ETV Bharat / sports

2036ರ ಒಲಿಂಪಿಕ್ಸ್​ನ ಆತಿಥ್ಯ ಕೋರಿ ಐಒಸಿಗೆ ಪತ್ರ ಬರೆದ ಭಾರತ

2036ರ ಒಲಿಂಪಿಕ್ಸ್​ ಆಯೋಜಿಸಲು ಆಸಕ್ತಿ ವ್ಯಕ್ತಪಡಿಸಿ ಭಾರತವು ಐಒಸಿಗೆ ಪತ್ರ ಕಳುಹಿಸಿದೆ.

ಭಾರತೀಯ ಒಲಿಂಪಿಕ್ ಸಂಸ್ಥೆ ಲೋಗೊ
ಭಾರತೀಯ ಒಲಿಂಪಿಕ್ ಸಂಸ್ಥೆ ಲೋಗೊ (IANS)
author img

By ETV Bharat Sports Team

Published : Nov 5, 2024, 2:30 PM IST

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ, 2036ರಲ್ಲಿ ನಡೆಯಲಿರುವ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಆತಿಥ್ಯ ವಹಿಸಲು ಆಸಕ್ತಿಯನ್ನು ವ್ಯಕ್ತಪಡಿಸಿ ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ಅಕ್ಟೋಬರ್ 1ರಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ)ಯ ಭವಿಷ್ಯದ ಆತಿಥ್ಯ ಆಯೋಗಕ್ಕೆ ಔಪಚಾರಿಕವಾಗಿ ಪತ್ರ ಬರೆದಿದೆ ಎಂದು ಮೂಲಗಳು ಐಎಎನ್ಎಸ್​ಗೆ ತಿಳಿಸಿವೆ.

"2036 ರಲ್ಲಿ ಭಾರತದಲ್ಲಿ ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಕ್ರೀಡಾಕೂಟಗಳನ್ನು ಆಯೋಜಿಸುವ ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಕೋನವು ಮಹತ್ವದ ಹೆಜ್ಜೆಯಾಗಿದೆ" ಎಂದು ಮೂಲಗಳು ಹೇಳಿವೆ.

"ಈ ಸ್ಮರಣೀಯ ಅವಕಾಶವು ದೇಶಕ್ಕೆ ಗಣನೀಯ ಪ್ರಯೋಜನಗಳನ್ನು ಒದಗಿಸಬಹುದು. ದೇಶಾದ್ಯಂತ ಆರ್ಥಿಕ ಬೆಳವಣಿಗೆ, ಸಾಮಾಜಿಕ ಪ್ರಗತಿ ಮತ್ತು ಯುವ ಸಬಲೀಕರಣವನ್ನು ಈ ಕ್ರೀಡಾಕೂಟವು ಉತ್ತೇಜಿಸಬಹುದು" ಎಂದು ಮೂಲಗಳು ತಿಳಿಸಿವೆ.

2036ರ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಆತಿಥ್ಯ ವಹಿಸುವ ಭಾರತದ ಆಸಕ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಅನೇಕ ಸಂದರ್ಭಗಳಲ್ಲಿ ವ್ಯಕ್ತಪಡಿಸಿದ್ದಾರೆ. ನವದೆಹಲಿಯ ತಮ್ಮ ನಿವಾಸದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಪಟುಗಳೊಂದಿಗೆ ಸಂವಾದ ನಡೆಸಿದ ಪ್ರಧಾನಿ ಮೋದಿ, 2036 ರಲ್ಲಿ ಒಲಿಂಪಕ್ಸ್​ ಕ್ರೀಡಾಕೂಟವನ್ನು ಆಯೋಜಿಸುವ ಸಿದ್ಧತೆಗಳಿಗೆ ಸಲಹೆಗಳನ್ನು ನೀಡುವಂತೆ ಅವರಿಗೆ ಕೇಳಿಕೊಂಡಿದ್ದರು.

2036ರ ಒಲಿಂಪಿಕ್ಸ್ ಆತಿಥ್ಯ ವಹಿಸಲು ಭಾರತ ಸಿದ್ಧತೆ ನಡೆಸುತ್ತಿದೆ. ಈ ನಿಟ್ಟಿನಲ್ಲಿ, ಹಿಂದಿನ ಒಲಿಂಪಿಕ್ಸ್ ನಲ್ಲಿ ಆಡಿದ ಕ್ರೀಡಾಪಟುಗಳ ಅಭಿಪ್ರಾಯಗಳು ಬಹಳ ಮುಖ್ಯ. ನೀವೆಲ್ಲರೂ ಅನೇಕ ವಿಷಯಗಳನ್ನು ಗಮನಿಸಿರುತ್ತೀರಿ ಮತ್ತು ಸಾಕಷ್ಟು ವಿಷಯಗಳು ನಿಮ್ಮ ಅನುಭವಕ್ಕೆ ಬಂದಿರುತ್ತವೆ. ನೀವು ಈ ಎಲ್ಲ ಮಾಹಿತಿಗಳನ್ನು ದಾಖಲಿಸಿ, ಸರ್ಕಾರಕ್ಕೆ ನೀಡಿ ಎಂದು ಕೇಳಿಕೊಳ್ಳುತ್ತಿದ್ದೇವೆ. ಇದರಿಂದ ಯಾವುದೇ ಕುಂದು ಕೊರತೆಗಳಾಗದಂತೆ 2036 ರ ಒಲಿಂಪಿಕ್ಸ್​ಗೆ ನಾವು ಸಿದ್ಧತೆ ಮಾಡಿಕೊಳ್ಳಬಹುದು" ಎಂದು ಪಿಎಂ ಮೋದಿ ಕ್ರೀಡಾಪಟುಗಳಿಗೆ ಹೇಳಿದ್ದರು.

