ETV Bharat / sports

ಮೂರನೇ ದಿನದಾಟ: ಇಂಗ್ಲೆಂಡ್​ಗೆ 399 ರನ್​ ಗುರಿ, ಭಾರತದ ಬೌಲಿಂಗ್​ ಮೇಲೆ 'ಜಯದ ಹೊಣೆ'

ಭಾರತ ಇಂಗ್ಲೆಂಡ್​ ನಡುವಿನ ಟೆಸ್ಟ್​ ಪಂದ್ಯ ರೋಚಕ ಹಂತಕ್ಕೆ ತಲುಪಿದೆ. ಭಾರತ ನೀಡಿದ 399 ರನ್​ಗಳ ಗುರಿ ಬೆನ್ನಟ್ಟಿರುವ ಆಂಗ್ಲ ಪಡೆ ದಿನದಾಟದ ಕೊನೆಯಲ್ಲಿ 1 ವಿಕೆಟ್​ ಕಳೆದುಕೊಂಡಿದೆ. ಇನ್ನೂ 2 ದಿನ ಆಟ ಬಾಕಿ ಇದ್ದು, ಗೆಲುವಿಗೆ 332 ರನ್​ ಗಳಿಸಬೇಕಿದೆ.

ಭಾರತ ಇಂಗ್ಲೆಂಡ್​
ಭಾರತ ಇಂಗ್ಲೆಂಡ್​
author img

By PTI

Published : Feb 4, 2024, 5:30 PM IST

ವಿಶಾಖಪಟ್ಟಣಂ (ಆಂಧ್ರಪ್ರದೇಶ): ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್​ ಮತ್ತು ಭಾರತ ನಡುವಿನ 2ನೇ ಟೆಸ್ಟ್​ ಪಂದ್ಯ ಕೊನೆಯ ಘಟ್ಟ ತಲುಪಿದೆ. ಭಾರತ 2ನೇ ಇನ್ನಿಂಗ್ಸ್​ನಲ್ಲಿ 255 ರನ್​ ಗಳಿಸಿ ಆಲೌಟ್​ ಆಗಿದ್ದು, ಮೊದಲ ಇನ್ನಿಂಗ್ಸ್​ನ 143 ರನ್​ಗಳ ಲೀಡ್​ ಸೇರಿ 399 ರನ್​ಗಳ ಬೃಹತ್​ ಗುರಿ ನೀಡಿದೆ. ಮೂರನೇ ದಿನದಂತ್ಯಕ್ಕೆ 2ನೇ ಇನಿಂಗ್ಸ್​ ಆರಂಭಿಸಿದ ಆಂಗ್ಲ ಪಡೆ 1 ವಿಕೆಟ್​ಗೆ 67 ರನ್​ ಗಳಿಸಿದ್ದು, ಗೆಲುವಿಗೆ 332 ರನ್​ ಬೇಕಿದೆ.

ಎಂದಿನಂತೆ ತಮ್ಮ ಬಾಜ್​ಬಾಲ್​ ಆಟದ ಮೂಲಕ ಬಿರುಸಿನ ಆರಂಭ ನೀಡಿದ ಜಾಕ್​ ಕ್ರಾಲಿ ಮತ್ತು ಬೆನ್​ ಡಕೆಟ್​ ಮೊದಲ ವಿಕೆಟ್​ಗೆ 50 ರನ್​ ಸೇರಿಸಿದರು. ಮೂರನೇ ದಿನದ ಆಟ ಮುಗಿಯಲು ಮೂರು ಓವರ್​ ಬಾಕಿ ಇರುವಾಗ ಆರ್.ಅಶ್ವಿನ್​ ಎಸೆತದಲ್ಲಿ ಡಕೆಟ್​ ವಿಕೆಟ್​ ನೀಡಿದರು. ಪಂದ್ಯದ ಮೇಲೆ ಹಿಡಿತ ಸಾಧಿಸಿರುವ ಭಾರತದ ಗೆಲುವಿಗೆ 9 ವಿಕೆಟ್​ ಬೇಕಿದೆ. ಇನ್ನೂ 2 ಪೂರ್ಣ ದಿನದ ಆಟ ಬಾಕಿ ಇದೆ. 29 ರನ್​ ಗಳಿಸಿರುವ ಜಾಕ್​ ಕ್ರಾಲಿ, ನೈಟ್​ ವಾಚ್​ಮನ್​ ರೆಹಾನ್​ ಅಹ್ಮದ್​ ನಾಳೆಗೆ ಬ್ಯಾಟಿಂಗ್​​ ಕಾಯ್ದುಕೊಂಡಿದ್ದಾರೆ.

