ಪರ್ತ್(ಆಸ್ಟ್ರೇಲಿಯಾ): ಆಸ್ಟ್ರೇಲಿಯಾದಲ್ಲಿ ಲಿಸ್ಟ್ ಎ ಏಕದಿನ ಕಪ್ ಟೂರ್ನಿ ನಡೆಯುತ್ತಿದೆ. ಈ ಟೂರ್ನಿಯಲ್ಲಿ ಆಸ್ಟ್ರೇಲಿಯಾದ ಹಿರಿಯ ಮತ್ತು ಯುವ ಆಟಗಾರರು ಭಾಗಿಯಾಗಿದ್ದಾರೆ. ಇಂದು ವೆಸ್ಟರ್ನ್ ಆಸ್ಟ್ರೇಲಿಯಾ ಮತ್ತು ತಾಸ್ಮೇನಿಯಾ ನಡುವೆ ಪಂದ್ಯ ಆಯೋಜಿಸಲಾಗಿತ್ತು. ಪಂದ್ಯದಲ್ಲಿ ವೆಸ್ಟರ್ನ್ ಆಸ್ಟ್ರೇಲಿಯಾ ಅತ್ಯಂತ ಕಳಪೆ ಪ್ರದರ್ಶನ ತೋರಿದೆ. ತಾಸ್ಮೇನಿಯಾದ ಬೌಲಿಂಗ್ ದಾಳಿಗೆ ನಲುಗಿದ ವೆಸ್ಟರ್ನ್ ಆಸ್ಟ್ರೇಲಿಯಾ ಕೇವಲ ಒಂದು ರನ್ ಅಂತರದಲ್ಲಿ 8 ವಿಕೆಟ್ ಕಳೆದುಕೊಂಡು ಕ್ರಿಕೆಟ್ ಇತಿಹಾಸದಲ್ಲೇ ಕೆಟ್ಟ ದಾಖಲೆ ನಿರ್ಮಿಸಿತು.
ಟಾಸ್ ಗೆದ್ದ ತಾಸ್ಮೇನಿಯಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ, ಬ್ಯಾಟಿಂಗ್‌ಗಿಳಿದ ವೆಸ್ಟರ್ನ್ ಆಸ್ಟ್ರೇಲಿಯಾ 53 ರನ್‌ಗಳಿಗೆ ಸರ್ವಪತನ ಕಂಡಿತು. ಆರಂಭದಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 52 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿತ್ತು. ನಂತರ ಒಂದು ರನ್ ಅಂತರದಲ್ಲಿ ಎಲ್ಲ 8 ವಿಕೆಟ್‌ಗಳನ್ನು ಕಳೆದುಕೊಂಡಿತು.
The reigning champions have been bundled out for 53 by Tasmania, losing EIGHT wickets for ONE run (a wide) 😱😱 #WAvTAS
— cricket.com.au (@cricketcomau) October 25, 2024
Scorecard: https://t.co/YjVX6RjFj7 pic.twitter.com/t2rdrNd8pB
16ನೇ ಓವರ್‌ನಲ್ಲಿ ಎರಡು ವಿಕೆಟ್ ಕಳೆದುಕೊಂಡಿದ್ದ ವೆಸ್ಟರ್ನ್ ಆಸ್ಟ್ರೇಲಿಯಾ ನಂತರ ವೆಬ್‌ಸ್ಟರ್ ಬೌಲಿಂಗ್ ದಾಳಿಗೆ ತತ್ತರಿಸಿತು. 17ನೇ ಓವರ್‌ನಲ್ಲಿ ಬಿಲ್ಲಿ ಸ್ಟಾನ್‌ಲೇಕ್ ಎರಡು ವಿಕೆಟ್ ಪಡೆದರು. ಮುಂದಿನ ಓವರ್‌ನ ಕೊನೆಯ ಎಸೆತದಲ್ಲಿ ವೆಬ್‌ಸ್ಟರ್ ಮತ್ತೊಂದು ವಿಕೆಟ್ ಉರುಳಿಸಿದರು. 20ನೇ ಓವರ್‌ನಲ್ಲಿ ಮತ್ತೆರಡು ಹಾಗೂ ಮುಂದಿನ ಓವರ್‌ನಲ್ಲಿ ಹತ್ತನೇ ವಿಕೆಟ್ ಕಿತ್ತರು. ಇದರೊಂದಿಗೆ ಪಶ್ಚಿಮ ಆಸ್ಟ್ರೇಲಿಯಾ 20.1 ಓವರ್‌ಗಳಲ್ಲಿ 53 ರನ್‌ಗಳಿಗೆ ಆಲೌಟ್ ಆಯಿತು.
