ಆಸ್ಪ್ರೇಲಿಯಾ ಮತ್ತು ಭಾರತದ ನಡುವಿನ ಸರಣಿ ಎಂದಿಗೂ ಜಿದ್ದಾಜಿದ್ದಿಯಿಂದ ಕೂಡಿರುತ್ತದೆ. ಅಲ್ಲಿ, ತೆಗಳಿಗೆ, ಆಟಗಾರರು ಒಬ್ಬರನ್ನೊಬ್ಬರು ಕಿಚಾಯಿಸುವುದು ಸರ್ವೇ ಸಾಮಾನ್ಯ. ಈ ಹಿಂದಿನ ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಗಳಲ್ಲೂ ದೊಡ್ಡ ವಿವಾದಗಳು ಸೃಷ್ಟಿಯಾಗಿದ್ದು ಇತಿಹಾಸದ ಪುಟಗಳಲ್ಲಿವೆ.
ಸದ್ಯ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲೂ ಅಂಥದ್ದೊಂದು ದೊಡ್ಡ ಆರೋಪ ಕೇಳಿಬಂದಿದೆ. ಆಸೀಸ್ ಬ್ಯಾಟರ್ಗಳನ್ನು ತಮ್ಮ ಉರಿಚೆಂಡಿನ ಮೂಲಕ ಚೆಂಡಾಡುತ್ತಿರುವ ಭಾರತದ ಟ್ರಂಪ್ ಕಾರ್ಡ್ ಜಸ್ಪ್ರೀತ್ ಬುಮ್ರಾ ಜನಾಂಗೀಯ ನಿಂದನೆಗೆ ಒಳಗಾಗಿದ್ದಾರೆ. ಟಿವಿಯಲ್ಲಿ ಕ್ರಿಕೆಟ್ ಕಾಮೆಂಟರಿ ನೀಡುತ್ತಿದ್ದ ಮಹಿಳಾ ವಿವರಣೆಗಾರ್ತಿ ಬುಮ್ರಾ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದು, ನೆಟ್ಟಿಗರ ಪಿತ್ತ ನೆತ್ತಿಗೇರಿಸಿದೆ.
*Isa Guha https://t.co/VgmsHxoG21 pic.twitter.com/zWTJ8HUxXE
— Matt Krawczyk (@mjkrawz) December 15, 2024
ಬೂಮ್ ಬೂಮ್ ಬುಮ್ರಾ: ಮೂರನೇ ಟೆಸ್ಟ್ನ ಎರಡನೇ ದಿನದಾಟದಲ್ಲಿ ಬುಮ್ರಾ ತಮ್ಮ ಕರಾರುವಾಕ್ ಬೌಲಿಂಗ್ ದಾಳಿಯಿಂದ ಏಕಾಂಗಿಯಾಗಿ ಕಾಂಗರೂ ಬ್ಯಾಟರ್ಗಳನ್ನು ಪೆವಿಲಿಯನ್ ಪರೇಡ್ ನಡೆಸುತ್ತಿದ್ದರು. ಕ್ರೀಸ್ಗೆ ಅಂಟಿಕೊಂಡಿದ್ದ ಆರಂಭಿಕರಾದ ನಾಥನ್ ಮೆಕ್ಸ್ವೀನಿ ಮತ್ತು ಉಸ್ಮಾನ್ ಖವಾಜಾರನ್ನು ಬುಮ್ರಾ ಎರಡೇ ಓವರ್ ಅಂತರದಲ್ಲಿ ಔಟ್ ಮಾಡಿದರು.