ಕಳೆದ ವರ್ಷ ಮುಂಬೈನಲ್ಲಿ ನಡೆದ 141 ನೇ ಐಒಸಿ ಅಧಿವೇಶನದಲ್ಲಿ, ಪಿಎಂ ಮೋದಿ 2036 ರಲ್ಲಿ ಒಲಿಂಪಿಕ್ ಕ್ರೀಡಾಕೂಟದ ಆತಿಥ್ಯ ವಹಿಸುವ ಭಾರತದ ಆಸಕ್ತಿಯನ್ನು ದೃಢಪಡಿಸಿದ್ದರು. 140 ಕೋಟಿ ಭಾರತೀಯರು ಕ್ರೀಡಾಕೂಟವನ್ನು ನಡೆಸಲು ಉತ್ಸುಕರಾಗಿದ್ದಾರೆ ಎಂದು ಆಗ ಅವರು ಹೇಳಿದ್ದರು.

"2036ರಲ್ಲಿ ಭಾರತದ ನೆಲದಲ್ಲಿ ಒಲಿಂಪಿಕ್ಸ್ ಆಯೋಜಿಸುವ ನಮ್ಮ ಪ್ರಯತ್ನಗಳನ್ನು ಮುಂದುವರಿಸುತ್ತೇವೆ. ಇದು 140 ಕೋಟಿ ಭಾರತೀಯರ ಹಳೆಯ ಕನಸು ಮತ್ತು ಆಕಾಂಕ್ಷೆಯಾಗಿದೆ. ಈ ಕನಸನ್ನು ನಿಮ್ಮ ಸಹಕಾರ ಮತ್ತು ಬೆಂಬಲದೊಂದಿಗೆ ಸಾಕಾರಗೊಳಿಸಬೇಕಿದೆ" ಎಂದು ಅವರು ಹೇಳಿದ್ದರು.

2036ರ ಒಲಿಂಪಿಕ್ ಕ್ರೀಡಾಕೂಟದ ಆತಿಥ್ಯ ವಹಿಸಲು ಆಸಕ್ತಿ ತೋರಿದ 10 ದೇಶಗಳಲ್ಲಿ ಭಾರತವೂ ಸೇರಿದೆ. ನವೆಂಬರ್ 2022 ರಲ್ಲಿ, ಐಒಸಿ ಭಾರತ ಸೇರಿದಂತೆ ಈ ದೇಶಗಳೊಂದಿಗೆ ಚರ್ಚೆಗಳನ್ನು ಪ್ರಾರಂಭಿಸಿದೆ.

ಮೆಕ್ಸಿಕೊ (ಮೆಕ್ಸಿಕೊ ನಗರ, ಗ್ವಾಡಲಜರ-ಮಾಂಟೆರಿ-ಟಿಜುವಾನಾ), ಇಂಡೋನೇಷ್ಯಾ (ನುಸಂತರಾ), ಟರ್ಕಿ (ಇಸ್ತಾಂಬುಲ್), ಭಾರತ (ಅಹಮದಾಬಾದ್), ಪೋಲೆಂಡ್ (ವಾರ್ಸಾ, ಕ್ರಾಕೊವ್), ಈಜಿಪ್ಟ್ (ಹೊಸ ಆಡಳಿತ ರಾಜಧಾನಿ) ಮತ್ತು ದಕ್ಷಿಣ ಕೊರಿಯಾ (ಸಿಯೋಲ್-ಇಂಚಿಯಾನ್) 2036 ರ ಕ್ರೀಡಾಕೂಟದ ಆತಿಥ್ಯ ವಹಿಸಲು ಆರಂಭಿಕ ಆಸಕ್ತಿಯನ್ನು ತೋರಿಸಿದ 10 ದೇಶಗಳಲ್ಲಿ ಸೇರಿವೆ.

ಇದನ್ನೂ ಓದಿ : ಪಾಕಿಸ್ತಾನ ವಿರುದ್ಧ ಒಂದೇ ಎಸೆತದಲ್ಲಿ 17 ರನ್​ ಚಚ್ಚಿ ಇತಿಹಾಸ ಬರೆದವರು ವೀರೇಂದ್ರ ಸೆಹ್ವಾಗ್!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.