ನವದೆಹಲಿ: ಟೋಕಿಯೊ ಪ್ಯಾರಾಲಿಂಪಿಕ್ನಲ್ಲಿ ಎರಡು ಚಿನ್ನ, ಒಂದು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಗೆದ್ದು ಅಮೋಘ ಪ್ರದರ್ಶನ ನೀಡಿದ್ದ ಭಾರತ ಪ್ಯಾರಾ ಶೂಟಿಂಗ್ ತಂಡವು ಇದೀಗ ಪ್ಯಾರಿಸ್ ಪ್ಯಾರಾಲಿಂಪಿಕ್ನಲ್ಲಿ ಹಿಂದಿನ ಸಾಧನೆಗಳನ್ನು ಮೀರಿಸುವ ನಿರೀಕ್ಷೆಯೊಂದಿಗೆ ಮುನ್ನಡೆದಿದೆ. 10 ಕ್ರೀಡಾಪಟುಗಳ ತಂಡವು ಟೋಕಿಯೊದಲ್ಲಿ ಗೆದ್ದ ನಾಲ್ಕು ಪದಕಗಳಿಗಿಂತ ಈ ಬಾರಿ ಹೆಚ್ಚಿನ ಪದಕ ಮುಡಿಗೇರಿಸಿಕೊಳ್ಳುವ ಯೋಜನೆ ರೂಪಿಸಿದೆ. ಉತ್ತಮವಾಗಿ ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತೆ ಅವನಿ ಲೆಖರಾ ಮತ್ತು ಮನೀಶ್ ನರ್ವಾಲ್ ಮೇಲೆ ಹೆಚ್ಚಿನ ನಿರೀಕ್ಷೆಗಳಿವೆ.
ಪ್ಯಾರಿಸ್ ಪ್ಯಾರಾಲಿಂಪಿಕ್ 2024 ರಲ್ಲಿ ಶೂಟಿಂಗ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ತಂಡದಲ್ಲಿ, ಮನೀಶ್ ನರ್ವಾಲ್, ಅಮೀರ್ ಅಹ್ಮದ್ ಭಟ್, ರುದ್ರಾಂಶ್ ಖಂಡೇಲ್ವಾಲ್, ಅವ್ನಿ ಲೆಖರಾ, ಮೋನಾ ಅಗರ್ವಾಲ್, ರುಬಿನಾ ಫ್ರಾನ್ಸಿಸ್, ಸ್ವರೂಪ್ ಮಹಾವೀರ್ ಉನ್ಹಾಲ್ಕರ್, ಸಿದ್ಧಾರ್ಥ್ ಬಾಬು, ಶ್ರೀಹರ್ಷ್ ದೇವರೆಡ್ಡಿ ಮತ್ತು ನಿಹಾಲ್ ಸಿಂಗ್ ಸೇರಿದ್ದಾರೆ. ಪ್ಯಾರಾಲಿಂಪಿಕ್ ಶೂಟಿಂಗ್ ಸ್ಪರ್ಧೆಗಳು ಆಗಸ್ಟ್ 30 ರಂದು ಪ್ರಸಿದ್ಧ ಚಟೌರೌ ಶೂಟಿಂಗ್ ಸೆಂಟರ್‌ನಲ್ಲಿ ಪ್ರಾರಂಭವಾಗೊಳ್ಳಲಿವೆ. ಈಗಾಗಲೇ ಕಠಿಣ ಅಭ್ಯಾಸ ನಡೆಸಿರುವ ಶೂಟರ್‌ಗಳು ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ದೇಶವನ್ನು ಹೆಮ್ಮೆ ಪಡುವಂತೆ ಮಾಡುವ ವಿಶ್ವಾಸದಲ್ಲಿದ್ದಾರೆ.
Exclusive 📸
— SAI Media (@Media_SAI) August 24, 2024
Our 1️⃣0️⃣-athlete strong 🇮🇳#ParaShooting 🔫 team assembled at the IGI Airport, Delhi ✈️ today prior to heading for the 🇫🇷#ParisParalympics2024
Part of the team are Tokyo 2020 gold medalists Avani Lekhara and Manish Narwal!
Extend your best 🙌🏻wishes to our Para… pic.twitter.com/oIRDpfS8GW
ಈ ಬಗ್ಗೆ ಮಾತನಾಡಿದ ಮನೀಶ್ ನರ್ವಾಲ್, 'ನಮ್ಮ ಸಿದ್ಧತೆಗಳು ಹುರುಪಿನಿಂದ ಕೂಡಿವೆ ಮತ್ತು ಪ್ಯಾರಿಸ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲು ನಾವು ಉತ್ಸುಕರಾಗಿದ್ದೇವೆ. ನಮ್ಮ ಹಿಂದಿನ ಸಾಧನೆಯನ್ನು ಮೀರಿಸಿ ಈ ಬಾರಿ ಹೆಚ್ಚಿನ ಪದಕಗಳನ್ನು ತರುವುದು ನಮ್ಮ ಗುರಿಯಾಗಿದೆ. ಪ್ಯಾರಾಲಿಂಪಿಕ್ ಸಮಿತಿಯು ಪ್ಯಾರಿಸ್ ಪ್ಯಾರಾಲಿಂಪಿಕ್ನಲ್ಲಿ ದಾಖಲೆಯ 25ಕ್ಕೂ ಹೆಚ್ಚಿನ ಪದಕಗಳ ನಿರೀಕ್ಷೆ ಹೊಂದಿದೆ. ಅದರಲ್ಲೂ ಶೂಟಿಂಗ್ ತಂಡದ ಮೇಲಿನ ನಿರೀಕ್ಷೆಗಳು ಹೆಚ್ಚಿವೆ. ಪ್ಯಾರಾಲಿಂಪಿಕ್ ಕಮಿಟಿ ಆಫ್ ಇಂಡಿಯಾ (PCI) ಇಡೀ ತಂಡವನ್ನು ಅಭಿನಂದಿಸಿದೆ ಎಂದ ಅವರು ತಮ್ಮ ಗಮನಾರ್ಹ ಸಾಧನೆಗಳೊಂದಿಗೆ ರಾಷ್ಟ್ರದ ಹೆಸರನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.