ETV Bharat / sports

ಟಿ20 ಇತಿಹಾಸದಲ್ಲಿ ದಾಖಲೆ ರನ್​ ಚಚ್ಚಿದ ಹೈದರಾಬಾದ್: ಆರ್​ಸಿಬಿಗೆ 6ನೇ ಸೋಲು, ಫ್ಲೇ ಆಫ್​ ಕನಸು ಭಗ್ನ? - RCB vs SH result - RCB VS SH RESULT

ಬ್ಯಾಟರ್​ಗಳ ಸ್ವರ್ಗವಾದ ಚಿನ್ನಸ್ವಾಮಿಯಲ್ಲಿ ಅಕ್ಷರಶಃ ರನ್​ ಮಳೆ ಸುರಿಯಿತು. ಆರ್​ಸಿಬಿ ಬೌಲರ್​ಗಳನ್ನ ಚೆಂಡಾಡಿದ ಸನ್​ರೈಸರ್ಸ್​ ಹೈದರಾಬಾದ್​ ಬ್ಯಾಟರ್​ಗಳು ಟಿ20 ಇತಿಹಾಸದಲ್ಲೇ ಅತ್ಯಧಿಕ ರನ್​ ದಾಖಲೆ ಬರೆದರು.

ಟಿ20 ಇತಿಹಾಸದಲ್ಲಿ ದಾಖಲೆ ರನ್​ ಚಚ್ಚಿದ ಹೈದರಾಬಾದ್

author img

By PTI

Published : Apr 16, 2024, 6:54 AM IST

ಬೆಂಗಳೂರು: ಗೆಲ್ಲುವ ಸಲುವಾಗಿ ಹೋರಾಟ ಮಾಡಬೇಕು. ಆದರೆ, ಸನ್​ರೈಸರ್ಸ್​ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ಸೋಲಿನ ಅಂತರವನ್ನು ಕಡಿಮೆ ತಗ್ಗಿಸಿಕೊಳ್ಳಲು ಹೋರಾಟ ನಡೆಸಿತು. ಅದರಲ್ಲಿ ತುಸು ಯಶಸ್ಸು ಕಂಡು 25 ರನ್​ಗಳಿಂದ ಪರಾಜಯ ಕಂಡಿತು. ಐಪಿಎಲ್​ನಲ್ಲಿ ಇದು ತಂಡಕ್ಕೆ 6ನೇ ಸೋಲು.

ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ರನ್​ ಮಳೆಯೇ ಹರಿಯಿತು. ಹೈದರಾಬಾದ್​ ತಂಡ ತನ್ನ ದಾಖಲೆಯನ್ನು ಮತ್ತಷ್ಟು ಉತ್ತಮಪಡಿಸಿಕೊಂಡು, ಐಪಿಎಲ್​ ಇತಿಹಾಸದಲ್ಲಿ ಮತ್ತೊಂದು ಚಾರಿತ್ರಿಕ ಸಾಧನೆ ಮಾಡಿತು. ಆರ್​ಸಿಬಿ ಕೂಡ ತನ್ನ 2ನೇ ಅತ್ಯಧಿಕ ರನ್​ ಕೂಡ ದಾಖಲಿಸಿತು. ಪಂದ್ಯದಲ್ಲಿ ಹಲವು ದಾಖಲೆಗಳು ಸೃಷ್ಟಿಯಾದವು.

ಚಿನ್ನಸ್ವಾಮಿಯಲ್ಲಿ 'ಸನ್​'ರೈಸ್​: ಆರ್​ಸಿಬಿ ಬೌಲರ್​ಗಳು ಮತ್ತೆ ದಂಡಿಸಿಕೊಳ್ಳಲಿದ್ದಾರೆ ಎಂಬ ನಿರೀಕ್ಷೆಯು ಹುಸಿಯಾಗಲಿಲ್ಲ. ಚಿಕ್ಕದಾದ ಕ್ರೀಡಾಂಗಣದಲ್ಲಿ ತನ್ನ ಬ್ಯಾಲಿಂಗ್​ ಬಲವನ್ನ ತೋರಿಸಿದ ಸನ್​ರೈಸರ್ಸ್​ ಹೈದರಾಬಾದ್​ ದಾಖಲೆಯ ಶಿಖರ ಕಟ್ಟಿತು. ಆರಂಭಿಕರಾದ ಟ್ರೇವಿಸ್​ ಹೆಡ್ ಮತ್ತು ಅಭಿಷೇಕ್​ ಶರ್ಮಾ ಪವರ್​ಪ್ಲೇ ಮುಗಿಯುವ ಹೊತ್ತಿಗೆ 76 ರನ್​ ಸಿಡಿಸಿ ತಂಡದ ಗುರಿಯನ್ನ ಸೆಟ್​ ಮಾಡಿದ್ದರು. 8ನೇ ಓವರ್​ಗಳಲ್ಲಿ 100 ರನ್​ ದಾಟಿತು.

