ETV Bharat / sports

ಕಾರ್ಲೊ ಮಾಸ್ಟರ್ಸ್‌ ಟೂರ್ನಿಗೆ ಸುಮಿತ್​ ನಗಲ್​ ಆಯ್ಕೆ: 42 ವರ್ಷಗಳ ಬಳಿಕ ಅರ್ಹತೆ ಪಡೆದ ಭಾರತೀಯ - Sumit Nagal - SUMIT NAGAL

ಭಾರತದ ಯುವ ಟೆನಿಸ್ಸಿಗ ಸುಮಿತ್​ ನಗಲ್​​ 42 ವರ್ಷಗಳ ಬಳಿಕ ಫ್ರಾನ್ಸ್​ನ ಪ್ರತಿಷ್ಠಿತ ಮಾಂಟೆ ಕಾರ್ಲೊ ಮಾಸ್ಟರ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

ಕಾರ್ಲೊ ಮಾಸ್ಟರ್ಸ್‌ ಟೂರ್ನಿಗೆ ಸುಮಿತ್​ ನಗಲ್​ ಆಯ್ಕೆ

author img

By ETV Bharat Karnataka Team

Published : Apr 8, 2024, 9:30 AM IST

ಮಾಂಟೆ ಕಾರ್ಲೊ (ಫ್ರಾನ್ಸ್): ಟೆನಿಸ್​ನಲ್ಲಿ ಭಾರತದ ಮತ್ತೊಬ್ಬ ಆಟಗಾರ ಅದ್ಭುತ ಸಾಧನೆ ಮಾಡಿದ್ದಾರೆ. ಫ್ರಾನ್ಸ್​ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಮಾಂಟೆ ಕಾರ್ಲೊ ಮಾಸ್ಟರ್ಸ್‌ನ ಪುರುಷರ ಸಿಂಗಲ್ಸ್​ಗೆ ಸುಮಿತ್ ನಗಲ್ ಅವರು ಆಯ್ಕೆಯಾಗುವ ಮೂಲಕ 42 ವರ್ಷಗಳಲ್ಲಿ ಮೊದಲ ಟೂರ್ನಿಯಲ್ಲಿ ಆಡುವ ಅವಕಾಶ ಪಡೆದ ಮೊದಲ ಭಾರತೀಯ ಎನಿಸಿಕೊಂಡರು.

ನಿನ್ನೆ (ಭಾನುವಾರ) ನಡೆದ ಅರ್ಹತಾ ಪಂದ್ಯದಲ್ಲಿ ವಿಶ್ವದ ನಂ. 55 ಆಟಗಾರ ಅರ್ಜೆಂಟೀನಾದ ಫಾಕುಂಡೋ ಅಕೋಸ್ಟಾ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ 7-5, 2-6, 6-2 ನೇರ ಸೆಟ್‌ಗಳಿಂದ ಗೆಲುವು ಸಾಧಿಸಿದರು. 26 ವರ್ಷದ ಭಾರತದ ಯುವ ಟೆನಿಸ್ಸಿಗ ಸುಮಿತ್​, ಅರ್ಜೆಂಟಿನಾ ಆಟಗಾರನ ವಿರುದ್ಧ ಅದ್ಭುತ ಪ್ರದರ್ಶನ ನೀಡಿದರು. ಅದ್ಭುತಸ್ಟ್ರೋಕ್-ಪ್ಲೇ ಮೂಲಕ ಎದುರಾಳಿಯನ್ನು ಸೋಲಿನ ಅಂಚಿಗೆ ತಳ್ಳಿದರು. ಎಟಿಪಿ ಶ್ರೇಯಾಂಕ ಪಟ್ಟಿಯಲ್ಲಿ ಫಾಕುಂಡೋಗಿಂತಲೂ 40 ಸ್ಥಾನ ಕೆಳಗಿರುವ ನಗಲ್ ಅವರ ಆಟವು ಅಂತಹ ಮನಮೋಹಕವಾಗಿತ್ತು.

ಮೊದಲ ಸೆಟ್‌ನಲ್ಲಿ 2-5 ರಿಂದ ಹಿನ್ನಡೆ ಸಾಧಿಸಿದ ನಗಲ್, ರಟ್ಟೆಯರಳಿಸುವ ಮೂಲಕ ಸತತ 5 ಗೇಮ್‌ಗಳನ್ನು ಗೆದ್ದು ಸೆಟ್‌ ವಶಕ್ಕೆ ಪಡೆದರು. 1-0 ಮುನ್ನಡೆ ಸಾಧಿಸಿದ್ದ ನಗಲ್​ಗೆ ಎರಡನೇ ಸೆಟ್‌ನಲ್ಲಿ ಭಾರೀ ಸವಾಲು ಎದುರಾಯಿತು. ಈ ಬಾರಿ ಅಕೋಸ್ಟಾ ಭಾರತೀಯ ಆಟಗಾರನ ಮೇಲೆ ಪ್ರಾಬಲ್ಯ ಸಾಧಿಸಿ, 6-2 ರಿಂದ ಸೆಟ್‌ ಗೆದ್ದರು. ನಿರ್ಣಾಯಕ ಮತ್ತು ಕೊನೆಯ ಸೆಟ್​ನಲ್ಲಿ ನಗಲ್ ಅದ್ಭುತ ಆಟ ಪ್ರದರ್ಶಿಸಿದರು. ಎದುರಾಳಿಗೆ ಚೇತರಿಸಿಕೊಳ್ಳಲೂ ಅವಕಾಶ ನೀಡದೆ, 6-2 ರಲ್ಲಿ ಜಯಭೇರಿ ಬಾರಿಸಿದರು.

1982 ರಲ್ಲಿ ರಮೇಶ್ ಕೃಷ್ಣನ್ ಅವರು ಮಾಂಟೆ ಕಾರ್ಲೊ ಮಾಸ್ಟರ್ಸ್‌ನಲ್ಲಿ ಕಾಣಿಸಿಕೊಂಡ ಕೊನೆಯ ಭಾರತೀಯ ಆಟಗಾರರಾಗಿದ್ದರು. ಅಂದು ಅವರು ಪುರುಷರ ಸಿಂಗಲ್ಸ್‌ನ ಮೊದಲ ಸೆಟ್‌ನಲ್ಲಿ ಸೋತಿದ್ದರು. ಈಗ, ನಗಲ್ ಮಾಸ್ಟರ್ಸ್​ ಟೂರ್ನಿಗೆ ಅವಕಾಶ ಪಡೆದುಕೊಂಡಿದ್ದಾರೆ. ಯುವ ಟೆನಿಸ್ಸಿಗನ ಮೇಲೆ ಭಾರೀ ನಿರೀಕ್ಷೆ ಮೂಡಿದೆ.

ಇದನ್ನೂ ಓದಿ: ಯಶ್​, ಪಾಂಡ್ಯ ಮಾರಕ ದಾಳಿಗೆ ನಲುಗಿದ ಗುಜರಾತ್​; ಲಖನೌ ವಿರುದ್ಧ 33 ರನ್​ ಸೋಲು - LSG beat Gujurat Titans

ETV Bharat Logo

Copyright © 2024 Ushodaya Enterprises Pvt. Ltd., All Rights Reserved.