ETV Bharat / sports

ಐಪಿಎಲ್​ ಫೈನಲ್​ ಹಣಾಹಣಿ; ಕೆಕೆಆರ್​ ಬೌಲಿಂಗ್​ ದಾಳಿಗೆ ಕುಸಿದ ಸನ್​ ರೈಸರ್ಸ್​ - KKR VS SRH - KKR VS SRH

ಐಪಿಎಲ್​ನ ಫೈನಲ್​ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟ್​ ಮಾಡಿದ ಹೈದರಾಬಾದ್ ತಂಡ​ ಅಲ್ಪ ಮೊತ್ತಕ್ಕೆ ಕುಸಿದಿದೆ.

ಐಪಿಎಲ್​ ಫೈನಲ್​ ಪಂದ್ಯ
ಐಪಿಎಲ್​ ಫೈನಲ್​ ಪಂದ್ಯ (ETV Bharat)
author img

By ETV Bharat Karnataka Team

Published : May 26, 2024, 7:19 PM IST

Updated : May 26, 2024, 9:26 PM IST

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (IPL)ನ 17ನೇ ಆವೃತ್ತಿಯ ಫೈನಲ್​ ಪಂದ್ಯದ ಮೊದಲ ಇನ್ನಿಂಗ್ಸ್​ ಮುಕ್ತಾಯಗೊಂಡಿದೆ.

ಎಂಎ ಚಿದಾಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟ್​ ಮಾಡಿದ್ದ ಸನ್​ ರೈಸರ್ಸ್​ ತಂಡ ಕೋಲ್ಕತ್ತಾದ ಮಾರಕ ಬೌಲಿಂಗ್​ ದಾಳಿಗೆ ಸಿಲುಕಿ ಅಲ್ಪ ಮೊತ್ತಕ್ಕೆ ಕುಸಿದಿದೆ. ನಿಗದಿತ 20 ಓವರ್​ಗಳಲ್ಲಿ ಎಲ್ಲಾ ವಿಕೆಟ್​ ಕಳೆದುಕೊಂಡು 113ರನ್​ಗಳ ಸಾಧಾರಣ ಮೊತ್ತವನ್ನು ಕಲೆ ಹಾಕಿದೆ.

ಬ್ಯಾಟಿಂಗ್​ ವೈಫಲ್ಯ: ಬೃಹತ್​ ಮೊತ್ತ ಕಲೆ ಹಾಕುವ ಉದ್ದೇಶದೊಂದಿಗೆ ಕಣಕ್ಕಿಳಿದಿದ್ದ ಕಮಿನ್ಸ್​ ಪಡೆ ಪವರ್​ ಪ್ಲೇನಲ್ಲೇ 21 ರನ್​ಗಳಿಗೆ ಪ್ರಮುಖ ಮೂರು ವಿಕೆಟ್​ಗಳನ್ನು ಕಳೆದುಕೊಂಡಿತು. ಓಪನರ್ ಆಗಿ ಕ್ರೀಸ್​ಗಿಳಿದಿದ್ದ​ ಅಭಿಶೇಕ್ ಶರ್ಮಾ ಕೇವಲ 2 ರನ್​ಗಳಿಸಿ ನಿರ್ಗಮಿಸಿದರೆ ಟ್ರಾವಿಸ್​ ಹೆಡ್​ ಮತ್ತೊಮ್ಮೆ ಖಾತೆ ತೆರೆಯದೆ ನಿರ್ಗಮಿಸಿದರು. ತ್ರಿಪಾಠಿ (9) ಕೂಡ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ಉಳಿಯದೆ ನಿರ್ಗಮಿಸಿದರು.

ಈ ವೇಳೆ ಮಾಕ್ರಮ್​ ತಂಡದ ಸ್ಕೋರ್​ ಹೆಚ್ಚಿಸಲು ಪ್ರಯತ್ನಿಸಿದರಾದೂ ಸಾಧ್ಯವಾಗದೇ 20 ರನ್​ ಗಳಿಸಿ ಪೆವಿಲಿಯನ್​ ಸೇರಿದರು. ಉಳಿದಂತೆ ನಿತೀಶ್​ ರೆಡ್ಡಿ (13), ಕ್ಲಾಸೆನ್​ (16), ಶಹಬಾಜ್​ (8), ಸಮದ್​ (4), ಉನದ್​ಕತ್​ (4) ಪೆವಿಲಿಯನ್​ ಪರೇಡ್​ ಮಾಡಿದರು. ಅಂತಿಮಾವಾಗಿ ನಾಯಕ ಪ್ಯಾಟ್​ ಕಮಿನ್ಸ್​ ಕೆಲ ಹೊತ್ತು ಕ್ರೀಸ್​ನಲ್ಲಿ ನೆಲೆಯೂರಿ 24 ರನ್​ಗಳಿ ನಿರ್ಗಮಿಸಿದರು. ಅಲ್ಲದೇ ತಂಡದ ಹೈಸ್ಕೋರರ್​ ಎನಿಸಿಕೊಂಡರು. ಕೆಕೆಆರ್​ ಪರ ರಸ್ಸೆಲ್​ 3, ಸ್ಟಾರ್ಕ್​ ಮತ್ತು ಹರ್ಷಿತ್​ ರಾಣಾ ತಲಾ ಎರಡು ವಿಕೆಟ್​ ಪಡೆದರು.

