ETV Bharat / sports

ಐಎಸ್‌ಎಸ್‌ಎಫ್ ವಿಶ್ವಕಪ್​: ಶೂಟಿಂಗ್​ನಲ್ಲಿ ಚಿನ್ನ-ಬೆಳ್ಳಿ ಪದಕಗಳಿಗೆ ಮುತ್ತಿಟ್ಟ ಭಾರತೀಯರು - ಐಎಸ್‌ಎಸ್‌ಎಫ್ ವಿಶ್ವಕಪ್

ಅಂತಾರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಶನ್‌ನ ವಿಶ್ವಕಪ್‌ನಲ್ಲಿ ಇದುವರೆಗೆ ಭಾರತದ ಆಟಗಾರರು ಅದ್ಭುತ ಪ್ರದರ್ಶನ ನೀಡಿದ್ದಾರೆ. ಈ ಸ್ಪರ್ಧೆಯಲ್ಲಿ ಅನಿಲ್ ತಕ್ಸಾಲೆ ಮತ್ತು ಉಮಾಮಹೇಶ ಮಾದಿನೇನಿ ಚಿನ್ನ ಮತ್ತು ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ.

ISSF World Cup  Uma mahesh Madineni  Anil Taksale win Gold medal  ಐಎಸ್‌ಎಸ್‌ಎಫ್ ವಿಶ್ವಕಪ್  ಚಿನ್ನ ಬೆಳ್ಳಿ ಪದಕ
ಶೂಟಿಂಗ್​ನಲ್ಲಿ ಚಿನ್ನ-ಬೆಳ್ಳಿ ಪದಕಗಳಿಗೆ ಮುತ್ತಿಟ್ಟ ಭಾರತೀಯರು
author img

By ETV Bharat Karnataka Team

Published : Feb 14, 2024, 12:26 PM IST

ನವದೆಹಲಿ: ಸ್ಪೇನ್‌ನ ಗ್ರಾನಡಾದಲ್ಲಿ ನಡೆದ ಇಂಟರ್‌ನ್ಯಾಶನಲ್ ಶೂಟಿಂಗ್ ಸ್ಪೋರ್ಟ್ ಫೆಡರೇಶನ್ (ಐಎಸ್‌ಎಸ್‌ಎಫ್) 10 ಮೀಟರ್ ವಿಶ್ವಕಪ್‌ನಲ್ಲಿ ಭಾರತ 10 ಮೀಟರ್ ಏರ್ ರೈಫಲ್ ಜೂನಿಯರ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಗೆದ್ದುಕೊಂಡಿತು.

ಮಂಗಳವಾರ ನಡೆದ ಫೈನಲ್‌ನಲ್ಲಿ ಆಯಾ ಮಹಿಳಾ ಮತ್ತು ಪುರುಷರ ವೈಯಕ್ತಿಕ ಸ್ಪರ್ಧೆಗಳಲ್ಲಿ ಪದಕಗಳನ್ನು ಗೆದ್ದಿದ್ದ ಇಶಾ ಅನಿಲ್ ತಕ್ಸಾಲೆ ಮತ್ತು ಉಮಾಮಹೇಶ್ ಮದ್ದಿನೇನಿ ಅವರು ಭಾರತೀಯ ಪಟುಗಳಾದ ಅನ್ವಿ ರಾಥೋಡ್ ಮತ್ತು ಅಭಿನವ್ ಶಾ ಅವರನ್ನು 16-8 ರಿಂದ ಸೋಲಿಸಿದರು.

ಈ ಸ್ಪರ್ಧೆಯಲ್ಲಿ ಭಾರತ ಮೂರು ಚಿನ್ನದ ಪದಕ ಸೇರಿದಂತೆ ಏಳು ಪದಕಗಳನ್ನು ಗೆದ್ದಿದೆ. ಅನ್ವಿ ಮತ್ತು ಅಭಿನವ್ ಒಟ್ಟು 629.0 ಅಂಕಗಳೊಂದಿಗೆ ಚಿನ್ನದ ಪದಕಕ್ಕೆ ಲಗ್ಗೆ ಇಟ್ಟಿದ್ದರು. ಇಶಾ ಮತ್ತು ಉಮಾ ಮಹೇಶ್ 627.4 ಅಂಕಗಳೊಂದಿಗೆ ಅವರಿಗಿಂತ ಹಿಂದಿದ್ದರು. ಇದಕ್ಕೂ ಮುನ್ನ ಮಂಗಳವಾರ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯ ಪದಕದ ಪಂದ್ಯದಲ್ಲಿ ದೃಷ್ಟಿ ಸಾಂಗ್ವಾನ್ ಮತ್ತು ಪರಾಸ್ ಖೋಲಾ ಸೋಲು ಅನುಭವಿಸಿದರು. ಈ ಜೋಡಿ ಅರ್ಹತೆಯಲ್ಲಿ ಆರನೇ ಸ್ಥಾನ ಗಳಿಸಿತು. ಜಾರ್ಜಿಯನ್ ಜೋಡಿ ಈ ಸ್ಪರ್ಧೆಯಲ್ಲಿ ಚಿನ್ನ ಮತ್ತು ಬೆಳ್ಳಿಯನ್ನು ಗೆದ್ದರು.

34 ಸದಸ್ಯರ ಭಾರತ ತಂಡ ವಿಶ್ವಕಪ್‌ನಲ್ಲಿ ಭಾಗವಹಿಸುತ್ತಿದೆ. ಈ ಸ್ಪರ್ಧೆಯಲ್ಲಿ ಎಲ್ಲಾ ದೇಶಗಳ ಜೂನಿಯರ್ ಮತ್ತು ಸೀನಿಯರ್​ಗೆ 10 ಮೀಟರ್ ಏರ್ ಗನ್ ಸ್ಪರ್ಧೆಗಳು ಮಾತ್ರ ನಡೆಯುತ್ತಿವೆ. ಭಾರತದ ಆಟಗಾರರು ಇಲ್ಲಿಯವರೆಗೆ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಮುಂದೆ ಸಾಗುತ್ತಿದ್ದಾರೆ.

ಓದಿ: ಗುರುವಾರದಿಂದ ಭಾರತ ಇಂಗ್ಲೆಂಡ್​ ಮಧ್ಯೆ ಮೂರನೇ ಟೆಸ್ಟ್​.. ರಾಜ್​ಕೋಟ್​ನಲ್ಲಿ ಟೀಂ ಇಂಡಿಯಾ ಇತಿಹಾಸ ಹೇಗಿದೆ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.