ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ಸೋಲಿನತ್ತ ಜಾರುತ್ತಿದ್ದಾಗ ಸ್ಟೈಲಿಶ್ ವೇಗಿ ಜಸ್ಪ್ರೀತ್ ಬುಮ್ರಾ ತಮ್ಮ ಕರಾರುವಾಕ್ ಬೌಲಿಂಗ್ ಮ್ಯಾಜಿಕ್ನಿಂದ ಪಂದ್ಯದ ಗತಿ ಬದಲಿಸಿದರು.
"ವಿಶ್ವದ ಅತ್ಯುತ್ತಮ ವೇಗಿಗಳಲ್ಲಿ ಒಬ್ಬರಾಗಿರುವ ಬುಮ್ರಾ ನನಗಿಂತ ಸಾವಿರ ಪಟ್ಟು ಉತ್ತಮರು. ಅವರ ಬೌಲಿಂಗ್ ಎಷ್ಟು ಅದ್ಭುತವಾಗಿದೆ ಎಂದರೆ ವಿಶ್ವದ ಎಲ್ಲಾ ಟಾಪ್ ಕ್ರಿಕೆಟಿಗರು ಕೂಡಾ 'ಬುಮ್ರಾ ಬುಮ್ರಾ' ಎಂದು ಹೇಳುವಂತಾಗಿದೆ. ಆ ಮಾತಿಗೆ ತಕ್ಕಂತೆ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಹೀರೋನಂತೆ ತಂಡವನ್ನು ಕಾಪಾಡಿದರು. ಐಸಿಸಿ ಪ್ರಶಸ್ತಿಗಳಿಗಾಗಿ ಟೀಮ್ ಇಂಡಿಯಾದ ದೀರ್ಘ ಕಾಯುವಿಕೆಯನ್ನು ಕೊನೆಗೊಳಿಸುವಲ್ಲಿ ಬುಮ್ರಾ ಪ್ರಮುಖ ಪಾತ್ರ ವಹಿಸಿದ್ದಾರೆ" ಎಂದು ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
You are watching the " ball of the tournament" , so don't go without liking this ❤️
— Richard Kettleborough (@RichKettle07) June 29, 2024
jasprit bumrah delivers at most important time when 1.4 billions 🇮🇳 were on verge on heart attack 👏#INDvSA #T20IWorldCupFinal pic.twitter.com/Fww7iYDier
ವಿಕೆಟ್‌ಗಳನ್ನು ಪಡೆಯುವುದು ಮಾತ್ರವಲ್ಲ, ರನ್ ಗಳಿಸುವುದು, ಬ್ಯಾಟ್ಸ್‌ಮನ್‌ಗಳನ್ನು ಒತ್ತಡಕ್ಕೆ ಸಿಲುಕಿಸುವುದು ಬುಮ್ರಾ ಅವರ ಚಾಕಚಕ್ಯತೆ. ಚೆಂಡನ್ನು ಆಫ್‌ಸ್ಟಂಪ್‌ನಾಚೆಗೆ ಸ್ವಲ್ಪ ಸ್ವಿಂಗ್ ಮಾಡುವ ಮೂಲಕ ಬ್ಯಾಟ್ಸ್‌ಮನ್‌ಗಳ ಕೈಗೆಟುಕದಂತೆ ಸ್ಟಂಪ್‌ಗಳನ್ನು ಕೀಳುವುದನ್ನು ನೋಡಲು ಎರಡು ಕಣ್ಣುಗಳು ಸಾಲವು. ಬ್ಯಾಟ್ಸ್‌ಮನ್‌ಗಳ ದೌರ್ಬಲ್ಯಕ್ಕೆ ಅನುಗುಣವಾಗಿಯೇ ಶಾರ್ಟ್ ಪಿಚ್ ಬಾಲ್ ಮತ್ತು ಯಾರ್ಕರ್‌ಗಳನ್ನು ಎಸೆಯುವಲ್ಲಿ ಬುಮ್ರಾ ಪರಿಣತರು ಎಂಬುದು ಕ್ರಿಕೆಟ್ ಪಂಡಿತರ ಮಾತು.
ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಬುಮ್ರಾ 8 ಪಂದ್ಯಗಳಲ್ಲಿ 15 ವಿಕೆಟ್ ಉರುಳಿಸಿದ್ದಾರೆ. ಪಾಕಿಸ್ತಾನದ ವಿರುದ್ಧ 3, ಅಫ್ಘಾನಿಸ್ತಾನದ ವಿರುದ್ಧ 3, ಬಾಂಗ್ಲಾದೇಶ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ತಲಾ 2 ವಿಕೆಟ್ ಪಡೆದಿದ್ದಾರೆ. ಅದರಲ್ಲೂ ಫೈನಲ್ ಪಂದ್ಯದಲ್ಲಿ 18ನೇ ಓವರ್‌ನಲ್ಲಿ ಎರಡು ರನ್ ನೀಡಿ ಒಂದು ವಿಕೆಟ್ ಪಡೆದು ತಂಡವನ್ನು ಗೆಲುವಿನತ್ತ ಕೊಂಡೊಯ್ದರು.
'ವಿಡಿಯೋ ಗೇಮ್‌ನಂತಿದೆ ಬುಮ್ರಾ ಬೌಲಿಂಗ್': ಇಂಗ್ಲೆಂಡ್ ವಿರುದ್ಧದ ಸೆಮೀಸ್‌ಗೂ ಮುನ್ನ ಬುಮ್ರಾ ಬೌಲಿಂಗ್ ಕುರಿತು ಬೌಲರ್ ಅರ್ಶ್‌ದೀಪ್ ಸಿಂಗ್ ಆಸಕ್ತಿದಾಯಕ ಕಾಮೆಂಟ್‌ಗಳನ್ನು ಮಾಡಿದ್ದರು. "ಬುಮ್ರಾ ವಿಡಿಯೋ ಗೇಮ್‌ನಂತೆ ಬೌಲ್ ಮಾಡುತ್ತಾರೆ. ಪ್ರತಿ ಓವರ್‌ನಲ್ಲಿ ಕೇವಲ ಎರಡು ಅಥವಾ ಮೂರು ರನ್ ನೀಡುವಷ್ಟು ದಕ್ಷತೆ ಅವರಲ್ಲಿದೆ. ಇದು ಬ್ಯಾಟ್ಸ್‌ಮನ್‌ಗಳನ್ನು ಒತ್ತಡಕ್ಕೆ ಸಿಲುಕುವಂತೆ ಮಾಡುತ್ತದೆ. ಆಗ ಅವರು ಅಪಾಯಕಾರಿ ಹೊಡೆತಗಳಿಗೆ ಕೈ ಹಾಕುತ್ತಾರೆ. ನಾನೂ ಕೂಡಾ ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಸಾಕಷ್ಟು ವಿಕೆಟ್‌ಗಳನ್ನು ಪಡೆದಿದ್ದೇನೆ. ಇದರ ಕ್ರೆಡಿಟ್ ಬುಮ್ರಾಗೆ ಸಲ್ಲುತ್ತದೆ" ಎಂದು ಅರ್ಷದೀಪ್ ಹೇಳಿದ್ದಾರೆ.
ಇದನ್ನೂ ಓದಿ: ವಿಶ್ವ ಚಾಂಪಿಯನ್ ಭಾರತಕ್ಕೆ ಅಭಿನಂದನೆಗಳ ಅಭ್ಯಂಜನ: ಯಾರು, ಏನಂದ್ರು? - T20 World Cup