಗ್ ಐರಿ, ಅನಿಲ್ ಸಾಹ್, ಭೀಮ್ ಶಾರ್ಕಿ, ಕುಶಾಲ್ ಮಲ್ಲಾ, ಆಕಾಶ್ ಚಂದ್, ರಿಜನ್ ಧಾಕಲ್, ಸಂದೀಪ್ ಜೋರಾ, ಅರ್ಜುನ್ ಸೌದ್, ಕಮಲ್ ಸಿಂಗ್ ಐರಿ, ಸಾಗರ್ ಧಾಕಲ್, ಬಶೀರ್ ಅಹ್ಮದ್, ಸಂದೀಪ್ ಲಾಮಿಚಾನೆ.
ಇದನ್ನೂ ಓದಿ: ವಿಶ್ವದ 10 ಶ್ರೀಮಂತ ಕ್ರಿಕೆಟ್ ಮಂಡಳಿಗಳು ಯಾವುವು ಎಂದು ನಿಮಗೆ ಗೊತ್ತಾ? - Richest Cricket Boards