ನವದೆಹಲಿ: ಪ್ಯಾರಿಸ್ ಪ್ಯಾರಾಲಿಂಪಿಕ್ ಕ್ರೀಡಾಕೂಟದ ಮೂರನೇ ದಿನವಾದ ಶನಿವಾರ ಭಾರತದ ಮಹಿಳಾ ಶೂಟರ್ ರುಬಿನಾ ಫ್ರಾನ್ಸಿಸ್ ಕಂಚಿನ ಪದಕ ಗೆದ್ದಿದ್ದಾರೆ. ಈ ಮೂಲಕ ಭಾರತದ ಖಾತೆಗೆ 5ನೇ ಪದಕ ಸೇರ್ಪಡೆಗೊಂಡಿದೆ. ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ SH1 ಪಂದ್ಯದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಫೈನಲ್ ಹಣಾಹಣಿಯಲ್ಲಿ ರುಬಿನಾ ಫ್ರಾನ್ಸಿಸ್ 211.1 ಅಂಕ ಗಳಿಸಿದರು. ಇರಾನ್ನ ಜವನ್ಮಾರ್ದಿ ಸರೆಹ್ ಚಿನ್ನ ಮತ್ತು ಟರ್ಕಿಯ್ ಓಜ್ಗನ್ ಐಸೆಲ್ ಬೆಳ್ಳಿ ಪದಕ ಜಯಿಸಿದರು. ಸರೆಹ್ 236.8 ಅಂಕ ಗಳಿಸಿದರೇ, ಐಸೆಲ್ 231.1 ಅಂಕಗಳನ್ನು ಪಡೆದರು.
ಮಧ್ಯಪ್ರದೇಶದವರಾದ ರುಬಿನಾ ಪ್ಯಾರಾ ಸ್ಟೋರ್ಟ್ ವಿಶ್ವಕಪ್-2023ರಲ್ಲಿ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. 2017ರಲ್ಲಿ ಬ್ಯಾಂಕಾಕ್ನಲ್ಲಿ ನಡೆದ ವಿಶ್ವ ಶೂಟಿಂಗ್ ಪ್ಯಾರಾ ಸ್ಪೋರ್ಟ್ಸ್ ಚಾಮಪಿಯನ್ಶಿಪ್ನಲ್ಲಿ ಚಿನ್ನದ ಪದಕ ಗೆದ್ದು ವಿಶ್ವ ದಾಖಲೆ ನಿರ್ಮಿಸಿದ್ದರು. 2019ರ ಕ್ರೋಯೇಷಿಯಾದಲ್ಲಿ ನಡೆದ ವಿಶ್ವ ಪ್ಯಾರಾ ಚಾಂಪಿಯನ್ಸ್ಶಿಪ್ನಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದರು.
And that's medal no. 5⃣ for 🇮🇳 at #ParisParalympics2024🤩🤩
— SAI Media (@Media_SAI) August 31, 2024
Rubina Francis' magic prevails, she claims a #Bronze🥉in #ParaShooting P2 - Women's 10m Air Pistol SH1 event with a score of 211.1🥳🤩
She becomes 1st Indian female para-shooting athlete to win a medal in Pistol event.… pic.twitter.com/fieVplKhMD
ಪ್ಯಾರಾಲಿಂಪಿಕ್ ನಲ್ಲಿ ಇದಕ್ಕೂ ಮೊದಲು ಶೂಟಿಂಗ್‌ನಲ್ಲಿ ಭಾರತಕ್ಕೆ ಮೂರು ಪದಕಗಳು ಬಂದಿವೆ. ಅಥ್ಲೆಟಿಕ್ಸ್‌ನಲ್ಲಿ ಒಂದು ಪದಕ ಸಿಕ್ಕಿದೆ. ಶೂಟರ್ ಅವನಿ ಲೆಖರಾ ಭಾರತಕ್ಕೆ ಮೊದಲ ಚಿನ್ನದ ಪದಕ ಗೆದ್ದರೇ, ಮೋನಾ ಅಗರ್ವಾಲ್ ಕಂಚಿನ ಪದಕ ಮುಡಿಗೇರಿಸಿಕೊಂಡರು. ಬಳಿಕ ಮನೀಷ್ ನರ್ವಾಲ್ ಶೂಟಿಂಗ್‌ನಲ್ಲಿ ಮೂರನೇ ಪದಕ ತಂದುಕೊಟ್ಟರು. ಮನೀಶ್ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಇವುಗಳ ಹೊರತಾಗಿ, ಪ್ರೀತಿ ಪಾಲ್ ಮಹಿಳೆಯರ 100 ಮೀಟರ್ಸ್ (ಟಿ35 - ಆಂಬ್ಯುಲೇಟರಿ ಅಥ್ಲೀಟ್) ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.