ETV Bharat / sports

4 ದಶಕಗಳ ಬಳಿಕ ಜಮ್ಮು- ಕಾಶ್ಮೀರದಲ್ಲಿ ಕ್ರಿಕೆಟ್​ ಟೂರ್ನಿ ಆಯೋಜನೆ: ಫೈನಲ್​ ಪಂದ್ಯವೂ ಇಲ್ಲೇ! - cricket tourney in JK

author img

By ETV Bharat Karnataka Team

Published : Sep 12, 2024, 3:49 PM IST

4 ದಶಕಗಳ ಬಳಿಕ ಜಮ್ಮು- ಕಾಶ್ಮೀರವು ಕ್ರಿಕೆಟ್​ ಟೂರ್ನಿಯನ್ನು ಆಯೋಜಿಸಲು ಸಜ್ಜಾಗಿದೆ. ಅಂತಾರಾಷ್ಟ್ರೀಯ ಸ್ಟಾರ್ ಕ್ರಿಕೆಟರ್​​ಗಳು ಈ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ.

4 ದಶಕಗಳ ಬಳಿಕ ಜಮ್ಮು- ಕಾಶ್ಮೀರದಲ್ಲಿ ಕ್ರಿಕೆಟ್​ ಟೂರ್ನಿ ಆಯೋಜನೆ
4 ದಶಕಗಳ ಬಳಿಕ ಜಮ್ಮು- ಕಾಶ್ಮೀರದಲ್ಲಿ ಕ್ರಿಕೆಟ್​ ಟೂರ್ನಿ ಆಯೋಜನೆ (ETV Bharat)

ಶ್ರೀನಗರ(ಜಮ್ಮು ಮತ್ತು ಕಾಶ್ಮೀರ) : ಉಗ್ರರ ದಾಳಿಗಳಿಂದ ಕುಖ್ಯಾತಿ ಹೊಂದಿದ್ದ ಜಮ್ಮು ಮತ್ತು ಕಾಶ್ಮೀರ ನಿಧಾನಕ್ಕೆ ಇತರ ಚಟುವಟಿಕೆಗಳತ್ತ ಹೊರಳುತ್ತಿದೆ. ಈಚೆಗೆ ಜಿ20 ಶೃಂಗದ ಸಭೆಗಳು ಅಲ್ಲಿ ನಡೆದಿದ್ದವು. ಇದೀಗ ಬರೋಬ್ಬರಿ 40 ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್​ ಟೂರ್ನಿಯೊಂದನ್ನು ಆಯೋಜಿಸಲು ಸಜ್ಜಾಗಿದೆ.

ಸೆಪ್ಟೆಂಬರ್​ 20 ರಿಂದ ಲೆಜೆಂಡ್ಸ್​ ಲೀಗ್​ ಕ್ರಿಕೆಟ್​ (ಎಲ್​ಎಲ್​ಸಿ) ಮೂರನೇ ಸೀಸನ್​ ಆರಂಭವಾಗಲಿದ್ದು, ಅದರ ಅಂತಿಮ ಚರಣದ ಪಂದ್ಯಗಳು ಕಣಿವೆ ರಾಜ್ಯದಲ್ಲಿ ನಡೆಯಲಿವೆ. ಅಕ್ಟೋಬರ್​ 9 ರಿಂದ ಅಕ್ಟೋಬರ್​ 16ರ ವರೆಗೆ ಕ್ವಾಲಿಫೈಯರ್, ಸೆಮಿಫೈನಲ್​ ಮತ್ತು ಫೈನಲ್​ ಸೇರಿ 7 ಪಂದ್ಯಗಳು ಶ್ರೀನಗರದ ಬಕ್ಷಿ ಕ್ರೀಡಾಂಗಣದಲ್ಲಿ ಜರುಗಲಿವೆ. ಯೂನಿವರ್ಸ್​ ಬಾಸ್​ ಕ್ರಿಸ್​ಗೇಲ್​, ಭಾರತದ ಲೆಜೆಂಡರಿ ಕ್ರಿಕೆಟಿಗರಾದ ಶಿಖರ್​ ಧವನ್​, ದಿನೇಶ್​ ಕಾರ್ತಿಕ್​ ಸುರೇಶ್​ ರೈನಾ ಸೇರಿದಂತೆ ಹಲವರ ಆಟವನ್ನು ನೋಡಬಹುದಾಗಿದೆ.

4 ದಶಕದ ಬಳಿಕ ಕ್ರಿಕೆಟ್​ ಪಂದ್ಯ: ಈ ಬಗ್ಗೆ ಮಾಧ್ಯಮಗೋಷ್ಟಿ ನಡೆಸಿ ಮಾಹಿತಿ ನೀಡಿದ ಎಲ್‌ಎಲ್‌ಸಿಯ ಸಹ ಸಂಸ್ಥಾಪಕ ರಮಣ್ ರಹೇಜಾ, ಸುಮಾರು ನಾಲ್ಕು ದಶಕಗಳ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ ಟೂರ್ನಿಯೊಂದು ಕಾಶ್ಮೀರದಲ್ಲಿ ನಡೆಯಲಿದೆ. ಶ್ರೀನಗರದ ಬಕ್ಷಿ ಕ್ರೀಡಾಂಗಣವು ಇದಕ್ಕೆ ಸಾಕ್ಷಿಯಾಗಲಿದೆ. ಲೆಜೆಂಡ್ಸ್ ಲೀಗ್ ಕ್ರಿಕೆಟ್​ (LLC) ಪಂದ್ಯಾವಳಿಯ ಅಂತಿಮ ಪಂದ್ಯಗಳನ್ನು ಇಲ್ಲಿ ಆಯೋಜಿಸಲಾಗುತ್ತಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ತಾರೆಗಳು ಇಲ್ಲಿಗೆ ಬರಲಿದ್ದಾರೆ ಎಂದರು.

