ETV Bharat / sports

ಸಾವಿರಾರು ವರ್ಷಗಳ ಇತಿಹಾಸವಿರುವ ಒಲಿಂಪಿಕ್‌ ಕ್ರೀಡಾಕೂಟದ ಆಸಕ್ತಿದಾಯಕ ಸಂಗತಿಗಳು - Interesting Facts About Olympics

author img

By ETV Bharat Karnataka Team

Published : Jul 26, 2024, 2:25 PM IST

ಸಾವಿರಾರು ವರ್ಷಗಳ ಇತಿಹಾಸವಿರುವ ಒಲಿಂಪಿಕ್ಸ್‌ ಇಂದು ಜಗತ್ತಿನ ಪ್ರಮುಖ ಅಂತಾರಾಷ್ಟ್ರೀಯ ಕ್ರೀಡಾಕೂಟವಾಗಿ ಬೆಳೆದಿದೆ. ಈ ಕೂಟದ ಹಿನ್ನೆಲೆ, ಇತಿಹಾಸ ಮತ್ತು ಕೆಲವು ಆಸಕ್ತಿದಾಯಕ ಸಂಗತಿಗಳ ಮಾಹಿತಿ ಇಲ್ಲಿವೆ.

Interesting Facts about Olympics
ಒಲಿಂಪಿಕ್‌ ಕ್ರೀಡಾಕೂಟ (AP)

ಅಥೆನ್ಸ್/ಬೆಂಗಳೂರು: ಕ್ರೀಡೆಗಳ ಬಗ್ಗೆ ಹೆಚ್ಚಿನ ಆಸಕ್ತಿ ಇಲ್ಲದವರನ್ನೂ ಒಲಿಂಪಿಕ್ಸ್ ಕೈಬೀಸಿ ಕರೆಯುತ್ತದೆ. ಅದುವೇ ಒಲಿಂಪಿಕ್ಸ್​ ಮಾಯೆ. ಪ್ಯಾರಿಸ್ ಒಲಿಂಪಿಕ್ಸ್​ ಆರಂಭವಾಗಿದ್ದು, ಇಂದು ಅಧಿಕೃತವಾಗಿ ಆರಂಭಗೊಳ್ಳಲಿದೆ. ಈ ಕ್ರೀಡೋತ್ಸವವನ್ನು ಕಣ್ತುಂಬಿಕೊಳ್ಳಲು ಇಡೀ ಪ್ರಪಂಚವೇ ಕಾದು ಕುಳಿತಿದೆ. ಹಾಗಾದರೆ, ಈ ಒಲಿಂಪಿಕ್ಸ್ ಸಂಪ್ರದಾಯಗಳ ಮೂಲ ಮತ್ತು ಇತಿಹಾಸದ ಬಗ್ಗೆ ನಿಮಗೆ ಗೊತ್ತಾ? ಜಗತ್ತಿನ ಪ್ರಮುಖ ಕ್ರೀಡಾಕೂಟಗಳಲ್ಲಿ ಒಂದಾಗಿರುವ ಈ ಕೂಟಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಕ್ರೀಡೋತ್ಸವ ಆಯೋಜನೆ ಮಾಡಿಕೊಂಡು ಬರಲಾಗುತ್ತಿದೆ. ಆರಂಭದ ದಿನಗಳಲ್ಲಿ ಒಲಿಂಪಿಕ್ಸ್​ ಹೇಗಿತ್ತು, ಈಗ ಹೇಗಿದೆ, ಆದ ಬದಲಾವಣೆಗಳೇನು, ಯಾವ ಯಾವ ದೇಶಗಳು ಎಷ್ಟು ಸಾಧನೆ ಮಾಡಿವೆ ಎಂಬುದರ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಮೊದಲ ಒಲಿಂಪಿಕ್ಸ್: ಆಧುನಿಕ ಪ್ರಪಂಚದ ಮೊದಲ ಒಲಿಂಪಿಕ್ಸ್ ಅಥೆನ್ಸ್‌ನಲ್ಲಿ 1896ರಲ್ಲಿ ನಡೆಯಿತು. 14 ದೇಶಗಳ 241 ಕ್ರೀಡಾಪಟುಗಳು 43 ಕ್ರೀಡೆಗಳಲ್ಲಿ ಭಾಗವಹಿಸಿದ್ದರು. ಆದರೆ, ಮಹಿಳೆಯರಿಗೆ ಪ್ರತ್ಯೇಕ ಕ್ರೀಡಾ ವಿಭಾಗ ಇಲ್ಲದ ಕಾರಣ ಈ ಒಲಿಂಪಿಕ್ಸ್‌ನಲ್ಲಿ ಒಬ್ಬ ಮಹಿಳೆಯೂ ಭಾಗವಹಿಸಿರಲಿಲ್ಲ. ಈ ಒಲಿಂಪಿಕ್ಸ್‌ನಲ್ಲಿ ಗ್ರೀಸ್ ಅತ್ಯಧಿಕ ಪದಕಗಳನ್ನು ಗೆಲ್ಲುವ ಮೂಲಕ ದಾಖಲೆ ಬರೆಯಿತು. ಮ್ಯಾರಥಾನ್ ಓಟ ಗ್ರೀಕ್​ನ ಸಂಸ್ಕೃತಿ ಮತ್ತು ಪರಂಪರೆಯ ಅವಿಭಾಜ್ಯ ಅಂಗವಾಗಿದ್ದರಿಂದ ಆಧುನಿಕ ಜಗತ್ತಿನ ಮೊದಲ ಒಲಿಂಪಿಕ್ಸ್‌ನ ಮ್ಯಾರಥಾನ್ ಪ್ರಶಸ್ತಿಯನ್ನು ಗೆಲ್ಲುವುದು ಈ ದೇಶದ ಕನಸಾಗಿತ್ತು. ಹಾಗಾಗಿ ಬೇರೆ ಯಾವುದೇ ಕ್ರೀಡೆಯ ಫಲಿತಾಂಶ ಏನೇ ಇರಲಿ, ಮ್ಯಾರಥಾನ್‌ನಲ್ಲಿ ಮಾತ್ರ ತನ್ನ ಕ್ರೀಡಾಪಟು ಮ್ಯಾರಥಾನ್ ಸ್ಪರ್ಧೆಯಲ್ಲಿ ಗೆಲ್ಲಬೇಕೆಂದು ಈ ದೇಶದ ಪ್ರತಿಯೊಬ್ಬರ ಬಯಕೆಯಾಗಿತ್ತು ಅನ್ನೋದು ಗಮನಾರ್ಹ.

