ETV Bharat / sports

IPL: ಗುಜರಾತ್ ವಿರುದ್ಧ ಚೆನ್ನೈ ಸೂಪರ್ ಆಟ; 63 ರನ್‌ಗಳ ಗೆಲುವು - Chennai Super Kings

ಚೆನ್ನೈನಲ್ಲಿ ಮಂಗಳವಾರ ನಡೆದ ಐಪಿಎಲ್ ಪಂದ್ಯದಲ್ಲಿ ​ಗುಜರಾತ್​ ಟೈಟಾನ್ಸ್ ವಿರುದ್ಧ ಚೆನ್ನೈ ಸೂಪರ್​ ಕಿಂಗ್ಸ್ ಗೆದ್ದು ಬೀಗಿತು.

IPL 2024  CSK vs GT  Chennai Super Kings  Gujarat Titans
ಚೆನ್ನೈ ಸೂಪರ್ ಕಿಂಗ್ಸ್​ನ ರನ್​ ಮಳೆಯ ಅಬ್ಬರಕ್ಕೆ ನಡುಗಿದ ಗುಜರಾತ್ ಟೈಟಾನ್ಸ್: ಚೆನ್ನೈಗೆ 63 ರನ್‌ಗಳ ಗೆಲುವು
author img

By PTI

Published : Mar 27, 2024, 8:10 AM IST

ಚೆನ್ನೈ(ತಮಿಳುನಾಡು): ಇಲ್ಲಿನ ಚಿದಂಬರಂ ಕ್ರೀಡಾಂಗಣದಲ್ಲಿ ಮಂಗಳವಾರ 2024ರ ಐಪಿಎಲ್​ ಪಂದ್ಯದಲ್ಲಿ ​ಗುಜರಾತ್​ ಟೈಟಾನ್ಸ್ ವಿರುದ್ಧ ಚೆನ್ನೈ ಸೂಪರ್​ ಕಿಂಗ್ಸ್ 63 ರನ್‌ಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದೆ. ಚೆನ್ನೈ 207 ರನ್​ಗಳ ಬೃಹತ್​ ಟಾರ್ಗೆಟ್​ ನೀಡಿತು. ಮಾಧ್ಯಮ ಕ್ರಮಾಂಕದಲ್ಲಿ ಅಬ್ಬರಿಸಿದ ಶಿವಂ ದುಬೆ ಅರ್ಧಶತಕದಾಟವಾಡಿದರು. ಸಿಎಸ್‌ಕೆ ಆಟಗಾರರು ಸುರಿಸಿದ ರನ್​ ಮಳೆಯಲ್ಲಿ ಗುಜರಾತ್ ಟೈಟಾನ್ಸ್ ಕೊಚ್ಚಿ ಹೋಯಿತು.

ಮೊದಲು ಬ್ಯಾಟ್ ಮಾಡಿದ ಸಿಎಸ್​ಕೆ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 206 ರನ್ ಪೇರಿಸಿತು. ಯುವ ಬ್ಯಾಟರ್ ಶಿವಂ ದುಬೆ ಬಿರುಸಿನ ಅರ್ಧಶತಕ (23 ಎಸೆತಗಳಲ್ಲಿ 51 ರನ್: 2x4, 5x6) ಗಳಿಸಿದರೆ, ರಚಿನ್ ರವೀಂದ್ರ (20 ಎಸೆತಗಳಲ್ಲಿ 46 ರನ್: 6x4, 3x6) ಆಕ್ರಮಣಕಾರಿಯಾಗಿ ಬ್ಯಾಟಿಂಗ್​ ಮಾಡಿದರು. ನಾಯಕ ರುತುರಾಜ್ ಗಾಯಕ್ವಾಡ್ (46 ರನ್) ಬ್ಯಾಟಿಂಗ್​ನಲ್ಲಿ ಮಿಂಚಿದರು.

ಗುಜರಾತ್ ಬೌಲರ್‌ಗಳಲ್ಲಿ ರಶೀದ್ ಖಾನ್, ಸಾಯಿ ಕಿಶೋರ್, ಸ್ಪೆನ್ಸರ್ ಜಾನ್ಸನ್ ಮತ್ತು ಮೋಹಿತ್ ಶರ್ಮಾ ತಲಾ 2 ವಿಕೆಟ್ ಪಡೆದರು.

