ಪ್ಯಾರಿಸ್ (ಫ್ರಾನ್ಸ್): ಪ್ಯಾರಿಸ್ ಒಲಿಂಪಿಕ್ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಭಾರತದ ನಿರಾಶಾದಾಯಕ ಪ್ರದರ್ಶನ ಮುಂದುವರೆದಿದೆ. ಇಂದು ನಡೆದ ಒಲಿಂಪಿಕ್ಸ್ ಲಾಂಗ್ ಜಂಪ್ ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಪಾರುಲ್ ಚೌಧರಿ ಮತ್ತು ಜೆಸ್ವಿನ್ ಆಲ್ಡ್ರಿನ್ ಕ್ರಮವಾಗಿ ಮಹಿಳೆಯರ 3000 ಮೀಟರ್ ಸ್ಟೀಪಲ್‌ಚೇಸ್ ಮತ್ತು ಪುರುಷರ ಲಾಂಗ್ ಜಂಪ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲರಾದರು.
ಪಾರುಲ್ ತನ್ನ ಹೀಟ್ ರೇಸ್‌ನಲ್ಲಿ ಎಂಟನೇ ಮತ್ತು ಒಟ್ಟಾರೆ 21ನೇ ಸ್ಥಾನ ಗಳಿಸಿದರು, ಈ ಮೂಲಕ ಪ್ಯಾರಿಸ್ ಒಲಿಂಪಿಕ್ನಲ್ಲಿ ತನ್ನ ಅಭಿಯಾನವನ್ನು ಕೊನೆಗೊಳಿಸಿದರು. 29ರ ಹರೆಯದ ಪಾರುಲ್ ಒಲಿಂಪಿಕ್ ಕ್ರೀಡಾಕೂಟಕ್ಕೂ ಕೆಲ ತಿಂಗಳುಗಳ ಮೊದಲು ಅಮೆರಿಕದಲ್ಲಿ ತರಬೇತಿ ಪಡೆದಿದ್ದರು ಮತ್ತು ಅವರು ದೂರವನ್ನು 9:23.39 ನಿಮಿಷಗಳಲ್ಲಿ ಪೂರ್ಣಗೊಳಿಸಿದರು. ಈ ಋತುವಿನಲ್ಲಿ ಇದು ಅವರ ಅತ್ಯುತ್ತಮ ದಾಖಲೆಯಾಗಿದೆ.
ಆದರೆ 2023ರ ಬುಡಾಪೆಸ್ಟ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಅವರ ರಾಷ್ಟ್ರೀಯ ದಾಖಲೆ 9:15.31 ನಿಮಿಷ ಆಗಿತ್ತು. ಇದೇ ಸ್ಪರ್ಧೆಯಲ್ಲಿ ಹಾಲಿ ಒಲಿಂಪಿಕ್ ಚಾಂಪಿಯನ್ ಉಗಾಂಡಾದ ಪೆರುತ್ ಚೆಮುಟೈ 9:10.51 ನಿಮಿಷಗಳೊಂದಿಗೆ ಮೊದಲ ಸ್ಥಾನ ಪಡೆದರೇ, ಕೀನ್ಯಾದ ಫೇತ್ ಚೆರೊಟಿಚ್ (9:10.57) ಮತ್ತು ಜರ್ಮನಿಯ ಗೆಸಾ ಫೆಲಿಸಿಟಾಸ್ ಕ್ರೌಸ್ (9:10.68) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು.
ಪಾರುಲ್ 9:23.00 ಪ್ರವೇಶ ಮಾನದಂಡವನ್ನು ಪೂರ್ಣಗೊಳಿಸಿ ನಂತರ 3000 ಮೀಟರ್ ಸ್ಟೀಪಲ್‌ಚೇಸ್‌ಗೆ ನೇರ ಅರ್ಹತೆ ಪಡೆದಿದ್ದರು. ಇದಕ್ಕೂ ಮೊದಲು ಲಲಿತಾ ಬಾಬರ್ ಅವರು 2016ರ ರಿಯೊ ಒಲಿಂಪಿಕ್ನಲ್ಲಿ ಅಂತಿಮ ಸುತ್ತಿಗೆ ಅರ್ಹತೆ ಪಡೆದ ಏಕೈಕ ಭಾರತೀಯ ಮಹಿಳಾ 3000 ಮೀ. ಸ್ಟೀಪಲ್‌ಚೇಸರ್ ಆಗಿದ್ದರು. ಅಲ್ಲಿ ಅವರು ಅಂತಿಮವಾಗಿ 10ನೇ ಸ್ಥಾನ ಪಡೆದಿದ್ದರು.
🇮🇳😓 𝗛𝗮𝗿𝗱 𝗹𝘂𝗰𝗸 𝗳𝗼𝗿 𝗝𝗲𝘀𝘄𝗶𝗻 𝗔𝗹𝗱𝗿𝗶𝗻! A good effort from Jeswin Aldrin but he failed to qualify for the final of the men's long jump event, following his failure to jump the qualification standard of 8.15m. He finished 13th in his qualification group with a… pic.twitter.com/aIXnS99P5m
— India at Paris 2024 Olympics (@sportwalkmedia) August 4, 2024
ಲಾಂಗ್ ಜಂಪ್ನಲ್ಲೂ ವಿಫಲ: ಭಾರತದ ಅಥ್ಲೀಟ್ ಪುರುಷರ 8.15 ಮೀಟರ್‌ಗಳ ಲಾಂಗ್ ಜಂಪ್ ಅರ್ಹತಾ ಸುತ್ತಿನಲ್ಲಿ ಗುರಿಯನ್ನು ಮುಟ್ಟಲು ಸಾಧ್ಯವಾಗದೇ ಮುಂದಿನ ಸುತ್ತಿಗೆ ಅರ್ಹತೆ ಪಡೆಯುವಲ್ಲಿ ವಿಫಲರಾದರು. ಈ ಪಂದ್ಯದಲ್ಲಿ ಆಲ್ಡ್ರಿನ್ 7.99 ಮೀಟರ್ ದೂರಕ್ಕೆ ಜಿಗಿಯುವ ಮೂಲಕ ನಿಗದಿತ ಗುರಿ ತಲುಪಲು ಆಗಲಿಲ್ಲ. ಆಲ್ಡ್ರಿನ್ ಅವರ 8.42 ಮೀಟರ್ ಜಿಗಿತ ಈವರೆಗಿನ ಅತ್ಯುತ್ತಮ ಪ್ರದರ್ಶನ ಆಗಿದೆ.
ಇದನ್ನೂ ಓದಿ: ಬಾಕ್ಸಿಂಗ್ ಕ್ವಾರ್ಟರ್ ಫೈನಲ್ನಲ್ಲಿ ಭಾರತದ ಲೊವ್ಲಿನಾ ಬೊರ್ಗೊಹೆನಾಗೆ ಸೋಲು - paris olympics 2024