ಪ್ಯಾರಿಸ್ (ಫ್ರಾನ್ಸ್): ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024ರ ಮೂರನೇ ದಿನದಲ್ಲಿ ಭಾರತೀಯ ಅಥ್ಲೀಟ್‌ಗಳು ಅದ್ಭುತ ಪ್ರದರ್ಶನವನ್ನು ಮುಂದುವರೆಸಿದ್ದಾರೆ. ಭಾರತದ ಪುರುಷ ಶೂಟರ್ ಮನೀಶ್ ನರ್ವಾಲ್ ಭಾರತಕ್ಕೆ ನಾಲ್ಕನೇ ಪದಕ ತಂದುಕೊಟ್ಟಿದ್ದಾರೆ. ಪುರುಷರ 10 ಮೀಟರ್ ಏರ್ ಪಿಸ್ತೂಲ್ (SH1) ಸ್ಪರ್ಧೆಯಲ್ಲಿ ಮನೀಶ್ ನರ್ವಾಲ್ ಬೆಳ್ಳಿ ಪದಕ ಗೆದ್ದಿದ್ದಾರೆ.
ಶುಕ್ರವಾರ ನಡೆದ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮನೀಶ್ 234.9 ಅಂಕಗಳನ್ನು ಗಳಿಸುವ ಮೂಲಕ ಬೆಳ್ಳಿಯ ಗೆದ್ದರು. ಈ ಸ್ಪರ್ಧೆಯಲ್ಲಿ ಕೊರಿಯಾದ ಜೋ ಜೊಂಗ್ಡು 237.4 ಅಂಕ ಗಳಿಸಿ ಚಿನ್ನದ ಪದಕ ಜಯಿಸಿದರು. ಚೀನಾದ ಯಂಗ್ ಚಾವೊ 214.3 ಅಂಕಗಳೊಂದಿಗೆ ಕಂಚಿನ ಪದಕ ವಶಪಡಿಸಿಕೊಂಡರು. 2024ರ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ಗೆದ್ದ ಮೂರನೇ ಶೂಟರ್ ಎಂಬ ಹೆಗ್ಗಳಿಕೆಗೆ ಮನೀಶ್ ಪಾತ್ರರಾಗಿದ್ದಾರೆ.
𝐍𝐞𝐰𝐬 𝐅𝐥𝐚𝐬𝐡: 𝐌𝐚𝐧𝐢𝐬𝐡 𝐍𝐚𝐫𝐰𝐚𝐥 𝐰𝐢𝐧𝐬 𝐒𝐢𝐥𝐯𝐞𝐫 𝐦𝐞𝐝𝐚𝐥 𝐢𝐧 𝐒𝐡𝐨𝐨𝐭𝐢𝐧𝐠 𝐚𝐭 𝐏𝐚𝐫𝐚𝐥𝐲𝐦𝐩𝐢𝐜𝐬.
— India_AllSports (@India_AllSports) August 30, 2024
Its 4th medal for India so far. #Paralympics2024 #Paris2024 pic.twitter.com/0uikRIPRe3
ಇದಕ್ಕೂ ಮುನ್ನ ಅವನಿ ಲೆಖರಾ ಮತ್ತು ಮೋನಾ ಅಗರ್ವಾಲ್ ಮಹಿಳಾ ಶೂಟಿಂಗ್‌ನಲ್ಲಿ ಕ್ರಮವಾಗಿ ಚಿನ್ನ ಮತ್ತು ಕಂಚಿನ ಪದಕಗಳನ್ನು ಗೆದ್ದಿದ್ದರು. ಇದೀಗ ಈ ಟೂರ್ನಿಯ ಮೂರನೇ ದಿನ ಭಾರತಕ್ಕೆ ಪದಕ ಗೆದ್ದುಕೊಟ್ಟ ಮೂರನೇ ಶೂಟರ್ ಮನೀಶ್ ಆಗಿದ್ದಾರೆ. ಹಾಗೆಯೇ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರೀತಿ ಪಾಲ್ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಮನೀಶ್: ಈ ಬಾರಿ ಚಿನ್ನ ಗೆಲ್ಲುವ ನಿರೀಕ್ಷೆಯಲ್ಲಿದ್ದ ಮನೀಶ್ ಅವರು ಬೆಳ್ಳಿಗೆ ತೃಪ್ತಿ ಪಡಬೇಕಾಯಿತು. ಇವರು ಕಳೆದ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದರು.