ಪಲ್ಲೆಕೆಲೆ (ಶ್ರೀಲಂಕಾ): ಭಾರತ ಮತ್ತು ಶ್ರೀಲಂಕಾ ನಡುವಿನ ಮೂರು ಪಂದ್ಯಗಳ T20 ಸರಣಿ ಇಂದಿನಿಂದ ಆರಂಭವಾಗಿದೆ. ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಪಂದ್ಯದ ಫಸ್ಟ್ ಇನ್ನಿಂಗ್ಸ್ ಮುಕ್ತಾಯಗೊಂಡಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ, ನಾಯಕ ಸೂರ್ಯಕುಮಾರ್ ಯಾದವ್ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 213 ರನ್ಗಳಿಸಿ ಶ್ರೀಲಂಕಾಕ್ಕೆ ಗೆಲುವಿಗೆ 214 ರನ್‌ಗಳ ಗುರಿ ನೀಡಿತು.
ಭಾರತದ ಪರ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಉತ್ತಮ ಇನ್ನಿಂಗ್ಸ್ ಆರಂಭಿಸಿದರು. ಇವರಿಬ್ಬರ ನಡುವೆ ಮೊದಲ ವಿಕೆಟ್‌ಗೆ 74 ರನ್‌ಗಳ ಜೊತೆಯಾಟವಿತ್ತು. ಈ ಪಂದ್ಯದಲ್ಲಿ ಗಿಲ್ 34 ರನ್ ಗಳಿಸಿ ಔಟಾದರೆ, ಜೈಸ್ವಾಲ್ 40 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಾಯಕ ಸೂರ್ಯಕುಮಾರ್ ಯಾದವ್ ಈ ಪಂದ್ಯದಲ್ಲಿ 22 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು ಮತ್ತು ಇದು ಶ್ರೀಲಂಕಾ ವಿರುದ್ಧದ ಟಿ-20 ಪಂದ್ಯದಲ್ಲಿ ಅವರ ಮೂರನೇ ಅರ್ಧಶತಕವನ್ನೂ ಪೂರೈಸಿದರು. ಸೂರ್ಯಕುಮಾರ್ 58 ರನ್ ಗಳಿಸಿ ಔಟಾದರು. ನಂತರ ಹಾರ್ದಿಕ್ ಪಾಂಡ್ಯ 10 ಎಸೆತಗಳಲ್ಲಿ 9 ರನ್ ಗಳಿಸಿ ಔಟಾದರು. ರಿಯಾನ್ ಪರಾಗ್ 7 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಪಂತ್ 49 ರನ್ ಗಳಿಸಿ ಅರ್ಧಶತಕದಿಂದ ವಂಚಿತರಾದರು.
ಶ್ರೀಲಂಕಾ ಪರ ಮಥಿಸಾ ಪತಿರಾಣ 4 ವಿಕೆಟ್ ಪಡೆದು ಮಿಂಚಿದರು. ಈ ಪಂದ್ಯದಲ್ಲಿ ಶಿವಂ ದುಬೆ ಮತ್ತು ಸಂಜು ಸ್ಯಾಮ್ಸನ್ ಭಾರತದ ಪ್ಲೇಯಿಂಗ್ ಹನ್ನೊಂದರಿಂದ ಹೊರಗುಳಿದಿದ್ದಾರೆ.
ಸದ್ಯ ಎರಡನೇ ಇನ್ನಿಂಗ್ಸ್ ಆರಂಭವಾಗಿದ್ದು, ಶ್ರೀಲಂಕಾ 5 ಓವರ್ ಮುಕ್ತಾಯದ ವೇಳೆಗೆ ಯಾವುದೇ ವಿಕೆಟ್ ನಷ್ಟವಿಲ್ಲದೇ 49 ರನ್ ಗಳಿಸಿದೆ. ಆರಂಭಿಕ ಬ್ಯಾಟರ್ಗಳಾದ ಕುಶಾಲ್ ಮೆಂಡಿಸ್ 18 ರನ್ ಗಳಿಸಿದ್ದು ನಿಸ್ಸಾಂಕ 30 ರನ್ ಗಳಿಸಿದ್ದಾರೆ.