ಗುಲ್ಮಾರ್ಗ್ (ಜಮ್ಮು ಮತ್ತು ಕಾಶ್ಮೀರ) : ಫೆಬ್ರವರಿ 21 ರಂದು ಆರಂಭವಾಗಿದ್ದ 4ನೇ ಆವೃತ್ತಿಯ ಖೇಲೋ ಇಂಡಿಯಾ ವಿಂಟರ್ ಗೇಮ್ಸ್‌ನ ಸಮಾರೋಪ ಸಮಾರಂಭ ಭಾನುವಾರ ನಡೆಯಿತು. ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಕ್ರೀಡಾ ಮಂಡಳಿಯ ಕಾರ್ಯದರ್ಶಿ ನುಝತ್ ಗುಲ್ ಮತ್ತು ಗುಲ್ಮಾರ್ಗ್ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ವಸೀಮ್ ರಾಜಾ ಆಗಮಿಸಿದ್ದರು.
ವಿವಿಧ ಸಾಂಸ್ಕೃತಿಕ ಮತ್ತು ಕಲಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಖ್ಯಾತ ಕಲಾವಿದರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ, ಕಾರ್ಯಕ್ರಮಕ್ಕೆ ಮೆರಗು ತಂದರು. ಕ್ರೀಡಾಕೂಟದಲ್ಲಿ ಸುಮಾರು 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕ್ರೀಡಾಪಟುಗಳು ಭಾಗವಹಿಸಿದ್ದರು. 800 ಆಟಗಾರರು ವಿವಿಧ ಆಟಗಳಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು.
ಕರ್ನಾಟಕಕ್ಕೆ ಎರಡನೇ ಸ್ಥಾನ : ಭಾರತೀಯ ಸೇನೆಯ ಅಥ್ಲೀಟ್‌ಗಳು ಅತ್ಯಧಿಕ ಚಿನ್ನದ (10) ಪದಕಗಳನ್ನು ಪಡೆದು 4ನೇ ಆವೃತ್ತಿಯ ಖೇಲೋ ಇಂಡಿಯಾ ವಿಂಟರ್ ಗೇಮ್ಸ್‌ನಲ್ಲಿ ಪ್ರಾಬಲ್ಯ ಮೆರೆದರು. ನಂತರ ಕರ್ನಾಟಕದ ಅಥ್ಲೀಟ್‌ಗಳು ಒಂಬತ್ತು ಚಿನ್ನದ ಪದಕಗಳೊಂದಿಗೆ ಎರಡನೇ ಸ್ಥಾನವನ್ನು ಪಡೆದುಕೊಂಡರೆ, ಮಹಾರಾಷ್ಟ್ರ ಏಳು ಚಿನ್ನದ ಪದಕಗಳೊಂದಿಗೆ ಮೂರನೇ ಸ್ಥಾನವನ್ನು ಪಡೆದುಕೊಂಡಿತು. ಚಿನ್ನದ ಪದಕಗಳನ್ನು ಗೆದ್ದ ಅಥ್ಲೀಟ್‌ಗಳು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಉಳಿದ ಇತರ ರಾಜ್ಯಗಳ ಅಥ್ಲೀಟ್‌ಗಳು ಕಾಶ್ಮೀರ ಮತ್ತು ಗುಲ್ಮಾರ್ಗ್‌ನ ಆತಿಥ್ಯವನ್ನು ಶ್ಲಾಘಿಸಿದ್ದಾರೆ.
ಇದನ್ನೂ ಓದಿ : ನಾರ್ಡಿಕ್ ಸ್ಕೀಯಿಂಗ್ನಲ್ಲಿ 3 ಚಿನ್ನದ ಪದಕ ಬಾಚಿದ ಕೊಡಗಿನ ಬೆಡಗಿ ಭವಾನಿ