ETV Bharat / sports

ಐಪಿಎಲ್ ​2024: ಪಂದ್ಯಕ್ಕೂ ಮುನ್ನ ಹಿಮಾಚಲದ ಪ್ರಕೃತಿ ಸೊಬಗಿನಲ್ಲಿ ಮಿಂದೆದ್ದ ಆರ್​ಸಿಬಿ ಆಟಗಾರರು - IPL 2024 - IPL 2024

ಧರ್ಮಶಾಲಾದಲ್ಲಿ ಪಂಜಾಬ್​ ಎದುರಿನ ಪಂದ್ಯಕ್ಕೆ ಆರ್​ಸಿಬಿ ಸಜ್ಜಾಗುತ್ತಿದೆ. ಮಾರ್ಚ್​ 9 ರಂದು ಹಣಾಹಣಿ ನಡೆಯಲಿದೆ.

ಹಿಮಾಚಲಪ್ರದೇಶದಲ್ಲಿ ಆರ್​ಸಿಬಿ ಆಟಗಾರರು
ಹಿಮಾಚಲಪ್ರದೇಶದಲ್ಲಿ ಆರ್​ಸಿಬಿ ಆಟಗಾರರು (Source: IPL X Handle)
author img

By ETV Bharat Karnataka Team

Published : May 8, 2024, 5:54 PM IST

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್​ನ 17ನೇ ಸೀಸನ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಸೋಲಿನ ಸುಳಿಯಿಂದ ಹೊರಬಂದು, ಕಳೆದ ಮೂರು ಪಂದ್ಯಗಳಲ್ಲಿ ಗೆಲುವು ಕಂಡಿದೆ. ಈ ಮೂಲಕ ಪ್ಲೇ ಆಫ್​​ ತಲುಪಲು ಹೋರಾಟ ನಡೆಸುತ್ತಿದೆ. ಎಲ್ಲ ಅಂದುಕೊಂಡಂತೆ ನಡೆದಲ್ಲಿ ನಾಲ್ಕನೇ ತಂಡವಾಗಿ ಸ್ಥಾನ ಪಡೆಯಲಿದೆ.

ಸನ್​ರೈಸರ್ಸ್​ ಹೈದರಾಬಾದ್​, ಗುಜರಾತ್​ ಟೈಟಾನ್ಸ್​ ವಿರುದ್ಧ ಎರಡು ಸೇರಿ ಮೂರು ಪಂದ್ಯಗಳನ್ನು ಗೆದ್ದುಕೊಂಡಿದೆ. ಆಡಿದ 11 ಪಂದ್ಯಗಳಲ್ಲಿ 4 ರಲ್ಲಿ ಜಯ ಸಾಧಿಸಿ 5 ಪಾಯಿಂಟ್ಸ್​ ಹೊಂದಿದೆ. ಪ್ಲೇಆಫ್​ಗೆ ತುರುಸಿನ ಪೈಪೋಟಿ ಇದ್ದು, ಕಷ್ಟಸಾಧ್ಯ ಎಂಬಂತಾಗಿದೆ.

ಉಳಿದ ಮೂರು ಪಂದ್ಯಗಳಲ್ಲಿ ಗೆಲ್ಲಬೇಕು. ಜೊತೆಗೆ ಇತರ ತಂಡಗಳ ಫಲಿತಾಂಶ ಆರ್​ಸಿಬಿ ಪರವಾಗಿ ಬಂದಲ್ಲಿ ಮಾತ್ರ ಪ್ಲೇಆಫ್​​ಗೆ ಏರುವ ಸಾಧ್ಯತೆ ಇದೆ. ಆದರೆ, ಇದು ಅಷ್ಟು ಸುಲಭವಿಲ್ಲ. ಪವಾಡ ನಡೆಯುತ್ತಾ ಎಂಬುದನ್ನು ತಂಡ ಮತ್ತು ಅಭಿಮಾನಿಗಳು ಕಾಯುತ್ತಿದ್ದಾರೆ.

ಧರ್ಮಶಾಲಾದಲ್ಲಿ ಪಂಜಾಬ್​ ಎದುರು: ಕೊನೆಯ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಎದುರು ಗೆಲುವು ಸಾಧಿಸಿದ ಹುಮ್ಮಸ್ಸಿನಲ್ಲಿರುವ ಆರ್​ಸಿಬಿ ಧರ್ಮಶಾಲಾದಲ್ಲಿ ಪಂಜಾಬ್ ಕಿಂಗ್ಸ್ ಅನ್ನು ಮೇ 9 ರಂದು ಎದುರಿಸಲಿದೆ. ಇದಕ್ಕಾಗಿ ತಂಡ ಧರ್ಮಶಾಲಾ ತಲುಪಿದೆ. ಅಭ್ಯಾಸದ ಜೊತೆಗೆ ಆಟಗಾರರು ಹಿಮಾಚಲ ಪ್ರದೇಶದ ಪ್ರಕೃತಿ ಸೌಂದರ್ಯ ಸವಿಯುತ್ತಿದ್ದಾರೆ. ಧರ್ಮಶಾಲಾವು ಸುಂದರವಾದ ಪರ್ವತಗಳು, ಕಣಿವೆಗಳು ಮತ್ತು ಭವ್ಯವಾದ ಜಲಪಾತಗಳಿಗೆ ಹೆಸರುವಾಸಿಯಾಗಿದೆ. ಈ ಮನಮೋಹಕ ಸೊಬಗನ್ನು ತಂಡದಲ್ಲಿರುವ ವಿದೇಶಿ ಆಟಗಾರರು ಸಖತ್ ಎಂಜಾಯ್ ಮಾಡುತ್ತಿದ್ದಾರೆ.

ಮೋಜು ಮಸ್ತಿಯಲ್ಲಿ ಪ್ಲೇಯರ್ಸ್​: ಆಟಗಾರರು ಹಿಮಾಚಲದ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಿರುವ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ನಾಯಕ ಫಾಫ್ ಡು ಪ್ಲೆಸಿಸ್ ಧರ್ಮಶಾಲಾದಲ್ಲಿರುವ ಕೊಳ್ಳಗಳಲ್ಲಿ ಸ್ನಾನ ಮಾಡುತ್ತಿರುವುದು, ಆಲ್​ರೌಂಡರ್ ಕ್ಯಾಮರೂನ್ ಗ್ರೀನ್ ಕೂಡ ನೀರಿನಲ್ಲಿರುವ ಫೋಟೋ ಹಂಚಿಕೊಂಡಿದ್ದಾರೆ. ತಂಡದ ಸಿಡಿಲಮರಿ ವಿಲ್ ಜಾಕ್ಸ್​, ಗ್ರೀನ್ ಜೊತೆ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: IPL 2024, DC vs RR: ರಾಜಸ್ಥಾನ ವಿರುದ್ಧ 20 ರನ್‌ಗಳಿಂದ ಗೆದ್ದ ಡೆಲ್ಲಿ; ಪ್ಲೇ ಆಫ್ ರೇಸ್‌ನಲ್ಲಿ ಪಂತ್ ಬಳಗ - Delhi Beat Rajasthan

ETV Bharat Logo

Copyright © 2024 Ushodaya Enterprises Pvt. Ltd., All Rights Reserved.