ರಚಿನ್, ದುಬೆ ಆಕರ್ಷಕ ಬ್ಯಾಟಿಂಗ್: ಚೆನ್ನೈ ಇನಿಂಗ್ಸ್‌ನಲ್ಲಿ ರಚಿನ್ ಹಾಗೂ ದುಬೆ ಅದ್ಭುತ ಬ್ಯಾಟಿಂಗ್​ ಪ್ರದರ್ಶನ ಎಲ್ಲರ ಗಮನಸೆಳೆಯಿತು. ಇಬ್ಬರೂ ಒಟ್ಟಾಗಿ 200ಕ್ಕೂ ಹೆಚ್ಚು ಸ್ಟ್ರೈಕ್ ರೇಟ್‌ನೊಂದಿಗೆ ರನ್ ಗಳಿಸಿದರು. ರುತುರಾಜ್ ಗಾಯಕ್ವಾಡ್​ ಸ್ಥಿರ ಪ್ರದರ್ಶನ ನೀಡಿದರು. ರಚಿನ್ ರವೀಂದ್ರ ಅವಕಾಶ ಸಿಕ್ಕಾಗಲೆಲ್ಲ ಚೆಂಡನ್ನು ಬೌಂಡರಿಗಟ್ಟುತ್ತಿದ್ದರು.

ಎಡವಿದ ಗುಜರಾತ್: ಗುಜರಾತ್ ತಂಡವು ಚೆನ್ನೈ ನೀಡಿದ ಟಾರ್ಗೆಟ್ ಮುಟ್ಟುವಲ್ಲಿ ಎಡವಿತು. ತಂಡವು 8 ವಿಕೆಟ್‌ಗೆ 143 ರನ್ ಗಳಿಸಲಷ್ಟೇ ಶಕ್ತವಾಯಿತು. ಇನಿಂಗ್ಸ್‌ನ ಮೂರನೇ ಓವರ್​ನಲ್ಲಿ ನಾಯಕ ಗಿಲ್ (8 ರನ್) ವಿಕೆಟ್ ಒಪ್ಪಿಸಿದರು. ವೃದ್ಧಿಮಾನ್ ಸಹಾ (21 ರನ್), ವಿಜಯ್ ಶಂಕರ್ (12 ರನ್) ಮತ್ತು ಡೇವಿಡ್ ಮಿಲ್ಲರ್ (21 ರನ್) ಗಳಿಸಿದರು. ಸಾಯಿ ಸುದರ್ಶನ್ (31 ಎಸೆತಗಳಲ್ಲಿ 37 ರನ್​: 3x4) ಗರಿಷ್ಠ ಸ್ಕೋರರ್ ಎನಿಸಿಕೊಂಡರು.

ಚೆನ್ನೈ ತಂಡದ ತುಷಾರ್ ದೇಶಪಾಂಡೆ (2/21), ದೀಪಕ್ ಚಹಾರ್ (2/28) ಮತ್ತು ಮುಸ್ತಾಫಿಜುರ್ (2/30) ಬಿಗು ಬೌಲಿಂಗ್ ದಾಳಿಯ ಮೂಲಕ ಗುಜರಾತ್ ಬಲ ಕುಗ್ಗಿಸಿದರು. ಮಥೀಶ ಪತಿರಾನ (1/29) ಪರಿಣಾಮಕಾರಿ ಬೌಲಿಂಗ್ ಮಾಡಿ ಮಿಂಚಿದರು.

ಇದನ್ನೂ ಓದಿ: ನವೆಂಬರ್​ನಲ್ಲಿ ಆಸ್ಟ್ರೇಲಿಯಾಕ್ಕೆ ಹಾರಲಿರುವ ಟೀಮ್​ ಇಂಡಿಯಾ: ಅಡಿಲೇಡ್ ಅಂಗಳದಲ್ಲಿ ಅಹರ್ನಿಶಿ ಟೆಸ್ಟ್​ ಪಂದ್ಯ - India tour to Australia

ETV Bharat Logo

Copyright © 2024 Ushodaya Enterprises Pvt. Ltd., All Rights Reserved.