6 ಬ್ಯಾಟರ್‌ಗಳು ಡಕ್ ಔಟ್: ಆಸ್ಟ್ರೇಲಿಯಾದ ಒಟ್ಟು 6 ಬ್ಯಾಟರ್‌ಗಳು ಶೂನ್ಯಕ್ಕೆ ಔಟಾಗಿದ್ದಾರೆ. ಆ್ಯಶ್ಟೋನ್ ಟರ್ನರ್, ಕೂಪರ್, ಕಾರ್ಟ್ವ್ರೈಟ್, ಅಶ್ಟೋನ್ ಅಗರ್, ಝಯೇ ರಿಚರ್ಡ್‌ಸನ್ ಶೂನ್ಯಕ್ಕೆ ಪವಿಲಿಯನ್ ಸೇರಿದರು. ಶಾರ್ಟ್ (22), ಬೆನ್ಕ್ರಾಫ್ಟ್ (14) ಹೊರತುಪಡಿಸಿ ಉಳಿದ ಬ್ಯಾಟರ್ಗಳಾದ ಹರ್ಡಿ (7), ಜೋಶ್ ಇಂಗ್ಲಿಸ್ (1) ಎರಡಂಕಿ ದಾಟಲೂ ಸಾಧ್ಯವಾಗಲಿಲ್ಲ.
What a disaster for the reigning champions! #OneDayCup pic.twitter.com/nqzFP2AtyK
— cricket.com.au (@cricketcomau) October 25, 2024
ತಾಸ್ಮೇನಿಯಾಗೆ ಗೆಲುವು: ಆಸ್ಟ್ರೇಲಿಯಾ ನೀಡಿದ್ದ ಸಾಮಾನ್ಯ ಗುರಿ ಬೆನ್ನತ್ತಿದ ತಾಸ್ಮೇನಿಯಾ 8.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 55 ರನ್ ಗಳಿಸಿ ಗೆದ್ದು ಬೀಗಿತು. ಮಿಚೆಲ್ ಓವನ್ 29 ಮತ್ತು ಮ್ಯಾಥ್ಯೂ ವೇಡ್ 21 ರನ್ ಗಳಿಸಿ ತಂಡದ ಗೆಲುವಿಗೆ ಕಾಣಿಕೆ ನೀಡಿದರು. ವೆಸ್ಟರ್ನ್ ಆಸ್ಟ್ರೇಲಿಯಾ ಪರ ಜೋಯಲ್ ಪ್ಯಾರಿಸ್ 2 ಹಾಗೂ ಲ್ಯಾನ್ಸ್ ಮೋರಿಸ್ 1 ವಿಕೆಟ್ ಪಡೆದರು.
ತಾಸ್ಮೇನಿಯಾ ಪರ ಪಂದ್ಯಶ್ರೇಷ್ಠ ಪ್ರದರ್ಶನ ನೀಡಿದ ಬೌಲರ್ ವೆಬ್‌ಸ್ಟರ್ 6 ಓವರ್‌ಗಳಲ್ಲಿ 6 ವಿಕೆಟ್ ಪಡೆದರು. ಇದರಲ್ಲಿ ಎರಡು ಮೇಡನ್ ಓವರ್‌ಗಳಿದ್ದವು.
ಇದನ್ನೂ ಓದಿ: 60 ವರ್ಷಗಳ ನಂತರ ಭಾರತದ ಹಳೆಯ ಪ್ಲಾನ್ ಅನುಸರಿಸಿ ಟೆಸ್ಟ್ನಲ್ಲಿ ಸಕ್ಸಸ್ ಆದ ಪಾಕಿಸ್ತಾನ!