ETV Bharat / sports

ಇವೇ ನೋಡಿ ಐಪಿಎಲ್​ ಪ್ಲೇ ಆಫ್​ಗೇರಿದ ಟಾಪ್​ ನಾಲ್ಕು ತಂಡಗಳು: ಯಾವಾಗಿಂದ ಪ್ರಶಸ್ತಿ ಸುತ್ತಿನ ಹೋರಾಟ? - qualify matches - QUALIFY MATCHES

ಐಪಿಎಲ್​ನಲ್ಲಿ ಪ್ಲೇಆಫ್​ಗೆ ಟಾಪ್​ ನಾಲ್ಕು ತಂಡಗಳು ಲಗ್ಗೆ ಇಟ್ಟಿದ್ದು, ನಾಳೆಯಿಂದ ನಾಲ್ಕರ ಘಟ್ಟದ ಮಹತ್ವದ ಪಂದ್ಯಗಳು ಆರಂಭವಾಗಲಿವೆ. ಪಂದ್ಯಗಳ ಪೂರ್ಣ ಮಾಹಿತಿ ಇಲ್ಲಿದೆ.

ಐಪಿಎಲ್​ ಪ್ಲೇಆಫ್​ಗೇರಿದ ಟಾಪ್​ ನಾಲ್ಕು ತಂಡಗಳು
ಐಪಿಎಲ್​ ಪ್ಲೇಆಫ್​ಗೇರಿದ ಟಾಪ್​ ನಾಲ್ಕು ತಂಡಗಳು (Source: Associated Press)
author img

By ETV Bharat Karnataka Team

Published : May 20, 2024, 6:52 PM IST

ಹೈದರಾಬಾದ್: ಕಳೆದ 2 ತಿಂಗಳಿನಿಂದ ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣ ನೀಡುತ್ತಾ ಬಂದಿರುವ 2024 ರ ಐಪಿಎಲ್​ ಹಂಗಾಮ ಕೊನೆಯ ಘಟ್ಟಕ್ಕೆ ತಲುಪಿದೆ. ಲೀಗ್​ ಎಲ್ಲ 70 ಪಂದ್ಯಗಳು ಮಕ್ತಾಯಗೊಂಡಿದ್ದು, ಟಾಪ್​ 4 ತಂಡಗಳು ಪ್ಲೇಆಫ್​ನಲ್ಲಿ ಸ್ಥಾನ ಭದ್ರ ಮಾಡಿಕೊಂಡಿವೆ.

ಮಾರ್ಚ್​ 22 ರಿಂದ ಆರಂಭವಾಗಿದ್ದ ಐಪಿಎಲ್​ ಕ್ರೀಡಾಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿದೆ. ಟೂರ್ನಿಯಲ್ಲಿ ಭಾಗವಹಿಸಿದ್ದ 10 ತಂಡಗಳ ಪೈಕಿ 4 ಟೀಮ್​ಗಳು ಟ್ರೋಫಿ ಸನಿಹಕ್ಕೆ ಬಂದಿವೆ. ನಾಳೆಯಿಂದ ಕ್ವಾಲಿಫೈಯರ್​ ಪಂದ್ಯಗಳು ಆರಂಭವಾಗಲಿವೆ.

ಹೀಗಿದೆ ಫೈನಲ್​ ಹಾದಿ: ಕೋಲ್ಕತ್ತಾ ನೈಟ್​ ರೈಡರ್ಸ್​, ಸನ್​ರೈಸರ್ಸ್​ ಹೈದರಾಬಾದ್​, ರಾಜಸ್ಥಾನ ರಾಯಲ್ಸ್​, ಬೆಂಗಳೂರು ರಾಯಲ್​ ಚಾಲೆಂಜರ್ಸ್​ ತಂಡಗಳು ಪ್ಲೇಆಫ್​ಗೇರಿವೆ. ಇದರಲ್ಲಿ ಮೊದಲ ಕ್ವಾಲಿಫೈಯರ್​ ಪಂದ್ಯ ಮೇ 21 ರಂದು ಕೋಲ್ಕತ್ತಾ ನೈಟ್​ ರೈಡರ್ಸ್​ v/s ಸನ್​ರೈಸರ್ಸ್​ ಹೈದರಾಬಾದ್​ ನಡುವೆ ಗುಜರಾತ್​ನ ಅಹಮದಾಬಾದ್​ನಲ್ಲಿ ನಡೆಯಲಿದೆ.

ಎಲಿಮಿನೇಟರ್​ ಪಂದ್ಯದಲ್ಲಿ ಪಾಯಿಂಟ್​​ ಪಟ್ಟಿಯಲ್ಲಿ ಮೂರನೇ ಮತ್ತು ನಾಲ್ಕನೇ ಸ್ಥಾನ ಪಡೆದ ರಾಜಸ್ಥಾನ ರಾಯಲ್ಸ್​, ಬೆಂಗಳೂರು ರಾಯಲ್​ ಚಾಲೆಂಜರ್ಸ್​ ತಂಡಗಳು ಎದುರಾಗಲಿವೆ. ಈ ಪಂದ್ಯ ಮೇ 22 ರಂದು ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಜರುಗಲಿದೆ.

