ETV Bharat / sports

ಫೈನಲ್​ ತಲುಪುವ ತಂಡ ಯಾವುದು?: ಹೈದರಾಬಾದ್​ v/s ಕೋಲ್ಕತ್ತಾ ಮಧ್ಯೆ ಮೊದಲ ಕ್ವಾಲಿಫೈಯರ್​ ಫೈಟ್​ - first qualifier - FIRST QUALIFIER

ವಿಶ್ವದ ಅತಿದೊಡ್ಡ ಕ್ರೀಡಾಂಗಣದಲ್ಲಿ ಕೋಲ್ಕತ್ತಾ ಮತ್ತು ಹೈದರಾಬಾದ್​ ತಂಡಗಳು ಮೊದಲ ಕ್ವಾಲಿಫೈಯರ್​​ನಲ್ಲಿ ಮುಖಾಮುಖಿಯಾಗಲಿವೆ. ಇಲ್ಲಿ ಗೆದ್ದ ತಂಡ ನೇರವಾಗಿ ಫೈನಲ್​ಗೆ ತಲುಪಿದರೆ, ಸೋತವರಿಗೆ ಇನ್ನೊಂದು ಚಾನ್ಸ್​ ಇರಲಿದೆ.

ಹೈದರಾಬಾದ್​ v/s ಕೋಲ್ಕತ್ತಾ ಮಧ್ಯೆ ಮೊದಲ ಕ್ವಾಲಿಫೈಯರ್​ ಫೈಟ್​
ಹೈದರಾಬಾದ್​ v/s ಕೋಲ್ಕತ್ತಾ ಮಧ್ಯೆ ಮೊದಲ ಕ್ವಾಲಿಫೈಯರ್​ ಫೈಟ್​ (ETV Bharat)
author img

By ETV Bharat Karnataka Team

Published : May 20, 2024, 9:24 PM IST

ಹೈದರಾಬಾದ್​: ಐಪಿಎಲ್ 17 ನೇ ಋತುವಿನ ಲೀಗ್ ಹಂತವು ಪೂರ್ಣಗೊಂಡಿದೆ. ಇನ್ನು 4 ಪಂದ್ಯಗಳಲ್ಲಿ ಈ ಋತುವಿನ ವಿಜೇತರು ಯಾರೆಂಬುದು ನಿರ್ಧಾರವಾಗಲಿದೆ. ಚೆನ್ನೈ ತಂಡವನ್ನು ಬಗ್ಗುಬಡಿದು ರೋಚಕವಾಗಿ ಪ್ಲೇ ಆಫ್​ಗೆ ಬಂದಿರುವ ರಾಯಲ್​ ಚಾಲೆಂಜರ್ಸ್​ ಜೊತೆಗೆ ರಾಜಸ್ಥಾನ ರಾಯಲ್ಸ್​​, ಕೋಲ್ಕತ್ತಾ ನೈಟ್​ ರೈಡರ್ಸ್​, ಸನ್​ರೈಸರ್ಸ್​ ಹೈದರಾಬಾದ್​​ ತಂಡಗಳು ಪ್ರಶಸ್ತಿಗಾಗಿ ಹೋರಾಟ ನಡೆಸಲಿವೆ.

ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳಲ್ಲಿರುವ ಕೋಲ್ಕತ್ತಾ ನೈಟ್​ ರೈಡರ್ಸ್​ ಮತ್ತು ಸನ್​ರೈಸರ್ಸ್​ ಹೈದರಾಬಾದ್​ ತಂಡಗಳು ಮೇ 21 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಇಲ್ಲಿ ಗೆಲ್ಲುವ ತಂಡ ನೇರವಾಗಿ ಫೈನಲ್ ಪ್ರವೇಶಿಸಲಿದೆ. ಇತ್ತಂಡಗಳು ಲೀಗ್​ ಹಂತದಲ್ಲಿ ಹಲವು ತಂಡಗಳನ್ನು ಮಣಿಸಿ ಪ್ರಶಸ್ತಿ ಸುತ್ತಿಗೆ ಬಂದಿವೆ.

