ETV Bharat / sports

ವಿರಾಟ್​ ಕೊಹ್ಲಿ ಇಲ್ಲದ ಟೆಸ್ಟ್ ಸರಣಿ ಸಪ್ಪೆ: ಇಂಗ್ಲೆಂಡ್​ ಮಾಜಿ ವೇಗಿ ಸ್ಟುವರ್ಟ್​ ಬ್ರಾಡ್​ - ವಿರಾಟ್​ ಕೊಹ್ಲಿ

ಟೆಸ್ಟ್ ಸರಣಿಯಿಂದ ವಿರಾಟ್​ ಕೊಹ್ಲಿ ಗೈರಾಗಿದ್ದು ದುರದೃಷ್ಟಕರ. ಅದ್ಭುತ ಆಟಗಾರನನ್ನು ಸರಣಿ ಮಿಸ್​ ಮಾಡಿಕೊಳ್ಳುತ್ತಿದೆ ಎಂದು ಇಂಗ್ಲೆಂಡ್‌ನ ಮಾಜಿ ವೇಗದ ಬೌಲರ್‌ ಸ್ಟುವರ್ಟ್​ ಬ್ರಾಡ್​ ಅಭಿಪ್ರಾಯಪಟ್ಟಿದ್ದಾರೆ.

ಸ್ಟುವರ್ಟ್​ ಬ್ರಾಡ್​
ಸ್ಟುವರ್ಟ್​ ಬ್ರಾಡ್​
author img

By ETV Bharat Karnataka Team

Published : Feb 12, 2024, 4:10 PM IST

ಕೇಪ್​ಟೌನ್: ವೈಯಕ್ತಿಕ ಕಾರಣದಿಂದಾಗಿ ಭಾರತದ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ಇಂಗ್ಲೆಂಡ್​ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಸರಣಿಯಿಂದ ಹೊರಗುಳಿದಿರುವುದು ತಂಡಕ್ಕೆ ಭಾರಿ ನಷ್ಟ ಉಂಟು ಮಾಡಿದೆ. ಹಿರಿಯ ಆಟಗಾರನ ಅನುಪಸ್ಥಿತಿಯ ತಂಡವನ್ನು ಕಾಡುತ್ತಿದೆ. ಇದರ ಜೊತೆಗೆ ಎದುರಾಳಿ ತಂಡಕ್ಕೂ ರನ್​ ಮಷಿನ್​ ಗೈರು ಸರಣಿಯೇ ನೀರಸ ಎನಿಸುತ್ತಿದೆ. ಆಂಗ್ಲ ತಂಡದ ಮಾಜಿ ವೇಗಿ ಸ್ಟುವರ್ಟ್ ಬ್ರಾಡ್ ಕ್ರೀಡಾ ಮಾಧ್ಯಮವೊಂದರಲ್ಲಿ ಮಾತನಾಡಿ, "ವಿರಾಟ್ ಕೊಹ್ಲಿ ಇಲ್ಲದ ಸರಣಿ ಸಪ್ಪೆ ಎನಿಸುತ್ತದೆ. ಅವರು ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಆಡಲು ಸಾಧ್ಯವಾಗದಿರುವುದು ದುರದೃಷ್ಟಕರ. ಅವರೊಬ್ಬ ಶ್ರೇಷ್ಠ ಆಟಗಾರ, ಅವರ ಉತ್ಸಾಹ ಕ್ರೀಡಾಂಗಣದಲ್ಲಿ ಎಂದಿಗೂ ಕಡಿಮೆಯಾಗುವುದಿಲ್ಲ. ಅವರನ್ನು ಸರಣಿ ಮಿಸ್​ ಮಾಡಿಕೊಳ್ಳುತ್ತಿದೆ" ಎಂದು ಹೇಳಿದ್ದಾರೆ.

"ವೈಯಕ್ತಿಕ ಮತ್ತು ಕುಟುಂಬ ಕಾರಣಗಳು ಎಲ್ಲರಿಗೂ ಮೊದಲ ಆದ್ಯತೆ. ವೈಯಕ್ತಿಕ ಕಾರಣದಿಂದಾಗಿ ವಿರಾಟ್ ಸರಣಿಯಲ್ಲಿ ಆಡದಿರುವ ನಿರ್ಧಾರ ಸರಿ. ಆದರೆ, ಅವರ ಸ್ಥಾನದಲ್ಲಿ ಅವಕಾಶ ಪಡೆದುಕೊಂಡಿರುವ ಯುವ ಕ್ರಿಕೆಟಿಗರು ಸದುಪಯೋಗ ಪಡೆದುಕೊಳ್ಳಬೇಕು. ಇದೊಂದು ಉತ್ತಮ ಅವಕಾಶ. ತಮ್ಮ ಕೌಶಲ್ಯವನ್ನು ಸಾಬೀತುಪಡಿಸಬೇಕು" ಎಂದು ಸಲಹೆ ನೀಡಿದ್ದಾರೆ.

