ಮೆಲ್ಬೋರ್ನ್ (ಆಸ್ಟ್ರೇಲಿಯಾ): ಬಹಳ ಕೌತುಕದಿಂದ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಬಾರ್ಡರ್ - ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಗೆ ದಿನಾಂಕ ನಿಗದಿಯಾಗಿದೆ.
ಟೀಮ್ ಇಂಡಿಯಾ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಲಿದ್ದು, ವೇಳಾಪಟ್ಟಿಯನ್ನು ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ಬಿಡುಗಡೆಗೊಳಿಸಿದೆ. ನವೆಂಬರ್ 22 ರಿಂದ ಪರ್ತ್‌ನಲ್ಲಿ ಮೊದಲ ಟೆಸ್ಟ್ ಪಂದ್ಯ ಪ್ರಾರಂಭವಾಗಲಿದ್ದು, ಮುಂದಿನ ನಾಲ್ಕು ಟೆಸ್ಟ್‌ಗಳು ಅಡಿಲೇಡ್ (ಹಗಲು/ರಾತ್ರಿ), ಬ್ರಿಸ್ಬೇನ್, ಮೆಲ್ಬೋರ್ನ್ ಮತ್ತು ಸಿಡ್ನಿಯಲ್ಲಿ 2025ರ ಹೊಸ ವರ್ಷದ ನಂತರವು ನಡೆಯಲಿವೆ. ಸತತ 2 ತಿಂಗಳಿಗೂ ಹೆಚ್ಚು ಕಾಲ ಕಾಂಗರೂ ನಾಡಿನಲ್ಲಿ ಟೀಮ್ ಇಂಡಿಯಾ ಇರಲಿದೆ.
1991-92ರ ಬೇಸಿಗೆ ನಂತರ ಮೊದಲ ಬಾರಿಗೆ ಆಸ್ಟ್ರೇಲಿಯಾ ಮತ್ತು ಭಾರತ ಐದು ಪಂದ್ಯಗಳ ಟೆಸ್ಟ್ ಸರಣಿ ಆಡುತ್ತಿದೆ. ಈ ಮೂಲಕ ಮುಂದಿನ ವರ್ಷದ ಐಸಿಸಿ ಟೆಸ್ಟ್ ರ್ಯಾಂಕಿಂಗ್ನಲ್ಲಿ ತಮ್ಮ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಲು ಎರಡೂ ತಂಡಗಳಿಗೆ ಉತ್ತಮ ಅವಕಾಶ ನೀಡಲಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಗೆಲ್ಲುವ ತವಕದಲ್ಲಿ ಟೀಮ್ ಇಂಡಿಯಾ ಇದೆ. ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಆಸ್ಟ್ರೇಲಿಯಾಕ್ಕೆ ಪ್ರವಾಸ ಕೈಗೊಳ್ಳುವ ಮೊದಲು ಪಾಕಿಸ್ತಾನ ತಂಡ ಅಲ್ಲಿಗೆ ಪ್ರಯಾಣಿಸಲಿದೆ.
ಆಸ್ಟ್ರೇಲಿಯಾ ಪರುಷರ ಮತ್ತು ಮಹಿಳಾ ಕ್ರಿಕೆಟ್ ತಂಡಗಳ ವೇಳಾಪಟ್ಟಿ :
- ಆಸ್ಟ್ರೇಲಿಯಾ v/s ಪಾಕಿಸ್ತಾನ ಏಕದಿನ ಮತ್ತು ಟಿ-20 ಸರಣಿಗಳು
ಮೊದಲ ಏಕದಿನ ಪಂದ್ಯ : ನವೆಂಬರ್ 4, ಮೆಲ್ಬೋರ್ನ್
ಎರಡನೇ ಪಂದ್ಯ: ನವೆಂಬರ್ 8, ಅಡಿಲೇಡ್
ಮೂರನೇ ಪಂದ್ಯ: ನವೆಂಬರ್ 10, ಪರ್ತ್
