ETV Bharat / sports

ದಿಗ್ಗಜ ಬಾಕ್ಸರ್​ Mike Tyson ಸೋಲಿಸಿದ ಯೂಟ್ಯೂಬರ್​ Jake Paul: ಪಂದ್ಯವಾಡಲು ಇಬ್ಬರು ಪಡೆದ ಹಣ ಎಷ್ಟು ಗೊತ್ತಾ?

Boxing: ಎಕ್ಸಿಬಿಷನ್​ ಫೈಟ್ ಬಾಕ್ಸಿಂಗ್​ ಸ್ಪರ್ಧೆಯಲ್ಲಿ ದಿಗ್ಗಜ ಬಾಕ್ಸರ್​ ಮೈಕ್​ ಟೈಸನ್​ ಅವರನ್ನು ಯೂಟ್ಯೂಬರ್​ ಕಮ್​ ಬಾಕ್ಸರ್​ ಜೇಕ್​ ಪೌಲ್​ ಸೋಲಿಸಿದ್ದಾರೆ.

ಮೈಕ್​ ಟೈಸನ್​ ಮತ್ತು ಜೇಕ್​ ಪಾಲ್​
ಮೈಕ್​ ಟೈಸನ್​ ಮತ್ತು ಜೇಕ್​ ಪಾಲ್​ (Associated Press)
author img

By ETV Bharat Sports Team

Published : 3 hours ago

Mike Tyson vs Jake Paul: 58 ವರ್ಷದ ಲೆಜೆಂಡರಿ ಬಾಕ್ಸರ್ ಮೈಕ್ ಟೈಸನ್ ಬಾಕ್ಸಿಂಗ್​ ಸ್ಪರ್ಧೆಯಲ್ಲಿ ಸೋಲನುಭವಿಸಿದ್ದಾರೆ. ಸುಮಾರು 19 ವರ್ಷಗಳ ನಂತರ ಬಾಕ್ಸಿಂಗ್​ಗೆ ಪ್ರವೇಶಿಸಿದ್ದ ಮೈಕ್ ಟೈಸನ್ ಅವರನ್ನು ಜೇಕ್ ಪಾಲ್ ಸೋಲಿಸಿದ್ದಾರೆ. ಈ ಪಂದ್ಯದಲ್ಲಿ ಜೇಕ್ ಪಾಲ್ 74-78 ಅಂತರದಿಂದ ಮೈಕ್ ಟೈಸನ್ ಅವರನ್ನು ಸೋಲಿಸಿದರು.

ಆರಂಭಿಕ ಎರಡು ಸುತ್ತುಗಳಲ್ಲಿ ಮೈಕ್ ಟೈಸನ್ ಪ್ರಾಬಲ್ಯ ಮೆರೆದರು. ಆದರೆ ಈ ಆಟವನ್ನು ಕೊನೆಯವರೆಗೂ ಉಳಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ಇದರೊಂದಿಗೆ ಯುವ ಬಾಕ್ಸರ್​ ಜೇಕ್ ಪಾಲ್ (27 ವರ್ಷ) ಬಲಿಷ್ಠವಾಗಿ ಕಮ್​ಬ್ಯಾಕ್​ ಮಾಡಿ ಮೂರನೇ ಸುತ್ತಿನಿಂದ ಹಿಡಿತ ಸಾಧಿಸಲಾರಂಭಿಸಿದರು. ನಂತರ ಇಡೀ ಆಟದಲ್ಲಿ ಪ್ರಾಬಲ್ಯ ಸಾಧಿಸಿದರು.

