ETV Bharat / sports

ಪಾಂಡಿತ್ಯವು ಕಠಿಣ ಪರಿಶ್ರಮದಿಂದ ಲಭಿಸುತ್ತದೆ; ಸ್ಪೂರ್ತಿದಾಯಕ ಸಂದೇಶ ರವಾನಿಸಿದ ವಿಶ್ವನಾಥನ್ ಆನಂದ್ - Viswanathan Anand

author img

By ETV Bharat Karnataka Team

Published : Jul 20, 2024, 5:34 AM IST

ಚೆಸ್ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್, ಜುಲೈ 20 ರಂದು ಅಂತಾರಾಷ್ಟ್ರೀಯ ಚೆಸ್ ದಿನವನ್ನು ಆಚರಿಸಲು ಒಂದು ವಿಶಿಷ್ಟವಾದ ಮಾರ್ಗವನ್ನು ಕಂಡುಕೊಂಡಿದ್ದಾರೆ. ತಮಿಳುನಾಡಿನ ವಿದ್ಯಾರ್ಥಿಗಳಿಗೆ ತಾವು ಸಹಿ ಮಾಡಿದ ಚೆಸ್ ಬೋರ್ಡ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಜೊತೆಗೆ ಯುವಕರನ್ನು ಪ್ರೇರೇಪಿಸುವ ಸಂದೇಶವನ್ನು ಒಳಗೊಂಡಿರುವ ಪತ್ರವನ್ನು ಸಹ ಬರೆದಿದ್ದಾರೆ.

Vishwanathan Anand
ವಿಶ್ವನಾಥನ್ ಆನಂದ್ (ETV Bharat)

ಹೈದರಾಬಾದ್ : ಚೆಸ್ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಅಂತಾರಾಷ್ಟ್ರೀಯ ಚೆಸ್ ದಿನದ ಮುನ್ನ ದಿನ ಯುವಕರಿಗೆ ಸ್ಪೂರ್ತಿದಾಯಕ ಸಂದೇಶ ನೀಡಿದ್ದಾರೆ. ಆನಂದ್ ಅವರು ಈಟಿವಿ ಭಾರತ್‌ಗೆ ನೀಡಿರುವ ಪತ್ರದಲ್ಲಿ, ಯಾವುದೇ ವಿಷಯದ ಮೇಲೆ ಪಾಂಡಿತ್ಯವನ್ನು ಗಳಿಸಬೇಕಾದರೆ ಕಠಿಣ ಪರಿಶ್ರಮದಿಂದ ಮಾತ್ರ ಸಾಧ್ಯ ಎಂದು ಬರೆದಿದ್ದಾರೆ. ಅಲ್ಲದೇ, ಪ್ರತಿ ಸವಾಲನ್ನು ಸ್ವೀಕರಿಸಿ ಮತ್ತು ಪ್ರತಿಯೊಂದು ಆಟದಿಂದಲೂ ಕಲಿಯಿರಿ ಎಂದು ಯುವಕರಿಗೆ ಕರೆ ನೀಡಿದ್ದಾರೆ.

“ಈ ಅಂತಾರಾಷ್ಟ್ರೀಯ ಚೆಸ್ ದಿನದಂದು, ನಾನು ನಿಮಗೆ ನನ್ನ ಆತ್ಮೀಯ ಶುಭಾಶಯಗಳನ್ನು ಹೇಳುತ್ತೇನೆ. ಚೆಸ್ ಕೇವಲ ಆಟವಲ್ಲ, ಇದು ಅಂತ್ಯವಿಲ್ಲದ ಸಾಧ್ಯತೆಗಳು, ಕಲಿಕೆ ಮತ್ತು ಸ್ವಯಂ ಅನ್ವೇಷಣೆಯ ಪ್ರಯಾಣವಾಗಿದೆ. ನೀವು ಈ ದಿನವನ್ನು ಆಚರಿಸುತ್ತಿರುವಾಗ, ನನ್ನ ಸ್ವಂತ ಪ್ರಯಾಣದ ಕೆಲವು ಕ್ಷಣಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ಬಯಸುತ್ತೇನೆ, ಅದು ನಿಮಗೆ ಸ್ಫೂರ್ತಿ ನೀಡುತ್ತದೆ ಎಂದು ನಾನು ಭಾವಿಸುತ್ತೇನೆ ”ಎಂದು ಅವರು ಬರೆದಿದ್ದಾರೆ.

