ಮೆಲ್ಬರ್ನ್(ಆಸ್ಟ್ರೇಲಿಯಾ): ಇಲ್ಲಿನ ರಾಡ್ ಲೆವರ್ ಟೆನ್ನಿಸ್ ಕೋರ್ಟ್‌ನಲ್ಲಿ ಭಾನುವಾರ ನಡೆದ ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ರಷ್ಯಾದ ಡೇನಿಯಲ್ ಮೆಡ್ವೆಡೆವ್ ವಿರುದ್ಧ ಇಟಲಿಯ ಜಾನಿಕ್ ಸಿನ್ನರ್ ಐತಿಹಾಸಿಕ ಜಯ ಸಾಧಿಸಿದರು. ಈ ಮೂಲಕ 22 ವರ್ಷದ ಜಾನಿಕ್ ಸಿನ್ನರ್ ಚೊಚ್ಚಲ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಎತ್ತಿ ಹಿಡಿದರು. ಇದಕ್ಕೂ ಮೊದಲು ವಿಶ್ವದ ನಂ.1 ಟೆನ್ನಿಸಿಗ ನೊವಾಕ್ ಜೊಕೊವಿಕ್ ಅವರನ್ನು ಸೆಮಿಫೈನಲ್ನಲ್ಲಿ ಸೋಲಿಸಿರುವ ಇವರು ಫೈನಲ್ ಪ್ರವೇಶಿಸಿದ್ದರು.
-
Was this the spark that lit the fire in Sinner? 😮@Infosys • #InfosysAI • #AusOpenWithInfosys • #AusOpen • @wwos • @espn • @eurosport • @wowowtennis pic.twitter.com/b5msfVnL5a
— #AusOpen (@AustralianOpen) January 28, 2024 " class="align-text-top noRightClick twitterSection" data="
">Was this the spark that lit the fire in Sinner? 😮@Infosys • #InfosysAI • #AusOpenWithInfosys • #AusOpen • @wwos • @espn • @eurosport • @wowowtennis pic.twitter.com/b5msfVnL5a
— #AusOpen (@AustralianOpen) January 28, 2024Was this the spark that lit the fire in Sinner? 😮@Infosys • #InfosysAI • #AusOpenWithInfosys • #AusOpen • @wwos • @espn • @eurosport • @wowowtennis pic.twitter.com/b5msfVnL5a
— #AusOpen (@AustralianOpen) January 28, 2024
ಪಂದ್ಯ ಹೀಗಿತ್ತು: ಐದು ಸೆಟ್ಗಳಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೆಡ್ವೆಡೆವ್ ಎದುರು ಸಿನ್ನರ್ ಪ್ರಬಲ ಪೈಪೋಟಿ ತೋರಿದರು. 3-6, 3-6, 6-4, 6-4, 6-3 ಸೆಟ್ಗಳಿಂದ ಮೆಡ್ವೆಡೆವ್ ಅವರನ್ನು ಸೋಲಿಸಲು ಸಿನ್ನರ್ ಸುಮಾರು 3 ಗಂಟೆ 44 ನಿಮಿಷ ಕಾಲಾವಧಿ ತೆಗೆದುಕೊಂಡರು. ಮೊದಲೆರಡು ಸೆಟ್ಗಳಲ್ಲಿ ಗೆದ್ದ ಮೆಡ್ವೆಡೆವ್ ಪ್ರಶಸ್ತಿ ಎತ್ತಿ ಹಿಡಿಯುವ ಉತ್ಸಾಹದಲ್ಲಿದ್ದರು. ಆದರೆ ಪುಟಿದೆದ್ದ ಸಿನ್ನರ್ ಮುಂದಿನ ಮೂರೂ ಸೆಟ್ಗಳಲ್ಲಿ ಮೆಡ್ವೆಡೆವ್‌ರನ್ನು ಮಣಿಸಿದರು.
2022ರ ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ರಾಫೆಲ್ ನಡಾಲ್ ವಿರುದ್ಧ ಡೇನಿಯಲ್ ಮೆಡ್ವೆಡೆವ್ ಪರಾಭವಗೊಂಡಿದ್ದರು. ಇದೀಗ ಎರಡನೇ ಸೋಲಿನ ಕಹಿ ಅನುಭವಿಸಿದ್ದಾರೆ.
-
FIRST AO DOUBLES TITLE AS A TEAM 🏆#AusOpen pic.twitter.com/SuzsjVMDYM
— #AusOpen (@AustralianOpen) January 28, 2024 " class="align-text-top noRightClick twitterSection" data="
">FIRST AO DOUBLES TITLE AS A TEAM 🏆#AusOpen pic.twitter.com/SuzsjVMDYM
— #AusOpen (@AustralianOpen) January 28, 2024FIRST AO DOUBLES TITLE AS A TEAM 🏆#AusOpen pic.twitter.com/SuzsjVMDYM
— #AusOpen (@AustralianOpen) January 28, 2024
ಮಹಿಳೆಯರ ಡಬಲ್ಸ್ ಫಲಿತಾಂಶ: ಇನ್ನು, ಮಹಿಳೆಯರ ಡಬಲ್ಸ್ ಕಿರೀಟವನ್ನು ಬೆಲ್ಜಿಯಂನ ಎಲಿಸ್ ಮೆರ್ಟೆನ್ಸ್ ಹಾಗು ತೈವಾನ್‌ನ ಶಾಯ್ ಶುವೆ ಮುಡಿಗೇರಿಸಿಕೊಂಡರು. ಫೈನಲ್‌ನಲ್ಲಿ ಲಾಟ್ವಿಯಾದ ಜೆಲೆನಾ ಒಸ್ಟಾಪೆಂಕೊ ಮತ್ತು ಉಕ್ರೇನ್ನ ಲ್ಯುಡ್ ಮೈಲಾ ಕಿಚೆನೊಕ್ ಜೋಡಿಯ ವಿರುದ್ಧ ಇವರು 6-1, 7-5 ಸೆಟ್ಗಳ ಅಂತರದಿಂದ ಭರ್ಜರಿ ವಿಜಯ ಸಾಧಿಸಿದರು.
ಇದರೊಂದಿಗೆ 2024ರ ಮೊದಲ ಟ್ರೋಫಿಯನ್ನು ಶಾಯ್ ಶುವೆ-ಎಲಿಸ್ ಮೆರ್ಟೆನ್ಸ್ ತಮ್ಮದಾಗಿಸಿಕೊಂಡರು. ಶಾಯ್ ಶುವೆ ಗೆದ್ದ 7ನೇ ಡಬಲ್ಸ್ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಇದಾಗಿದೆ. ಇದಕ್ಕೂ ಮುನ್ನ ವಿಂಬಲ್ಡನ್‌ನಲ್ಲಿ ನಾಲ್ಕು ಬಾರಿ ಡಬಲ್ಸ್ ಪ್ರಶಸ್ತಿ ಗೆದ್ದಿದ್ದಾರೆ.
ಇದನ್ನೂ ಓದಿ: ಜಡೇಜಾಗೆ ಮಂಡಿರಜ್ಜು ಗಾಯ; ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ಗೆ ಅಲಭ್ಯ?