8 ಸುತ್ತು: ಮೈಕ್ ಟೈಸನ್ ಮತ್ತು ಜೇಕ್ ಪಾಲ್ ನಡುವೆ ಒಟ್ಟು 8 ಸುತ್ತಿನ ಸ್ಫರ್ಧೆ ನಡೆಯಿತು. ಪೌಲ್ ಆರು ಸುತ್ತುಗಳಲ್ಲಿ ಗೆಲುವು ಸಾಧಿಸಿದರೇ, ಮೈಕ್ ಟೈಸನ್ ಕೇವಲ ಎರಡು ಸುತ್ತುಗಳಲ್ಲಿ ಗೆದ್ದು ತೃಪ್ತಿಪಟ್ಟುಕೊಂಡರು. ಇದರೊಂದಿಗೆ ಪೌಲ್ 10-9, 10-9, 9-10, 9-10, 9-10, 9-10, 9-10, 9-10 ಅಂಕಗಳಿಂದ ಜಯಭೇರಿ ಬಾರಿಸಿದರು. ಪಂದ್ಯದ ನಂತರ, ಮೈಕ್ ಟೈಸನ್ - ಯುವ ಬಾಕ್ಸರ್​ ಕಮ್​ ಯೂಟ್ಯೂಬರ್​ ಜೇಕ್​ ಪೌಲ್​ ಅವರನ್ನು ಅಭಿನಂದಿಸಿದರು. ಮೈಕ್ ಟೈಸನ್ ಕೊನೆಯ ಬಾರಿಗೆ 2005ರಲ್ಲಿ ಕೆವಿನ್ ವಿರುದ್ಧ ಸೋಲನುಭವಿಸಿದ್ದರು. ಈ ಪಂದ್ಯದ ಬಳಿಕ ಅವರು ವೃತ್ತಿಪರ ಬಾಕ್ಸಿಂಗ್‌ಗೆ ವಿದಾಯ ಹೇಳಿದ್ದರು.

ಪಂದ್ಯಕ್ಕಾಗಿ ಪಡೆದ ಹಣ: ಈ ಸ್ಪರ್ಧೆಯಲ್ಲಿ ಭಾಗವಹಿಸಿಲು ಜೇಕ್​ ಪೌಲ್ ಬರೋಬ್ಬರಿ 40 ಮಿಲಿಯನ್​ ಡಾಲರ್​ (ರೂ.337 ಕೋಟಿ) ಪಡೆದುಕೊಂಡಿದ್ದು, ಟೈಸನ್ ರೂ.168 ಕೋಟಿ ಪಡೆದುಕೊಂಡಿದ್ದಾರೆ ಎಂದು ವರದಿಗಳಾಗಿವೆ.

ಯಾರು ಈ ಟೈಸನ್​: ಅಮೆರಿಕದ ಲೆಜೆಂಡರಿ ಬಾಕ್ಸರ್​ಗಳಲ್ಲಿ ಮೈಕ್ ಟೈಸನ್ ಕೂಡ ಒಬ್ಬರು. ಟೈಸನ್ 1987 ರಿಂದ 1990ರ ವರೆಗೆ ವಿಶ್ವ ಹೆವಿವೇಟ್ ಬಾಕ್ಸಿಂಗ್ ಚಾಂಪಿಯನ್ ಆಗಿ ದಾಖಲೆ ಬರೆದಿದ್ದಾರೆ. ಟೈಸನ್​ ತಮ್ಮ ವೃತ್ತಿ ಜೀವನದಲ್ಲಿ ಒಟ್ಟು 59 ಪಂದ್ಯಗಳನ್ನು ಆಡಿ ಅದರಲ್ಲಿ 50 ಬಾರಿ ಗೆಲುವು ಸಾಧಿಸಿದ್ದಾರೆ. ಎಂಟು ಬಾರಿ ಸೋಲು ಮತ್ತು ಎರಡು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದಾರೆ. ಜೇಕ್ ಪೌಲ್​ ಒಟ್ಟು 12 ಬಾಕ್ಸಿಂಗ್ ಪಂದ್ಯಗಳನ್ನು ಆಡಿದ್ದು ಇದರಲ್ಲಿ 11 ಗೆಲುವು ಮತ್ತು ಒಂದು ಸೋಲು ಕಂಡಿದ್ದಾರೆ.

ಇದನ್ನೂ ಓದಿ: ಎದುರಾಳಿ ಜ್ಯಾಕ್ ಪೌಲ್​ಗೆ ಕಪಾಳಮೋಕ್ಷ ಮಾಡಿದ ಮೈಕ್​ ಟೈಸನ್: ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.