ಸ್ಪಿರಿಡಾನ್ ಲೂಯಿಸ್: ಈತ ಗ್ರೀಕ್ ಓಟಗಾರ. 1896ರಲ್ಲಿ ಅಥೆನ್ಸ್‌ನಲ್ಲಿ ನಡೆದ ಮೊದಲ ಆಧುನಿಕ ಒಲಿಂಪಿಕ್ ಮ್ಯಾರಥಾನ್‌ನಲ್ಲಿ ಚಿನ್ನದ ಪದಕ ಗೆದ್ದು ದಾಖಲೆ ಬರೆದರು. ಜೊತೆಗೆ ದೇಶದ ಯುವಕರಿಗೆ ಹೊಸ ಉತ್ಸಾಹ ಕೂಡ ತುಂಬಿದವರು. ಕ್ರೀಡೆಯಲ್ಲಿ ಹೊಸ ಬಗೆಯ ರುಚಿ ತೋರಿಸಿದ ಸ್ಪಿರಿಡಾನ್ ಲೂಯಿಸ್, ಸ್ಪರ್ಧೆಗೂ ಮುನ್ನ ತಮ್ಮದೇ ಆದ ಸಿದ್ಧತೆ ಹೊಂದಿದ್ದರು ಅನ್ನೋದು ಆಸಕ್ತಿದಾಯಕ ವಿಚಾರಗಳಲ್ಲಿ ಒಂದು. ರನ್ನಿಂಗ್​ ಟ್ರ್ಯಾಕ್​ಗೆ ಇಳಿಯುವ ಹಿಂದಿನ ದಿನ ಉಪವಾಸ ಮಾಡುತ್ತಿದ್ದ ಲೂಯಿಸ್, ರಾತ್ರಿಯಿಡೀ ಏಕಾಗ್ರತೆಗಾಗಿ ಧ್ಯಾನ ಮತ್ತು ಪ್ರಾರ್ಥನೆಯ ಮೊರೆ ಹೋಗುತ್ತಿದ್ದರು. ಬೆಳಿಗ್ಗೆ ಅದೇ ಖಾಲಿ ಹೊಟ್ಟೆಯೊಂದಿಗೆ ರೇಸ್ ಟ್ರ್ಯಾಕ್‌ಗೆ ಇಳಿಯುತ್ತಿದ್ದರು. ಅಂದು ಇದನ್ನೇ ಮಾಡಿದ್ದ ಲೂಯಿಸ್ 26 ಮೈಲು ಓಡಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಹಾಗಾಗಿ ಇವರನ್ನು ಆಧುನಿಕ ಕ್ರೀಡೆಯು ಮಾಂತ್ರಿಕ ಎಂದೂ ಕರೆಯುತ್ತಾರೆ.

ಇತಿಹಾಸ: ಒಲಿಂಪಿಕ್‌ ಕ್ರೀಡಾಕೂಟದ ಮೂಲ ಗ್ರೀಸ್‌ ದೇಶ. ಸುಮಾರು ಕ್ರಿ.ಪೂ. 776ರಲ್ಲಿ ಗ್ರೀಸ್‌ನ ಒಲಿಂಪಿಯಾದಲ್ಲಿ ಮೊದಲ ಬಾರಿಗೆ ಒಲಿಂಪಿಕ್‌ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಮೂರ್ನಾಲ್ಕು ಶತಮಾನದವರೆಗೆ ಈ ಕೂಟವನ್ನು ಆಯೋಜಿಸಲಾಗುತ್ತಿತ್ತು. ಬಳಿಕ ಕ್ರಮೇಣ ನಿಂತುಹೋದ ಒಲಿಂಪಿಕ್‌ಗೆ ಚಾಲನೆ ಸಿಕ್ಕಿದ್ದು 1859ರಲ್ಲಿ. ಇವಾಂಜೆಲಾಸ್‌ ಝಪ್ಪಾಸ್‌ ಎಂಬಾತ ಪ್ರಪ್ರಥಮ ಅಂತಾರಾಷ್ಟ್ರೀಯ ಒಲಿಂಪಿಕ್‌ ಕ್ರೀಡಾಕೂಟವನ್ನು ಪ್ರಾಯೋಜಿಸಿದನು. ಬಳಿಕ 1894ರಲ್ಲಿ ಫ್ರಾನ್ಸ್‌ನ ಫ್ರಾನ್ಸ್‌ನ ಪಿಯರೆ ಡಿ ಕ್ಯುಬರ್ತಿನ್‌ ಎಂಬುವವನು ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿಯನ್ನು ಹುಟ್ಟುಹಾಕಿದರು. ಅದಾದ ಬಳಿಕ 1896ರಲ್ಲಿ ಪ್ರಥಮ ಬಾರಿಗೆ ಗ್ರೀಸ್‌ನ ಈಗಿನ ರಾಜಧಾನಿ ಅಥೆನ್ಸ್‌ ನಗರದಲ್ಲಿ ಬೇಸಿಗೆ ಒಲಿಂಪಿಕ್‌ ಕ್ರೀಡಾಕೂಟ ಆಯೋಜಿಸಲಾಯಿತು. ಇದುವೇ ಮೊದಲ ಆಧುನಿಕ ಒಲಿಂಪಿಕ್‌ ಕ್ರೀಡಾಕೂಟ.

1900ರ ಪ್ಯಾರಿಸ್ ಒಲಿಂಪಿಕ್ಸ್: ಈ ಒಲಿಂಪಿಕ್ಸ್ ಕ್ರೀಡಾಕೂಟಲ್ಲಿ ಇತಿಹಾಸದ ಮೊದಲ ಬಾರಿಗೆ ಮಹಿಳೆಯರಿಗೆ ಅವಕಾಶ ಮಾಡಿಕೊಡಲಾಯಿತು. 19 ಸ್ಪರ್ಧೆಗಳಲ್ಲಿ 997 ಮಂದಿ ಈ ಜಾಗತಿಕ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಪ್ಯಾರಿಸ್ ನಾವಿಕೆ ಹೆಲೆನ್ ಡಿ ಪೌರ್ಟಾಲ್ಸ್ ಮೊದಲ ಮಹಿಳಾ ಒಲಿಂಪಿಕ್ ಚಾಂಪಿಯನ್ ಆಗಿ ಗುರುತಿಸಿಕೊಂಡಿದ್ದರು.

