IND vs AUS, Test Series: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಬಾರ್ಡರ್-ಗವಾಸ್ಕರ್ ಟ್ರೋಫಿಯ ಐದು ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ. ಈಗಾಗಲೇ ಎರಡು ಪಂದ್ಯಗಳು ಮುಗಿದಿದ್ದು ಉಭಯ ತಂಡಗಳು ತಲಾ ಒಂದರಲ್ಲಿ ಗೆದ್ದು 1-1 ಅಂತರದಿಂದ ಸಮಬಲ ಸಾಧಿಸಿವೆ. ಅಡಿಲೇಡ್ನ ಎರಡನೇ ಪಂದ್ಯದಲ್ಲಿ ಕಳಪೆ ಪ್ರದರ್ಶನ ತೋರಿ ಹೀನಾಯವಾಗಿ ಸೋಲನುಭವಿಸಿದ್ದ ಟೀಂ ಇಂಡಿಯಾ, ಗುರುವಾರ (ಡಿಸೆಬಂರ್ 14)ದಿಂದ ಆರಂಭವಾಗಲಿರುವ ಮೂರನೇ ಪಂದ್ಯವನ್ನು ಗೆಲ್ಲಲೇಬೇಕೆಂದು ಪಣತೊಟ್ಟಿದೆ.
ಇದಕ್ಕಾಗಿ ಕಳೆದ ಎರಡು ದಿನಗಳಿಂದ ಆಟಗಾರರು ನೆಟ್ಸ್ನಲ್ಲಿ ಭರ್ಜರಿ ಅಭ್ಯಾಸ ನಡೆಸುತ್ತಿದ್ದಾರೆ. ಇದರ ನಡುವೆ ಅಭ್ಯಾಸದ ವೇಳೆ ಓರ್ವ ಸ್ಟಾರ್ ಆಟಗಾರ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಹೌದು, ವಿಕೆಟ್ ಕೀಪರ್ ಮತ್ತು ಬ್ಯಾಟರ್ ರಿಷಭ್ ಪಂತ್ ನೆಟ್ಸ್ನಲ್ಲಿ ಅಭ್ಯಾಸ ಮಾಡುತ್ತಿದ್ದಾಗ ಗಾಯಗೊಂಡಿದ್ದಾರೆ.
ಪಂತ್ ನೆಟ್ಸ್ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿದ್ದರು. ಥ್ರೋಡೌನ್ ಸ್ಪೆಷಲಿಸ್ಟ್ ರಘು ಅವರು ಪಂತ್ಗೆ ಬೌಲಿಂಗ್ ಮಾಡುತ್ತಿದ್ದರು. ಈ ವೇಳೆ ರಘು ಎಸೆದ ಚೆಂಡೊಂದು ನೇರವಾಗಿ ಪಂತ್ ಅವರಿಗೆ ತಾಕಿ ಗಾಯಗೊಂಡಿದ್ದಾರೆ. ನಂತರ ಪಂತ್ ಬ್ಯಾಟಿಂಗ್ ಅಭ್ಯಾಸ ನಿಲ್ಲಿಸಿದರು. ಕೂಡಲೇ ಅಲ್ಲಿದ್ದ ವೈದ್ಯಕೀಯ ತಂಡ ಪಂತ್ ಅವರನ್ನು ಪರಿಶೀಲಿಸಿದ್ದು, ಗಂಭೀರ ಗಾಯವಲ್ಲ ಎಂದು ತಿಳಿಸಿದೆ. ಬಳಿಕ ಸ್ವಲ್ಪ ಸಮಯ ವಿಶ್ರಾಂತಿ ಪಡೆದು ಮತ್ತೆ ಬ್ಯಾಟಿಂಗ್ಗೆ ಮರಳಿದ್ದಾರೆ.
ಪಂತ್ ಗಬ್ಬಾ ದಾಖಲೆ: ರಿಷಭ್ ಪಂತ್ ಅವರನ್ನು ಗಬ್ಬಾ ಹೀರೋ ಎಂದೇ ಕರೆಯಲಾಗುತ್ತದೆ. 2021ರಲ್ಲಿ ಆಸ್ಟ್ರೇಲಿಯಾ ಪ್ರವಾಸದ ವೇಳೆ ಪಂತ್ ಬ್ರಿಸ್ಬೇನ್ನ ಗಬ್ಬಾ ಮೈದಾನದಲ್ಲಿ ಅತ್ಯದ್ಬುತ ಇನ್ನಿಂಗ್ಸ್ ಆಡಿದ್ದರು. ಆಸೀಸ್ ವಿರುದ್ದ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ 89 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದ್ದರು. ಇದರೊಂದಿಗೆ ಗಬ್ಬಾದಲ್ಲಿ ಟೀಂ ಇಂಡಿಯಾದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಸದ್ಯ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಎರಡು ಪಂದ್ಯಗಳನ್ನು ಆಡಿರುವ ಪಂತ್ 87 ರನ್ ಗಳಿಸಿದ್ದಾರೆ. ಮುಂದಿನ ಮೂರು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದಾರೆ.
ಇದನ್ನೂ ಓದಿ: ಜಯ್ ಶಾ ICC ಅಧ್ಯಕ್ಷರಾಗ್ತಿದ್ದಂತೆ ಈ ದೇಶದ ಕ್ರಿಕೆಟ್ ಲೀಗ್ ಬ್ಯಾನ್!