IND vs AUS 1st Test: ಪರ್ತ್ನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ನ ಮೊದಲ ಇನ್ನಿಂಗ್ಸ್ ಮುಕ್ತಾಯಗೊಂಡಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಟೀಂ ಇಂಡಿಯಾ ಮೊದಲ ದಿನವೇ 150 ರನ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತ್ತು. ಅದೇ ದಿನ ಬ್ಯಾಟಿಂಗ್ಗೆ ಬಂದ ಆಸೀಸ್ ಕೂಡ ಕಳಪೆ ಪ್ರದರ್ಶನ ತೋರಿತು. ಭಾರತೀಯ ಬೌಲಿಂಗ್ ದಾಳಿಗೆ ಸಿಲುಕಿದ ಕಾಂಗರೂ ಪಡೆ ದಿನದಾಟದ ಅಂತ್ಯಕ್ಕೆ 67 ರನ್ಗಳಿಗೆ 7 ವಿಕೆಟ್ ಕಳೆದುಕೊಂಡಿತು. ಎರಡನೇ ದಿನವಾದ ಇಂದು ಮತ್ತೆ 3 ವಿಕೆಟ್ ಪತನಗೊಂಡವು. ಈ ಮೂಲಕ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ನಲ್ಲಿ 104 ರನ್ಗಳಿಗೆ ಆಲೌಟ್ ಆಗಿದೆ. ಸದ್ಯ ಭಾರತ 46 ರನ್ಗಳ ಮುನ್ನಡೆ ಸಾಧಿಸಿದೆ.
ಮೊದಲ ಇನ್ನಿಂಗ್ಸ್ನಲ್ಲಿ ಭಾರತೀಯ ಬ್ಯಾಟರ್ಗಳು ವಿಫಲರಾದರೂ ಬೌಲರ್ಗಳು ಅದ್ಭುತ ಪ್ರದರ್ಶನ ತೋರಿದರು. ಮೊದಲ ದಿನ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ 4 ವಿಕೆಟ್ಗಳನ್ನು ಉರುಳಿಸುವ ಮೂಲಕ ಎದುರಾಳಿ ತಂಡವನ್ನು ಧ್ವಂಸ ಮಾಡಿದ್ದರು. ಭಾರತದ ಮೇಲೆ ಪ್ರಾಬಲ್ಯ ಸಾಧಿಸಬೇಕೆಂಬ ಲೆಕ್ಕಾಚಾರದೊಂದಿಗೆ ಕಣಕ್ಕಿಳಿದಿದ್ದ ಆಸೀಸ್ಗೆ ಮೊದಲ ದಿನದಲ್ಲಿ ಭಾರತೀಯ ಬೌಲರ್ಗಳು ಶಾಕ್ ನೀಡಿ ಪ್ರಮುಖ 6 ವಿಕೆಟ್ಗಳನ್ನು ಉರುಳಿಸಿದರು.
Innings Break!
— BCCI (@BCCI) November 23, 2024
Australia have been bowled out for 104 runs and #TeamIndia secure a 46-run lead. Captain @Jaspritbumrah93 leads by example taking 5 wickets, while debutant Harshit Rana gets 3 and @mdsirajofficial has 2.
It is time for Lunch on Day 2 and post that the Indian… pic.twitter.com/eryt7KsGKf
ಎರಡನೇ ದಿನ ಆಸ್ಟ್ರೇಲಿಯಾ 67 ರನ್ನೊಂದಿಗೆ ಆಟ ಆರಂಭಿಸಿತು. ಬುಮ್ರಾ ತಮ್ಮ ದಿನದ ಮೊದಲ ಓವರ್‌ನ ಮೊದಲ ಎಸೆತದಲ್ಲಿ ಅಲೆಕ್ಸ್ ಕ್ಯಾರಿ (21) ಅವರನ್ನು ಔಟ್ ಮಾಡುವ ಮೂಲಕ ಆಸ್ಟ್ರೇಲಿಯಾಕ್ಕೆ ದೊಡ್ಡ ಹೊಡೆತ ನೀಡಿದರು. ಬಳಿಕ ಹರ್ಷಿತ್ ರಾಣಾ, ನಾಥನ್ ಲಿಯಾನ್ ವಿಕೆಟ್ ಅನ್ನು ಉರುಳಿಸಿದರು. ಇದರೊಂದಿಗೆ 9 ವಿಕೆಟ್ ಕಳೆದುಕೊಂಡ ಆಸ್ಟ್ರೇಲಿಯಾ 100ರ ಗಡಿ ತಲುಪುವುದು ಕಷ್ಟವೆಂದೇ ಭಾವಿಸಲಾಗಿತ್ತು.
India overcome Australia fightback to take a handy first-innings lead.#WTC25 | #AUSvIND 📝: https://t.co/j30yIgik8j pic.twitter.com/P9phbyyPKo
— ICC (@ICC) November 23, 2024
ಆದರೇ 9ನೇ ವಿಕೆಟ್ಗೆ ಜೊತೆಯಾದ ಮಿಚೆಲ್ ಸ್ಟಾಕ್ ಮತ್ತು ಹ್ಯಾಝಲ್ವುಡ್ ಜೋಡಿ ತಂಡವನ್ನು 100 ಗಡಿಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾಯಿತು.
ಬುಮ್ರಾ 5 ವಿಕೆಟ್ ಗೊಂಚಲ: ಭಾರತದ ಟೆಸ್ಟ್ ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿರುವ ಜಸ್ಪ್ರೀತ್ ಬುಮ್ರಾ ತಮ್ಮ ಮಾರಕ ಬೌಲಿಂಗ್ ಮೂಲಕ ಮೊದಲ ಪಂದ್ಯದಲ್ಲಿ 5 ವಿಕೆಟ್ ಪಡೆದರು. ಬುಮ್ರಾ ಟೆಸ್ಟ್‌ನಲ್ಲಿ 11ನೇ ಬಾರಿಗೆ 5 ವಿಕೆಟ್ ಪಡೆದ ಸಾಧನೆ ಮಾಡಿದರು. ಮತ್ತೊಂದೆಡೆ ಚೊಚ್ಚಲ ಟೆಸ್ಟ್ ಆಡುತ್ತಿರುವ ಬಲಗೈ ವೇಗಿ ಹರ್ಷಿತ್ ರಾಣಾ ಕೂಡ 3 ವಿಕೆಟ್ ಪಡೆದು ಎಲ್ಲರ ಗಮನ ಸೆಳೆದರು. ಮೊಹಮ್ಮದ್ ಸಿರಾಜ್ 2 ವಿಕೆಟ್ ಪಡೆಯುವ ಮೂಲಕ ಆಸ್ಟ್ರೇಲಿಯಾವನ್ನು ಅಲ್ಪಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಸಹಾಯ ಮಾಡಿದರು.