ಕೋಲ್ಕತ್ತಾದಲ್ಲಿ ಬ್ರಿಟಿಷ್ ದಂಪತಿಗೆ ಜನಿಸಿದ ಭಾರತೀಯ ನಾರ್ಮನ್ ಪ್ರಿಚರ್ಡ್ ಎಂಬುವರು 1900ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಮೂಲಕ ಗಮನ ಸೆಳೆದರು. ಈ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತ ಕೇವಲ ಒಬ್ಬ ಪ್ರತಿನಿಧಿಯನ್ನು ಹೊಂದಿತ್ತು ಎನ್ನುವುದು ಅಚ್ಚರಿಯಾದರೂ ಸತ್ಯ. ಹಾಗಾಗಿ ಭಾರತವಷ್ಟೇ ಅಲ್ಲ, ‘ಏಷ್ಯಾದ ಮೊದಲ ಒಲಿಂಪಿಕ್ ಅಥ್ಲೀಟ್’ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಅವರು 200 ಮೀಟರ್ ಓಟ ಮತ್ತು 200 ಮೀಟರ್ ಹರ್ಡಲ್ಸ್​ನಲ್ಲಿ ಮೊದಲ ಬಾರಿ ಬೆಳ್ಳಿ ಪದಕಗಳನ್ನು ಗೆದ್ದು ಇತಿಹಾಸ ಬರೆದವರು. ಒಲಿಂಪಿಕ್ ದಾಖಲೆಗಳಲ್ಲಿ ಭಾರತಕ್ಕೆ ಸಲ್ಲುವ ಮೊದಲ ಪದಕಗಳು ಇವಾಗಿವೆ. ಇವರು ನಟ ಕೂಡ ಆಗಿದ್ದರು.

1904ರಲ್ಲಿ ಸೈಂಟ್ ಲೂಯೀಸ್, 1908ರಲ್ಲಿ ಲಂಡನ್ ಈ ಜಾಗತಿಕ ಕ್ರೀಡೋತ್ಸವ ನಡೆದವು. ಈ ಅವದಿ ಕೂಡ ಹಲವು ಆಸಕ್ತಿದಾಯಕ ಸಂಗತಿಗಳಿಗೆ ಸಾಕ್ಷಿಯಾಗಿದೆ.

1912ರ ಸ್ಟಾಕ್‌ಹೋಮ್: 1912ರ ಸ್ಟಾಕ್‌ಹೋಮ್​​ನಲ್ಲಿ ನಡೆದ ಜಾಗತಿಕ ಕ್ರೀಡಾ ಜಾತ್ರೆಯಲ್ಲಿ ಪ್ರಸಿದ್ಧ ಅಮೆರಿಕನ್ ಅಥ್ಲೀಟ್ ಜಿಮ್ ಥೋರ್ಪ್ ಚಿನ್ನದ ಪದಕ ವಿಜೇತರಾಗಿ ಹೊರಹೊಮ್ಮಿದರು. ಥೋರ್ಪ್ ಯುನೈಟೆಡ್ ಸ್ಟೇಟ್​ಗಾಗಿ ಚಿನ್ನದ ಪದಕ ಗೆದ್ದ ಮೊದಲ ಸ್ಥಳೀಯ ಅಮೆರಿಕನ್ ಎನಿಸಿಕೊಂಡರು. ಆಧುನಿಕ ಕ್ರೀಡೆಗಳ ಬಹುಮುಖ ಕ್ರೀಡಾಪಟುಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಅವರು 1912ರ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಎರಡು ಒಲಿಂಪಿಕ್ ಚಿನ್ನದ ಪದಕಗಳನ್ನು ಗೆದ್ದರು. (ಒಂದು ಕ್ಲಾಸಿಕ್ ಪೆಂಟಾಥ್ಲಾನ್‌ನಲ್ಲಿ ಮತ್ತು ಇನ್ನೊಂದು ಡೆಕಾಥ್ಲಾನ್‌ನಲ್ಲಿ ). ಅವರು ಫುಟ್‌ಬಾಲ್ (ಕಾಲೇಜು ಮತ್ತು ವೃತ್ತಿಪರ), ವೃತ್ತಿಪರ ಬೇಸ್‌ಬಾಲ್ ಮತ್ತು ವೃತ್ತಿಪರ ಬಾಸ್ಕೆಟ್‌ಬಾಲ್ ಅನ್ನು ಸಹ ಆಡಿದರು. ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಮೊದಲು ಅರೆ-ವೃತ್ತಿಪರ ಬೇಸ್‌ಬಾಲ್‌ನ ಎರಡು ಸೀಸನ್‌ಗಳನ್ನು ಆಡಿದ್ದಕ್ಕಾಗಿ ಹಣ ಪಡೆದಿರುವುದು ಕಂಡುಬಂದಿದ್ದರಿಂದ ಅವರು ತಮ್ಮ ಒಲಿಂಪಿಕ್ ಪ್ರಶಸ್ತಿಗಳನ್ನು ಕಳೆದುಕೊಳ್ಳಬೇಕಾಯಿತು. ಆಗ ಜಾರಿಯಲ್ಲಿದ್ದ ಹವ್ಯಾಸಿ ನಿಯಮಗಳನ್ನು ಉಲ್ಲಂಘಿಸಿರುವ ಆರೋಪ ಇವರ ಮೇಲಿತ್ತು. 1983 ರಲ್ಲಿ, ಅವರ ಮರಣದ 30 ವರ್ಷಗಳ ನಂತರ, ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯು (IOC) ಅವರ ಒಲಿಂಪಿಕ್ ಪದಕಗಳನ್ನು ಪ್ರತಿಕೃತಿಗಳೊಂದಿಗೆ ಮರುಸ್ಥಾಪಿಸುವ ಮೂಲಕ ಗೌರವ ಸಲ್ಲಿಸಲಾಯಿತು.

ಜರ್ಮನಿಯ ಬರ್ಲಿನ್‌ನಲ್ಲಿ ನಡೆಯಬೇಕಿದ್ದ 1916ರ ಒಲಿಂಪಿಕ್ಸ್ ಮೊದಲ ಮಹಾಯುದ್ಧದ ಕಾರಣದಿಂದ ರದ್ದು ಮಾಡಯಿತು. 1920ರಲ್ಲಿ, ಬುಡಾಪೆಸ್ಟ್ (ಹಂಗೇರಿ)ನಲ್ಲಿ ನಂತರದ ಒಲಿಂಪಿಕ್ಸ್ ನಡೆಯಬೇಕಿತ್ತು. ಜಾಗತಿಕ ಯುದ್ಧದ ಕಾರಣದಿಂದ ಅದನ್ನು ಸಹ ರದ್ದುಗೊಳಿಸಲಾಯಿತು. 1920ರ ಒಲಂಪಿಕ್ಸ್ ಅನ್ನು ಆಂಟ್ವರ್ಪ್ನಲ್ಲಿ ನಡೆಸಲಾಯಿತು.