ಈ ವೇಳೆ ಕ್ರೀಡಾ ವಾಹಿನಿಯೊಂದರಲ್ಲಿ ವೀಕ್ಷಕ ವಿವರಣೆ ನೀಡುತ್ತಿದ್ದ ಆಸೀಸ್ನ ಮಾಜಿ ದೈತ್ಯ ವೇಗಿ ಬ್ರೆಟ್ ಲೀ, ಬುಮ್ರಾ ಬೌಲಿಂಗ್ ಅನ್ನು ಹೊಗಳಿದರು. ಯಾರ್ಕರ್ ಮಾಸ್ಟರ್ನ ಈ ದಾಳಿ ತಂಡದ ನಾಯಕನಿಗೆ ಖುಷಿ ನೀಡುತ್ತದೆ ಎಂದು ಬ್ರೆಟ್ ಲೀ ಹೇಳಿದಾಗ, ಅವರೊಂದಿಗೆ ವಿವರಣೆ ನೀಡುತ್ತಿದ್ದ ಮಹಿಳಾ ಕಾಮೆಂಟೇಟರ್ ಮತ್ತು ಇಂಗ್ಲೆಂಡ್ನ ಮಾಜಿ ಆಟಗಾರ್ತಿ ಇಶಾ ಗುಹಾ ಅವರು ಈ ವೇಳೆ ಬುಮ್ರಾ ವಿರುದ್ಧ ಜನಾಂಗೀಯ ನಿಂದನೆ ಪದ ಬಳಕೆ ಮಾಡಿದ್ದಾರೆ.
Monkey gate! Isha just called bumrah a primate hahah
— rainy days (@wheresistherain) December 15, 2024
ನಿಂದನಾ ಹೇಳಿಕೆ ಟಿವಿಯಲ್ಲಿ ಪ್ರಸಾರ: ಇಂಗ್ಲೆಂಡ್ನ ಮಾಜಿ ಆಟಗಾರ್ತಿಯ ನಿಂದನೆಯ ಹೇಳಿಕೆಯು ಟಿವಿಯಲ್ಲಿ ಪ್ರಸಾರವಾಗಿದೆ. ಬುಮ್ರಾ ಭಾರತದ ಮೋಸ್ಟ್ ವ್ಯಾಲ್ಯುವೇಬಲ್ ಪ್ರೈಮೇಟ್ (ಪ್ರಮುಖವಾದ ಮಂಗ) ಎಂದು ಜರಿದಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರತೀಯರು ಸೇರಿ ನೆಟ್ಟಿಗರಿಂದ ಟೀಕೆ ಎದುರಾಗಿದೆ.
Did Isa Guha holiday in Townsville or Longreach between tests?
— Skippersteve86 (@skippersteve86) December 15, 2024
Calling Jasprit Bumrah the MVP but then breaking it down to a " most valuable primate" a few minutes ago was something else.#AUSvIND
ಮಂಕಿಗೇಟ್ ವಿವಾದ ನೆನಪು: ಮಹಿಳಾ ಕಾಮೆಂಟೇಟರ್ ಹೇಳಿಕೆಯು ವೈರಲ್ ಆಗುತ್ತಿದ್ದಂತೆ 2008 ರಲ್ಲಿ ಆದ ಮಂಕಿಗೇಟ್ ವಿವಾದವನ್ನು ನೆಟ್ಟಿಗರು ನೆನಪು ಮಾಡಿಕೊಂಡಿದ್ದಾರೆ. ಅಂದು ಭಾರತದ ಹರ್ಭಜನ್ ಸಿಂಗ್ ಅವರನ್ನು ಆಸೀಸ್ನ ಆ್ಯಂಡ್ರೂ ಸೈಮಂಡ್ಸ್ ಅವರು ಮಂಕಿ (ಕೋತಿ) ಎಂದು ಜನಾಂಗೀಯ ನಿಂದನೆ ಮಾಡಿದ್ದು, ದೊಡ್ಡ ಮಟ್ಟದಲ್ಲಿ ಟೀಕೆಗೆ ಗುರಿಯಾಗಿತ್ತು.
ಇದನ್ನೂ ಓದಿ: ಬಾರ್ಡರ್-ಗವಾಸ್ಕರ್ ಟ್ರೋಫಿ ಯಾವಾಗ ಪ್ರಾರಂಭವಾಯ್ತು: ಈ ಹೆಸರು ಹೇಗೆ ಬಂತು, ಇದಕ್ಕಿದೆ 28 ವರ್ಷದ ಇತಿಹಾಸ!