ನವದೆಹಲಿ: ಕ್ರೀಡಾ ಕ್ಷೇತ್ರದಲ್ಲಿ ಭಾರತದ ಪ್ರಗತಿಯ ಕುರಿತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಧ್ಯಂತರ ಬಜೆಟ್ ವೇಳೆ ಈ ಕುರಿತು ಪ್ರಸ್ತಾಪಿಸಿದ ಅವರು, ಜಾಗತಿಕ ಮಟ್ಟದಲ್ಲಿ ಭಾರತೀಯ ಚೆಸ್ ಪ್ರಗತಿಗೆ ಶ್ಲಾಘಿಸಿದರು. 2010ಕ್ಕೆ ಹೋಲಿಕೆ ಮಾಡಿದಾಗ ಗ್ರಾಂಡ್ ಮಾಸ್ಟರ್ಸ್ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಿದೆ ಎಂದರು.
2023 ಏಷ್ಯನ್ ಗೇಮ್ಸ್ ಮತ್ತು ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಎಂದಿಗಿಂತಲೂ ಹೆಚ್ಚಿನ ಪದಕಗಳನ್ನು ಗಳಿಸಿದೆ. 2023ರಲ್ಲಿ ವಿಶ್ವ ಚೆಸ್ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ಸೆನ್ ಮಣಿಸುವ ಮೂಲಕ ಪ್ರಜ್ಞಾನಂದ ನಂಬರ್ 1 ಆಟಗಾರ ಎಂಬ ಸ್ಥಾನವನ್ನು ಪಡೆದಿದ್ದಾರೆ. 2010ರಲ್ಲಿ 20 ಇದ್ದ ಗ್ರಾಂಡ್ ಮಾಸ್ಟರ್ಗಳ ಸಂಖ್ಯೆ ಇದೀಗ 80ಕ್ಕೂ ಹೆಚ್ಚಿನ ಸಂಖ್ಯೆ ತಲುಪಿದೆ.
2023ರ ಆರಂಭದಲ್ಲಿ ಏಷ್ಯನ್ ಗೇಮ್ಸ್ನಲ್ಲಿ ಭಾರತವು ಅತ್ಯುತ್ತಮ ಪ್ರದರ್ಶನ ತೋರಿ 107 ಪದಕಗಳನ್ನು ಸಂಪಾದಿಸಿದೆ. ಏಷ್ಯನ ಗೇಮ್ಸ್ ಇತಿಹಾಸದಲ್ಲೇ ಅತ್ಯಂತ ಹೆಚ್ಚಿನ ಮೆಡಲ್ಗಳನ್ನು 2023ರಲ್ಲಿ ಪಡೆದಿದೆ. ಪಾಯಿಂಟ್ ಪಟ್ಟಿಯಲ್ಲಿ ಚೀನಾ, ಜಪಾನ್, ದಕ್ಷಿಣ ಕೊರಿಯಾ ಬಳಿಕ ಭಾರತವು ನಾಲ್ಕನೇ ಸ್ಥಾನವನ್ನು ಹೊಂದಿದೆ. ಭಾರತವು ಕಳೆದ ಮೂರು ವರ್ಷಗಳಿಂದ ಈಚೆಗೆ ಪದಕಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಸ್ಥಾನದಲ್ಲಿ ಹೆಚ್ಚಳ ಕಂಡಿದೆ. 2014ರಲ್ಲಿ 54, 2019ರಲ್ಲಿ 70 ಮತ್ತು 2023ರಲ್ಲಿ 100 ಪದಕಗಳನ್ನು ಅನ್ನು ದಾಟಿದೆ.
ಶೂಟಿಂಗ್ ಮತ್ತು ಅಥ್ಲೆಟಿಕ್ಸ್ನಲ್ಲಿ ಭಾರತವು ಉತ್ತಮ ಪ್ರದರ್ಶನ ತೋರುವುದನ್ನು ಮುಂದುವರೆಸಿದ್ದು, ಇದರಲ್ಲಿ ಕ್ರಮವಾಗಿ 22 ಮತ್ತು 29 ಪದಕ ಗೆದ್ದಿದೆ. ಭಾರತವು ಶೂಟಿಂಗ್ನಲ್ಲಿ 7 ಮತ್ತು ಅಥ್ಲೆಟಿಕ್ಸ್ನಲ್ಲಿ 6 ಪದಕ ಗೆದ್ದಿದೆ.