ಫೈನಲ್ ತಲುಪೋರ್ಯಾರು?: ಮೊದಲ ಕ್ವಾಲಿಫೈಯರ್​ನಲ್ಲಿ ಎದುರಾಗುತ್ತಿರುವ ಹೈದರಾಬಾದ್​ ಮತ್ತು ಕೋಲ್ಕತ್ತಾದಲ್ಲಿ ಯಾವ ತಂಡ ಗೆದ್ದರೂ ನೇರವಾಗಿ ಫೈನಲ್ ತಲುಪಲಿದೆ. ಎರಡೂ ತಂಡಗಳು ಐಪಿಎಲ್ ಮಾಜಿ ಚಾಂಪಿಯನ್​​ ಆಗಿದ್ದು, ಯಾವ ತಂಡ ಮೊದಲು ಫೈನಲ್ ತಲುಪಲಿದೆ ಎಂಬ ನಿರೀಕ್ಷೆ ಇದೆ. ಟೂರ್ನಿಯಲ್ಲಿ ಅಬ್ಬರಿಸಿ ಬೊಬ್ಬಿರಿದಿರುವ ಸನ್​ರೈಸರ್ಸ್​ ಬಲಿಷ್ಠ ಕೋಲ್ಕತ್ತಾ ಸವಾಲನ್ನು ಹೇಗೆ ಎದುರಿಸಲಿದೆ ಎಂಬುದು ಕುತೂಹಲದ ಸಂಗತಿ.

ಕಳೆದ ಆವೃತ್ತಿಯಲ್ಲಿ ಹೀನಾಯ ಪ್ರದರ್ಶನ ನೀಡಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದ್ದ ಹೈದರಾಬಾದ್ ಈ ಬಾರಿ ಡ್ಯಾಶಿಂಗ್​ ಪ್ರದರ್ಶನದೊಂದಿಗೆ ಪ್ಲೇ ಆಫ್ ತಲುಪಿದೆ. ಬಲಿಷ್ಠ ತಂಡಗಳನ್ನು ಸೋಲಿಸಿ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದೆ. ಜೊತೆಗೆ ಎರಡು ಬಾರಿ ಅತ್ಯಧಿಕ ಸ್ಕೋರ್ ದಾಖಲೆ ನಿರ್ಮಿಸಿದೆ. (287/3, 277/3).

ಹೈದರಾಬಾದ್ ಬ್ಯಾಟಿಂಗ್​ ಪವರ್​: ತಂಡದ ಆರಂಭಿಕ ಜೋಡಿ ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ ಜೊತೆಯಾಟ ತಂಡದ ಬಲವಾಗಿದೆ. ಈ ಸೂಪರ್ ಹಿಟ್ ಜೋಡಿ ಸಿಡಿದರೆ, ಕೋಲ್ಕತ್ತಾಗೆ ಸಂಕಷ್ಟ ತಪ್ಪಿದ್ದಲ್ಲ. ನಿತೀಶ್ ರೆಡ್ಡಿ, ಹೆನ್ರಿಚ್ ಕ್ಲಾಸಿನ್ ಮಧ್ಯಮ ಕ್ರಮಾಂಕದಲ್ಲಿ ಸಾಥ್​ ನೀಡಲಿದ್ದಾರೆ. ಕೊನೆಯಲ್ಲಿ ಅಬ್ದುಲ್ ಸಮದ್ ಕೂಡ ಮಿಂಚುತ್ತಿದ್ದಾರೆ. ಈ ಆಟಗಾರರು ತಮ್ಮ ಫಾರ್ಮ್ ಮುಂದುವರಿಸಿದರೆ ಹೈದರಾಬಾದ್ ಫೈನಲ್ ತಲುಪಲು ಸಹಾಯವಾಗಲಿದೆ. ಬೌಲಿಂಗ್​ನಲ್ಲಿ ವೇಗಿಗಳಾದ ಭುವನೇಶ್ವರ್, ನಟರಾಜನ್ ಮತ್ತು ನಾಯಕ ಪ್ಯಾಟ್​ ಕಮ್ಮಿನ್ಸ್ ಬಿಗಿ ದಾಳಿ ನಡೆಸಬೇಕು. ಕೋಲ್ಕತ್ತಾದಲ್ಲಿ ಸ್ಪಿನ್ನರ್​ಗಳಿದ್ದರೆ, ಹೈದರಾಬಾದ್‌ನಲ್ಲಿ ಬಲಿಷ್ಠ ವೇಗಿಗಳ ಪಡೆ ಇದೆ.