“ನಾನು ಕೇವಲ ಏಳು ವರ್ಷದವನಿದ್ದಾಗ, ನನ್ನ ಕುಟುಂಬವು ಮನಿಲಾಕ್ಕೆ ಸ್ಥಳಾಂತರಗೊಂಡಿತ್ತು. ನಂತರ ಅಲ್ಲಿಯೇ ನಾನು ಚೆಸ್ ಸಂಸ್ಕೃತಿ ಕಲಿತುಕೊಂಡು ನನ್ನನ್ನು ನಾನು ಕಂಡುಕೊಂಡೆ. ಚೆಸ್‌ನಲ್ಲಿ ನನ್ನ ಆಸಕ್ತಿಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ ನನ್ನ ತಾಯಿ, ಚೆಸ್ ಕ್ಲಬ್‌ಗಳನ್ನು ಮತ್ತು ನನಗೆ ಆಡುವ ಅವಕಾಶಗಳನ್ನು ಶ್ರದ್ಧೆಯಿಂದ ಹುಡುಕಿದರು. ಆರಂಭಿಕ ಸವಾಲುಗಳ ಹೊರತಾಗಿಯೂ, ಆಕೆಯ ಪರಿಶ್ರಮವು ಫಲ ನೀಡಿತು ಮತ್ತು ನಾನು ಶೀಘ್ರದಲ್ಲೇ ವಾರಾಂತ್ಯದ ಪಂದ್ಯಾವಳಿಗಳಲ್ಲಿ ಭಾಗವಹಿಸಿದೆ ”ಎಂದು ಅವರು ಹಿಂದಿನ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

"ನನ್ನ ಬಾಲ್ಯದಲ್ಲಿ ನಾನು ಅನೇಕ ಚೆಸ್ ಆಟಗಳನ್ನು ಆಡಿದ್ದೇನೆ, ಎಲ್ಲವೂ ಯಶಸ್ವಿಯಾಗದಿದ್ದರೂ ನಾನು ಎಂದಿಗೂ ಚಿಂತಿಸಲಿಲ್ಲ. ಅಲ್ಲದೇ ಮತ್ತೆ ಪ್ರಯತ್ನಿಸಲು ಹಿಂಜರಿಯಲಿಲ್ಲ. ಈ ಅನುಭವಗಳು ನನಗೆ ಪರಿಶ್ರಮದ ಮೌಲ್ಯ, ಹಿಂದಿನ ಆಟಗಳ ಅಧ್ಯಯನದ ಮಹತ್ವ ಮತ್ತು ನಿರಂತರ ಕಲಿಕೆಯ ಅಗತ್ಯವನ್ನು ಕಲಿಸಿದೆ" ಎಂದು ತಿಳಿಸಿದ್ದಾರೆ.

"ನೆನಪಿಡಿ, ಪ್ರತಿಯೊಬ್ಬ ಶ್ರೇಷ್ಠ ಆಟಗಾರನು ಆರಂಭಿಕ ಆಟಗಾರನಾಗಿಯೇ ಪ್ರಾರಂಭಿಸುತ್ತಾನೆ, ಪಾಂಡಿತ್ಯದ ಹಾದಿಯು ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಆಟದ ಮೇಲಿನ ಪ್ರೀತಿಯಿಂದ ಸುಗಮವಾಗುತ್ತದೆ. ಆದ್ದರಿಂದ, ಪ್ರತಿ ಸವಾಲನ್ನು ಸ್ವೀಕರಿಸಿ, ಪ್ರತಿ ಆಟದಿಂದ ಕಲಿಯಿರಿ ಮತ್ತು ಯಾವಾಗಲೂ ಉತ್ತಮವಾಗಲು ಶ್ರಮಿಸಿ" ಎಂದು ಬರೆದಿದ್ದಾರೆ.