ಚೆಸ್ನಲ್ಲಿ ಭಾರತವು ಅತ್ಯಂತ ದೊಡ್ಡ ಸ್ಥಾನ ಪಡೆದಿದೆ. ಇದನ್ನು ಬೆಳೆಸಿದ ಹೆಗ್ಗಳಿಕೆ ವಿಶ್ವನಾಥನ್ ಆನಂದ್ ಅವರಿಗಿದ್ದು, ಅವರಿಗೆ ಧನ್ಯವಾದ ಸಲ್ಲಿಸುತ್ತೇವೆ. ಭಾರತದಲ್ಲಿ ಸದ್ಯ 84 ಗ್ರಾಂಡ್ ಮಾಸ್ಟರ್ಸ್ ಇದ್ದು, 84 ನೇ ಗ್ರಾಂಡ್ ಮಾಸ್ಟರ್ ಆಗಿ ತಮಿಳುನಾಡಿನ ವೈಶಾಲಿ ರಮೇಶ್ಬಾಬು ಹೊರ ಹೊಮ್ಮಿದ್ದಾರೆ. ಈಕೆ ಪ್ರಜ್ಞಾನಂದ ಅವರ ಸಹೋದರಿಯಾಗಿದ್ದು, ಭಾರತದಲ್ಲಿ ಒಡಹುಟ್ಟಿದವರು ಗ್ರಾಂಡ್ ಮಾಸ್ಟರ್ಸ್ ಆದ ಇತಿಹಾಸವನ್ನು ಇವರು ಸೃಷ್ಟಿಸಿದ್ದಾರೆ.
ಅನೇಕ ಜಾಗತಿಕ ಟೂರ್ನಮೆಂಟ್ ಮೂಲಕ ಆನಂದ್ ಯಶಸ್ವಿ ಅಭಿಯಾನ ನಡೆಸಿದ್ದು, ಅನೇಕ ಉದಯೋನ್ಮುಖ ಚೆಸ್ ಆಟಗಾರರಿಗೆ ದಾರಿ ತೋರಿದರು. ಆನಂದ್ ತಮ್ಮ 10ನೇ ವಯಸ್ಸಿನಲ್ಲಿ ಅಂತರಾಷ್ಟ್ರೀಯ ಮಾಸ್ಟರ್ ಆಗಿ ಹೊರ ಹೊಮ್ಮಿದ್ದು, 12ನೇ ವಯಸ್ಸಿಗೆ ಗ್ರಾಂಡ್ ಮಾಸ್ಟರ್ ಆದರು. ಆನಂದ್ ಮತ್ತು ಕೊನೆರು ಹಂಪಿ ಭಾರತದ ಚೆಸ್ ಲೋಕದ ಪ್ರಗತಿಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಆನಂದ್ 1998ರಲ್ಲಿ ಆನಂದ್ ಗ್ರಾಂಡ್ ಮಾಸ್ಟರ್ ಆಗಿ ಹೊರ ಹೊಮ್ಮಿದರೆ, ಹಂಪಿ 2002ರಲ್ಲಿ ಆದರು. ಇದೀಗ ತಂತ್ರಜ್ಞಾನದ ಅಭಿವೃದ್ಧಿಯಿಂದಾಗಿ ಕೋಚಿಂಗ್ ಸಂಸ್ಥೆಗಳ ಏರಿಕೆಯು ದೇಶದಲ್ಲಿ ಅನೇಕರ ಯಶಸ್ಸಿನ ಏಣಿಗೆ ದಾರಿ ಮಾಡಿಕೊಟ್ಟಿದೆ ಎಂದರು.
ಇದನ್ನೂ ಓದಿ: ಬಜೆಟ್ LIVE- ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ: ನಿರ್ಮಲಾ