ಬಾಜ್​ಬಾಲ್​ಗೆ ಮೆಚ್ಚುಗೆ: ಶಾಂತಚಿತ್ತದ ಕ್ರಿಕೆಟ್​ ಮಾದರಿಯಾದ ಟೆಸ್ಟ್​ನಲ್ಲಿ ಬಾಜ್​ಬಾಲ್​ನಂತಹ ಹೊಡಿಬಡಿ ಶೈಲಿಯನ್ನು ಪರಿಚಯಿಸಿರುವ ಇಂಗ್ಲೆಂಡ್​ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಬ್ರಾಡ್​, "ಆಂಗ್ಲರ ಪ್ರಸಿದ್ಧ ‘ಬಾಜ್​ಬಾಲ್​’ ಶೈಲಿ ವಿಶ್ವದಾದ್ಯಂತ ಅಭಿಮಾನಿಗಳ ಮನ ಗೆಲ್ಲುತ್ತಿದೆ. ಇದು ಟೆಸ್ಟ್​ ಪಂದ್ಯವನ್ನು ರೋಚಕಗೊಳಿಸುತ್ತದೆ. ವೈಯಕ್ತಿಕವಾಗಿ ನಾನು ಬಾಜ್​ಬಾಲ್ ಶೈಲಿಯನ್ನು ಇಷ್ಟಪಡುವೆ. ಭಾರತದಲ್ಲೂ ಇದನ್ನು ಪ್ರಯೋಗಿಸಿದ ತಂಡ ಯಶಸ್ಸು ಕಂಡಿದೆ. ಇಂಗ್ಲೆಂಡ್​ ಮಾತ್ರವಲ್ಲದೇ ಬೇರೆ ಖಂಡದಲ್ಲೂ ಪ್ರಯೋಗ ಮಾಡಬಹುದು ಎಂಬುದನ್ನು ತಂಡ ಸಾಬೀತು ಮಾಡಿದೆ" ಎಂದು ಹೇಳಿದರು.

"ಹೈದರಾಬಾದ್​ನಲ್ಲಿ ನಡೆದ ಮೊದಲ ಟೆಸ್ಟ್​ನಲ್ಲಿ ತಂಡ ತೋರಿದ ಪ್ರದರ್ಶನ ಅತ್ಯಂತ ಪ್ರಭಾವಶಾಲಿಯಾಗಿತ್ತು. ತಂಡ ಈಗಾಗಲೇ ಪಾಕಿಸ್ತಾನದಲ್ಲಿ 3-0 ಅಂತರದಲ್ಲಿ ಸರಣಿ ಗೆದ್ದಿದೆ. ನ್ಯೂಜಿಲೆಂಡ್‌ನಲ್ಲೂ ಉತ್ತಮವಾಗಿ ಆಡಿದೆ. ಬಾಜ್​ಬಾಲ್​ ಆಟವನ್ನು ಮುಂದುವರಿಸಿಕೊಂಡು ಹೋಗಬೇಕಿದೆ. ಇದು ಪ್ರೇಕ್ಷಕರಿಗೂ ಮನರಂಜನೆ ನೀಡುತ್ತದೆ. ಹೈದರಾಬಾದ್‌ ಟೆಸ್ಟ್‌ನಲ್ಲಿ ಇಂಗ್ಲೆಂಡ್ ತಂಡ ಎರಡನೇ ಇನಿಂಗ್ಸ್​ನಲ್ಲಿ ಬ್ಯಾಟ್​ ಮಾಡಿದ ರೀತಿ ಅದ್ಭುತವಾಗಿತ್ತು. ಅದರಂತೆ ಗಬ್ಬಾದಲ್ಲಿ ವೆಸ್ಟ್ ಇಂಡೀಸ್ ಆಸ್ಟ್ರೇಲಿಯಾವನ್ನು ಸೋಲಿಸಿದ್ದು ಕೂಡ ಅಷ್ಟೇ ಮನರಂಜನೆ ನೀಡಿತು" ಎಂದಿದ್ದಾರೆ.

ಬೆನ್ ಸ್ಟೋಕ್ಸ್ ನೇತೃತ್ವದ ಆಂಗ್ಲ ತಂಡವು ಮೊದಲ ಟೆಸ್ಟ್​ನ ಪ್ರಥಮ ಇನಿಂಗ್ಸ್​ನಲ್ಲಿ 190 ರನ್‌ಗಳಿಂದ ಹಿನ್ನಡೆಯ ಹೊರತಾಗಿಯೂ 28 ರನ್‌ಗಳಿಂದ ಪಂದ್ಯವನ್ನು ಗೆದ್ದಿತು. ಎರಡನೇ ಟೆಸ್ಟ್​ ಪಂದ್ಯದಲ್ಲಿ ಭಾರತ ನೀಡಿದ 399 ರನ್‌ಗಳ ದಾಖಲೆಯ ಗುರಿಯನ್ನು ಬೆನ್ನಟ್ಟಿದರೂ ಸೋಲು ಕಂಡಿತು. ಆದರೂ, ಎರಡನೇ ಇನ್ನಿಂಗ್ಸ್‌ನಲ್ಲಿ ಹೋರಾಟದ ಮನೋಭಾವ ತೋರಿಸಿತು.

ಇದನ್ನೂ ಓದಿ: ಇಂಗ್ಲೆಂಡ್​ ಸರಣಿ: ಉಳಿದ ಪಂದ್ಯಗಳಿಗೂ ಕೊಹ್ಲಿ ಅಲಭ್ಯ, ಅಯ್ಯರ್​ ಔಟ್​, ಆಕಾಶ್​ ದೀಪ್​, ಸಿರಾಜ್​ ಇನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.