ETV Bharat / sports

IPL: ಸ್ಟೋಯ್ನಿಸ್ ಫಿಫ್ಟಿ; ಗುಜರಾತ್​ಗೆ 164 ರನ್​ ಟಾರ್ಗೆಟ್​ ಕೊಟ್ಟ ರಾಹುಲ್​ ಬಳಗ - LSG vs GT - LSG VS GT

ಉತ್ತರ ಪ್ರದೇಶದ ರಾಜಧಾನಿ ಲಖನೌದ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುಜರಾತ್​ ಮತ್ತು ಲಖನೌ ತಂಡಗಳು ಇಂದು ಮುಖಾಮುಖಿಯಾಗಿವೆ.

Lucknow Super Giants vs Gujarat Titans
IPL 2024: ಗುಜರಾತ್ ಎದುರು ಗೆದ್ದ ಲಖನೌ ಬ್ಯಾಟಿಂಗ್​ ಆಯ್ಕೆ
author img

By ETV Bharat Karnataka Team

Published : Apr 7, 2024, 7:32 PM IST

Updated : Apr 7, 2024, 10:06 PM IST

ಲಖನೌ(ಉತ್ತರ ಪ್ರದೇಶ): ಗುಜರಾತ್​ ಟೈಟಾನ್ಸ್​ ವಿರುದ್ಧ ಲಖನೌ ಸೂಪರ್​ ಜೈಂಟ್ಸ್ ತಂಡ ಐದು ವಿಕೆಟ್​ ನಷ್ಟಕ್ಕೆ 163 ರನ್​ ಕಲೆ ಹಾಕಿತು. ಬೌಲಿಂಗ್​ನಲ್ಲಿ ಬಿಗಿ ಹಿಡಿತ ಸಾಧಿಸಿದ ಗುಜರಾತ್​ ತಂಡ ತನ್ನ ಗೆಲುವಿಗೆ 164 ರನ್ ಚೇಸ್‌ ಮಾಡಬೇಕಿದೆ.

ಇಲ್ಲಿನ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯುತ್ತಿದೆ. ಟಾಸ್​ ಗೆದ್ದು ಬ್ಯಾಟಿಂಗ್ ಆರಂಭಿಸಿದ ಕೆ.ಎಲ್​.ರಾಹುಲ್​ ತಂಡ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಕ್ವಿಂಟನ್ ಡಿ ಕಾಕ್ 6 ರನ್​ಗೆ ವಿಕೆಟ್​ ಒಪ್ಪಿಸಿದರು. ಮೂರನೇ ಕ್ರಮಾಂಕದಲ್ಲಿ ಕ್ರೀಸಿಗೆ ಬಂದ ದೇವದತ್ ಪಡಿಕಲ್​ ಸಹ 7 ರನ್​ಗೆ ನಿರ್ಗಮಿಸಿದರು. ಇದರಿಂದ ತಂಡದ ಮೊತ್ತ 18 ರನ್ ಆಗುವಷ್ಟರಲ್ಲಿ ಲಖನೌ ಎರಡು ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ನಾಲ್ಕನೇ ವಿಕೆಟ್‌ಗೆ ನಾಯಕ​ ರಾಹುಲ್​ ಮತ್ತು ಮಾರ್ಕಸ್ ಸ್ಟೋಯ್ನಿಸ್ ಇನಿಂಗ್ಸ್​ ಕಟ್ಟಲು ಪ್ರಯತ್ನಿಸಿದರು. ಈ ಜೋಡಿ 73 ರನ್​ ಕಲೆ ಹಾಕಿ ತಂಡವನ್ನು ಆರಂಭಿಕ ಆಘಾತದಿಂದ ಹೊರತಂದರು. ಆದರೆ, ಈ ಸಂದರ್ಭದಲ್ಲಿ 31 ಎಸೆತ ಎದುರಿಸಿ 33 ರನ್​ ಬಾರಿಸಿದ್ದ ರಾಹುಲ್​ ಔಟಾದರು. ಮತ್ತೊಂದೆಡೆ, ಅರ್ಧಶತಕದ ಗಡಿದಾಟಿದ ಕೆಲವೇ ಹೊತ್ತಿನಲ್ಲೇ ಸ್ಟೋಯ್ನಿಸ್ (58 ರನ್​) ವಿಕೆಟ್​ ಒಪ್ಪಿಸಿದರು. ಆಯುಷ್ ಬಡೋನಿ ಮತ್ತು ನಿಕೋಲಸ್ ಪೂರನ್ ದೊಡ್ಡ ಹೊಡೆತಗಳ ಮೂಲಕ ರನ್​ ಹೆಚ್ಚಿಸುವ ಪ್ರಯತ್ನ ಮಾಡಿದರು. ಆಯುಷ್ 11 ಬಾಲ್​ಗಳಲ್ಲಿ 20 ರನ್​ ಸೇರಿಸಿದರು. ಮತ್ತೊಂದೆಡೆ, ಪೂರನ್ ಸಿಕ್ಸರ್​ಗಳ ಸಿಡಿದರೂ ಸ್ಟ್ರೈಕ್​ ರೇಟ್​ ಕಾಯ್ದುಕೊಳ್ಳಲು ಆಗಲಿಲ್ಲ. 22 ಬಾಲ್​ಗಳಲ್ಲಿ ಮೂರು ಸಿಕ್ಸರ್​ ಸಮೇತವಾಗಿ 32 ರನ್​ ಬಾರಿಸಿದ ಪೂರನ್ ಮತ್ತು ಕೃನಾಲ್ ಪಾಂಡ್ಯ (2) ಅಜೇಯರಾಗಿ ಉಳಿದರು.