1924ರ ಪ್ಯಾರಿಸ್: ಈ ಕ್ರೀಡಾ ಜಾತ್ರೆಯಲ್ಲಿ ಫಿನ್ನಿಷ್ ಟ್ರ್ಯಾಕ್ ಅಥ್ಲೀಟ್ ಆಗಿದ್ದ ಪಾವೊ ನೂರ್ಮಿ ಅವರು ಓಟದಲ್ಲಿ (long-distance running) ತಮ್ಮದೇಯಾದ ಸಾಧನೆ ಮಾಡಿದ್ದರಿಂದ ಫ್ಲೈಯಿಂಗ್ ಫಿನ್ ಎಂದು ಕರೆಸಿಕೊಂಡರು. ಅವರು ಮೂರು ಒಲಿಂಪಿಕ್ ಕ್ರೀಡಾಕೂಟಗಳಲ್ಲಿ (1920, 1924, ಮತ್ತು 1928) ಒಂಬತ್ತು ಚಿನ್ನದ ಪದಕಗಳನ್ನು ಮತ್ತು ಮೂರು ಬೆಳ್ಳಿಗಳನ್ನು ತಮ್ಮದಾಗಿಸಿಕೊಂಡರು. ಸತತ ಎಂಟು ವರ್ಷಗಳ ಕಾಲ 4 ನಿಮಿಷ 10.4 ಸೆಕೆಂಡ್​ನಲ್ಲಿ ತಮ್ಮ ಗುರಿ ತಲುಪಿ ವಿಶ್ವ ದಾಖಲೆ ಬರೆದರು. ತಮ್ಮ ವೃತ್ತಿಜೀವನದಲ್ಲಿ ಒಟ್ಟು 25 ವಿಶ್ವ ದಾಖಲೆಗಳನ್ನು ಬರೆದ ಶ್ರೇಯಸ್ಸು ಅವರದ್ದಾಗಿದೆ. 12ನೇ ವಯಸ್ಸಿನಲ್ಲಿ ಶಾಲೆಯನ್ನು ತೊರೆದ ಪಾವೊ, ಹ್ಯಾನ್ಸ್ ಕೊಲೆಹ್ಮೈನೆನ್ ಅವರ ಒಲಿಂಪಿಕ್ ಸಾಹಸಗಳಿಂದ ಸ್ಫೂರ್ತಿ ಪಡೆದರು. ಕಟ್ಟುನಿಟ್ಟಾದ ತರಬೇತಿ ಮೂಲಕ ಕ್ರೀಡೆಗೆ ಇಳಿದರು. ಅಭ್ಯಾಸ ಮಾಡುತ್ತಿದ್ದಾಗ ಯಾವತ್ತೂ ಅವರ ಬಳಿ ಗಡಿಯಾರ ಇರುತ್ತಿತ್ತು.

1928ರ ಆಮ್‌ಸ್ಟರ್‌ಡ್ಯಾಮ್: ಆಮ್‌ಸ್ಟರ್‌ಡ್ಯಾಮ್ 1928 ಬೇಸಿಗೆ ಕ್ರೀಡಾಕೂಟದಲ್ಲಿ ಭಾರತದ ಹಾಕಿ ತಂಡವು ಮೊದಲ ಬಾರಿ ಚಿನ್ನ ಗೆದ್ದುಕೊಂಡಿತು. ಇದು ಭಾರತೀಯ ಹಾಕಿ ತಂಡದ ಚೊಚ್ಚಲ ಒಲಿಂಪಿಕ್ ಕೂಡ ಆಗಿತ್ತು. 1928ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ನಡೆದ ಕ್ರೀಡಾ ಜಾತ್ರೆಯಲ್ಲಿಯೂ ಭಾರತೀಯ ಹಾಕಿ ತಂಡ ತನ್ನ ವಿಜಯದ ಯಾತ್ರೆಯನ್ನು ಮುಂದುವರೆಸಿತು. ಇಲ್ಲಿ ಕೂಡ ಭಾರತದ ಹಾಕಿ ತಂಡ ಗೆದ್ದು ಜಾಗತಿಕ ಇತಿಹಾಸ ಬರೆಯಿತು. ಭಾರತ ತಂಡ ಜಪಾನ್ ತಂಡವನ್ನು 11-1 ಅಂತರದಿಂದ ಸೋಲಿಸಿದರೆ, ಅಮೆರಿಕ ತಂಡವನ್ನು 24-1 ಅಂತರದಿಂದ ಸೋಲಿಸಿತು. ಇದು ಇಂದಿಗೂ ದಾಖಲೆಯಾಗಿಯೇ ಉಳಿದಿದೆ.

Interesting Facts about Olympics
ಪ್ಯಾರಿಸ್‌ನ ಐಫೆಲ್ ಟವರ್‌ (AP)