ಎಲ್​ಎಲ್​ಸಿಯ ಮೂರನೇ ಋತುವಿನಲ್ಲಿ ಪಾಕಿಸ್ತಾನದ ಕ್ರಿಕೆಟಿಗರನ್ನು ಹೊರತುಪಡಿಸಿ 30 ದೇಶಗಳ ಸುಮಾರು 124 ಕ್ರಿಕೆಟಿಗರು ಭಾಗವಹಿಸಲಿದ್ದಾರೆ. ಶ್ರೀಲಂಕಾದ ಉಪುಲ್ ತರಂಗ, ತಿಲಕರತ್ನೆ ದಿಲ್ಶನ್, ಭಾರತದ ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ಇಂಗ್ಲೆಂಡ್​ನ ಇಯಾನ್ ಬೆಲ್ ಮತ್ತಿತರರು ಭಾಗವಹಿಸುವ ನಿರೀಕ್ಷೆಯಿದೆ. ಪಂದ್ಯಾವಳಿಯನ್ನು ಪ್ರಮುಖ ನಾಲ್ಕು ನಗರಗಳಲ್ಲಿ ನಡೆಸಲಾಗುತ್ತಿದೆ. ಒಟ್ಟು 25 ಪಂದ್ಯಗಳು ಇರಲಿವೆ. ಅಕ್ಟೋಬರ್ 16 ರಂದು ಶ್ರೀನಗರದ ಬಕ್ಷಿ ಕ್ರೀಡಾಂಗಣದಲ್ಲಿ ಫೈನಲ್​ ಪಂದ್ಯ ನಡೆಯಲಿದೆ ಎಂದು ವಿವರಿಸಿದರು.

ಭಾಗವಹಿಸುವ ತಂಡಗಳು: ಜಮ್ಮುವಿನ ಮೌಲಾನಾ ಆಜಾದ್ ಸ್ಟೇಡಿಯಂನಲ್ಲಿ ಕೆಲ ಪಂದ್ಯಗಳು ನಡೆಯಲಿವೆ. ನಂತರ ಶ್ರೀನಗರದಲ್ಲಿ ಮಹತ್ವದ ಪಂದ್ಯಗಳನ್ನು ಆಡಿಸಲಾಗುತ್ತಿದೆ. ಭದ್ರತಾ ವ್ಯವಸ್ಥೆಯ ಬಗ್ಗೆ ಸರ್ಕಾರವನ್ನು ಕೋರಲಾಗಿದೆ. ವಿಧಾನಸಭೆ ಚುನಾವಣೆಯ ಬೆನ್ನಲ್ಲೇ ಕ್ರಿಕೆಟ್​ ಟೂರ್ನಿ ನಡೆಸಲಾಗುತ್ತಿದೆ ಎಂದರು.

ಟೂರ್ನಿಯ ಟಿಕೆಟ್‌ಗಳು ಶೀಘ್ರದಲ್ಲೇ Paytm ನಲ್ಲಿ ಲಭ್ಯವಿರುತ್ತವೆ. ಟೂರ್ನಿಯಲ್ಲಿ ಆರು ಪ್ರಮುಖ ತಂಡಗಳಾದ ಇಂಡಿಯಾ ಕ್ಯಾಪಿಟಲ್ಸ್, ಗುಜರಾತ್ ಜೈಂಟ್ಸ್ ಮತ್ತು ಕೋನಾರ್ಕ್ ಸೂರ್ಯಸ್, ಮಣಿಪಾಲ್ ಟೈಗರ್ಸ್, ಸದರ್ನ್ ಸೂಪರ್ ಸ್ಟಾರ್ಸ್ ಮತ್ತು ಅರ್ಬನ್‌ರೈಸರ್ಸ್ ಹೈದರಾಬಾದ್ ತಂಡಗಳು ಪ್ರಶಸ್ತಿಗಾಗಿ ಹೋರಾಡಲಿವೆ. ಕ್ರಿಕೆಟ್ ಅಭಿಮಾನಿಗಳಿಗೆ ಉತ್ತಮ ರಂಜನೆ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

1980 ರ ದಶಕದಲ್ಲಿ ಕ್ರಿಕೆಟ್​ ಪಂದ್ಯಾವಳಿಯನ್ನು ಇಲ್ಲಿ ಆಡಿಸಲಾಗಿತ್ತು. ಇದಾದ ಬಳಿಕ ನಡೆಯುತ್ತಿರುವ ಮೊದಲ ಕ್ರಿಕೆಟ್​ ಟೂರ್ನಿ ಇದಾಗಿದೆ.

ಇದನ್ನೂ ಓದಿ: ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್​: ಭಾರತದ ಈ ಇಬ್ಬರು ಆಟಗಾರರಿಗೆ ಪ್ಲೇಯಿಂಗ್ ​- 11ರಲ್ಲಿ ಸ್ಥಾನ ಡೌಟ್​! - INDIA vs BANGLADESH TEST MATCH

ETV Bharat Logo

Copyright © 2024 Ushodaya Enterprises Pvt. Ltd., All Rights Reserved.