ಅಂತಾರಾಷ್ಟ್ರೀಯ ಚೆಸ್ ದಿನದ ಸಂದರ್ಭದಲ್ಲಿ ಐದು ಬಾರಿ ವಿಶ್ವ ಚಾಂಪಿಯನ್ ಆಗಿರುವ ವಿಶ್ವನಾಥನ್, ತಮಿಳುನಾಡಿನ ವಿದ್ಯಾರ್ಥಿಗಳಿಗೆ ತಮ್ಮ ಹಸ್ತಾಕ್ಷರದೊಂದಿಗೆ ಸಹಿ ಮಾಡಿದ ಚೆಸ್ ಬೋರ್ಡ್‌ಗಳನ್ನು ಉಡುಗೊರೆಯಾಗಿ ನೀಡಲಿದ್ದಾರೆ. ಜಾಗತಿಕ ವೇದಿಕೆಯಲ್ಲಿ ಅದ್ಭುತ ಪ್ರದರ್ಶನಗಳೊಂದಿಗೆ, ಆನಂದ್ ಭಾರತೀಯ ಚೆಸ್‌ನಲ್ಲಿ ಒಂದು ಪರಂಪರೆಯನ್ನು ಪ್ರಾರಂಭಿಸಿದ್ದಾರೆ. ಇದು ಕ್ರೀಡೆಯನ್ನು ವೃತ್ತಿಯಾಗಿ ತೆಗೆದುಕೊಳ್ಳಲು ಉದಯೋನ್ಮುಖ ಯುವಕರನ್ನು ಪ್ರೇರೇಪಿಸಿದೆ. ಆನಂದ್ 2000 ರಲ್ಲಿ ಮೊದಲ ಬಾರಿಗೆ ವಿಶ್ವ ಚಾಂಪಿಯನ್‌ಶಿಪ್ ಗೆದ್ದರು ಮತ್ತು ಅದು ದೇಶದಲ್ಲಿ ಗುಣಮಟ್ಟದ ಚೆಸ್ ಆಟಗಾರರ ಒಳಗೊಳ್ಳುವಿಕೆಯನ್ನು ಪ್ರಾರಂಭಿಸಿದೆ.

ಅಂತಾರಾಷ್ಟ್ರೀಯ ಚೆಸ್ ದಿನ : ಇಂಟರ್​ನ್ಯಾಷನಲ್​ ಚೆಸ್ ಫೆಡರೇಶನ್ (FIDE) 1924ರಲ್ಲಿ ಪ್ಯಾರಿಸ್​ನಲ್ಲಿ ಸ್ಥಾಪನೆಯಾದ ನಂತರ ವಾರ್ಷಿಕವಾಗಿ ಜುಲೈ 30 ರಂದು ವಿಶ್ವ ಚೆಸ್ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (UNESCO) ಈ ದಿನವನ್ನು ಆಚರಣೆಯನ್ನಾಗಿ ಜಾರಿಗೆ ತಂದಿದೆ.

ಕ್ರೀಡೆಯನ್ನು ಉತ್ತೇಜಿಸಲು ಮತ್ತು ಅದಕ್ಕೆ ಮೆಚ್ಚುಗೆ ತೋರಿಸಲು ಅಂತಾರಾಷ್ಟ್ರೀಯ ಚೆಸ್ ದಿನವನ್ನು ಆಚರಿಸಲಾಗುತ್ತದೆ. FIDE ವಿವಿಧ ಚೆಸ್ ಚಟುವಟಿಕೆಗಳೊಂದಿಗೆ ಈ ದಿನವನ್ನು ಆಚರಿಸುತ್ತದೆ. ಹೆಚ್ಚಾಗಿ ಇವೆಂಟ್‌ಗಳನ್ನು ಆನ್‌ಲೈನ್‌ನಲ್ಲಿ ನಡೆಸಲಾಗುತ್ತದೆ ಮತ್ತು ಅನೇಕ ಇಂಟರ್ನೆಟ್ ಬಳಕೆದಾರರು ಈ ಇವೆಂಟ್​ಗಳಲ್ಲಿ ಭಾಗವಹಿಸುತ್ತಾರೆ.

ಇದನ್ನೂ ಓದಿ : ಚೆಸ್ ಮತ್ತು ವಿಜ್ಞಾನ ಸಾಕಷ್ಟು ಸಾಮ್ಯತೆ ಹೊಂದಿದೆ: ಮಾಜಿ ಚೆಸ್ ವಿಶ್ವಚಾಂಪಿಯನ್ ವಿಶ್ವನಾಥನ್ ಆನಂದ್ - IISC CONVOCATION

ETV Bharat Logo

Copyright © 2024 Ushodaya Enterprises Pvt. Ltd., All Rights Reserved.