1936ರ ಬರ್ಲಿನ್ ಒಲಿಂಪಿಕ್ಸ್: ಇದು ಹಿಟ್ಲರ್​ ಇದ್ದ ಕಾಲ. 1936ರ ಬರ್ಲಿನ್​ ಜಾಗತಿಕ ಕ್ರೀಡೋತ್ಸವಗಳು ಇದೇ ಹಿಟ್ಲರ್​ ಮುಂದೆ ನಡೆದವು. ಬಿಳಿ ಜನಾಂಗವೇ ಶ್ರೇಷ್ಠ ಎಂಬ ಘೋಷಣೆಯೊಂದಿಗೆ ಚಾಲನೆಗೆ ನೀಡಲಾಗಿತ್ತು. ಜರ್ಮನ್ ದೇಶದ ನಾಜಿ ಮುಖವಾಣಿ ಪತ್ರಿಕೆಗಳಲ್ಲಿ ಕರಿಯರನ್ನು 'ಮಂಗಗಳು' ಎಂದು ಅವಹೇಳನ ಮಾಡಿ ಬರೆಯಲಾಗಿತ್ತು. ಅಧಿಕಾರಿಗಳ ಉದಾಸೀನತೆ ಹಾಗೂ ರೆಫರಿಗಳ ಕುತಂತ್ರಗಳ ನಡುವೆಯೂ ಅಮೆರಿಕದ ಕಪ್ಪು ವರ್ಣೀಯ ಅಥ್ಲೀಟ್ ಜೆನ್ಸಿ ಓವೆನ್ಸ್ ಎಂಬುವರು ನಾಲ್ಕು ಚಿನ್ನ ಗೆದ್ದು ಕರಿಯರ ಪರ ಹೋರಾಡಿದ್ದು ಆಸಕ್ತಿದಾಯಕ ಸಂಗತಿಗಳಲ್ಲಿ ಒಂದು. ಅದೊಂದು ಯಾವತ್ತೂ ಮರೆಯಲಾಗದ ಘಟನೆ. ಒಲಿಂಪಿಕ್ ಸ್ನೇಹದ ಇತಿಹಾಸದಲ್ಲಿ ಇದು ಮರೆಯಲಾಗದ ನೆನಪು ಕೂಡ ಹೌದು. ಜರ್ಮನಿಯ ಅಥ್ಲೀಟ್ ಲುಜ್ ಲಾಂಗ್ ಎಂಬುವರು ಇದೇ ಒಲಿಂಪಿಕ್ಸ್‌ನಲ್ಲಿ ಜೆಸ್ಸಿ ಓವನ್‌ಗೆ ಸಹಾಯ ಹಸ್ತ ಚಾಚಿದ್ದರು. ಈ ಒಲಿಂಪಿಕ್ಸ್ ಸಮಯದಲ್ಲಿ ಹಿಟ್ಲರ್ ಭಾರತೀಯ ಹಾಕಿ ಮಾಂತ್ರಿಕ ಧ್ಯಾನ್​ ಚಂದ್​ ಅವರನ್ನು ಜರ್ಮನ್ ಸೈನ್ಯಕ್ಕೆ ಕಾರ್ಪೋರಲ್ ಆಗಿ ಸೇರಲು ಆಹ್ವಾನಿಸಿದ್ದರು ಎಂಬ ಮಾತನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

1940ರ ಒಲಿಂಪಿಕ್ಸ್ ಟೋಕಿಯೊದಲ್ಲಿ ನಡೆಯಬೇಕಿತ್ತು. ಆದರೆ, ಜಪಾನ್ ದೇಶ ಯುದ್ಧದಲ್ಲಿ ಪಾಲ್ಗೊಂಡಿದ್ದ ಕಾರಣ ಒಲಿಂಪಿಕ್ಸ್ ಹೊಣೆಗಾರಿಕೆಯನ್ನು ಸ್ಥಳಾಂತರಿಸಿತು. ಈ ಒಲಿಂಪಿಕ್ಸ್ ಅನ್ನು ಹೆಲ್ಸಿಂಕಿಯಲ್ಲಿ ನಡೆಸಲು ನಿರ್ಧರಿಸಲಾಯಿತು. ಆದರೆ, ಅಷ್ಟರಲ್ಲಿ ಎರಡನೇ ಮಹಾಯುದ್ಧ ಕೂಡ ಶುರುವಾಗಿತ್ತು.

1948ರ ಲಂಡನ್ ಒಲಿಂಪಿಕ್ಸ್: ನೆದರ್ಲೆಂಡ್ಸ್‌ನ 30 ವರ್ಷದ ಗೃಹಿಣಿ ಫ್ಯಾನಿ ಬ್ಯಾಂಕರ್ ಎಂಬಾಕೆ ಈ ಒಲಿಂಪಿಕ್ಸ್‌ನಲ್ಲಿ ನಾಲ್ಕು ಚಿನ್ನ ಗಳಿಸಿ ಗಮನ ಸೆಳೆದರು. 1999 ರಲ್ಲಿ, ಇಂಟರ್ನ್ಯಾಷನಲ್ ಅಸೋಸಿಯೇಷನ್ ​​ಆಫ್ ಅಥ್ಲೆಟಿಕ್ಸ್ ಫೆಡರೇಶನ್ ಈ ಸಾಧನೆಗಾಗಿ ಅವರಿಗೆ 'ಶತಮಾನದ ಅತ್ಯುತ್ತಮ ಮಹಿಳಾ ಅಥ್ಲೀಟ್' ಎಂಬ ಪ್ರಶಸ್ತಿ ನೀಡಿ ಗೌರವಿಸಿತು.

1952ರ ಹೆಲ್ಸಿಂಕಿ ಒಲಿಂಪಿಕ್ಸ್: 1952ರ ಹೆಲ್ಸಿಂಕಿ ಒಲಿಂಪಿಕ್ಸ್​ ಭಾರತವು ಹೆಮ್ಮೆ ಪಡುವ ಸಂಗತಿ. ಕಾರಣ ಈ ಒಲಿಂಪಿಕ್ಸ್‌ನಲ್ಲಿ ಭಾರತದ ಖಾಸಾಬಾ ದಾದಾ ಸಾಹೇಬ್ ಜಾಧವ್ ಅವರು ಕುಸ್ತಿಯಲ್ಲಿ ಮೊದಲ ಬಾರಿ ಕಂಚಿನ ಪದಕ ಗೆಲ್ಲುವ ಮೂಲಕ ದೇಶಕ್ಕೆ ಹೆಮ್ಮೆ ತಂದರು. ಇದು ಸ್ವತಂತ್ರ ಭಾರತದ ಮೊದಲ ವೈಯಕ್ತಿಕ ಒಲಿಂಪಿಕ್ ಪದಕವಾಗಿದೆ. ಇದಕ್ಕೂ ಮುನ್ನ ಭಾರತಕ್ಕೆ ವೈಯಕ್ತಿಕ ಸ್ಪರ್ಧೆಯಲ್ಲಿ ಯಾವುದೇ ಪ್ರಶಸ್ತಿ ಬಂದಿರಲಿಲ್ಲ. ಕುಳ್ಳಗಿರುವ ಜಾಧವ್ ಅವರನ್ನು ಪಾಕೆಟ್ ಡೈನಮೋ ಎಂದು ಸಹ ಕರೆಯಲಾಗುತ್ತದೆ. 1926ರಲ್ಲಿ ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ಜನಿಸಿದ ಕೆ.ಡಿ.ಜಾಧವ್ ಅವರ ತಂದೆ ದಾದಾಸಾಹೇಬ್ ಕೂಡ ಕುಸ್ತಿಪಟು ಎಂಬುವುದು ಗಮನಾರ್ಹ.