ಮೊದಲ ಕ್ವಾಲಿಫೈಯರ್​ ಗೆದ್ದ ತಂಡ ನೇರವಾಗಿ ಫೈನಲ್​ಗೆ ಲಗ್ಗೆ ಇಟ್ಟರೆ, ಸೋತ ತಂಡಕ್ಕೆ ಇನ್ನೊಂದು ಅವಕಾಶ ಇರಲಿದೆ. ಅಂದರೆ, 2ನೇ ಕ್ವಾಲಿಫೈಯರ್​ ಪಂದ್ಯವಾಡಲಿದೆ. ಇತ್ತ ಎಲಿಮಿನೇಟರ್​ ಪಂದ್ಯದಲ್ಲಿ ಗೆದ್ದ ತಂಡ ಕ್ವಾಲಿಫೈಯರ್​ 2 ಹಂತಕ್ಕೆ ತಲುಪಿದರೆ, ಸೋತ ತಂಡ ಟೂರ್ನಿಯಿಂದ ಹೊರಬೀಳಲಿದೆ. ಎರಡನೇ ಕ್ವಾಲಿಫೈಯರ್​ ಪಂದ್ಯ ಮೇ 24 ರಂದು ಚೆನ್ನೈನ ಚೆಪಾಕ್​ ಕ್ರೀಡಾಂಗಣದಲ್ಲಿ ನಡೆಯಲಿದೆ.

2ನೇ ಕ್ವಾಲಿಫೈಯರ್​ ಹೈದರಾಬಾದ್​ ಅಥವಾ ಕೋಲ್ಕತ್ತಾ ತಂಡಗಳ ಪೈಕಿ ಒಂದು ತಂಡ ಆಡುವುದು ಪಕ್ಕಾ. ಇಲ್ಲಿ ಎದುರಾಳಿಯಾಗಿ ಆರ್​ಸಿಬಿ ಹಾಗೂ ರಾಜಸ್ಥಾನಗಳಲ್ಲಿ ಯಾವ ತಂಡ ಇರಲಿದೆ ಎಂಬುದು ಕುತೂಹಲಕರ ಪ್ರಶ್ನೆಯಾಗಿದೆ. ಇನ್ನೂ, ಕ್ರಿಕೆಟ್​ ಲೋಕವೇ ಎದುರು ನೋಡುತ್ತಿರುವ ಫೈನಲ್​ ಪಂದ್ಯ ಚೆನ್ನೈನಲ್ಲಿ ಮೇ 26 ರಂದು ನಡೆಯಲಿದೆ.

ತಂಡ ಹೋರಾಟ ಹೀಗಿತ್ತು: ಪ್ಲೇಆಫ್​ಗೆ ಮೊದಲ ತಂಡವಾಗಿ ಲಗ್ಗೆ ಇಟ್ಟಿದ್ದು ಕೆಕೆಆರ್​. ಆಡಿದ 14 ಪಂದ್ಯಗಳಲ್ಲಿ 9 ಗೆದ್ದು, 3 ರಲ್ಲಿ ಸೋತಿದೆ. 1 ಫಲಿತಾಂ ಬಂದಿಲ್ಲ. 20 ಅಂಕಗಳೊಂದಿಗೆ ಪಾಯಿಂಟ್ಸ್​ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. 17 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿರುವ ಸನ್​ರೈಸರ್ಸ್​ ಹೈದರಾಬಾದ್​ 14 ರಲ್ಲಿ 8 ಗೆದ್ದು, 5 ರಲ್ಲಿ ಸೋತಿದೆ. 1 ಪಂದ್ಯ ಮಳೆಗೆ ಆಹುತಿಯಾಗಿದೆ. ಮೂರನೇ ತಂಡವಾಗಿ ಪ್ಲೇಆಫ್​ಗೆ ಬಂದಿದೆ.

2ನೇ ತಂಡವಾಗಿ ಪ್ಲೇಆಫ್​ಗೇರಿದ ರಾಜಸ್ಥಾನ ರಾಯಲ್ಸ್​​ ಆಡಿದ 14 ಪಂದ್ಯಗಳಲ್ಲಿ 8 ಗೆಲುವು, 5 ಸೋಲಿನೊಂದಿಗೆ 17 ಅಂಕ ಹೊಂದಿದೆ ನೆಟ್​ರನ್​ರೇಟ್​ ಆಧಾರದಲ್ಲಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇನ್ನು ಟೂರ್ನಿಯಲ್ಲಿ ಪವಾಡಗಳನ್ನು ಸೃಷ್ಟಿಸುತ್ತಾ ಅಚ್ಚರಿಯ ರೀತಿಯಲ್ಲಿ ನಾಲ್ಕರ ಹಂತಕ್ಕೆ ಏರಿರುವ ಆರ್​ಸಿಬಿ 14 ರಲ್ಲಿ ತಲಾ 7 ಗೆಲುವು, ಸೋಲಿನೊಂದಿಗೆ 14 ಅಂಕ ಹೊಂದಿದೆ.

ಇದನ್ನೂ ಓದಿ: "ಅಂದು ಟೀಕಿಸಿದವರಿಂದಲೇ ಇಂದು ಹೊಗಳಿಕೆ": ಒಂದೇ ರಾತ್ರಿಯಲ್ಲಿ ಹೀರೋ ಆದ ಯಶ್​ ದಯಾಳ್​ - Yash Dayal

ETV Bharat Logo

Copyright © 2025 Ushodaya Enterprises Pvt. Ltd., All Rights Reserved.