ETV Bharat / sports

ಐಪಿಎಲ್​ 2024: ಕೆಕೆಆರ್​ ಪರ 100 ವಿಕೆಟ್ ಕಬಳಿಸಿ ​ಆಂಡ್ರೆ ರಸೆಲ್ ಹೊಸ ಮೈಲಿಗಲ್ಲು - ANDRE RUSSELL - ANDRE RUSSELL

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ 100 ವಿಕೆಟ್ ಗಳಿಸಿದ ಮೊದಲ ವೇಗದ ಬೌಲರ್​ ಎಂಬ ಹೆಗ್ಗಳಿಕೆಗೆ ಆಂಡ್ರೆ ರಸೆಲ್ ಪಾತ್ರರಾಗಿದ್ದಾರೆ.

ಆಂಡ್ರೆ ರಸೆಲ್
ಆಂಡ್ರೆ ರಸೆಲ್
author img

By ETV Bharat Karnataka Team

Published : Mar 30, 2024, 1:02 PM IST

ಬೆಂಗಳೂರು : ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಪರ ಆಲ್‌ರೌಂಡರ್ ಆಂಡ್ರೆ ರಸೆಲ್ ಶುಕ್ರವಾರ 100 ವಿಕೆಟ್ ಪಡೆದ ಮೊದಲ ವೇಗದ ಬೌಲರ್​ ಎನಿಸಿಕೊಂಡಿದ್ದಾರೆ.

ನಗರದ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಕೆಕೆಆರ್ ನಡುವಿನ ಹಣಾಹಣಿಯಲ್ಲಿ ಆಂಡ್ರೆ ರಸೆಲ್ ಈ ಸಾಧನೆ ಮಾಡಿದರು. ತಮ್ಮ 114ನೇ ಐಪಿಎಲ್ ಪಂದ್ಯದಲ್ಲಿ ರಸೆಲ್ 17ನೇ ಓವರ್‌ನಲ್ಲಿ ರಜತ್ ಪಾಟಿದಾರ್ ಅವರ ವಿಕೆಟ್‌ನೊಂದಿಗೆ ಮೈಲಿಗಲ್ಲು ತಲುಪಿದರು. ಪಾಟಿದಾರ್ ಡೀಪ್ ಮಿಡ್ ವಿಕೆಟ್‌ನಲ್ಲಿ ರಿಂಕು ಸಿಂಗ್‌ಗೆ ಕ್ಯಾಚ್​​ ನೀಡಿದರು.

ಐಪಿಎಲ್‌ನಲ್ಲಿ 100 ವಿಕೆಟ್ ಗಳಿಸಿದ ಕೆಕೆಆರ್‌ನ ಏಕೈಕ ಎರಡನೇ ಬೌಲರ್ ಎಂಬ ಹೆಗ್ಗಳಿಕೆಗೂ ರಸೆಲ್ ಪಾತ್ರರಾದರು. 171 ಪಂದ್ಯಗಳಲ್ಲಿ 182 ವಿಕೆಟ್‌ಗಳೊಂದಿಗೆ ಆಫ್-ಸ್ಪಿನ್ನರ್ ಸುನಿಲ್ ನರೈನ್ ಚಾರ್ಟ್‌ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 2014 ರ ಐಪಿಎಲ್ ಹರಾಜಿನಲ್ಲಿ ಇಬ್ಬರೂ ಆಟಗಾರರನ್ನು ಕೆಕೆಆರ್ ಆಯ್ಕೆ ಮಾಡಿತು. ಅಂದಿನಿಂದ ಈ ಇಬ್ಬರು ಕೆರಿಬಿಯನ್​ ಆಟಗಾರರು ಫ್ರಾಂಚೈಸಿಯ ಅವಿಭಾಜ್ಯ ಅಂಗವಾಗಿದ್ದಾರೆ.

ಈ ಪಂದ್ಯಕ್ಕೂ ಮೊದಲು ರಸೆಲ್ 24.24 ರ ಸರಾಸರಿಯಲ್ಲಿ 98 ವಿಕೆಟ್‌ಗಳನ್ನು ಹೊಂದಿದ್ದರು. 9.30 ರ ಎಕಾನಮಿಯಲ್ಲಿ 15.64 ರ ಸ್ಟ್ರೈಕ್ ರೇಟ್‌ನಲ್ಲಿ ರನ್ ಬಿಟ್ಟು ಕೊಟ್ಟಿದ್ದಾರೆ. ಅಲ್ಲದೆ, ಕೆಕೆಆರ್‌ಗೆ ಐದು ವಿಕೆಟ್ ಪಡೆದ ಏಕೈಕ ವೇಗದ ಬೌಲರ್​ ಆಗಿದ್ದಾರೆ. ನಂತರ ನರೈನ್ ಮತ್ತು ವರುಣ್ ಚಕ್ರವರ್ತಿ ಐದು ವಿಕೆಟ್‌ಗಳನ್ನು ಪಡೆದ ಸ್ಪಿನ್ನರ್ಸ್​ಗಳಾಗಿದ್ದಾರೆ. ಇನ್ನು ನಾಲ್ಕು ವಿಕೆಟ್​ ಪಡೆದವರ ಸಾಲಿನ ಮತ್ತೋರ್ವ ವೇಗದ ಬೌಲರ್​ ಉಮೇಶ್ ಯಾದವ್ ಮತ್ತು ಚೈನಾಮನ್ ಖ್ಯಾತಿಯ ಕುಲದೀಪ್ ಯಾದವ್ ಜೊತೆಗೆ ಸಮವಾಗಿದ್ದಾರೆ.

ಐಪಿಎಲ್​ನಲ್ಲಿ 'ಡ್ರೆ ರಸ್' ಎಂದು ಜನಪ್ರಿಯವಾಗಿರುವ ರಸೆಲ್ ಕೆಕೆಆರ್‌ಗೆ ಸ್ಫೋಟಕ ಫಿನಿಶರ್ ತಮ್ಮ ಪಾತ್ರವನ್ನು ನಿರ್ವಹಿಸಿಕೊಂಡು ಬಂದಿದ್ದಾರೆ. ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯಿಂದ ಕಳೆದ ಕೆಲವು ಋತುಗಳಲ್ಲಿ ಫ್ರಾಂಚೈಸಿಗಾಗಿ ಏಕಾಂಗಿಯಾಗಿ ಅನೇಕ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. 29.82 ರ ಸರಾಸರಿಯಲ್ಲಿ 2,326 ರನ್ ಗಳಿಸಿರುವ ರಸೆಲ್​ 11 ಅರ್ಧ ಶತಕಗಳನ್ನು ಸಿಡಿಸಿದ್ದಾರೆ.

ಇದನ್ನೂ ಓದಿ : RCB Vs KKR: ಆರ್​ಸಿಬಿ ವಿರುದ್ಧ ಗೆದ್ದು ಬೀಗಿದ ಕೆಕೆಆರ್ - IPL 2024

ETV Bharat Logo

Copyright © 2025 Ushodaya Enterprises Pvt. Ltd., All Rights Reserved.