1960ರ ರೋಮ್ ಒಲಿಂಪಿಕ್ಸ್: ಈ ಜಾಗತಿಕ ಕ್ರೀಡೋತ್ಸವದಲ್ಲಿ ಪೋಲಿಯೋ ಹೊರತು ಅಮೆರಿಕನ್ ವಿಲ್ಮಾ ರುಡಾಲ್ಫ್ ಎಂಬುವರು ಓಟದಲ್ಲಿ ಮೂರು ಒಲಿಂಪಿಕ್ ಚಿನ್ನದ ಪದಕಗಳನ್ನು ಗೆದ್ದಿದ್ದು ಮಾನವನ ಆತ್ಮ ವಿಶ್ವಾಸಕ್ಕೆ ಸಾಕ್ಷಿಯಾಗಿದೆ. ವೈದ್ಯರು ಈತನಿಗೆ ಪೋಲಿಯೊದಿಂದ ತನ್ನ ಜೀವಿತಾವಧಿಯಲ್ಲಿ ನಡೆಯಲು ಸಾಧ್ಯವಿಲ್ಲವೆಂದು ಹೇಳಿದ್ದರು. ಆದರೂ, ಅದಲ್ಲೆವನ್ನು ಬದಿಗಿಟ್ಟು ಓಟದಲ್ಲಿ ಮೂರು ಒಲಿಂಪಿಕ್ ಚಿನ್ನದ ಪದಕ ಗಳಿಸಿದ್ದು ಇಲ್ಲಿ ನೆನಪು ಮಾಡಿಕೊಳ್ಳಬಹುದು.

ಇದೇ ಕ್ರೀಡೋತ್ಸವದಲ್ಲಿ ಬಡ ರಾಷ್ಟ್ರ ಇಥಿಯೋಪಿಯಾದ ಅಥ್ಲೀಟ್ ಅಬೆಬೆ ಬಿಕಿಲಾ ಎಂಬುವರು ಬರಿಗಾಲಿನಲ್ಲಿಯೇ ಮ್ಯಾರಥಾನ್‌ನಲ್ಲಿ ಓಡಿ (ಅತಿ ವೇಗದ ದಾಖಲೆಯೊಂದಿಗೆ) ಚಿನ್ನ ಗೆಲ್ಲುವ ಮೂಲಕ ಆಫ್ರಿಕನ್ ಕ್ರೀಡಾಪಟುಗಳಿಗೆ ಮಾದರಿಯಾದರು. 18 ವರ್ಷ ವಯಸ್ಸಿನ ಕಪ್ಪು ಅಮೆರಿಕನ್ ಹುಡುಗ ಕ್ಯಾಸಿಯಸ್ ಕ್ಲೀ ಎಂಬುವರು ಕೂಡ ಇದೇ ಒಲಿಂಪಿಕ್ಸ್‌ನ ಲೈಟ್-ಹೆವಿವೇಟ್ ವಿಭಾಗದಲ್ಲಿ ಬಾಕ್ಸಿಂಗ್‌ನಲ್ಲಿ ಚಿನ್ನದ ಪದಕ ಗೆದ್ದರು. ಆದರೆ, ಆಗ ಅದು ದೊಡ್ಡ ಸುದ್ದಿಯಾಗಿರಲಿಲ್ಲ. ಮುಂದೆ, ಇದೇ ಹುಡುಗ ಮುಹಮ್ಮದ್ ಎಂದು ಹೆಸರು ಬದಲಾಯಿಸಿಕೊಂಡು ವಿಶ್ವದ ಸಾರ್ವಕಾಲಿಕ ಸೂಪರ್‌ಮ್ಯಾನ್ ಬಾಕ್ಸರ್ ಆಗಿ ಇತಿಹಾಸದ ಪುಟ ಸೇರಿಕೊಂಡರು ಎಂಬುವುದು ಗಮನಾರ್ಹ.

1968ರಲ್ಲಿ ನಡೆದ ಮೆಕ್ಸಿಕೋ ಸಿಟಿ ಒಲಿಂಪಿಕ್ಸ್​, 1972ರ ಮ್ಯೂನಿಚ್​ ಒಲಿಂಪಿಕ್ಸ್​ ಕೂಡ ಹಲವು ದಾಖಲೆಗಳಿಗೆ ಸಾಕ್ಷಿಯಾಯಿತು. ಅಮೆರಿಕನ್ ಈಜು ಪಟು ಮಾರ್ಕ್ ಸ್ಪಿಟ್ಜ್ ಮ್ಯೂನಿಚ್ ಒಲಿಂಪಿಕ್ಸ್‌ನಲ್ಲಿ ಒಂದೇ ಒಲಿಂಪಿಕ್ಸ್‌ನಲ್ಲಿ ಏಳು ಚಿನ್ನದ ಪದಕಗಳನ್ನು ಗಳಿಸುವ ಮೂಲಕ ದಾಖಲೆ ಸ್ಥಾಪಿಸಿದರು. ಪ್ಯಾಲೇಸ್ಟಿನಿಯನ್ ಉಗ್ರಗಾಮಿಗಳ ದಾಳಿಯಿಂದ ಇಸ್ರೇಲಿಗಳ ಕ್ರೀಡಾ ಸ್ಪೂರ್ತಿ ಕಮರಿದ್ದು ಇದೇ ಸಮಯದಲ್ಲಿ. ಈ ಘಟನೆ ಒಲಿಂಪಿಕ್ಸ್​ ಇತಿಹಾಸದಲ್ಲಿ ಈವರೆಗೂ ಕಪ್ಪು ಚುಕ್ಕೆಯಾಗಿದೆ.

1976ರ ಮಾಂಟ್ರಿಯಲ್ ಒಲಿಂಪಿಕ್ಸ್: 14 ವರ್ಷದ ಅಥ್ಲೀಟ್ ನಾಡಿಯಾ ಕೊಮಾನೆಸಿ ಎಂಬುವರು ಈ ಒಲಂಪಿಕ್ಸ್​ನಲ್ಲಿ ಭಾಗಿಯಾಗಿದ್ದರಿಂದ ಹೆಚ್ಚು ಸುದ್ದಿಯಾಗಿತ್ತು. ರೊಮೇನಿಯನ್ ಮೂಲದ ಕೊಮಾನೆಸಿ, ಈ ಒಲಿಂಪಿಕ್ ಕ್ರೀಡಾಕೂಟದಲ್ಲಿ 10.0 ರಷ್ಟು ಪರಿಪೂರ್ಣ ಸ್ಕೋರ್ ಪಡೆದ ಮೊದಲ ಜಿಮ್ನಾಸ್ಟ್ ಆಗಿ ಹೊರ ಹೊಮ್ಮಿದರು. ಐದು ಬಾರಿ ಒಲಿಂಪಿಕ್ ಚಿನ್ನದ ಪದಕ ವಿಜೇತರಾಗಿದ್ದಲ್ಲದೇ, ಒಲಿಂಪಿಕ್​ನಲ್ಲಿ ಚಿನ್ನದ ಪದಕ ಅತ್ಯಂತ ಕಿರಿಯ ವಿಜೇತೆ ಎಂಬ ಬಿರುದು ಕೂಡ ಪಡೆದುಕೊಂಡರು. 1984ರ ಲಾಸ್ ಏಂಜಲೀಸ್, 1988ರ ಸಿಯೋಲ್‌, 1992ರ ಬಾರ್ಸಿಲೋನಾ ಒಲಿಂಪಿಕ್ಸ್‌, 1996ರ ಅಟ್ಲಾಂಟಾ ಒಲಿಂಪಿಕ್ಸ್‌ ಕೂಡ ಹಲವು ದಾಖಲೆಗಳಿಗೆ ಸಾಕ್ಷಿಯಾಗಿದೆ.