ಆರ್​ಸಿಬಿ ಬೌಲರ್​ಗಳನ್ನು ಚೆಂಡಾಡಿದ ಹೆಡ್​ 41 ಎಸೆತಗಳಲ್ಲಿ ಭರ್ಜರಿ ಶತಕ ಸಾಧನೆ ಮಾಡಿದರು. ಅವರ ಇನಿಂಗ್ಸ್​ನಲ್ಲಿ 8 ಸಿಕ್ಸರ್​, 9 ಬೌಂಡರಿಗಳು ಇದ್ದಿದ್ದು ಬಿರುಗಾಳಿ ಬ್ಯಾಟಿಂಗ್​ಗೆ ಸಾಕ್ಷಿಯಾಗಿದ್ದವು. ಅಭಿಷೇಕ್​ ಶರ್ಮಾ 34 ರನ್​ಗೆ ಔಟಾದ ಬಳಿಕ ಬಂದ ಹೆನ್ರಿಕ್​ ಕ್ಲಾಸಿನ್​ ತಾನೂ ಕಡಿಮೆ ಇಲ್ಲ ಎಂಬಂತೆ ಬ್ಯಾಟ್​ ಬೀಸಿ 31 ಎಸೆತಗಲ್ಲಿ 7 ಸಿಕ್ಸರ್​, 2 ಬೌಂಡರಿ ಸಮೇತ 67 ರನ್​ ಚಚ್ಚಿದರು. ಕೊನೆಯಲ್ಲಿ ಆ್ಯಡಂ​ ಮಾರ್ಕ್ರಮ್​ 32, ಅಬ್ದುಲ್ ಸಮದ್​​ 37 ರನ್​ ಚಚ್ಚಿ ಆರ್​ಸಿಬಿ ಬೌಲರ್​ಗಳ ಮೇಲೆ ಕರುಣೆಯನ್ನೂ ತೋರಿಸಲಿಲ್ಲ.

ದಾಖಲೆ ಮರುಸ್ಥಾಪನೆ: ಕೆಲವೇ ದಿನಗಳ ಹಿಂದಷ್ಟೇ ಮುಂಬೈ ಇಂಡಿಯನ್ಸ್ ವಿರುದ್ಧ ಐಪಿಎಲ್​ ಇತಿಹಾಸದಲ್ಲೇ ಅತ್ಯಧಿಕ ರನ್​ ಗಳಿಸಿ ದಾಖಲೆ ಬರೆದಿದ್ದ ಸನ್​ರೈಸರ್ಸ್​ ಹೈದರಾಬಾದ್​, ಆರ್​ಸಿಬಿ ಎದುರು ತನ್ನ ದಾಖಲೆಯನ್ನು ಮತ್ತಷ್ಟು ವಿಸ್ತರಿಸಿತು. 20 ಓವರ್​ಗಳಲ್ಲಿ 3 ವಿಕೆಟ್​ಗೆ 287 ರನ್​ ಗಳಿಸಿ ಚಾರಿತ್ರಿಕ ದಾಖಲೆ ಮಾಡಿತು. ಇದಕ್ಕೂ ಮೊದಲೇ ಇದೇ ತಂಡ 277 ರನ್​ ಗಳಿಸಿತ್ತು. ಎರಡೂ ಅತ್ಯಧಿಕ ರನ್​ ದಾಖಲೆ ಈ ತಂಡದ ಹೆಸರಿನಲ್ಲಿದೆ.

ಸೋಲಿನಲ್ಲೂ ಆರ್​ಸಿಬಿ ಹೋರಾಟ: ಎದುರಿರುವ ಅಸಾಧ್ಯ ಗುರಿ ಕಂಡಾಗಲೇ ಸೋಲು ಖಚಿತವಾಗಿದ್ದರೂ, ಹೋರಾಟ ನಡೆಸಿದ ಆರ್​ಸಿಬಿ 7 ವಿಕೆಟ್​ಗೆ 262 ರನ್​ ಗಳಿಸಿತು. ಈ ಆವೃತ್ತಿಯಲ್ಲಿ ಮೊದಲ ಬಾರಿಗೆ ಬಿರುಸಿನ ಬ್ಯಾಟ್ ಮಾಡಿದ ವಿರಾಟ್​ ಕೊಹ್ಲಿ ಮತ್ತು ನಾಯಕ ಡುಪ್ಲೆಸಿಸ್​ ಪವರ್​ಪ್ಲೇಯ 6 ಓವರ್​ಗಳಲ್ಲಿ 79 ರನ್​ ಚಚ್ಚಿದರು. ನಂತರದ ಓವರ್​ನಲ್ಲಿ ವಿರಾಟ್​ ದೊಡ್ಡ ಹೊಡೆತಕ್ಕೆ ಕೈ ಹಾಕಿ ಔಟಾದರು. ಬಳಿಕ ಸಹಜ ಎಂಬಂತೆ ಮಧ್ಯಮ ಕ್ರಮಾಂಕದ ಆಟಗಾರರು ವಿರಾಟ್​ ಕೊಹ್ಲಿ ಜೊತೆಗೂಡಿ ಪೆವಿಲಿಯನ್​ಗೆ ಹೆಜ್ಜೆಹಾಕಿದರು.

