ETV Bharat / sports

ರಾಜಸ್ಥಾನ ವಿರುದ್ಧ 1 ರನ್​​​​​ ರೋಚಕ ಜಯ ದಾಖಲಿಸಿದ ಹೈದರಾಬಾದ್ - RR Vs SRH - RR VS SRH

ತೀವ್ರ ಕುತೂಹಲ ಮೂಡಿಸಿದ್ದ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ಹೈದರಾಬಾದ್ ಸನ್​ರೈಸರ್ಸ್ ಟೀಂ 1 ರನ್​ನಿಂದ ಗೆಲುವು ದಾಖಲಿಸಿದೆ.

ರಾಜಸ್ಥಾನ ವಿರುದ್ಧ 1 ರನ್​​​​​ ರೋಚಕ ಜಯ ದಾಖಲಿಸಿದ ಹೈದರಾಬಾದ್
ರಾಜಸ್ಥಾನ ವಿರುದ್ಧ 1 ರನ್​​​​​ ರೋಚಕ ಜಯ ದಾಖಲಿಸಿದ ಹೈದರಾಬಾದ್ (Etv Bharat)
author img

By ETV Bharat Karnataka Team

Published : May 3, 2024, 6:59 AM IST

ಹೈದರಾಬಾದ್‌: ಐಪಿಎಲ್​ನ ಮತ್ತೊಂದು ಪಂದ್ಯ ಭಾರೀ ರೋಚಕ ಅನುಭವಕ್ಕೆ ಸಾಕ್ಷಿಯಾಯಿತು. ಕೊನೆಯ ಎಸೆತದವರೆಗೂ ತೀವ್ರ ಕುತೂಹಲ ಮೂಡಿಸಿದ್ದ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವು 1 ರನ್​ನಿಂದ ರಾಜಸ್ಥಾನ ರಾಯಲ್ ತಂಡದ ವಿರುದ್ಧ ಜಯ ಸಾಧಿಸಿತು.

ಗುರುವಾರ ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಸನ್​ ರೈಸರ್ಸ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಆರಂಭಿಕರಾಗಿ ಆಗಮಿಸಿದ ಟ್ರಾವಿಸ್ ಹೆಡ್‌ ಮತ್ತು ಅಭಿಷೇಕ್ ಶರ್ಮಾ ಉತ್ತಮ ಅಡಿಪಾಯ ಹಾಕಲಿಲ್ಲ. 12 ರನ್ ಗಳಿಸಿ ಶರ್ಮಾ ಆವೇಶ್ ಖಾನ್​ಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಬಳಿಕ ಬಂದ ಅನ್ಮೋಲ್ ಪ್ರೀತ್ ಸಿಂಗ್ ಕೂಡ ಕೇವಲ 5 ರನ್​ಗಳಿಸಿ ವಿಕೆಟ್​ ನೀಡಿದರು.

ಬಳಿಕ ಹೆಡ್​ಗೆ ನಿತೀಶ್ ರೆಡ್ಡಿ ಜೊತೆಯಾಗಿ ಉತ್ತಮ ಸ್ಕೋರ್ ಪೇರಿಸಿದರು. ಹೆಡ್​ (58 ರನ್: 4x6, 6x3) ಗಳಿಸಿ ಔಟಾದರು. ಬಳಿಕ ಕ್ಲಾಸೇನ್, ನಿತೀಶ್ ಕುಮಾರ್ ರೆಡ್ಡಿ ಜೊತೆಯಾಗಿ 19 ಎಸೆತದಲ್ಲಿ 42 ರನ್ ಗಳಿಸಿದರು. ಕ್ರೀಸ್​ನಲ್ಲಿ ಕೊನೆಯವರೆಗೂ ಗಟ್ಟಿಯಾಗಿ ನಿಂತು ಬೌಲರ್​ಗಳನ್ನು ದಂಡಿಸಿದ ನಿತೀಶ್ ಕುಮಾರ್ (76: 4x3, 6x8) ಅರ್ಧ ಶತಕ ಸಿಡಿಸಿದರು. ಸನ್‌ರೈಸರ್ಸ್‌ ಮೂರು ವಿಕೆಟ್‌ಗೆ 201 ರನ್‌ ಕಲೆಹಾಕಿತು.

ಈ ಗುರಿ ಬೆನ್ನತ್ತಿದ ರಾಜಸ್ಥಾನ ತಂಡಕ್ಕೆ ಭುವನೇಶ್ವರ ಕುಮಾರ್‌ ಮೊದಲ ಓವರ್​ನಲ್ಲೇ ಆಘಾತ ನೀಡಿದರು. ತಂಡದ ಸ್ಕೋರ್ ಒಂದು ರನ್‌ ಆಗುವಷ್ಟರಲ್ಲಿ ಆರಂಭಿಕರಾದ ಜೋಸ್‌ ಬಟ್ಲರ್‌ ಮತ್ತು ನಾಯಕ ಸಂಜು ಸ್ಯಾಮ್ಸನ್‌ ಅವರನ್ನು ಶೂನ್ಯಕ್ಕೆ ಪೆವಿಲಿಯನ್​ಗೆ ಕಳುಹಿಸಿದರು. ಆರಂಭದಲ್ಲಿ ವಿಕೆಟ್ ಕಳೆದುಕೊಂಡರೂ ಕೂಡ ಯಶಸ್ವಿ ಜೈಸ್ವಾಲ್ (67ರನ್: 4x7, 6x2) ಮತ್ತು ರಿಯಾನ್‌ ಪರಾಗ್‌ (77 ರನ್: 4x8, 6x4) ಅದ್ಭುತ ಜೊತೆಯಾಟದಲ್ಲಿ 134 ರನ್‌ ಸೇರಿಸಿ, ತಂಡವನ್ನು ಗೆಲುವಿನ ದಂಡೆಗೆ ಕೊಂಡೊಯ್ಯಲು ಯತ್ನಿಸಿದರು.

