ಅಹಮದಾಬಾದ್ (ಗುಜರಾತ್): ಲೆಗ್ ಸ್ಪಿನ್ನರ್ ರಶೀದ್ ಖಾನ್ 2024ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಗುಜರಾತ್ ಟೈಟಾನ್ಸ್ ಪರವಾಗಿ 50 ವಿಕೆಟ್ ಪಡೆದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಗುರುವಾರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುಜರಾತ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ರಶೀದ್ ಖಾನ್ ಗಮನಾರ್ಹ ಸಾಧನೆ ಮಾಡಿದ್ದಾರೆ.
37ನೇ ಐಪಿಎಲ್ ಪಂದ್ಯದಲ್ಲಿ ರಶೀದ್ ಖಾನ್ ಹೆಗ್ಗುರುತು: ರಶೀದ್ ಅವರು ಗುಜರಾತ್ ಪರವಾಗಿ ಆಡಿದ ತಮ್ಮ 37ನೇ ಐಪಿಎಲ್ ಪಂದ್ಯದಲ್ಲಿ ಈ ಹೆಗ್ಗುರುತನ್ನು ಸಾಧಿಸಿದ್ದಾರೆ. ಇನಿಂಗ್ಸ್‌ನ 15ನೇ ಓವರ್‌ನಲ್ಲಿ ಪಂಜಾಬ್ ಕಿಂಗ್ಸ್‌ನ ಬ್ಯಾಟ್ಸ್ಮನ್ ಜಿತೇಶ್ ಶರ್ಮಾ ಅವರನ್ನು ಔಟ್ ಮಾಡುವ ಮೂಲಕ ರಶೀದ್ ಖಾನ್ ಅವರು 50ನೇ ವಿಕೆಟ್ ಪಡೆದಿದ್ದಾರೆ. ಜಿತೇಶ್ ಕ್ಯಾಚ್ ಅನ್ನು ದರ್ಶನ್ ನಲ್ಕಂಡೆ ಹಿಡಿದರು. ಈ ಸಾಧನೆ ಮಾಡಿದ ರಶೀದ್ ಖಾನ್ ಅವರ ಮಾಜಿ ತಂಡ ಸನ್‌ರೈಸರ್ಸ್ ಹೈದರಾಬಾದ್ (SRH) ಮತ್ತು ಗುಜರಾತ್ ಸೇರಿದಂತೆ ಎರಡು ತಂಡಗಳ ಪರವಾಗಿ 50ಕ್ಕೂ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಎಸ್‌ಆರ್‌ಹೆಚ್ ಪರ 93 ವಿಕೆಟ್: ಎಸ್‌ಆರ್‌ಹೆಚ್‌ನಲ್ಲಿನ ಅವರ ಪ್ರಭಾವಶಾಲಿ ಪ್ರದರ್ಶನದಲ್ಲಿ, ರಶೀದ್ ಕೇವಲ 76 ಪಂದ್ಯಗಳಲ್ಲಿ 6.33ರ ಎಕಾನಮಿಯಲ್ಲಿ 93 ವಿಕೆಟ್‌ಗಳನ್ನು ಪಡೆದಿದ್ದರು. ಗಮನಾರ್ಹ ಎಂದರೆ, ಅವರು ಪ್ರಸ್ತುತ ಎಸ್‌ಆರ್‌ಹೆಚ್ ತಂಡದ ಪಟ್ಟಿಯಲ್ಲೂ ಎರಡನೇ ಅತಿ ಹೆಚ್ಚು ವಿಕೆಟ್ ಟೇಕರ್ ಆಗಿದ್ದಾರೆ. ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಅವರು 146 ವಿಕೆಟ್‌ಗಳ ಪಡೆದು ಮೊದಲ ಸ್ಥಾನದಲ್ಲಿದ್ದಾರೆ.
ರಶೀದ್ ಖಾನ್ ಗುಜರಾತ್ ತಂಡದ ಅವಿಭಾಜ್ಯ ಅಂಗ: ಅಫ್ಘಾನಿಸ್ತಾನದ ಸ್ಪಿನ್ನರ್ ಆರಂಭದಿಂದಲೂ ಗುಜರಾತ್ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಇದುವರೆಗೆ ಎರಡು ಐಪಿಎಲ್ ಪಂದ್ಯಗಳಲ್ಲಿ 50-50ರ ಸೋಲು-ಗೆಲುವಿನ ಅನುಪಾತದೊಂದಿಗೆ ತಂಡವನ್ನು ಮುನ್ನಡೆಸಿದ್ದಾರೆ. ಜೊತೆಗೆ ರಶೀದ್ ಖಾನ್ ಅವರು ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ 165.31 ರ ಪ್ರಭಾವಶಾಲಿ ಸ್ಟ್ರೈಕ್ ರೇಟ್‌ನಲ್ಲಿ ಅರ್ಧಶತಕ ಸೇರಿದಂತೆ 448 ರನ್‌ಗಳನ್ನು ಗಳಿಸಿದ್ದಾರೆ.
ಇದನ್ನೂ ಓದಿ: ಶಶಾಂಕ್, ಅಶುತೋಷ್ ನೆರವಿನಿಂದ ಗುಜರಾತ್ ವಿರುದ್ಧ ಗೆದ್ದು ಬೀಗಿದ ಪಂಜಾಬ್ - Punjab Kings Victory