ETV Bharat / sports

ಒಲಿಂಪಿಕ್​ ಬ್ರೇಕಿಂಗ್‌ನ ಮೊದಲ ಚಿನ್ನದ ಪದಕ ಗೆದ್ದ ಜಪಾನ್​ ಬಿ-ಗರ್ಲ್​ ಅಮಿ - Japan B girl won gold medal

author img

By PTI

Published : Aug 10, 2024, 9:27 AM IST

16 ಡ್ಯಾನ್ಸರ್​ಗಳಿದ್ದ ಅಖಾಡದಲ್ಲಿ ಅಮಿ ಯುವಾಸಾ ಅವರು ಸ್ಪಿನ್ನಿಂಗ್​, ಫ್ಲಿಪ್ಪಿಂಗ್​ ಹಾಗೂ ಟಾಪ್​ಪ್ರಾಕ್​ ಮಾಡುವ ಮೂಲಕ ಒಲಿಂಪಿಕ್ಸ್​ನ ಮೊದಲ ಬ್ರೇಕಿಂಗ್​ ಈವೆಂಟ್​ನ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

Japan's B-girl Ami won the first Olympic breaking gold medal
ಮೊದಲ ಚಿನ್ನದ ಪದಕ ಗೆದ್ದ ಜಪಾನ್​ ಬಿ-ಗರ್ಲ್​ ಅಮಿ (AP)

ಪ್ಯಾರಿಸ್, ಫ್ರಾನ್ಸ್​: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಈ ಬಾರಿಗೆ ಬ್ರೇಕಿಂಗ್​ ಈವೆಂಟ್​ ಅನ್ನು ಸೇರ್ಪಡೆಗೊಳಿಸಿದ್ದು, ಶುಕ್ರವಾರ ರಾತ್ರಿ ನಡೆದ ಬ್ರೇಕಿಂಗ್​ ಈವೆಂಟ್​ನಲ್ಲಿ ಜಪಾನ್​ನ 25 ವರ್ಷದ ಯುವತಿ ಬಿ-ಗರ್ಲ್​ ಅಮಿ ಮೊದಲ ಚಿನ್ನದ ಪದಕವನ್ನು ಗೆದ್ದಿದ್ದಾರೆ.

16 ಡ್ಯಾನ್ಸರ್​ಗಳಿದ್ದ ಅಖಾಡದಲ್ಲಿ ಅಮಿ ಯುವಾಸಾ ಅವರು ಸ್ಪಿನ್ನಿಂಗ್​, ಫ್ಲಿಪ್ಪಿಂಗ್​ ಹಾಗೂ ಟಾಪ್​ಪ್ರಾಕ್​ ಮಾಡುವ ಮೂಲಕ ಒಲಿಂಪಿಕ್ಸ್​ನ ಮೊದಲ ಬ್ರೇಕಿಂಗ್​ ಈವೆಂಟ್​ನ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಅಮಿ ಯುವಾಸಾ ಅವರು ಲಿಥುವೇನಿಯಾದ ಬಿ-ಗರ್ಲ್​ ನಿಕಾ (ಡೊಮಿನಿಕಾ ಬಾನೆವಿಕ್) ವಿರುದ್ಧದ ಪಂದ್ಯದಲ್ಲಿ ಎಲ್ಲ ಮೂರು ಸುತ್ತುಗಳನ್ನು ಗೆದ್ದು ಚಿನ್ನವನ್ನು ದೋಚಿದ್ದಾರೆ. ಪ್ಲೇಸ್ ಡೆ ಲಾ ಕಾನ್ಕಾರ್ಡ್ ಕ್ರೀಡಾಂಗಣದಲ್ಲಿ ಸುದೀರ್ಘ ಲಯಕ್ಕೆ ಹೆಜ್ಜೆ ಹಾಕಿ ತಮ್ಮ ಕೌಶಲ್ಯ ಪ್ರದರ್ಶಿಸಿದರು.

ಬಿ-ಗರ್ಲ್‌ಗಳು ಹೆಡ್‌ಸ್ಪಿನ್‌ಗಳು, ವಿಂಡ್‌ಮಿಲ್‌ಗಳು ಮತ್ತು ಬ್ಯಾಕ್‌ಫ್ಲಿಪ್‌ಗಳಂತಹ ಪವರ್ ಮೂವ್‌ಗಳ ಮೂಲಕ ಪ್ರೇಕ್ಷಕರನ್ನು ಬೆರಗುಗೊಳಿಸಿದರು. ಮಧ್ಯಾಹ್ನ ಆರಂಭಗೊಂಡು ರಾತ್ರಿ 10 ಗಂಟೆಯ ಮೊದಲು ಮುಕ್ತಾಯಗೊಂಡ ಬ್ರೇಕಿಂಗ್​ ಈವೆಂಟ್​ ನೋಡಲು ಸಂಜೆ ಉದ್ದಕ್ಕೂ ಅಭಿಮಾನಿಗಳು ಉತ್ಸಾಹದಿಂದ ಸೇರಿದ್ದರು.

ಕ್ವಾರ್ಟರ್‌ಫೈನಲ್ಸ್‌ ಹಂತದಲ್ಲಿ ಆರಂಭದಲ್ಲಿ, ಎಂಟು ಬಿ-ಗರ್ಲ್‌ಗಳು ತಲಾ ಮೂರು ಸುತ್ತುಗಳ ನಾಕ್‌ಔಟ್ ಕದನಗಳಲ್ಲಿ ಫೈನಲ್‌ಗೆ ಪ್ರವೇಶಿಸಲು ವಿಫಲರಾದರು. ಬಾನೆವಿಕ್ ಬೆಳ್ಳಿ ಪದಕವನ್ನು ಗೆದ್ದರೆ, ಚೀನಾದ ಬಿ-ಗರ್ಲ್ ಲಿಯು ಕ್ವಿಂಗಿ ನೆದರ್ಲ್ಯಾಂಡ್ಸ್​ನ ಬಿ- ಗರ್ಲ್​ ಇಂಡಿಯಾ ಸರ್ಡ್ಜೋ ವಿರುದ್ಧ ಸೆಣಸಿ ಕಂಚಿನ ಪದಕಕ್ಕೆ ಮುತ್ತಿಕ್ಕಿದರು. ಕ್ವಿಂಗಿ ಅವರು ಬ್ರೇಕಿಂಗ್ ಕ್ಷೇತ್ರಕ್ಕೆ ಹೊಸಬರು.

ಇದನ್ನೂ ಓದಿ: ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಅಮನ್​​ಗೆ ಅಭಿನಂದಿಸಿದ ಪ್ರಧಾನಿ ಮೋದಿ: ರಾಷ್ಟ್ರೀಯ ಕುಸ್ತಿ ಕೋಚ್ ಹೇಳಿದ್ದಿಷ್ಟು! - PM Modi congratulates Aman Sehrawat

ETV Bharat Logo

Copyright © 2024 Ushodaya Enterprises Pvt. Ltd., All Rights Reserved.