ಇದನ್ನೂ ಓದಿ: ಟಿ20 ವಿಶ್ವಕಪ್​ ಮಾದರಿ ಹೇಗಿರಲಿದೆ? ಟೀಂ ಇಂಡಿಯಾದ ಅಭಿಯಾನ ಯಾವಾಗ ಶುರು? - T20 World Cup

ಕ್ರೀಸ್​ನಲ್ಲಿ ಭದ್ರವಾಗಿ ನಿಂತಿದ್ದ ಜೈಸ್ವಾಲ್ ಮತ್ತು ಪರಾಗ್ ಔಟಾದ ಬಳಿಕ ಬಳಿಕ. ಶಿಮ್ರಾನ್ ಹೆಟ್ಮೆಯರ್ (13) ಮತ್ತು ಧ್ರುವ್‌ ಜುರೇಲ್‌ (1) ಹೆಚ್ಚು ಹೊತ್ತು ನಿಲ್ಲದೆ ನಿರಾಸೆ ಮೂಡಿಸಿದರು. ಕೊನೆಯಲ್ಲಿರೋವ್ಮನ್ ಪೊವೆಲ್‌ 15 ಎಸೆತದಲ್ಲಿ 27 ರನ್ ಸಿಡಿಸಿ ಜಯಕ್ಕೆ ಹೋರಾಡಿದರೂ ಸಾಧ್ಯವಾಗಲಿಲ್ಲ.

ಕೊನೆಯ ಎರಡು ಓವರ್‌ಗಳಲ್ಲಿ ಆರ್​ಆರ್ ಗೆಲುವಿಗೆ 20 ರನ್‌ ಬೇಕಿತ್ತು. 19 ಓವರ್‌ ಬೌಲಿಂಗ್‌ ಮಾಡಿದ ಪ್ಯಾಟ್‌ ಕಮಿನ್ಸ್‌ ಧ್ರುವ್‌ ವಿಕೆಟ್‌ ಪಡೆದು ಕೇವಲ 7 ರನ್‌ ನೀಡಿದರು. ಕೊನೆಯ ಓವರ್​ನಲ್ಲಿ 13 ರನ್‌ ಅಗತ್ಯವಿದ್ದಾಗ ಭುವನೇಶ್ವರ್‌ ಅಚ್ಚಕಟ್ಟಾಗಿ ದಾಳಿ ಮಾಡಿದರು. ಅಂತಿಮ ಎಸೆತದಲ್ಲಿ ಗೆಲುವಿಗೆ 2 ರನ್ ಬೇಕಿದ್ದಾಗ ಸ್ಟ್ರೈಕ್‌ನಲ್ಲಿದ್ದ ರೋವ್ಮನ್ ಅವರು ಎಲ್‌ಬಿಡಬ್ಲ್ಯು ಆದರು. ಕೊನೆಯ ಎಸೆತದಲ್ಲಿ ಆರ್​ಆರ್​ ತಂಡದಿಂದ ಗೆಲುವಿನ ಹಾರವನ್ನು ಎಸ್​ಆರ್​ಹೆಚ್ ಕಿತ್ತುಕೊಂಡಿತು.

ಭುವನೇಶ್ವರ್‌ ಮೂರು ವಿಕೆಟ್‌, ಕಮಿನ್ಸ್‌ ಮತ್ತು ಟಿ. ನಟರಾಜನ್‌ ತಲಾ ಎರಡು ವಿಕೆಟ್‌ ಪಡೆದು ಎದುರಾಳಿ ತಂಡವನ್ನು ಕಟ್ಟಿಹಾಕಿದರು. ಇನ್ನು ಆರ್​ಆರ್​ನ ಆವೇಶ್ ಖಾನ್ ಎರಡು, ಸಂದೀಪ್ ಶರ್ಮಾ 1 ವಿಕೆಟ್ ಕಬಳಿಸಿದರು.

ಸಂಕ್ಷಿಪ್ತ ಸ್ಕೋರು:

ಸನ್‌ರೈಸರ್ಸ್ ಹೈದರಾಬಾದ್‌: 201/3 (20 ಓವರ್)

ರಾಜಸ್ಥಾನ ರಾಯಲ್ಸ್‌: 200/7 (20 ಓವರ್)

ಇದನ್ನೂ ಓದಿ: ಟಿ20 ವಿಶ್ವಕಪ್​ಗೆ ಆಯ್ಕೆಯಾದ ಟೀಂ ಇಂಡಿಯಾದಲ್ಲಿ IPL​ ತಂಡಗಳ ಪ್ರಾತಿನಿಧ್ಯವೆಷ್ಟು? - T20 World Cup 2024

ETV Bharat Logo

Copyright © 2024 Ushodaya Enterprises Pvt. Ltd., All Rights Reserved.