2000ರ ಸಿಡ್ನಿ: 2000ರ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ಒಲಂಪಿಕ್ಸ್​ನಲ್ಲಿ ಭಾರತದ ಕರ್ಣಂ ಮಲ್ಲೇಶ್ವರಿ ವೇಟ್‌ಲಿಫ್ಟಿಂಗ್‌ನಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ಸೃಷ್ಟಿಸಿದರು.

Interesting Facts about Olympics
ಒಲಿಂಪಿಕ್‌ ಕ್ರೀಡಾಕೂಟದ ಆಸಕ್ತಿದಾಯಕ ಸಂಗತಿಗಳು (AP)

2004ರ ಗ್ರೀಸ್: 2004ರ ಗ್ರೀಸ್​ನ ಅಥೆನ್ಸ್​ನಲ್ಲಿ ನಡೆದ ಒಲಂಪಿಕ್ಸ್​ನಲ್ಲಿ ಅಮೆರಿಕನ್ ಈಜು ಪಟು ಮೈಕೆಲ್ ಫೆಲ್ಡ್ ಎಂಬುವರು ಆರು ಚಿನ್ನ, ಎರಡು ಕಂಚು ಮತ್ತು ಎಂಟು ಪದಕಗಳೊಂದಿಗೆ ವಿಶಿಷ್ಟ ದಾಖಲೆ ನಿರ್ಮಿಸಿದರು. ಮಾರ್ಕ್ ಸ್ಪಿಟ್ಜ್ ಮ್ಯೂನಿಚ್ ಅವರ ದಾಖಲೆ ಮುರಿಯುವ ಆಸೆ ಇವರದ್ದಾಗಿತ್ತು. ಇದೇ ಒಲಿಂಪಿಕ್ಸ್‌ನಲ್ಲಿ ಭಾರತ ತನ್ನ ಮೊದಲ ವೈಯಕ್ತಿಕ ಬೆಳ್ಳಿ ಪದಕ ಗೆದ್ದುಕೊಂಡಿತು. ಪುರುಷರ ಡಬಲ್ ಟ್ರ್ಯಾಪ್ ಶೂಟಿಂಗ್‌ನಲ್ಲಿ ರಾಜ್ಯವರ್ಧನ್ ಸಿಂಗ್ ರಾಥೋಡ್ ಈ ಪದಕ ಗೆದ್ದು ಇತಿಹಾಸ ಬರೆದರು.

2018ರ ಬೀಜಿಂಗ್: ಚೀನಾದ ಬೀಜಿಂಗ್​ನಲ್ಲಿ ನಡೆದ ಈ ಒಲಂಪಿಕ್ಸ್​ನಲ್ಲಿ ಮೈಕೆಲ್ ಫೆಲ್ಪ್ಸ್ ಎಂಬ ಈಜು ಪಟು ಎಂಟು ಚಿನ್ನದ ಪದಕ ಗಳಿಸುವ ಮೂಲಕ 1972ರ ಮಾರ್ಕ್ ಸ್ಪಿಟ್ಜ್ ಅವರ ದಾಖಲೆ ಮುರಿದರು. ವಿಶ್ವದ ಅತಿ ವೇಗದ ಓಟಗಾರ ಉಸೇನ್ ಬೋಲ್ಟ್ ಇದೇ ಬೀಜಿಂಗ್‌ನಲ್ಲಿ 100 ಮೀಟರ್ ರನ್ನಿಂಗ್​​ ಸ್ಪರ್ಧೆಯಲ್ಲಿ ಕೇವಲ 9.69 ಸೆಕೆಂಡುಗಳಲ್ಲಿ ಗುರಿ ಮುಟ್ಟುವ ಮೂಳಕ ಮತ್ತೊಮ್ಮೆ ತಮ್ಮದೇ ವಿಶ್ವ ದಾಖಲೆ ಮುರಿದರು. ಇದೇ ಬೀಜಿಂಗ್ ಒಲಂಪಿಕ್ಸ್​ನಲ್ಲಿ ರಷ್ಯಾ ಮೂಲದ ಅಮೆರಿಕದ ಅಥ್ಲೀಟ್ ನಾಸ್ತಿಯಾ ಲಿಯುಕಿನ್ ಎಂಬುವರು ಕಲಾತ್ಮಕ ಜಿಮ್ನಾಸ್ಟಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ನಂತರ ವಿಶ್ವವಿಖ್ಯಾತರು ಆದರು.