ಮೊದಲ ಟಿ-20 ಪಂದ್ಯ: ನವೆಂಬರ್ 14, ಬ್ರಿಸ್ಬೇನ್
ಎರಡನೇ T20I: ನವೆಂಬರ್ 16, ಸಿಡ್ನಿ
ಮೂರನೇ T20I: ನವೆಂಬರ್ 18, ಹೋಬರ್ಟ್
- ಆಸ್ಟ್ರೇಲಿಯಾ v/s ಭಾರತ ಟೆಸ್ಟ್ ಸರಣಿ
ಮೊದಲ ಟೆಸ್ಟ್ ಪಂದ್ಯ: ನವೆಂಬರ್ 22 - 26, ಪರ್ತ್
ಎರಡನೇ ಟೆಸ್ಟ್: ಡಿಸೆಂಬರ್ 6 -10, ಅಡಿಲೇಡ್ (ಹಗಲು/ರಾತ್ರಿ)
ಮೂರನೇ ಟೆಸ್ಟ್: ಡಿಸೆಂಬರ್ 14-18, ಬ್ರಿಸ್ಬೇನ್
ನಾಲ್ಕನೇ ಟೆಸ್ಟ್: ಡಿಸೆಂಬರ್ 26-30, ಮೆಲ್ಬೋರ್ನ್
ಐದನೇ ಟೆಸ್ಟ್: 2025 ಜನವರಿ 3-7, ಸಿಡ್ನಿ
--
ಆಸ್ಟ್ರೇಲಿಯಾ ಮಹಿಳೆಯರ ವೇಳಾಪಟ್ಟಿ :
- ಆಸ್ಟ್ರೇಲಿಯಾ v/s ನ್ಯೂಜಿಲೆಂಡ್ ಟಿ-20 ಸರಣಿ
ಮೊದಲ ಟಿ-20 ಪಂದ್ಯ : ಸೆಪ್ಟೆಂಬರ್ 19, ಮ್ಯಾಕೆ, ಕ್ವೀನ್ಸ್ಲ್ಯಾಂಡ್
ಎರಡನೇ T20I: ಸೆಪ್ಟೆಂಬರ್ 22, ಮ್ಯಾಕೆ, ಕ್ವೀನ್ಸ್ಲ್ಯಾಂಡ್
ಮೂರನೇ T20I: ಸೆಪ್ಟೆಂಬರ್ 24, ಬ್ರಿಸ್ಬೇನ್
- ಆಸ್ಟ್ರೇಲಿಯಾ v/s ಭಾರತ ಏಕದಿನ ಸರಣಿ
ಮೊದಲ ಏಕದಿನ ಪಂದ್ಯ : ಡಿಸೆಂಬರ್ 5, ಬ್ರಿಸ್ಬೇನ್
ಎರಡನೇ ಪಂದ್ಯ : ಡಿಸೆಂಬರ್ 8, ಬ್ರಿಸ್ಬೇನ್
ಮೂರನೇ ಪಂದ್ಯ: ಡಿಸೆಂಬರ್ 11, ಪರ್ತ್
- ಆಸ್ಟ್ರೇಲಿಯಾ v/s ಇಂಗ್ಲೆಂಡ್ ಏಕದಿನ ಸರಣಿ
ಮೊದಲ ಏಕದಿನ ಪಂದ್ಯ : 2025 ಜನವರಿ 12, ಸಿಡ್ನಿ
ಎರಡನೇ ಪಂದ್ಯ: ಜನವರಿ 14, ಮೆಲ್ಬೋರ್ನ್
ಮೂರನೇ ಪಂದ್ಯ : ಜನವರಿ 17, ಹೋಬರ್ಟ್
- ಆಸ್ಟ್ರೇಲಿಯಾ v/s ಇಂಗ್ಲೆಂಡ್ ಟಿ-20 ಸರಣಿ
ಮೊದಲ ಟಿ-20 : 2025 ಜನವರಿ 20, ಸಿಡ್ನಿ
ಎರಡನೇ ಪಂದ್ಯ : ಜನವರಿ 23, ಕ್ಯಾನ್‌ಬೆರಾ
ಮೂರನೇ ಪಂದ್ಯ : ಜನವರಿ 25, ಅಡಿಲೇಡ್
- ಆಸ್ಟ್ರೇಲಿಯಾ v/s ಇಂಗ್ಲೆಂಡ್ ಟೆಸ್ಟ್
ಕೇವಲ ಒಂದು ಟೆಸ್ಟ್ ಪಂದ್ಯ : 2025 ಜನವರಿ 30-ಫೆಬ್ರವರಿ 2, ಮೆಲ್ಬೋರ್ನ್ (ಹಗಲು/ರಾತ್ರಿ)
ಇದನ್ನೂ ಓದಿ : ಫಿನಿಶರ್ ಪಾತ್ರಕ್ಕೆ ಸಿದ್ಧವಾಗಿರಲು ಆರ್‌ಸಿಬಿ ಮ್ಯಾನೇಜ್‌ಮೆಂಟ್ ನನಗೆ ಹೇಳಿತ್ತು: ಮಹಿಪಾಲ್ ಲೊಮ್ರೋರ್ - Mahipal Lomror