ETV Bharat / sports

ವೀಲ್‌ಚೇರ್ ಹ್ಯಾಂಡ್‌ಬಾಲ್ ವಿಶ್ವ ಚಾಂಪಿಯನ್‌ಶಿಪ್​ನಲ್ಲಿ ಭಾಗಿಯಾಗಲಿರುವ ಭಾರತ - WORLD HANDBALL CHAMPIONSHIP - WORLD HANDBALL CHAMPIONSHIP

ಈಜಿಪ್ಟ್‌ನ ರಾಜಧಾನಿ ಕೈರೋದಲ್ಲಿ ನಡೆಯಲಿರುವ ವೀಲ್‌ಚೇರ್ ವಿಶ್ವ ಹ್ಯಾಂಡ್‌ಬಾಲ್ ಚಾಂಪಿಯನ್‌ಶಿಪ್‌ಗೆ ಭಾರತ ತಂಡ ಪ್ರಕಟಿಸಲಾಗಿದೆ.

ವೀಲ್‌ಚೇರ್ ಹ್ಯಾಂಡ್‌ಬಾಲ್ ಭಾರತ ತಂಡ
ವೀಲ್‌ಚೇರ್ ಹ್ಯಾಂಡ್‌ಬಾಲ್ ಭಾರತ ತಂಡ (ETV Bharat)
author img

By ETV Bharat Sports Team

Published : Sep 13, 2024, 4:21 PM IST

ಜೈಪುರ್​ (ರಾಜಸ್ಥಾನ): ಭಾರತದ ವೀಲ್‌ಚೇರ್ ಹ್ಯಾಂಡ್‌ಬಾಲ್ ತಂಡವು ಸೆಪ್ಟೆಂಬರ್ 15 ರಿಂದ 22 ರವರೆಗೆ ಈಜಿಪ್ಟ್​ನ ಕೈರೋದಲ್ಲಿ ನಡೆಯಲಿರುವ 3ನೇ IHF ಫೋರ್-ಎ-ಸೈಡ್ ವೀಲ್‌ಚೇರ್ ಹ್ಯಾಂಡ್‌ಬಾಲ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲಿದೆ.

ಮಹಾರಾಷ್ಟ್ರದ ಜಾವೇದ್ ರಂಜಾನ್ ಚೌಧರಿ ಅವರನ್ನು ನಾಯಕರಾಗಿ ತಂಡವನ್ನು ನಡೆಸಲಿದ್ದಾರೆ ಎಂದು ಹ್ಯಾಂಡ್‌ಬಾಲ್ ಅಸೋಸಿಯೇಷನ್ ​​ಇಂಡಿಯಾದ ಪ್ರಧಾನ ಕಾರ್ಯದರ್ಶಿ ಡಾ.ತೇಜರಾಜ್ ಸಿಂಗ್ ತಿಳಿಸಿದ್ದಾರೆ. ಕಳೆದ ವಿಶ್ವ ವೀಲ್‌ಚೇರ್ ಚಾಂಪಿಯನ್‌ಶಿಪ್‌ನಲ್ಲೂ ಭಾಗವಹಿಸಿದ್ದ ಭಾರತ ತಂಡ ನಾಲ್ಕನೇ ಸ್ಥಾನ ಪಡೆದುಕೊಂಡಿತ್ತು. ಇದೀಗ ಗುರುವಾರ ನಡೆದ ಅಂತಿಮ ತರಬೇತಿ ಶಿಬಿರದ ನಂತರ ತಂಡವನ್ನು ಪ್ರಕಟಿಸಲಾಗಿದೆ.

ಯುವಜನ ವ್ಯವಹಾರ ಮತ್ತು ಕ್ರೀಡಾ ಇಲಾಖೆ ಕಾರ್ಯದರ್ಶಿ ಹಾಗೂ ರಾಜಸ್ಥಾನ ರಾಜ್ಯ ಕ್ರೀಡಾ ಮಂಡಳಿಯ ಅಧ್ಯಕ್ಷ ಡಾ.ನೀರಜ್ ಕೆ ಪವನ್ ಅವರು ಆಟಗಾರರನ್ನು ಪ್ರೋತ್ಸಾಹಿಸುತ್ತಾ, ನೀವು ಭಾರತವನ್ನು ಪ್ರತಿನಿಧಿಸಲಿದ್ದೀರಿ ಎಂಬುದನ್ನು ನೆನಪಿಡಿ. ಈ ಮೂರನೇ ಆವೃತ್ತಿಯಲ್ಲಿ ಖಂಡಿತವಾಗಿಯೂ ಪದಕದೊಂದಿಗೆ ಭಾರತ ತಂಡ ಮರಳಲಿದೆ ಎಂಬ ವಿಶ್ವಾಸ ನಮಗಿದೆ ಎಂದು ತಿಳಿಸಿದ್ದಾರೆ.

