ಪ್ಯಾರಿಸ್: ಶೂಟರ್ ಮನು ಭಾಕರ್ ಒಲಿಂಪಿಕ್ಸ್ನಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದು ದಾಖಲೆ ಬರೆದಿದ್ದಾರೆ. 20 ವರ್ಷಗಳ ಬಳಿಕ ಫೈನಲ್‌ಗೆ ಅರ್ಹತೆ ಪಡೆದ ಭಾರತದ ಮಹಿಳಾ ಶೂಟರ್ ಎನಿಸಿಕೊಂಡಿರುವ ಮನು ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಪ್ರಸಕ್ತ ಒಲಿಂಪಿಕ್ನಲ್ಲಿ ಭಾರತಕ್ಕೆ ಇದು ಮೊದಲ ಪದಕವಾಗಿದೆ. ಇದಕ್ಕೂ ಮುನ್ನಾ 2004ರಲ್ಲಿ ಕೊನೆಯ ಬಾರಿಗೆ ಭಾರತೀಯ ಮಹಿಳಾ ಶೂಟರ್ ಸುಮಾ ಶಿರೂರ್ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸಿದ್ದರು.
ITS A BRONZE!!! Our first medal at @paris2024 comes in shooting courtesy of @realmanubhaker Fantastic shooting all along to bring home our first medal 🥉👏🏽👏🏽#JeetKiAur #Cheer4Bharat pic.twitter.com/hzTuN9G0I3
— Team India (@WeAreTeamIndia) July 28, 2024
ಅತ್ಯುತ್ತಮ ಪ್ರದರ್ಶನ: ಮನು ಭಾಕರ್ ಆರಂಭದಿಂದಲೂ ಪಂದ್ಯದಲ್ಲಿ ಹಿಡಿತ ಸಾಧಿಸಿದ್ದರು. 5 ರೌಂಡ್ಗಳ ನಂತರ 50.4 ಅಂಕಗಳೊಂದಿಗೆ ಕೊರಿಯಾದ ನಂತರ ಎರಡನೇ ಸ್ಥಾನದಲ್ಲಿದ್ದರು. ಇದಾದ ನಂತರವೂ ಮನು ತಮ್ಮ ಅತ್ಯುತ್ತಮ ಫಾರ್ಮ್ ಅನ್ನು ಮುಂದುವರೆಸಿದರು. ಆದರೇ 10 ರೌಂಡ್ಗಳ ನಂತರ 100.3 ಪಾಯಿಂಟ್‌ಗಳೊಂದಿಗೆ ಸ್ವಲ್ಪ ಅಂತರದಿಂದಲೇ ಮೂರನೇ ಸ್ಥಾನಕ್ಕೆ ತಲುಪಿದರು. 15 ರೌಂಡ್ಳ ನಂತರ ಅವರ ಸ್ಕೋರ್ 150.7 ಆಗಿದ್ದು, ಮೂರನೇ ಸ್ಥಾನದಲ್ಲಿ ಮುಂದುವರೆದರು.
🇮🇳🔥 𝗜𝗻𝗱𝗶𝗮'𝘀 𝗲𝗹𝗶𝘁𝗲 𝘀𝗵𝗼𝗼𝘁𝗲𝗿𝘀! A historic achievement for Manu Bhaker as she becomes the first-ever Indian woman to win an Olympic medal in shooting!
— India at Paris 2024 Olympics (@sportwalkmedia) July 28, 2024
🧐 Here's a look at India's shooting medallists in the Olympics over the years.
👉 𝗙𝗼𝗹𝗹𝗼𝘄 @sportwalkmedia… pic.twitter.com/ODu5rBDUjp
ಫೈನಲ್ ಸುತ್ತಿನ ವೇಳೆ ಒಟ್ಟು 221.7 ಅಂಕ ಕಲೆ ಹಾಕಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು. ಕೊರಿಯಾದ ಓಹ್ ಯೆ ಜಿನ್ 243.2 ಅಂಕಗಳೊಂದಿಗೆ ಚಿನ್ನ ಗೆದ್ದರೆ, ಕಿಮ್ ಯೆಜಿ 241.3 ಅಂಕಗಳೊಂದಿಗೆ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು.
ಮೋದಿ ಅಭಿನಂದನೆ: ಒಲಿಂಪಿಕ್ನಲ್ಲಿ ಕಂಚಿನ ಪದಕ ಗೆದ್ದಿದ್ದಕ್ಕಾಗಿ ಪ್ರಧಾನಿ ಮೋದಿ, ಶೂಟರ್ ಮನು ಭಾಕರ್ ಅವರನ್ನು ಅಭಿನಂದಿಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, " ಪ್ಯಾರಿಸ್ ಒಲಿಂಪಿಕ್ನಲ್ಲಿ ಭಾರತಕ್ಕೆ ಮೊದಲ ಪದಕವನ್ನು ಗೆದ್ದಿದ್ದಕ್ಕಾಗಿ ಮನು ಭಾಕರ್ಗೆ ಅಭಿನಂದನೆಗಳು. ಅಲ್ಲದೇ ಶೂಟಿಂಗ್‌ನಲ್ಲಿ ಪದಕ ಗೆದ್ದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವುದು ಮತ್ತಷ್ಟು ವಿಶೇಷವಾಗಿದೆ" ಎಂದು ಬರೆದಿದ್ದಾರೆ.
A historic medal!
— Narendra Modi (@narendramodi) July 28, 2024
Well done, @realmanubhaker, for winning India’s FIRST medal at #ParisOlympics2024! Congrats for the Bronze. This success is even more special as she becomes the 1st woman to win a medal in shooting for India.
An incredible achievement!#Cheer4Bharat
ಮನು ಭಾಕರ್ ಅವರಿಗೆ ಇದು ಎರಡನೇ ಒಲಿಂಪಿಕ್ಸ್ ಆಗಿದೆ. ಈ ಹಿಂದೆ ಅವರು ಟೋಕಿಯೋ ಒಲಿಂಪಿಕ್ 2020ರಲ್ಲಿ ಪಾದಾರ್ಪಣೆ ಮಾಡಿದ್ದರು. ಆದರೆ 10 ಮೀಟರ್ ಏರ್ ಪಿಸ್ತೂಲ್ ಅರ್ಹತೆಯ ಸಮಯದಲ್ಲಿ ಅವರ ಪದಕದಿಂದ ವಂಚಿತರಾಗಿದ್ದರು. ಮಿಶ್ರ ತಂಡ 10 ಮೀಟರ್ ಪಿಸ್ತೂಲ್ ಮತ್ತು 25 ಮೀಟರ್ ಪಿಸ್ತೂಲ್ ಸ್ಪರ್ಧೆಗಳಲ್ಲಿ ಅವರು ಪದಕಗಳನ್ನು ಕಳೆದುಕೊಂಡಿದ್ದರು.
ಇದನ್ನೂ ಓದಿ: ರೆಪೆಚೇಜ್ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದ ಬಾಲರಾಜ್: ಕ್ವಾರ್ಟರ್ ಫೈನಲ್‌ಗೆ ಪ್ರವೇಶ - Paris Olympics 2024