ಕೆಕೆಆರ್ ತಂಡ ಮೊದಲ ಕ್ವಾಲಿಫೈಯರ್​ನಲ್ಲಿ ಹೈದರಾಬಾದ್ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿತ್ತು. ನಂತರ ಕ್ವಾಲಿಫೈಯರ್-2ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ರಾಜಸ್ಥಾನ್ ರಾಯಲ್ಸ್ ಅನ್ನು ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಟೂರ್ನಿಯಲ್ಲಿ ಎರಡೂ ತಂಡಗಳು ಉತ್ತಮ ಪ್ರದರ್ಶನ ನೀಡಿದ್ದು, ಪಾಯಿಂಟ್ಸ್ ಪಟ್ಟಿಯಲ್ಲಿ ಕೆಕೆಆರ್ ತಂಡ ಮೊದಲ ಸ್ಥಾನದಲ್ಲಿದ್ದರೆ, ಹೈದರಾಬಾದ್ ತಂಡ ಎರಡನೇ ಸ್ಥಾನದಲ್ಲಿದೆ.

ಎರಡೂ ತಂಡಗಳು ಈ ಹಿಂದೆ ಐಪಿಎಲ್‌ ಪ್ರಶಸ್ತಿ ಗೆದ್ದಿವೆ. ಗೌತಮ್ ಗಂಭೀರ್ ನಾಯಕತ್ವದಲ್ಲಿ ಕೆಕೆಆರ್ ಎರಡು ಬಾರಿ ಟ್ರೋಫಿ ಗೆದ್ದರೆ, ಡೇವಿಡ್ ವಾರ್ನರ್ ನಾಯಕತ್ವದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಐಪಿಎಲ್ 2016 ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ಕೆಕೆಆರ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಎರಡರಲ್ಲೂ ಪಂದ್ಯದ ಗತಿಯನ್ನೇ ಬದಲಿಸಬಲ್ಲ ಆಟಗಾರರಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಫೈನಲ್‌ನಲ್ಲಿ ಎರಡು ತಂಡಗಳ ನಡುವೆ ತೀವ್ರ ಪೈಪೋಟಿ ಏರ್ಪಡಬಹುದಾಗಿದೆ.

ತಂಡಗಳು ಕೋಲ್ಕತ್ತಾ ನೈಟ್​ ರೈಡರ್ಸ್​: ರಹಮಾನುಲ್ಲಾ ಗುರ್ಬಾಜ್ (ವಿ.ಕೀ), ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್(ನಾ), ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣ್‌ದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ವೈಭವ್ ಅರೋರಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ

ಇಂಪ್ಯಾಕ್ಟ್​ ಪ್ಲೇಯರ್ಸ್​: ಅನುಕುಲ್ ರಾಯ್, ಮನೀಶ್ ಪಾಂಡೆ, ನಿತೀಶ್ ರಾಣಾ, ಕೆಎಸ್ ಭರತ್, ಶೆರ್ಫೈನ್ ರುದರ್ಫೋರ್ಡ್

ಸನ್​ ರೈಸರ್ಸ್​ ಹೈದರಾಬಾದ್​: ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಏಡೆನ್ ಮಾರ್ಕ್ರಾಮ್, ನಿತೀಶ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್(ವಿ.ಕೀ), ಶಹಬಾಜ್ ಅಹ್ಮದ್, ಪ್ಯಾಟ್ ಕಮಿನ್ಸ್(ನಾ), ಭುವನೇಶ್ವರ್ ಕುಮಾರ್, ಜಯದೇವ್ ಉನಾದ್ಕತ್, ಟಿ ನಟರಾಜನ್

ಇಂಪ್ಯಾಕ್ಟ್​ ಪ್ಲೇಯರ್ಸ್​: ಉಮ್ರಾನ್ ಮಲಿಕ್, ಗ್ಲೆನ್ ಫಿಲಿಪ್ಸ್, ಮಯಾಂಕ್ ಮಾರ್ಕಂಡೆ, ಅಬ್ದುಲ್ ಸಮದ್, ವಾಷಿಂಗ್ಟನ್ ಸುಂದರ್

ಇದನ್ನೂ ಓದಿ: ಇಂದಿನ ಫೈನಲ್​ ಪಂದ್ಯದಲ್ಲಿ ಈ ತಂಡ ಟ್ರೋಫಿ ಗೆಲ್ಲಲಿದೆ; ಶೇನ್​ ವ್ಯಾಟ್ಸನ್ ಭವಿಷ್ಯವಾಣಿ - Shane Watson IPL Prediction

Last Updated : May 26, 2024, 9:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.