ಉಳಿದಂತೆ ರಾಜಸ್ಥಾನ ಸ್ಟೇಟ್ ಸ್ಪೋರ್ಟ್ಸ್ ಕೌನ್ಸಿಲ್‌ನ ಹ್ಯಾಂಡ್‌ಬಾಲ್ ಕೋಚ್ ಪ್ರಿಯಾದೀಪ್ ಸಿಂಗ್ ಖಂಗರೋಟ್ ಅವರನ್ನು ಭಾರತ ತಂಡದ ಕೋಚ್ ಆಗಿ ನೇಮಿಸಲಾಗಿದೆ. ಈ ಕುರಿತು ಎಸ್‌ಎಂಎಸ್‌ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಪದ್ಮಶ್ರೀ, ಅರ್ಜುನ್ ಪ್ರಶಸ್ತಿ ಪುರಸ್ಕೃತ ಮತ್ತು ಒಲಿಂಪಿಯನ್ ಅಥ್ಲೀಟ್ ಶ್ರೀರಾಮ್ ಸಿಂಗ್ ಶೇಖಾವತ್, ಹಣಕಾಸು ಸಲಹೆಗಾರ್ತಿ ವೀಣಾ ಗುಪ್ತಾ, ಅರ್ಜುನ್ ಪ್ರಶಸ್ತಿ ಪುರಸ್ಕೃತ ರಜತ್ ಚೌಹಾಣ್, ಧ್ಯಾನಚಂದ್ ಪ್ರಶಸ್ತಿ ಪುರಸ್ಕೃತ ರಾಮಕುಮಾರ್, ಮಹಾರಾಣಾ ಪ್ರತಾಪ್ ಪ್ರಶಸ್ತಿ ಪುರಸ್ಕೃತ ಸುರ್ಭಿ ಮಿಶ್ರಾ, ಗುರು ವಶಿಷ್ಠ ಪ್ರಶಸ್ತಿ ಪುರಸ್ಕೃತ ಸುಬ್ರತಾ ಸೇನ್, ಗುರು ವಶಿಷ್ಠ ಪ್ರಶಸ್ತಿ ಪುರಸ್ಕೃತ ಕರಣ್, ಹ್ಯಾಂಡ್ ಬಾಲ್ ಅಸೋಸಿಯೇಶನ್ ಗೌರವ ಕಾರ್ಯದರ್ಶಿ ಯಶ್ ಪ್ರತಾಪ್ ಸಿಂಗ್ ಉಪಸ್ಥಿತರಿದ್ದರು.

ಭಾರತ ತಂಡ: ಜಾವೇದ್ ರಂಜಾನ್ ಚೌಧರಿ (ನಾಯಕ), ಮೊಹಮ್ಮದ್ ಲತೀಫ್ ಭಟ್, ಮೀನಾಕ್ಷಿ ಹರಿಚಂದ್ರ ಜಾಧವ್, ಅನಿಲ್ ಕುಮಾರ್ ಕಚಿ, ರಮಾವತ್ ಕೋಟೇಶ್ವರ್, ಬಸಪ್ಪ ಸುಣಧೋಳಿ, ಸಿದ್ದಪ್ಪ ಪಟಗುಂಡಿ, ಅಜಿತ್ ಕುಮಾರ್ ಶುಕ್ಲಾ, ಅಭಿಜೀತ್ ಅಪ್ಪಾಸಾಹೇಬ್ ಪಾಟೀಲ್, ಇಶ್ರತ್ ಅಖ್ತರ್. ಕೋಚ್: ಆನಂದ್ ಮಾನೆ (ಮಹಾರಾಷ್ಟ್ರ), ಪ್ರಿಯದೀಪ್ ಸಿಂಗ್ ಖಂಗರೋಟ್ (ರಾಜಸ್ಥಾನ). ಮ್ಯಾನೇಜರ್: ಕ್ಯಾಪ್ಟನ್ ಲೂಯಿಸ್ (ಮಹಾರಾಷ್ಟ್ರ).

ಪ್ರತಿನಿಧಿ: ಸಾಯಿಕೃಷ್ಣ ಹತಂಗಡಿ (ಮಹಾರಾಷ್ಟ್ರ). ನಿಯೋಗದ ಮುಖ್ಯಸ್ಥ: ಡಾ. ಆನಂದೇಶ್ವರ್ ಪಾಂಡೆ (ಉತ್ತರ ಪ್ರದೇಶ)

ಇದನ್ನೂ ಓದಿ: ಸಾವನ್ನೇ ಗೆದ್ದು ಮೈದಾನಕ್ಕೆ ಮರಳಿರುವ ಕ್ರಿಕೆಟರ್​ಗಳು ಇವರೇ ನೋಡಿ! - CRICKETER WHO HAD ROAD ACCIDENT

ETV Bharat Logo

Copyright © 2025 Ushodaya Enterprises Pvt. Ltd., All Rights Reserved.