ಶತಕ ಗಳಿಸಿ ಲಯಕ್ಕೆ ಬಂದ ಗಿಲ್: 28 ರನ್​ಗಳೊಂದಿಗೆ ಮೂರನೇ ದಿನದಾಟ ಆರಂಭಿಸಿದ ಭಾರತಕ್ಕೆ ಅನುಭವಿ ವೇಗಿ ಜೇಮ್ಸ್​ ಆ್ಯಂಡರ್​ಸನ್​ ಶಾಕ್​ ನೀಡಿದರು. ಮೊದಲ ಓವರ್​ನಲ್ಲೇ ನಾಯಕ ರೋಹಿತ್​ ಶರ್ಮಾರನ್ನು ಕ್ಲೀನ್​ಬೌಲ್ಡ್​ ಮಾಡಿದರು. ಬಳಿಕ 2 ರನ್​ ಅಂತರದಲ್ಲಿ ದ್ವಿಶತಕ ವೀರ ಜೈಸ್ವಾಲ್​ಗೆ ಪೆವಿಲಿಯನ್​ ಹಾದಿ ತೋರಿಸಿದರು. ಇದು ತಂಡವನ್ನು ತುಸು ಒತ್ತಡಕ್ಕೆ ಸಿಲುಕಿಸಿತು.

ರನ್​ ಬರದಿಂದ ತೀವ್ರ ಟೀಕೆಗೆ ಗುರಿಯಾಗಿರುವ ಡ್ಯಾಶಿಂಗ್​ ಬ್ಯಾಟರ್​ ಶುಭ್​ಮನ್​ ಗಿಲ್​ ಭರ್ಜರಿ ಬ್ಯಾಟ್​ ಬೀಸಿ ಶತಕ ಸಾಧನೆ ಮಾಡಿದರು. ಒಂದೆಡೆ ವಿಕೆಟ್​ ಬೀಳುತ್ತಿದ್ದರೂ ದೃಢವಾಗಿ ನಿಂತ ಯುವ ಬ್ಯಾಟರ್​ 104 ರನ್ ಗಳಿಸಿ ತಂಡವನ್ನು ಆಧರಿಸಿದರು. ಈ ಮೂಲಕ ಮೂರನೇ ಕ್ರಮಾಂಕದಲ್ಲಿ ತವರಿನಲ್ಲಿ 7 ವರ್ಷಗಳಿಂದ ದಾಖಲಾಗದ ಶತಕದ ಬರವನ್ನೂ ನೀಗಿಸಿದರು. ಜೊತೆಗೆ ತಮ್ಮೆಲ್ಲಾ ಟೀಕಾಕಾರರಿಗೆ ಬ್ಯಾಟ್​ ಮೂಲಕ ಉತ್ತರಿಸಿದರು.

ಶ್ರೇಯಸ್​ ಅಯ್ಯರ್​ 29, ರಜತ್​ ಪಾಟೀದಾರ್​ 9, ಶ್ರೀಕರ್​ ಭರತ್​ 6 ಮತ್ತೆ ನಿರಾಸೆ ಮೂಡಿಸಿದರು. ಕೊನೆಯಲ್ಲಿ ಅಕ್ಷರ್​ ಪಟೇಲ್​ 45, ಆರ್.ಅಶ್ವಿನ್​ 29 ರನ್​ ಗಳಿಸಿ ತಂಡ 250 ರ ಗಡಿ ದಾಟುವಂತೆ ಮಾಡಿದರು. ಮೂರನೇ ಅವಧಿಯ ಕೊನೆಯಲ್ಲಿ ಅಶ್ವಿನ್​ ಔಟಾಗುವ ಮೂಲಕ ಭಾರತದ ಇನ್ನಿಂಗ್ಸ್​ಗೆ ತೆರೆ ಬಿತ್ತು. ಭಾರತ ಒಟ್ಟಾರೆ 399 ರನ್​ಗಳ ಬೃಹತ್​ ಗುರಿಯನ್ನು ಇಂಗ್ಲೆಂಡ್​ಗೆ ನೀಡಿದೆ. ಇಂಗ್ಲೆಂಡ್​ ಪರವಾಗಿ ಟಾಮ್​ ಹಾರ್ಟ್ಲಿ 4, ರೆಹಾನ್​ ಅಹ್ಮದ್​, ಜೇಮ್ಸ್​ ತಲಾ 2 ವಿಕೆಟ್​ ಪಡೆದರು.

ಇದನ್ನೂ ಓದಿ: 2ನೇ ಮಗುವಿನ ನಿರೀಕ್ಷೆಯಲ್ಲಿ 'ವಿರುಷ್ಕಾ' ದಂಪತಿ: ಮಾಹಿತಿ ಖಚಿತಪಡಿಸಿದ ಎಬಿ ಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.