ಗುಜರಾತ್​ ಪರವಾಗಿ ನೂರ್​ ಅಹಮದ್​, ರಶೀದ್ ಖಾನ್​ ಮತ್ತು ಸ್ಪೆನ್ಸರ್ ಜಾನ್ಸನ್, ಉಮೇಶ್ ಯಾದವ್ ಬೌಲಿಂಗ್​ನಲ್ಲಿ ಬಿಗಿ ಹಿಡಿತ ಸಾಧಿಸಿದರು. ಅಲ್ಲದೇ, ಉಮೇಶ್ ಯಾದವ್, ದರ್ಶನ್ ನಲ್ಕಂಡೆ ತಲಾ ಎರಡು ವಿಕೆಟ್​ ಪಡೆದರೆ, ರಶೀದ್ ಖಾನ್ ಒಂದು ವಿಕೆಟ್​ ಪಡೆಯುವಲ್ಲಿ ಸಫಲರಾದರು. ಲಖನೌ ತಂಡ ಈವರೆಗೆ ಮೂರು ಪಂದ್ಯಗಳನ್ನಾಡಿದ್ದು ಎರಡಲ್ಲಿ ಗೆಲುವು ಸಾಧಿಸಿದೆ. ಸದ್ಯ ಅಂಕಪಟ್ಟಿದಲ್ಲಿ ನಾಲ್ಕನೇ ಸ್ಥಾನ ಹೊಂದಿದೆ. ಇಂದಿನ ಪಂದ್ಯ ಗೆದ್ದು ಒಂದು ಅಥವಾ ಎರಡು ಸ್ಥಾನ ಬಡ್ತಿ ಪಡೆಯುವ ವಿಶ್ವಾಸದಲ್ಲಿದೆ.

ಗುಜರಾತ್​ ಇದುವರೆಗೆ ತಾನಾಡಿರುವ ನಾಲ್ಕು ಪಂದ್ಯಗಳಲ್ಲಿ ಎರಡು ಸೋಲು, ಎರಡು ವಿಜಯ ಸಾಧಿಸಿದೆ. ಮೊದಲ ಪಂದ್ಯದಲ್ಲಿ ಮುಂಬೈ ವಿರುದ್ಧ 6 ವಿಕೆಟ್​ಗಳಿಂದ ಗೆದ್ದಿತ್ತು. ಎರಡನೇ ಪಂದ್ಯದಲ್ಲಿ ಚೆನ್ನೈ ಎದುರು 63 ರನ್​ಗಳಿಂದ ಸೋತಿತ್ತು. ಇದರ ನಂತರದ ಮೂರನೇ ಮ್ಯಾಚ್​ನಲ್ಲಿ ಹೈದರಾಬಾದ್​ ವಿರುದ್ಧ ಏಳು ವಿಕೆಟ್​ನಿಂದ ಜಯ ದಾಖಲಿಸಿತ್ತು. ಕಳೆದ ಪಂದ್ಯದಲ್ಲಿ ಪಂಜಾಬ್​ ವಿರುದ್ಧ 3 ವಿಕೆಟ್​ಗಳಿಂದ ಪರಾಜಯ ಕಂಡಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸುವ ಗುರಿಯನ್ನು ಸಹಜವಾಗಿಯೇ ಗುಜರಾತ್​ ಹೊಂದಿದೆ.

ತಂಡಗಳು-ಗುಜರಾತ್: ಶುಭಮನ್ ಗಿಲ್ (ನಾಯಕ), ಶರತ್ ಬಿಆರ್(ವಿಕೆಟ್​ ಕೀಪರ್​), ಸಾಯಿ ಸುದರ್ಶನ್, ವಿಜಯ್ ಶಂಕರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ನೂರ್ ಅಹ್ಮದ್, ಉಮೇಶ್ ಯಾದವ್, ಸ್ಪೆನ್ಸರ್ ಜಾನ್ಸನ್, ದರ್ಶನ್ ನಲ್ಕಂಡೆ, ಮೋಹಿತ್ ಶರ್ಮಾ.

ಲಖನೌ: ಕ್ವಿಂಟನ್ ಡಿ ಕಾಕ್, ಕೆ.ಎಲ್.ರಾಹುಲ್(ನಾಯಕ/ವಿಕೆಟ್ ಕೀಪರ್​​​), ದೇವದತ್ ಪಡಿಕ್ಕಲ್, ಮಾರ್ಕಸ್ ಸ್ಟೋನಿಸ್, ನಿಕೋಲಸ್ ಪೂರನ್, ಆಯುಷ್ ಬಡೋನಿ, ಕೃನಾಲ್ ಪಾಂಡ್ಯ, ರವಿ ಬಿಷ್ಣೋಯ್, ಯಶ್ ಠಾಕೂರ್, ನವೀನ್ ಉಲ್ ಹಕ್, ಮಯಾಂಕ್ ಯಾದವ್​.

ಇದನ್ನೂ ಓದಿ: IPL: 4, 6, 6, 6, 4, 6 ಶೆಫರ್ಡ್ ಅಬ್ಬರಕ್ಕೆ ಬೆಚ್ಚಿದ ಡೆಲ್ಲಿ, 235 ರನ್​ ಟಾರ್ಗೆಟ್​ ನೀಡಿದ ಮುಂಬೈ - MI vs DC

Last Updated : Apr 7, 2024, 10:06 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.