2012ರ ಲಂಡನ್: ಇಂಗ್ಲೆಂಡಿನಲ್ಲಿ ನಡೆದ 2012ರ ಒಲಂಪಿಕ್ಸ್​ ಶಿಸ್ತು ಮತ್ತು ಅಚ್ಚುಕಟ್ಟಾದ ವ್ಯವಸ್ಥೆಗೆ ಹೆಸರುವಾಸಿಯಾಗಿದೆ. ಎಲ್ಲಾ ದೇಶಗಳ ತಂಡಗಳಲ್ಲಿ ಮಹಿಳಾ ಅಥ್ಲೀಟ್‌ಗಳಿದ್ದ ಮೊದಲ ಒಲಿಂಪಿಕ್ಸ್ ಇದಾಗಿದೆ. ಸೌದಿ ಅರೇಬಿಯಾ, ಕತಾರ್ ಮತ್ತು ಬ್ರೂನೈ ಕೂಡ ತಮ್ಮ ತಂಡಗಳಲ್ಲಿ ಮಹಿಳಾ ಕ್ರೀಡಾಪಟುಗಳನ್ನು ಹೊಂದಿದ್ದರು. ಮೈಕಲ್ ಫೆಲ್ಪ್ಸ್ ಈ ಒಲಿಂಪಿಕ್ಸ್​​ನಲ್ಲಿ ಮತ್ತೊಮ್ಮೆ ಮಿಂಚಿದರು. ಈ ಮೂಲಕ ವೈಯಕ್ತಿಕ ಪದಕಗಳ ಸಂಖ್ಯೆಯನ್ನು 22ಕ್ಕೆ ಹೆಚ್ಚಿಸಿಕೊಂಡಿದ್ದು ಇಲ್ಲಿನ ವಿಶೇಷವಾಗಿತ್ತು. ಇದೇ ಒಲಿಂಪಿಕ್ಸ್​​ನಲ್ಲಿ ಸೈನಾ ನೆಹ್ವಾಲ್ ಭಾರತಕ್ಕೆ ಚೊಚ್ಚಲ ಬ್ಯಾಡ್ಮಿಂಟನ್ ಒಲಿಂಪಿಕ್ಸ್ ಪದಕ ತಂದುಕೊಟ್ಟಿದ್ದರು. ಸುಶೀಲ್ ಕುಮಾರ್ ತಮ್ಮ ಎರಡನೇ ಒಲಿಂಪಿಕ್ ಪದಕ ಪಡೆದರು. ಗಗನ್ ನಾರಂಗ್, ವಿಜಯ್ ಕುಮಾರ್, ಮೇರಿ ಕೋಮ್ ಮತ್ತು ಯೋಗೇಶ್ವರ್ ದತ್ ಅವರು ಸೇರಿ ಭಾರತಕ್ಕೆ ಆರು ಪದಕಗಳನ್ನು ತಂದರು.

2016ರ ರಿಯೊ ಒಲಿಂಪಿಕ್ಸ್: ದಕ್ಷಿಣ ಅಮೆರಿಕಾದ ರಿಯೊ ಒಲಿಂಪಿಕ್ಸ್​ನಲ್ಲಿ ಬಹ್ರೇನ್, ಫಿಜಿ, ಐವರಿ ಕೋಸ್ಟ್, ಜೋರ್ಡಾನ್, ಕೊಸೊವೊ, ಪೋರ್ಟೊ ರಿಕೊ, ಸಿಂಗಾಪುರ್, ತಜಕಿಸ್ತಾನ್, ವಿಯೆಟ್ನಾಂ ದೇಶಗಳು ತಮ್ಮ ಮೊದಲ ಒಲಿಂಪಿಕ್ ಚಿನ್ನದ ಪದಕಗಳನ್ನು ಪಡೆದು ಇತಿಹಾಸ ಬರೆದವು. ಈ ಒಲಿಂಪಿಕ್ಸ್​ ಅನ್ನು ನೇರವಾಗಿ ವೀಕ್ಷಿಸಲು ಬಂದ ಪ್ರೇಕ್ಷಕರ ಸಂಖ್ಯೆ 60 ಸಾವಿರ ಕೂಡ ದಾಟಲಿಲ್ಲ. ಆದರೆ, ವಿಶ್ವದಾದ್ಯಂತ ಟಿವಿ ಪರದೆಗಳಲ್ಲಿ ಒಲಿಂಪಿಕ್ಸ್ ವೀಕ್ಷಿಸಿದವರ ಸಂಖ್ಯೆ 325 ಕೋಟಿ ದಾಟಿದ್ದು ಹೊಸ ದಾಖಲೆಯಾಗಿತ್ತು.

2021ರ ಟೋಕಿಯೊ: ಜಪಾನ್ ದೇಶದ ಟೋಕಿಯೊದಲ್ಲಿ ನಡೆದ ಒಲಿಂಪಿಕ್ಸ್​​ನಲ್ಲಿ ಕೋವಿಡ್ ಕಾರಣದಿಂದ ಹೆಚ್ಚಿನ ಸಂಖ್ಯೆಯ ಕ್ರೀಡಾಪಟುಗಳು ಭಾಗಿಯಾಗಿರಲಿಲ್ಲ. 13 ತಿಂಗಳ ತಡವಾಗಿ ನಡೆದ ಈ ಕ್ರೀಡಾಕೂಟವನ್ನು '2020 ಟೋಕಿಯೋ ಒಲಿಂಪಿಕ್ಸ್' ಎಂದು ಕರೆಯಲಾಗುತ್ತದೆ. ಕೋವಿಡ್‌ನಿಂದಾಗಿ ಹೆಚ್ಚಿನ ಕ್ರೀಡೆಗಳನ್ನು ಪ್ರೇಕ್ಷಕರಿಲ್ಲದೆ ನಡೆಸಲಾಯಿತು.

ಟೋಕಿಯೊ ಒಲಿಂಪಿಕ್ಸ್ ಮರುಬಳಕೆ ಮಾಡಬಹುದಾದ ಕಾರ್ಡ್‌ಬೋರ್ಡ್ ಹಾಸಿಗೆಗಳು ಮತ್ತು 100% ನವೀಕರಿಸಬಹುದಾದ ಶಕ್ತಿಯಿಂದ ಬರುವ ವಿದ್ಯುತ್ ಸೇರಿದಂತೆ ಕೆಲವು ಉತ್ತಮ ಸಮರ್ಥನೀಯ ಉಪಕ್ರಮಗಳನ್ನು ಒಳಗೊಂಡಿತ್ತು. ಎಲ್ಲ ಒಲಿಂಪಿಕ್ ಪದಕಗಳನ್ನು ಮರುಬಳಕೆಯ ಎಲೆಕ್ಟ್ರಾನಿಕ್ಸ್‌ನಿಂದ ಮಾಡಿದ್ದು ವಿಶೇಷವಾಗಿತ್ತು. ಇಲ್ಲಿನ ಕ್ರೀಡಾ ಆಯೋಜಕರು 5,000 ಪದಕಗಳನ್ನು ತಯಾರಿಸಲು 47,000 ಟನ್ ಟೆಕ್ ತ್ಯಾಜ್ಯ ಮತ್ತು 5,000,000 ಸೆಲ್ ಫೋನ್‌ಗಳನ್ನು ಸಂಗ್ರಹಿಸಿದ್ದರು.

ಇದನ್ನೂ ಓದಿ: ಬೆಳಕಿನ ನಗರಿ ಪ್ಯಾರಿಸ್‌ನಲ್ಲಿ ಕ್ರೀಡೋತ್ಸವ: ಭಾರತದ 72 ಸ್ಪರ್ಧಿಗಳಿಗೆ ಇದು ಮೊದಲ ಒಲಿಂಪಿಕ್ಸ್ - Paris Olympics 2024

ETV Bharat Logo

Copyright © 2024 Ushodaya Enterprises Pvt. Ltd., All Rights Reserved.