ತಂಡ ಸೋಲಿನ ದವಡೆಗೆ ಸಿಲುಕಿದ್ದರೂ ದಿಟ್ಟ ಹೋರಾಟ ನಡೆಸಿ ನಾಯಕ ಪ್ಲೆಸಿಸ್​ 28 ಎಸೆತಗಳಲ್ಲಿ 62 ರನ್​ ಮಾಡಿದರೆ, ಫಿನಿಶಿಂಗ್​ ಸ್ಟಾರ್ ದಿನೇಶ್​ ಕಾರ್ತಿಕ್​ ಅಬ್ಬರಿಸಿದರು. 35 ಎಸೆತಗಳಲ್ಲಿ 83 ರನ್​ ಗಳಿಸಿದ ಕಾರ್ತಿಕ್​ 7 ಸಿಕ್ಸರ್, 5 ಬೌಂಡರಿ ಬಾರಿಸಿದರು. ಅನುಜ್​ ರಾವತ್​ ಕೊನೆಯಲ್ಲಿ 25 ರನ್​ ಮಾಡಿ ಸೋಲಿನ ಅಂತರವನ್ನು ತುಸು ಕಡಿಮೆ ಮಾಡಿದರು. 6ನೇ ಸೋಲು ಕಾಣುವ ಮೂಲಕ ತಂಡ ಪ್ಲೇ ಆಫ್​ನಿಂದ ಬಹುತೇಕ ಹೊರಬಿದ್ದಂತಾಗಿದೆ. ಎಂಟರಘಟ್ಟಕ್ಕೆ ತಲುಪಬೇಕಾದರೆ ಪವಾಡವೇ ನಡೆಯಬೇಕು.

ಇತರ ದಾಖಲೆಗಳು: ಇನ್ನೂ ಪಂದ್ಯದಲ್ಲಿ ಹಲವು ದಾಖಲೆಗಳು ರಚನೆಯಾದವು. ಐಪಿಎಲ್​ ಟೂರ್ನಿಯಲ್ಲಿ ಕಡಿಮೆ ರನ್​ ಗಳಿಸಿದ (48) ಮತ್ತು ಅತ್ಯಧಿಕ ರನ್​ ಬಿಟ್ಟುಕೊಟ್ಟ (287) ರನ್​ ಬಿಟ್ಟುಕೊಟ್ಟ ತಂಡ ಎಂಬ ಕುಖ್ಯಾತಿಗೆ ಆರ್​ಸಿಬಿ ಪಾತ್ರವಾಯಿತು. ಒಂದೇ ಪಂದ್ಯದಲ್ಲಿ 2ನೇ ಸಲ 38 ಸಿಕ್ಸರ್​ ದಾಖಲಾದವು. ಆರ್​ಸಿಬಿಯ 4 ಬೌಲರ್​ಗಳು 50 ಕ್ಕೂ ಅಧಿಕ ರನ್​ ಬಿಟ್ಟುಕೊಟ್ಟರು. ತಜ್ಞ ಬೌಲರ್​ಗಳು ಈ ಸಾಧನೆ ಮಾಡಿದ್ದು ಇದೇ ಮೊದಲು. ಪಂದ್ಯವೊಂದರಲ್ಲಿ 549 ರನ್​ ದಾಖಲಾದವು. ಐಪಿಎಲ್​ ಜೊತೆಗೆ ಟಿ -20 ಇತಿಹಾಸದಲ್ಲೇ ಅತ್ಯಧಿಕ ಮೊತ್ತವಾಗಿದೆ. ಈ ಹಿಂದೆ ಮುಂಬೈ ಮತ್ತು ಹೈದರಾಬಾದ್​ ನಡುವಿನ ಪಂದ್ಯದಲ್ಲಿ 523 ರನ್​ ದಾಖಲಾಗಿದ್ದವು.

ಇದನ್ನೂ ಓದಿ: IPL ಇತಿಹಾಸದಲ್ಲೇ ಹೊಸ ದಾಖಲೆ! ರನ್ ಹೊಳೆ ಹರಿಸಿದ ಹೈದರಾಬಾದ್‌; ಆರ್​ಸಿಬಿಗೆ 287 ರನ್​ ಗುರಿ​! - RCB Vs SRH

ETV Bharat Logo

Copyright © 2024 Ushodaya Enterprises Pvt. Ltd., All Rights Reserved.