ಕೋಲ್ಕತ್ತಾದ್ದೇ ಮೇಲುಗೈ: ಟೂರ್ನಿಯಲ್ಲಿ ತಂಡಗಳ ಈವರೆಗಿನ ಪ್ರದರ್ಶನ ಗಮನಿಸಿದರೆ, ಕೋಲ್ಕತ್ತಾ ನೈಟ್​ ರೈಡರ್ಸ್​ ಎಲ್ಲ ವಿಭಾಗದಲ್ಲೂ ಬಲಾಢ್ಯವಾಗಿದೆ. ಆರಂಭಿಕ ಸುನಿಲ್ ನರೈನ್ ಮತ್ತು ಫಿಲ್ ಸಾಲ್ಟ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಅದರಲ್ಲೂ ನರೈನ್​ ಸ್ಪಿನ್​ಗಿಂತಲೂ ಬ್ಯಾಟಿಂಗ್​ನಲ್ಲೇ ಮೋಡಿ ಮಾಡಿದ್ದಾರೆ. ನಾಯಕ ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್ ಹೆಚ್ಚು ಫಾರ್ಮ್‌ನಲ್ಲಿಲ್ಲ. ಪಂದ್ಯದ ದಿಕ್ಕನ್ನೇ ಬದಲಿಸಬಲ್ಲ ರಿಂಕು ಸಿಂಗ್, ಆಂಡ್ರೆ ರಸೆಲ್​ರನ್ನು ಔಟ್​ ಮಾಡಲು ಹೈದರಾಬಾದ್​ ವಿಶೇಷ ತಂತ್ರ ರೂಪಿಸಬೇಕು. ಬೌಲಿಂಗ್​ನಲ್ಲಿ ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ ಮತ್ತು ಸುನಿಲ್ ನರೈನ್ ಅಪಾಯಕಾರಿಯಾಗಿದ್ದಾರೆ.

ಪಿಚ್​ ರಿಪೋರ್ಟ್​ ಹೀಗಿದೆ: ಉತ್ತಮ ವೇಗ ಮತ್ತು ಬೌನ್ಸ್ ಹೊಂದಿರುವ ಅಹಮದಾಬಾದ್ ಪಿಚ್ ಬ್ಯಾಟರ್ ಮತ್ತು ಬೌಲರ್‌ಗಳಿಗೆ ಸೂಕ್ತವಾಗಿದೆ. ಮೊದಲು ಬ್ಯಾಟ್ ಮಾಡುವ ತಂಡಕ್ಕೆ ಗೆಲುವಿನ ಸಾಧ್ಯತೆ ಹೆಚ್ಚು. ಐಪಿಎಲ್​ನಲ್ಲಿ ಇತ್ತಂಡಗಳು ಇದುವರೆಗೆ 26 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಕೆಕೆಆರ್ 17 ಪಂದ್ಯ ಗೆದ್ದಿದ್ದರೆ, ಸನ್​ರೈಸರ್ಸ್ ಕೇವಲ 7 ರಲ್ಲಿ ಜಯ ಸಾಧಿಸಿದೆ. ಈ ಋತುವಿನಲ್ಲಿ ಆಡಿದ ಒಂದು ಪಂದ್ಯದಲ್ಲೂ ಕೋಲ್ಕತ್ತಾ ವಿರುದ್ಧ ಹೈದರಾಬಾದ್ ಸೋತಿದೆ.

ಇದನ್ನೂ ಓದಿ: ಎಲಿಮಿನೇಟರ್ ಪಂದ್ಯ: ಅಹಮದಾಬಾದ್​ಗೆ ಬಂದಿಳಿದ ಆರ್​ಸಿಬಿಗೆ ಭವ್ಯ ಸ್ವಾಗತ - RCB Players reached Ahmedabad

ETV Bharat Logo

Copyright © 2024 Ushodaya Enterprises Pvt. Ltd., All Rights Reserved.